ಕಳೆದೆರಡು ವರ್ಷಗಳು ಕೋವಿಡ್ ಹಿನ್ನೆಲೆ ಪ್ರವಾಸಿಗ ಕೊರತೆ ಎದುರಿಸಿದ್ದ ಆನೆಗೊಂದಿ ತಾಣ,

ಕೊಪ್ಪಳದ ಗಂಗಾವತಿಯ ಆನೆಗೊಂದಿ, ವಿರುಪಾಪುರ ಗಡ್ಡಿ, ಶಿವಪುರ, ಬಸ್ಸಾಪುರ, ಹನುಮನಳ್ಳಿ ಗ್ರಾಮಗಳು ಅಂದ್ರೆ ವಿದೇಶಿಗರಿಗೆ ಅಚ್ಚುಮೆಚ್ಚಿನ ತಾಣಗಳು, ಬೇರೆ ಬೇರೆ ದೇಶಗಳಿಂದ ವಿದೇಶಿಗರು ಬರುತ್ತಾರೆ. ಹಾಗಾಗಿ ರೆಸಾರ್ಟ್ ಗಳು ನಾಯಿಕೊಡೆಗಳಂತೆ ಹುಟ್ಟಿಕೊಳ್ಳುತ್ತಿವೆ. ಆದರೆ ಅನಧಿಕೃತ ರೆಸಾರ್ಟ್ಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ತೆರವು ಮಾಡಲು ಜಿಲ್ಲಾಡಳಿತ ಹಾಗೂ ಹಂಪಿ ಪ್ರಾಧಿಕಾರ ಕೂಡ ಮುಂದಾಗಿದ್ದು, ರೆಸಾರ್ಟ್ ಮಾಲೀಕರು ಮಾತ್ರ ನಮಗೆ ಅನುಕೂಲ ಮಾಡಿಕೊಡಿ ತೆರವುಗೊಳಿಸಬೇಡಿ ಅಂತಾ ಮನವಿ ಮಾಡುತ್ತಿದ್ದಾರೆ.

ವಾ.ಓ: ಕಳೆದೆರಡು ವರ್ಷಗಳು ಕೋವಿಡ್ ಹಿನ್ನೆಲೆ ಪ್ರವಾಸಿಗ ಕೊರತೆ ಎದುರಿಸಿದ್ದ ಆನೆಗೊಂದಿ ತಾಣ, ಇದೀಗ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಇದರಿಂದ ಈ ಭಾಗದ ಸಣ್ಣಪುಟ್ಟ ವ್ಯಾಪರಸ್ಥರಿಗೆ, ಹೋಟೆಲ್, ವಾಹನ ಮಾಲೀಕರ ನಿಟ್ಟುಸಿರು ಬಿಡುವಂತ್ತಾಗಿದೆ. ಜೊತೆಗೆ ಬಂದ್ ಆಗಿದ್ದ ರೆಸಾರ್ಟ್ಗಳು ಓಪನ್ ಆಗಿದ್ದು, ಜೊತೆಗೆ ನಾಯಕೊಡೆಗಳಂತೆ ಅನಧಿಕೃತ ರೆಸಾರ್ಟ್ ಗಳು ಹುಟ್ಟಿಕೊಳ್ಳುತ್ತಿವೆ. 2018-19ರಲ್ಲೂ ಅನಧಿಕೃತ ರೆಸಾರ್ಟ್ ಗಳ ಹಾವಳಿ ಹೆಚ್ಚಾಗಿತ್ತು. ಅಂದು ಕೂಡ ಅಧಿಕಾರಿಗಳು ಅನಧಿಕೃತ ರೆಸಾರ್ಟ್ ಗಳಿಗೆ ಬೀಗ ಜಡಿದಿದ್ದರು. ಇದೀಗ ಕೋವಿಡ್ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದ್ದು, ಅನಧಿಕೃತ ರೆಸಾರ್ಟ್ ಗಳ ಹಾವಳಿ ಹೆಚ್ಚಾಗಿದೆ. ಇಂತಹ ರೆಸಾರ್ಟ್ ಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರುಗಳು ಬಂದಿವೆ. ಹಾಗಾಗಿ ನಿನ್ನೆಯಿಂದ ಹಂಪಿ ಪ್ರಾಧಿಕಾರದ ಅಧಿಕಾರಿಗಳು, ಕೊಪ್ಪಳ ಸಹಾಯಕ ಆಯುಕ್ತರು ಅನಧಿಕೃತ ರೆಸಾರ್ಟ್ ಗಳಿಗೆ ನೋಟಿಸ್ ನೀಡಿ ಬೀಗ ಜಡಿಯುತ್ತಿದ್ದಾರೆ. ವಿದ್ಯುತ್ ಹಾಗೂ ನೀರು ಸರಬರಾಜು ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ರೆಸಾರ್ಟ್ ಮಾಲೀಕರು ಕಂಗಾಲಾಗಿದ್ದು, ನಮಗೆ ಅನುಕೂಲ ಮಾಡಿಕೊಡಿ, ರೆಸಾರ್ಟ್ ತೆರವುಗೊಳಿಸಬೇಡಿ, ಇಲ್ಲಿ ಬರುವ ವಿದೇಶಿಗರಿಗೆ ಇತರ ರಾಜ್ಯಗಳಿಗೆ ತಪ್ಪು ಸಂದೇಶ ಹೋಗುತ್ತೆ ಎಂದು ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಈ ಹಿಂದೆ ರೆಸಾರ್ಟ್ ಮಾಲೀಕರು ಕೊಪ್ಪಳ ಜಿಲ್ಲಾ ಉಸ್ತುವಾರಿ ಆನಂದ್ ಸಿಂಗ್ ಗೆ ಮನವಿ ಮಾಡಿದಾಗ ರೆಸಾರ್ಟ್ ಗಳನ್ನು ಲೀಗಲ್ ಮಾಡುವುದಾಗಿ ತಿಳಿಸಿದ್ದರು, ಆದರೆ ಇದ್ಯಾವುದು ಮಾಡಿಲ್ಲ. ಇದರಿಂದ ರೆಸಾರ್ಟ್ ನಂಬಿ ಜೀವನ ನಡೆಸುವವರಿಗೆ ಕಂಗಾಲಾಗಿದ್ದಾರೆ.
ಒಟ್ಟಾರೆ ಈಗಾಗಲೇ ಹನುಮನಳ್ಳಿ, ಸಾಣಪುರ, ಆನೆಗೊಂದಿ ಭಾಗದ ಸುತ್ತಮುತ್ತ ಗ್ರಾಮಗಳಲ್ಲಿ ಅಕ್ರಮ ರೆಸಾರ್ಟ್ ಗಳ ನಿರ್ಮಾಣ ಹೆಚ್ಚಳವಾಗಿದ್ದು, ಆದೇಶ ನೀಡಿದ 24 ಗಂಟೆಗಳಲ್ಲಿ ರೆಸಾರ್ಟ್ ತೆರವುಗೊಳಿಸುವಂತೆ ಸೂಚಿಸಲಾಗಿದೆ. ಈಗಾಗಲೇ 60ಕ್ಕೂ ಹೆಚ್ಚು ಅನಧಿಕೃತ ರೆಸಾರ್ಟ್​ಗಳ ಮೇಲೆ ದಾಳಿ ಮಾಡಿದ್ದು ಕಟ್ಟಡಗಳನ್ನು ತೆರವುಗೊಳಿಸುವಂತೆ ಖಡಕ್ ಸೂವನೆ ನೀಡಲಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

(ಒಎಂಎಸ್‌ಎಸ್)' ಅಡಿಯಲ್ಲಿ 30 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡಲಿದೆ.

Sat Feb 11 , 2023
ನವದೆಹಲಿ: ಹೆಚ್ಚುತ್ತಿರುವ ಗೋಧಿ ಮತ್ತು ಹಿಟ್ಟಿನ ಬೆಲೆಗಳನ್ನು ನಿಯಂತ್ರಿಸಲು ಸರ್ಕಾರವು ‘ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (ಒಎಂಎಸ್‌ಎಸ್)’ ಅಡಿಯಲ್ಲಿ 30 ಲಕ್ಷ ಮೆಟ್ರಿಕ್ ಟನ್ ಗೋಧಿಯನ್ನು ಮಾರುಕಟ್ಟೆಗೆ ಬಿಡಲಿದೆ. ರಾಜ್ಯ ಸರ್ಕಾರಗಳಿಗೆ, ಕೇಂದ್ರೀಯ ಭಂಡಾರ, ರಾಷ್ಟ್ರೀಯ ಗ್ರಾಹಕ ಸಹಕಾರ ಒಕ್ಕೂಟ (ಎನ್‌ಸಿಸಿಎಫ್) , ಭಾರತೀಯ ಕೃಷಿ ಸಹಕಾರ ಮಾರುಕಟ್ಟೆ ಮಂಡಳಿ (ಎನ್‌ಎಎಫ್‌ಇಡಿ), ರಾಜ್ಯ ಸಹಕಾರಿ ಸಂಸ್ಥೆಗಳು, ಮಂಡಳಿಗಳಿಗೆ ಗೋಧಿಯನ್ನು ನೀಡಲು ನಿರ್ಧರಿಸಲಾಗಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ […]

Advertisement

Wordpress Social Share Plugin powered by Ultimatelysocial