ಮಂಗಳೂರಲ್ಲಿ ಗಾಂಜಾ ಹೊಂದಿದ್ದ 12 ವಿದ್ಯಾರ್ಥಿಗಳ ಬಂಧನ

ಕೋಲಾರ‌ (ಜು 09): ಗಾಂಜಾ  ಸಾಗಾಟಕ್ಕೆ ಕಡಿವಾಣ ಹಾಕಲು ಪೊಲೀಸರು ಶತಪ್ರಯತ್ನ ಮಾಡ್ತಿದ್ರು ಸಾಧ್ಯವಾಗ್ತಿಲ್ಲ ಕೋಲಾರದಲ್ಲಿ ಚಾಕೋಲೇಟ್ (Chocolate)​ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರ ಅಬಕಾರಿ ಇಲಾಖೆ ಅಧಿಕಾರಿಗಳು  ಕಾರ್ಯಾಚರಣೆ ನಡೆಸಿದ್ರು.
ಈ ವೇಳೆ ಕೋಲಾರ ತಾಲೂಕಿನ ವೇಮಗಲ್ ಕೈಗಾರಿಕಾ ವಲಯದಲ್ಲಿ   ಚಾಕಲೇಟ್​ ರೂಪದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆರೋಪಿಯಿಂದ 17 ಕೆಜಿ ತೂಕದ ಗಾಂಜಾ ಚಾಕೋಲೇಟ್ ವಶ ಪಡೆಸಿಕೊಂಡಿದ್ದಾರೆ.
4.65 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
ಉತ್ತರ ಪ್ರದೇಶ ಮೂಲದ ಶುಭಂ ಬಂಧಿತ ಆರೋಪಿ, ಇತ್ತ ಚಿಲ್ಲರೆ ಅಂಗಡಿ, ಪಾನ್‌ಬೀಡಾ, ಡಾಬಾಗಳಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮಹಾಕಾಲ ಎಂಬ ಚಾಕೊಲೇಟ್ ನಲ್ಲಿ ಗಾಂಜಾ ಮಾರಾಟ ಮಾಡಿದ್ದಾನೆ ಬಂಧಿತ ವ್ಯಕ್ತಿಯಿಂದ ಸುಮಾರು 4.65 ಲಕ್ಷ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೋಲಾರ ಅಬಕಾರಿ ಆಯುಕ್ತ ರಮೇಶ್ ಕುಮಾರ್ ಮಾಧ್ಯಮಗಳಿಗೆ ‌ ಮಾಹಿತಿ ನೀಡಿದ್ದಾರೆ.
ಮಂಗಳೂರು ಗಾಂಜಾ ಹೊಂದಿದ್ದ 12 ವಿದ್ಯಾರ್ಥಿಗಳ ಬಂಧನ
ಮಂಗಳೂರಿನಲ್ಲಿ ಗಾಂಜಾ ಹೊಂದಿದ್ದ 12 ವಿದ್ಯಾರ್ಥಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವಿದ್ಯಾರ್ಥಿಗಳೆಲ್ಲರೂ ಕೇರಳ ರಾಜ್ಯದವರಾಗಿದ್ದಾರೆ. ಕೇರಳದ ಕಣ್ಣೂರು ಜಿಲ್ಲೆಯ ಪಯಂಗಡಿ ಗ್ರಾಮದ ಶಾನೂಫ್ ಅಬ್ದುಲ್ ಗಫೂರ್(21), ತಾಯಿಲ್‌ನ ಮೊಹಮ್ಮದ್ ರಸೀನ್ (22), ಪಾಪಿನಾಶೇರಿ ಗ್ರಾಮದ ಅಮಲ್ (21) ಮತ್ತು ಅಭಿಷೇಕ (21), ಆರ್ಲಂ ಗ್ರಾಮದ ಪೆರಂಬಾಶಿಯ ನಿದಾಲ್ (21), ವಾಡಿಕ್ಕಲ್ ಗ್ರಾಮದ ಮಾಡಾವಿಯ ಮೊಹಮ್ಮದ್ ರಿಶಿನ್ (22), ಗುರುವಾಯೂರಿನ ತಮರಾಯೂರಿನ ಗೋಕುಲ ಕೃಷ್ಣನ್ (22), ಕಾಸರಗೋಡು ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಪೊದಾವುರ್‌ನ ಶಾರೂನ್ ಆನಂದ (19), ಪಣತೂರ್ ಗ್ರಾಮದ ಅನಂತು ಕೆ.ಪಿ (18), ತ್ರಿಕರಿಪುರ ಗ್ರಾಮದ ಶಾಹೀದ್ ಎಂ.ಟಿ.ಪಿ (22), ಎರ್ನಾಕುಳಂ ಜಿಲ್ಲೆಯ ಕಲೂರ್ ಕೊಚ್ಚಿಯ ಫಹಾದ್ ಹಬೀಬ್ (22), ಕೋಯಿಕ್ಕೋಡ್‌ ಜಿಲ್ಲೆಯ ಕಕ್ಕಾಡ್ ಗ್ರಾಮದ ರಿಜಿನ್ ರಿಯಾಜ್‌ (22) ಬಂಧಿತರು.

‘ಅವಿವೇಕಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್​ನನ್ನು ಮೊದಲು ಸಂಪುಟದಿಂದ ಕಿತ್ತು ಹಾಕಿ’
ಬಂಧಿತರು ಕೇರಳ ಮೂಲದವರು
ಬಂಧಿತರಲ್ಲಿ ಆರು ವಿದ್ಯಾರ್ಥಿಗಳು ದಾಳಿ ನಡೆದ ವೆಲೆನ್ಸಿಯಾ ಸೂಟರ್‌ಪೇಟೆ ಮೂರನೇ ಕ್ರಾಸ್ ಅಡ್ಡರಸ್ತೆ ಬಳಿಯ ವಸತಿಗೃಹದಲ್ಲೇ ವಾಸಿಸುತ್ತಿದ್ದರು. ಒಬ್ಬ ವಿದ್ಯಾರ್ಥಿ ಅತ್ತಾವರ ಬಬ್ಬು ಸ್ವಾಮಿ ದೈವಸ್ಥಾನದ ಬಳಿ, ಇನ್ನೊಬ್ಬ ವಿದ್ಯಾರ್ಥಿ ಕೊಡಿಯಾಲ್ ಬೈಲಿನ ಜೈಲು ರಸ್ತೆ ಬಳಿ ವಾಸವಿದ್ದ. ನಾಲ್ವರು ವಿದ್ಯಾರ್ಥಿಗಳು ಕದ್ರಿ, ಶಿವಭಾಗ್ ಎರಡನೇ ಕ್ರಾಸ್ ರಸ್ತೆಯ ಬಳಿ ವಾಸಿಸುತ್ತಿದ್ದರು.

ಆರೋಪಿಗಳನ್ನು ಮಾದಕ ವಸ್ತುಗಳ ಸೇವನೆ ಬಗ್ಗೆ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, 11 ಮಂದಿ ಮಾದಕ ವಸ್ತು ಗಾಂಜಾವನ್ನು ಸೇವನೆ ಮಾಡಿರುವ ಬಗ್ಗೆ ದೃಢಪಟ್ಟಿದೆ. ಆರೋಪಿಗಳಲ್ಲಿ ಒಂಬತ್ತು ವಿದ್ಯಾರ್ಥಿಗಳು ಕಾಲೇಜೊಂದರ ಪದವಿ ವಿದ್ಯಾರ್ಥಿಗಳು. ಅವರಲ್ಲಿ 8 ಮಂದಿ ವಿದ್ಯಾರ್ಥಿಗಳು ಅಂತಿಮ ವರ್ಷದ ಬಿಬಿಎ, ಬಿಸಿಎ ಪದವಿ, ಫಾರೆನ್ಸಿಕ್ ಸೈನ್ಸ್ ಪದವಿ ಕಲಿಯುತ್ತಿದ್ದಾರೆ. ಒಬ್ಬ ಪ್ರಥಮ ವರ್ಷದ ಬಿಬಿಎ ಪದವಿ ವ್ಯಾಸಂಗ ಮಾಡುತ್ತಿದ್ದಾನೆ.

ಮೂವರು ನರ್ಸಿಂಗ್ ಕಾಲೇಜೊಂದರ ಪ್ರಥಮ ವರ್ಷದ ವಿದ್ಯಾರ್ಥಿಗಳು. ಒಬ್ಬ ನರ್ಸಿಂಗ್‌ ಪದವಿ, ಇನ್ನೊಬ್ಬ ರೇಡಿಯಾಲಜಿ ಹಾಗೂ ಮತ್ತೊಬ್ಬ ಅಲೈಡ್‌ ಸೈನ್ಸ್‌ ವಿದ್ಯಾರ್ಥಿ. ಆರೋಪಿಗಳ ವಿರುದ್ಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಗಾಂಜಾ ಮಾರಾಟ ಜಾಲದಲ್ಲಿ ಇನ್ನೂ ಹಲವು ಯುವಕರು ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskann

Please follow and like us:

Leave a Reply

Your email address will not be published. Required fields are marked *

Next Post

ಹಸಿರು ಇಂಧನವುʼ ಕೊನೆಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ

Sat Jul 9 , 2022
ಹೊಸದಿಲ್ಲಿ: ಐದು ವರ್ಷಗಳ ನಂತರ ದೇಶದ ವಾಹನಗಳಲ್ಲಿ ಪೆಟ್ರೋಲ್ ಬಳಕೆಯ ಅಗತ್ಯವನ್ನು ʼಹಸಿರು ಇಂಧನವುʼ ಕೊನೆಗೊಳಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಡಾ.ಪಂಜಾಬರಾವ್ ದೇಶಮುಖ ಕೃಷಿ ವಿದ್ಯಾಪೀಠದಿಂದ ಗೌರವ ಡಾಕ್ಟರ್ ಆಫ್ ಸೈನ್ಸ್ ಪದವಿ ಪ್ರದಾನ ಮಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ತಮ್ಮ ಭಾಷಣದಲ್ಲಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ಗಡ್ಕರಿ, ಹಸಿರು ಹೈಡ್ರೋಜನ್, ಎಥೆನಾಲ್ ಮತ್ತು […]

Advertisement

Wordpress Social Share Plugin powered by Ultimatelysocial