ಮಾಸಾಂತ್ಯದಲ್ಲಿ ನಡೆಯಲಿರುವ 5ಜಿ ತರಂಗಾಂತರ ಹರಾಜು !

ಮಾಸಾಂತ್ಯದಲ್ಲಿ ನಡೆಯಲಿರುವ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಪ್ರಧಾನಿ ಮೋದಿ ಅವರ ಆಪ್ತ ಬಣದ ಉದ್ಯಮಿ ಅದಾನಿ ಗ್ರೂಪ್ಸ್‌ ಪಾಲ್ಗೊಳ್ಳಲು ಸಿದ್ಧತೆ ನಡೆಸಿದ್ದು, ಮುಖೇಶ್‌ ಅಂಬಾನಿ ಒಡೆತನದ ಜಿಯೊ ಹಾಗೂ ಏರ್‌ ಟೆಲ್‌ ಗೆ ಸೆಡ್ಡು ಹೊಡೆಯಲು ಸಜ್ಜಾಗಿದೆ.

ಶತಕೋಟ್ಯಾಧಿಪತಿ ಗೌತಮ್‌ ಅದಾನಿ ಒಡೆತನದ ಅದಾನಿ ಗ್ರೂಪ್‌ ಇತ್ತೀಚೆಗಷ್ಟೇ ಸ್ಪೆಕ್ಟ್ರಮ್‌ ಟೆಲಿಕಾಂ ಕಂಪನಿಯನ್ನು ಖರೀದಿಸಿದ್ದಾರೆ. ಇದು ನೇರವಾಗಿ 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದು, ಜಿಯೊ ಹಾಗೂ ಏರ್‌ ಟೆಲ್‌ ಗೆ ಪೈಪೋಟಿ ನೀಡಲಿದೆ ಎಂದು ಹೇಳಲಾಗಿದೆ.

ಜುಲೈ ೨೬ರಂದು ನಡೆಯುವ ಹರಾಜು ಪ್ರಕ್ರಿಯೆಗೆ ಅದಾನಿ ಗ್ರೂಪ್ಸ್‌ ಈಗಾಗಲೇ ಅರ್ಜಿ ಸಲ್ಲಿಸಿದೆ. ಶುಕ್ರವಾರ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕೇವಲ 4 ಕಂಪನಿಗಳು ಮಾತ್ರ ಅರ್ಜಿ ಸಲ್ಲಿಸಿವೆ.

ಜಿಯೊ, ಏರ್‌ ಟೆಲ್‌, ವೋಡಾಫೋನ್-ಐಡಿಯಾ ಹಾಗೂ ಕೊನೆಯದಾಗಿ ಅದಾನಿ ಗ್ರೂಪ್‌ ಅರ್ಜಿ ಸಲ್ಲಿಸಿದೆ. ಈ ಮೂಲಕ ಮೂರು ಬಲಿಷ್ಠ ಟೆಲಿಕಾಂ ಕಂಪನಿಗಳಿಗೆ ಅದಾನಿ ಗ್ರೂಪ್‌ ಪೈಪೋಟಿ ಒಡ್ಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರಲ್ಲಿ ಗಾಂಜಾ ಹೊಂದಿದ್ದ 12 ವಿದ್ಯಾರ್ಥಿಗಳ ಬಂಧನ

Sat Jul 9 , 2022
ಕೋಲಾರ‌ (ಜು 09): ಗಾಂಜಾ  ಸಾಗಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಶತಪ್ರಯತ್ನ ಮಾಡ್ತಿದ್ರು ಸಾಧ್ಯವಾಗ್ತಿಲ್ಲ ಕೋಲಾರದಲ್ಲಿ ಚಾಕೋಲೇಟ್ (Chocolate)​ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಅಬಕಾರಿ ಇಲಾಖೆ ಅಧಿಕಾರಿಗಳು  ಕಾರ್ಯಾಚರಣೆ ನಡೆಸಿದ್ರು. ಈ ವೇಳೆ ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ವಲಯದಲ್ಲಿ   ಚಾಕಲೇಟ್​ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 17 ಕೆಜಿ ತೂಕದ ಗಾಂಜಾ ಚಾಕೋಲೇಟ್ ವಶ […]

Advertisement

Wordpress Social Share Plugin powered by Ultimatelysocial