ಬಾಲಿವುಡ್​ ನಟ ಅಮೀರ್​ ಖಾನ್​ಗೆ ಕೊರೋನಾ ಪಾಸಿಟಿವ್​..!

ಇತ್ತೀಚೆಗಷ್ಟೆ ಸಾಮಾಜಿಕ ಜಾಲತಾಣಕ್ಕೆ ಗುಡ್​ ಬೈ ಹೇಳುವ ಮೂಲಕ ಸದ್ದು ಮಾಡಿದ್ದ ನಟ ಅಮೀರ್​ ಖಾನ್ ಈಗ ಕೊರೋನಾ ವಿಷಯದಿಂದಾಗಿ ಸುದ್ದಿಯಲ್ಲಿದ್ದಾರೆ. ನಟ ಅಮೀರ್ ಖಾನ್​ ಅವರಿಗೆ ಕೊರೋನಾ ಸೋಂಕಾಗಿದ್ದು, ಸದ್ಯಕ್ಕೆ ಹೋಂ ಕ್ವಾರಂಟೈನ್​ನಲ್ಲಿದ್ದಾರೆ.

ಮಹಾರಾಷ್ಟ್ರದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದೆ. ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚೆಗಷ್ಟೆ ನಟ ರಣಬೀರ್​ ಕಪೂರ್ ಸಹ ಕೊರೋನಾ ಸೋಂಕಿನಿಂದಾಗಿ ಹೋಂ ಕ್ವಾರಂಟೈನ್​ನಲ್ಲಿದ್ದಾರೆ.ಈಗ ನಟ ಅಮೀರ್ ಖಾನ್​ ಅವರಿಗೂ ಕೊರೋನಾ ಸೋಂಕಾಗಿದೆ.ಅಮೀರ್ ಖಾನ್​ ಅವರಿಗೂ ಕೊರೋನಾ ಪಾಸಿಟಿವ್​ ಆಗಿದ್ದು, ಅವರು ಹೋಂ ಕ್ವಾರಂಟೈನ್​ನಲ್ಲಿದ್ದಾರಂತೆ.56 ವರ್ಷದ ನಟನಿಗೆ ಕೊರೋನಾ ಸೋಂಕಾಗಿರುವ ಕುರಿತು ಅವರ ವಕ್ತಾರ ಖಚಿತಪಡಿಸಿದ್ದಾರೆ.2020 ಜೂನ್​ನಲ್ಲಿ ಅಮೀರ್ ಅವರ ಸ್ಟಾಫ್​ನಲ್ಲಿ ಒಬ್ಬರಿಗೆ ಕೊರೋನಾ ಸೋಂಕಾಗಿತ್ತು. ಆದರೆ ಆಗ ಅಮೀರ್​ ಅವರ ಕುಟುಂಬದವರಿಗೆ ಪರೀಕ್ಷೆಯಲ್ಲಿ ನೆಗೆಟಿವ್​ ಬಂದಿತ್ತು.   ​

Please follow and like us:

Leave a Reply

Your email address will not be published. Required fields are marked *

Next Post

ವಿಶೇಷ ದಿನದಂದು ಮಂತ್ರಾಲಯಕ್ಕೆ ಭೇಟಿ ನೀಡಿದ ನಟಿ ಹರಿಪ್ರಿಯಾ

Wed Mar 24 , 2021
ನಟಿ ಹರಿಪ್ರಿಯಾ ರಾಯರ ಸನ್ನಿಧಾನಕ್ಕೆ ಹೋಗಿದ್ದಾರೆ. ಅದರಲ್ಲೂ ಬಹಳ ವಿಶೇಷವಾದ ದಿನದಂದು ಹರಿಪ್ರಿಯಾ ರಾಯರ ದರ್ಶನ ಪಡೆದಿದ್ದಾರೆ. ನಟಿ ಹರಿಪ್ರಿಯಾ ಮಂತ್ರಾಲಯಕ್ಕೆ ಭೇಟಿ ನೀಡಿದ್ದು, ರಾಯರ ದರ್ಶನ ಪಡೆದಿದ್ದಾರೆ. ಬಹಳ ವಿಶೇಷವಾದ ದಿನದಂದು ರಾಯರ ಮಠಕ್ಕೆ ಭೇಟಿ ಕೊಟ್ಟಿರುವುದಾಗಿ ಹರಿಪ್ರಿಯಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ರಾಘವೇಂದ್ರ ಸ್ವಾಮಿ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಹರಿಪ್ರಿಯಾ. ಮಠದ ವತಿಯಿಂದ ನಟಿಗೆ ಸನ್ಮಾನ ಸಹ ಮಾಡಲಾಯಿತು. ಮಠಕ್ಕೆ ಭೇಟಿ ನೀಡಿದ್ದು ನಿಜಕ್ಕೂ ಖುಷಿ ನೀಡಿದೆ. […]

Advertisement

Wordpress Social Share Plugin powered by Ultimatelysocial