108 ಕೆಜಿ ಕಡಿಮೆಯಾಗಿದ್ದ ಅನಂತ್‌ ಅಂಬಾನಿ ದಪ್ಪಗಾಗಲು ಕಾರಣವೇನು?.

ಮಗ ಸಿಕ್ಕಾಪಟ್ಟೆ ಟ್ರೋಲ್‌ ಆಗುತ್ತಿರುವುದನ್ನು ಗಮನಿಸಿದ ನೀತಾ ತುಂಬಾ ನೋವು ಪಟ್ಟು ‘ ನನ್ನ ಮಗನನ್ನು ಟ್ರೋಲ್ ಮಾಡ್ಬೇಡಿ, ನನ್ನ ಮಗನ ಮೈ ತೂಕ ಹೆಚ್ಚಾಗಲು ಅವನ ಆರೋಗ್ಯ ಸ್ಥಿತಿ ಕಾರಣ’ ಎಂಬುವುದಾಗಿ ತಿಳಿಸಿದ್ದರು. ನೀತಾ ಅಂಬಾನಿ ತಮ್ಮ ಮಗ ಅನಂತ್‌ ಅಂಬಾನಿಗೆ ಅಸ್ತಮಾ ಸಮಸ್ಯೆಗೆ ಸ್ಟಿರಾಯ್ಡ್ ನೀಡಲಾಗುತ್ತಿತ್ತು, ಹೀಗಾಗಿ ಮೈ ತೂಕ ಹೆಚ್ಚಾಗಿದೆ ಎಂದು ತಿಳಿಸಿದ್ದರು. ಮೈ ತೂಕ ಕಳೆದುಕೊಂಡ ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದು ಅನಂತ್‌ ಅಂಬಾನಿ ಮಾತ್ರವಲ್ಲ ಶೇ. 94ರಷ್ಟು ಜನರಿಗೆ ಮೈ ತೂಕ ಕಳೆದುಕೊಂಡು ಮತ್ತೆ ಮೈ ತೂಕ ಹೆಚ್ಚಾಗುವುದು, ಏಕೆ ಹೀಗಾಗುವುದು ಎಂಬುವುದಕ್ಕೆ ಕಾರಣಗಳಿವೆ. ಸಾಮಾನ್ಯವಾಗಿ ಮೈ ತೂಕ 30 BMI ದಾಟಿದರೆ ಅದನ್ನು ಬೊಜ್ಜು ಮೈ ಎಂದು ಕರೆಯಲಾಗುವುದು. ಮೈ ತೂಕ ಹೆಚ್ಚಾದಾಗ ಬಹುತೇಕ ಜನರು ಮೈ ತೂಕ ಕರಗಿಸಲು ಪ್ರಯತ್ನ ಮಾಡುತ್ತಾರೆ ಹಾಗೂ ಅದರಲ್ಲಿ ಯಶಸ್ಸು ಆಗುತ್ತಾರೆ ಕೂಡ. ಆದರೆ ಮೈ ತೂಕ ಕಡಿಮೆ ಮಾಡಿಕೊಂಡ ಮೇಲೆ ಅದೇ ಮೈ ತೂಕ ಕಾಪಾಡಿಕೊಳ್ಳುವವರು ಮಾತ್ರ ಶೇ. 6ರಷ್ಟು ಜನ ಮಾತ್ರ, ಉಳಿದ ಶೇ. 94ರಷ್ಟು ಜನರ ಮೈ ತೂಕ ಮತ್ತೆ ಹೆಚ್ಚಾಗುವುದು, ಏಕೆ? ನಾವೆಲ್ಲಾ ತೂಕ ಕಡಿಮೆ ಮಾಡುವಾಗ ಕಟ್ಟುನಿಟ್ಟಿನ ಡಯಟ್‌ ಫಾಲೋ ಮಾಡುತ್ತೇವೆ. ಈ ಸಂದರ್ಭದಲ್ಲಿ ಕೆಲವೊಂದು ಆಹಾರಗಳನ್ನು ಅಂದರೆ ಸಿಹಿ, ಸಕ್ಕರೆಯಂಶ, ಅಧಿಕ ಕೊಬ್ಬಿನಂಶ, ಅಧಿಕ ಕಾರ್ಬೋಹೈಡ್ರೇಟ್‌ ಇರುವ ಆಹಾರ ಇಂಥ ಆಹಾರಗಳನ್ನು ಮುಟ್ಟುವುದಿಲ್ಲ, ಅಲ್ಲದೆ ವ್ಯಾಯಾಮ ಮಾಡುತ್ತೇವೆ ಈ ಕಾರಣದಿಂದಾಗಿ ಮೈ ತೂಕ ಕಡಿಮೆಯಾಗುವುದು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಧೀಮಂತ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕೊನೆಯ ಅಧಿವೇಶನ.

Thu Feb 9 , 2023
ನಾಡಿನ ಧೀಮಂತ ರಾಜಕೀಯ ಮುಖಂಡರಲ್ಲೊಬ್ಬರಾದ ಹಾಗೂ ರೈತ ನಾಯಕ, ಹೋರಾಟಗಾರ ಎಂದೇ ಪ್ರಸಿದ್ಧವಾದ ಬಿ.ಎಸ್.ಯಡಿಯೂರಪ್ಪ ಅವರ ಜೀವನದ ಅತ್ಯಂತ ಮಹತ್ವದ ಘಟ್ಟವೊಂದು ಶುಕ್ರವಾರದಿಂದ ಆರಂಭವಾಗಲಿದೆ. ಐದು ದಶಕಗಳಿಂದ ರಾಜ್ಯ ರಾಜಕಾರಣದ ಪ್ರಮುಖ ಬಿಂದುವಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಮಂಡಲದಲ್ಲಿ ಭಾಗವಹಿಸುವ ಕೊನೆಯ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ.ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಯಡಿಯೂರಪ್ಪ ಈಗಾಗಲೆ ಹೇಳಿದ್ದಾರೆ. ಜತೆಗೆ, ತಮ್ಮ […]

Advertisement

Wordpress Social Share Plugin powered by Ultimatelysocial