ಸಿನಿ ರಸಿಕರ ನೆಚ್ಚಿನ ಮತ್ತೊಂದು ಶುಕ್ರವಾರ ಬಂದಿದೆ.

ಸಿನಿ ರಸಿಕರ ನೆಚ್ಚಿನ ಮತ್ತೊಂದು ಶುಕ್ರವಾರ ಬಂದಿದೆ. ಜನವರಿ ತಿಂಗಳಿನಲ್ಲಿ ಬಿಡುಗಡೆಗೊಂಡು ಅಬ್ಬರಿಸಿದ್ದ ವಿವಿಧ ಭಾಷೆಗಳ ಹಲವು ಚಿತ್ರಗಳು ತಮ್ಮ ಓಟಗಳನ್ನು ನಿಲ್ಲಿಸಿದ್ದು, ಓಟಿಟಿಯಲ್ಲಿ ಬಿಡುಗಡೆಗೊಂಡಿವೆ. ಇನ್ನು ಜನವರಿ ಅಂತಿಮ ವಾರ ಹಾಗೂ ಫೆಬ್ರವರಿ ಮೊದಲ ವಾರ ಬಿಡುಗಡೆಗೊಂಡಿದ್ದ ಸಿನಿಮಾಗಳ ನಡುವೆ ಇಂದಿಗೂ ಸಹ ಬಾಕ್ಸ್ ಆಫೀಸ್ ಪೈಪೋಟಿ ಮುಂದುವರಿದಿದೆ.

ಈ ವಾರ ಬಿಡುಗಡೆಗೊಂಡ ನೂತನ ಚಿತ್ರಗಳ ಕಾರಣದಿಂದಾಗಿ ಕಳೆದೆರಡು ವಾರಗಳಲ್ಲಿ ಬಿಡುಗಡೆಗೊಂಡಿದ್ದ ಕೆಲ ಸಿನಿಮಾಗಳು ಬೆಂಗಳೂರಿನ ಕೆಜಿ ರಸ್ತೆಯ ಮೈನ್ ಥಿಯೇಟರ್‌ನಿಂದ ಆಚೆ ಬಿದ್ದಿದ್ದರೆ, ಇನ್ನೂ ಕೆಲ ಸಿನಿಮಾಗಳು ಮೈನ್ ಥಿಯೇಟರ್‌ಗಳಲ್ಲಿ ತಮ್ಮ ಓಟವನ್ನು ಯಶಸ್ವಿಯಾಗಿ ಮುಂದುವರಿಸಿವೆ.

ಈ ವಾರ ಬರೋಬ್ಬರಿ ಹನ್ನೊಂದು ಕನ್ನಡ ಸಿನಿಮಾಗಳು ಬಿಡುಗಡೆಗೊಂಡಿದ್ದು, ಇಷ್ಟು ಚಿತ್ರಗಳ ಬಿಡುಗಡೆಯ ನಡುವೆಯೂ ಮೈನ್ ಥಿಯೇಟರ್ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲಿಯೂ ಈಗಿನ ಓಟಿಟಿ ಜಮಾನದಲ್ಲಿ ಹೆಚ್ಚು ದಿನಗಳ ಕಾಲ ಚಿತ್ರಮಂದಿರಗಳಲ್ಲಿ ಚಿತ್ರಗಳು ಉಳಿದುಕೊಳ್ಳುವುದು ಸಾಹಸವೇ ಸರಿ. ಹಾಗಿದ್ದರೆ ಇಂದು ( ಫೆಬ್ರವರಿ 10 ) ಹಲವು ಹೊಸ ಚಿತ್ರಗಳು ಬಿಡುಗಡೆಯಾದ ನಂತರ ಬೆಂಗಳೂರಿನ ಕೆಜಿ ರಸ್ತೆಯ ಯಾವ ಮುಖ್ಯ ಚಿತ್ರಮಂದಿರಗಳಲ್ಲಿ ಯಾವ ಚಿತ್ರಗಳು ಪ್ರದರ್ಶನವಾಗುತ್ತಿವೆ, ಯಾವ ಸಿನಿಮಾಗಳು ಮೈನ್ ಥಿಯೇಟರ್ ಕಳೆದುಕೊಂಡಿವೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಒಂದೇ ವಾರಕ್ಕೆ ನಟ ಭಯಂಕರ ಔಟ್

ಕಳೆದ ವಾರ ಬೆಂಗಳೂರಿನ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರವಾದ ಸಂತೋಷ್‌ನಲ್ಲಿ ಬಿಡುಗಡೆಗೊಂಡಿದ್ದ ಪ್ರಥಮ್ ನಟನೆಯ ಹಾಗೂ ನಿರ್ದೇಶನದ ನಟ ಭಯಂಕರ ಚಿತ್ರ ಏಳು ದಿನಗಳಿಗೆ ತನ್ನ ಓಟವನ್ನು ಪೂರ್ಣಗೊಳಿಸಿದ ಮುಖ್ಯ ಚಿತ್ರಮಂದಿರದಿಂದ ಹೊರಬಿದ್ದಿದೆ. ಬೆಂಗಳೂರಿನಲ್ಲಿ ವೀರೇಶ್ ಚಿತ್ರಮಂದಿರದಲ್ಲಿ ಒಂದು ಶೋ ಬಿಟ್ಟರೆ ನಟ ಭಯಂಕರ ಚಿತ್ರ ನಗರದ ಉಳಿದ ಯಾವುದೇ ಚಿತ್ರಮಂದಿಗಳಲ್ಲಿಯೂ ಪ್ರದರ್ಶನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.

ಯಶಸ್ವಿ ಮೂರನೇ ವಾರಕ್ಕೆ ಕಾಲಿಟ್ಟ ಕ್ರಾಂತಿ

ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ ಕಾಂಬಿನೇಶನ್‌ನ ಎರಡನೇ ಚಿತ್ರ ಕ್ರಾಂತಿ ಯಶಸ್ವಿಯಾಗಿ ಬೆಂಗಳೂರಿನ ಕೆಜಿ ರಸ್ತೆಯ ಪ್ರಮುಖ ಚಿತ್ರಮಂದಿರ ಅನಪಮಾದಲ್ಲಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಬೆಂಗಳೂರಿನಲ್ಲಿ ಇಂದು ( ಫೆಬ್ರವರಿ 10 ) 150 ಪ್ರದರ್ಶನಗಳನ್ನು ಪಡೆದುಕೊಂಡಿರುವ ಕ್ರಾಂತಿ ಚಿತ್ರ ಸಮಾಧಾನಕರ ಪ್ರದರ್ಶನವನ್ನು ಕಾಣುತ್ತಿದೆ.

ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ?

ಬೆಂಗಳೂರಿನ ಪ್ರಮುಖ ಚಿತ್ರಮಂದಿರಗಳಲ್ಲಿ ಯಾವ ಚಿತ್ರ ಎಷ್ಟು ಪ್ರದರ್ಶನಗಳನ್ನು ಪಡೆದುಕೊಂಡಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..

ನರ್ತಕಿ ಚಿತ್ರಮಂದಿರ, ಕೆಜಿ ರಸ್ತೆ: ಬೆಂಗಳೂರು 69 ( ಕನ್ನಡ ) – ನಾಲ್ಕು ಪ್ರದರ್ಶನಗಳು

ಸಂತೋಷ್ ಚಿತ್ರಮಂದಿರ, ಕೆಜಿ ರಸ್ತೆ: ರೂಪಾಯಿ ( ಕನ್ನಡ ) ನಾಲ್ಕು ಪ್ರದರ್ಶನಗಳು

ಅನುಪಮಾ ಚಿತ್ರಮಂದಿರ : ಕ್ರಾಂತಿ ( ಕನ್ನಡ ) ನಾಲ್ಕು ಪ್ರದರ್ಶನಗಳು

ಭೂಮಿಕಾ ಚಿತ್ರಮಂದಿರ: ಅಮಿಗೊಸ್ ( ತೆಲುಗು ) ಐದು ಪ್ರದರ್ಶನಗಳು

ತ್ರಿವೇಣಿ ಚಿತ್ರಮಂದಿರ : ವಸಂತ ಕೋಕಿಲ ( ತಮಿಳು ) ನಾಲ್ಕು ಪ್ರದರ್ಶನಗಳು

ವೀರೇಶ್ ಚಿತ್ರಮಂದಿರ, ಮಾಗಡಿ ರಸ್ತೆ: ಕ್ರಾಂತಿ ( ಕನ್ನಡ ) ಎರಡು ಪ್ರದರ್ಶನಗಳು, ರೂಪಾತಿ ( ಕನ್ನಡ ) ಎರಡು ಪ್ರದರ್ಶನಗಳು, ಹೊಂದಿಸಿ ಬರೆಯಿರಿ ( ಕನ್ನಡ ) ಎರಡು ಪ್ರದರ್ಶನಗಳು, ನಟ ಭಯಂಕರ ( ಕನ್ನಡ ) ಒಂದು ಪ್ರದರ್ಶನ ಹಾಗೂ ತನುಜಾ ( ಕನ್ನಡ ) ಒಂದು ಪ್ರದರ್ಶನ.

ಊರ್ವಶಿ ಚಿತ್ರಮಂದಿರ: ಅಮಿಗೊಸ್ ( ತೆಲುಗು ) ಎರಡು ಪ್ರದರ್ಶನಗಳು ಹಾಗೂ ಪಠಾಣ್ ( ಹಿಂದಿ ) ಎರಡು ಪ್ರದರ್ಶನಗಳು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಒಬ್ಬ ವ್ಯಕ್ತಿಗೆ ಏನಾದರೂ ಮಾಡಬೇಕೆಂಬ ಹಂಬಲವಿದ್ದರೆ ಸಾಕು!

Fri Feb 10 , 2023
ಒಬ್ಬ ವ್ಯಕ್ತಿಗೆ ಏನಾದರೂ ಮಾಡಬೇಕೆಂಬ ಹಂಬಲವಿದ್ದರೆ, ಅವನ ದಾರಿಯಲ್ಲಿ ಬರುವ ಎಲ್ಲಾ ಕಷ್ಟಗಳು ಕೂಡ ತುಂಬಾ ಸಣ್ಣದಾಗಿಬಿಡುತ್ತವೆ. ಛಲ ಒಂದಿದ್ದರೆ ಸಾಕು ಮನುಷ್ಯ ಈ ಪ್ರಪಂಚದಲ್ಲಿ   ಏನು ಬೇಕಾದರೂ ಮಾಡುತ್ತಾನೆ ಅ ಬಿನಾನಿ ಕಾಲೇಜಿನಲ್ಲಿ ಬಿಎ ಮಾಡಿದ್ದಾನೆ. ಅದರ ನಂತರ ಅವರು ಬಥುವಾದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಐಟಿಐ ಮಾಡಿದರು. ಇದಾದ ನಂತರ ಹಲವೆಡೆ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಿದರು, ಹಲವು ಪರೀಕ್ಷೆಗಳಲ್ಲಿಯೂ ಕಾಣಿಸಿಕೊಂಡರು, ಆದರೆ ಅದೃಷ್ಟ ಅವರ ಬಳಿ […]

Advertisement

Wordpress Social Share Plugin powered by Ultimatelysocial