ಪುರಾತನ ಜಲಚರ ಪ್ರಾಣಿ ಎಂಬ ಹಿರಿಮೆಗೆ ಜೋನಾಥನ್ ಹೆಸರಿನ ಆಮೆ ಪಾತ್ರವಾಗಿದೆ.!

 

ಸೆಂಟ್ ಹೆಲೇನಾ, ಏ.23- ಪ್ರಸ್ತುತ ಭೂಮಿ ಮೇಲೆ ಬದುಕಿರುವ ಅತ್ಯಂತ ಪುರಾತನ ಜಲಚರ ಪ್ರಾಣಿ ಎಂಬ ಹಿರಿಮೆಗೆ ಜೋನಾಥನ್ ಹೆಸರಿನ ಆಮೆ ಪಾತ್ರವಾಗಿದೆ. ಇಂದಿಗೆ 190 ವಸಂತಗಳನ್ನು ಪೂರೈಸಿರುವ ಜೋನಾಥನ್ ಇದೀಗ ಗಿನ್ನಿಸ್ ರೆಕಾರ್ಡ್ ದಾಖಲೆಗೆ ಸೇರ್ಪಡೆಗೊಂಡಿದೆ.

190 ವರ್ಷ ಬದುಕಿರುವ ಜೋನಾಥನ್‍ಗೆ ಕಣ್ಣು ಕಾಣುತ್ತಿಲ್ಲ. ವಾಸನೆ ಪ್ರಜ್ಞೆಯೂ ಇಲ್ಲ. ಆದರೆ, ಅವನ ಶ್ರವಣ ಶಕ್ತಿ ಅತ್ಯುತ್ತಮವಾಗಿದೆ ಎಂದು ಸೆಂಟ್ ಹೆಲೇನಾ ಸರ್ಕಾರದ ಮೂಲಗಳು ತಿಳಿಸಿವೆ.

ಜೋನಾಥನ್ ಚೆನ್ನಾಗಿ ಊಟ ಮಾಡುತ್ತಾನೆ. ಅವನನ್ನು ನಾವು ನೆಲದ ಮೇಲಿರಿಸಿರುವುದರಿಂದ ಕೈಯಿಂದ ಊಟ ನೀಡುತ್ತಿದ್ದೇವೆ. ಆತ ಮನುಷ್ಯನ ಸಹವಾಸವನ್ನು ಪ್ರೀತಿಸುತ್ತಾನೆ. ನಮ್ಮ ಕ್ರಿಯೆಗೆ ಅದ್ಭುತವಾಗಿ ಪ್ರತಿಕ್ರಿಯಿಸುತ್ತಿದ್ದಾನೆ ಎಂದು ಆಮೆಯನ್ನು ನೋಡಿಕೊಳ್ಳುತ್ತಿರುವ ಪಶು ವೈದ್ಯರು ತಿಳಿಸಿದ್ದಾರೆ.

190 ವರ್ಷ ಬದುಕಿ ಇತಿಹಾಸ ಸೃಷ್ಟಿಸಿರುವ ಜೋನಾಥನ್ ಆಮೆಗೆ ಕ್ಯಾಲೊರಿಗಳು, ವಿಟಮಿನ್ ಮತ್ತಿತರ ಔಷಧೋಪಚಾರ ಮಾಡುವ ಉದ್ದೇಶದಿಂದ ಆತನಿಗೆ ಕೈಯಿಂದ ಊಟ ಕೊಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಈ ಹಿಂದೆ 188 ವರ್ಷ ಬದುಕಿದ್ದ ಟೂ ಮಲೀಲಾ ಎಂಬ ಆಮೆ ಭೂಮಿ ಮೇಲೆ ಬದುಕಿರುವ ಪುರಾತನ ಜಲಚರ ಪ್ರಾಣಿ ಎಂಬ ಹಿರಿಮೆಗೆ ಪಾತ್ರವಾಗಿತ್ತು.

ಇದೀಗ 1832ರಲ್ಲಿ ಜನ್ಮ ತಳೆದಿರುವ ಜೋನಾಥನ್ ಇಂದಿಗೆ 190 ವರ್ಷಕ್ಕೆ ಕಾಲಿರಿಸಿದ್ದು, ಪ್ರಸ್ತುತ ಭೂಮಿ ಮೇಲೆ ಬದುಕಿರುವ ಅತೀ ಪುರಾತನ ಪ್ರಾಣಿ ಎಂಬ ದಾಖಲೆ ಸೃಷ್ಟಿಸಿದ್ದಾನೆ. ಪ್ರಸ್ತುತ ಸೆಂಟ್ ಹೆಲೇನಾ ಗವರ್ನರ್ ಮನೆಯ ಅಂಗಳದಲ್ಲಿರುವ ಕೊಳದಲ್ಲಿ ಜೋನಾಥನ್ ವಾಸಿಸುತ್ತಿದ್ದಾನೆ.
ಸರ್ ವಿಲಿಯಂಸ್ ಗ್ರೇ ಅವರಿಗೆ ಉಡುಗೊರೆಯಾಗಿ ಬಂದಿದ್ದ ಈ ಆಮೆ ಗವರ್ನರ್ ನಿವಾಸದಲ್ಲೇ ವಾಸಿಸುತ್ತಿದ್ದು, ಇದುವರೆಗೂ 31 ಗವರ್ನರ್‍ಗಳು ಆಡಳಿತ ನಡೆಸಿ ಹೋಗಿದ್ದರೂ ಜೋನಾಥನ್ ಮಾತ್ರ ಅದೇ ನಿವಾಸದಲ್ಲಿ ಜೀವನ ಸಾಗಿಸುತ್ತಿದ್ದಾನೆ.

190 ವರ್ಷದ ಜೋನಾಥನ್ ಡೇವಿಡ್, ಯಮ್ಮಾ ಹಾಗೂ ಫ್ರೆಡ್ ಎಂಬ ಮೂರು ಕಿರಿಯ ವಯಸ್ಸಿನ ಆಮೆಗಳೊಂದಿಗೆ ನೆಮ್ಮದಿಯಾಗಿ ಜೀವನ ಸಾಗಿಸುತ್ತಿದ್ದು, ಇದೀಗ ಅತಿ ಪುರಾತನ ಪ್ರಾಣಿ ಎಂಬ ಹಿರಿಮೆಗೆ ಪಾತ್ರವಾಗುವ ಮೂಲಕ ಇಡೀ ಜಗತ್ತಿನ ಗಮನ ಸೆಳೆದಿದ್ದಾನೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದ, ತಮಿಳು ನಟ ವಿಷ್ಣು ವಿಶಾಲ್!

Sat Apr 23 , 2022
ತಮಿಳು ನಟ ವಿಷ್ಣು ವಿಶಾಲ್ ಮತ್ತು ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಅವರು ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ನಟನ ಮುಂಬರುವ ತಮಿಳು ಚಿತ್ರ ‘ಗಟ್ಟ ಕುಸ್ತಿ’ ಸೆಟ್‌ನಲ್ಲಿ ಆಚರಿಸಿಕೊಂಡರು, ಇದನ್ನು ತೆಲುಗಿನಲ್ಲಿ ‘ಮಟ್ಟಿ ಕುಸ್ತಿ’ ಎಂದು ಹೆಸರಿಸಲಾಗಿದೆ. ಶುಕ್ರವಾರ, ಜ್ವಾಲಾ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಇಬ್ಬರೂ ಕೇಕ್ ಕತ್ತರಿಸುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ ಮತ್ತು “ಹ್ಯಾಪಿ ಫಸ್ಟ್ ಆನಿವರ್ಸರಿ ಪತಿ! ಅಂತಹ ಕಾಳಜಿಯುಳ್ಳ ಮತ್ತು ಜವಾಬ್ದಾರಿಯುತ […]

Advertisement

Wordpress Social Share Plugin powered by Ultimatelysocial