ಪ್ರೀತಿಯಲ್ಲಿ ಬಿದ್ದರೇ ತೆಲುಗು ನಟ ಅಲ್ಲು ಶಿರಿಷ್‌, ನಟಿ ಅನು? ಸಾಕ್ಷಿ ಇಲ್ಲಿದೆ!

ಹೈದರಾಬಾದ್‌: ತೆಲುಗು ನಟ ಅಲ್ಲು ಶಿರಿಷ್‌ ಹಾಗೂ ನಟಿ ಅನು ಇಮ್ಮಾನ್ಯುಯಲ್‌ ಎರಡು ವರ್ಷಗಳ ಹಿಂದೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

ಶಿರಿಷ್‌ ಮತ್ತು ಅನು ವಿದೇಶಗಳಲ್ಲಿ ಸುತ್ತಾಡುತ್ತಿರುವುದು, ಪ್ರವಾಸ ಹೋಗುತ್ತಿರುವುದರ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದವು.

ಇದೀಗ ಶಿರಿಷ್‌ ಕಳುಹಿಸಿರುವ ಕ್ರಿಸ್‌ಮಸ್‌ ಕೇಕ್‌ ಅವರ ಪ್ರೀತಿಗೆ ಸಾಕ್ಷಿಯಾಗಿದೆ ಎಂದು ಶಿರಿಷ್‌ ಆಪ್ತರು ಹೇಳುತ್ತಿದ್ದಾರೆ.

ಶಿರಿಷ್‌, ಅಮೆರಿಕದಲ್ಲಿ ನೆಲೆಸಿರುವ ಅನುಗೆ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶೇಷ ಕೇಕ್‌ ಕಳುಹಿಸಿಕೊಟ್ಟಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಹೃದಯದ ಆಕಾರದಲ್ಲಿರುವ ಕೇಕ್‌ನಲ್ಲಿ ನನ್ನ ಸಹ ನಟಿಗೆ ಕ್ರಿಸ್‌ಮಸ್‌ ಶುಭಾಶಯಗಳು ಎಂದು ಬರೆದಿದ್ದಾರೆ. ನನಗೆ ಈ ಕೇಕ್‌ ತುಂಬಾ ಇಷ್ಟವಾಗಿದೆ ಎಂದು ಸಹ ಅನು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

ಸದ್ಯ ಅನು ಮತ್ತು ಶಿರಿಷ್‌ ‘ಪ್ರೇಮ ಕಾದಂಟ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಮುಗಿದ ಬಳಿ ಮದುವೆ ಆಗಲಿದ್ದಾರೆ ಎಂದು ಶಿರಿಷ್ ಕುಟುಂಬದ ಆಪ್ತರು ಹೇಳಿದ್ದಾರೆ.

2016ರಿಂದ ಅನು ತೆಲುಗು, ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮಜ್ನು, ಆಕ್ಸಿಜನ್‌, ಅಜ್ಞಾತವಾಸಿ ಚಿತ್ರಗಳು ತೆಲುಗಿನಲ್ಲಿ ಅನುಗೆ ಹೆಸರು ತಂದುಕೊಟ್ಟಿವೆ.

ಶಿರಿಷ್‌ ಅಭಿಮಾನಿಗಳು ಮಾತ್ರ ಅನು ಹಾಗೂ ಶಿರಿಷ್‌ ನಿಜ ಜೀವನದ ಪ್ರಣಯ ಹಕ್ಕಿಗಳು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಹಾಕುತ್ತಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

365 ಕೋಟಿ ದೇವತೆಗಳಲ್ಲಿ ಕ್ರೈಸ್ತಕೂಡ ಒಬ್ಬನಾಗುವ ಕಾಲ ಸನ್ನಿಹಿತ: ಸೂಲಿಬೆಲೆ

Mon Dec 27 , 2021
ಮೈಸೂರು: ದೇಶದಲ್ಲಿ ಹಿಂದು ಮುಖವಾಡ ಧರಿಸಿದ ಕ್ರಿಪ್ಟೋ-ಕ್ರಿಶ್ಚಿಯನ್ನರು ಹೆಚ್ಚಾಗುತ್ತಿದ್ದಾರೆ ಎಂದು ಯುವ ಬ್ರಿಗೇಡ್‌ ಸಂಸ್ಥಾ ಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಅನಾಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಎಂ ವೆಂಕಟಕೃಷ್ಣಯ್ಯ (ತಾತಯ್ಯ) ಜಯಂತೋತ್ಸವ ಹಾಗೂ ಎಂ. ವೆಂಕಟಕೃಷ್ಣಯ್ಯ ಪ್ರಶಸ್ತಿ ಪ್ರದಾನ ಕಾರ್ಯ ಕ್ರಮದಲ್ಲಿ ಮಾತನಾಡಿ, ಕ್ರಿಪ್ಟೋ-  ಕ್ರಿಶ್ಚಿಯನ್ನರು ಹಿಂದು ಧರ್ಮದ ಆಚರಣೆ ಅಳವಡಿಸಿಕೊಂಡು ಅಮಾಯಕರನ್ನು ಮತಾಂತರಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಹಿಂದು ಮತದಲ್ಲಿ ನೂರಾರು ದೇವರಿದ್ದಾರೆ ಎನ್ನುತ್ತಿದ್ದರು. ಈಗ ಕ್ರಿಸ್ತನಿಗೆ ಅಷ್ಟ್ರೋತ್ತರ ನಾಮಾವಳಿ ಪಠಿಸುತ್ತಿದ್ದಾರೆ. ಚರ್ಚ್‌ ಮುಂದೆ […]

Advertisement

Wordpress Social Share Plugin powered by Ultimatelysocial