ಅನು ಪಾವಂಜೆ ಮಹಾನ್ ಕಲಾವಿದೆ

ಪಾವಂಜೆ ಕಲಾ ವಂಶದಲ್ಲಿ ಮೂಡಿಬಂದ ಅನು ಪಾವಂಜೆ ತೈಲವರ್ಣ, ಜಲವರ್ಣ, ಬೆಳಕು-ನೆರಳು ಚಿತ್ರಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ.ಅನು ಪಾವಂಜೆಯವರು 1971ರ ಫೆಬ್ರುವರಿ 19ರಂದು ಮಂಗಳೂರಿನಲ್ಲಿ ಜನಿಸಿದರು. ತಂದೆ ಪಾವಂಜೆ ಕೃಷ್ಣಮೂರ್ತಿ. ತಾಯಿ ಶಾರದಾ.ಕಲಾವಿದರ ಕುಟುಂಬದಲ್ಲಿ ಜನಿಸಿದ ಅನು ಅವರಿಗೆ ಚಿಕ್ಕಂದಿನಿಂದಲೂ ಕಲೆಯಲ್ಲಿ ವಿಶೇಷ ಒಲವು. ಮಹಾನ್ ಕಲಾವಿದರಾದ ಇವರ ಪಿಜ್ಜ ಪಾವಂಜೆ ಗೋಪಾಲಕೃಷ್ಣಯ್ಯನವರು ರಾಜಾರವಿವರ್ಮರ ಆತ್ಮೀಯರಾಗಿದ್ದವರು. ನಾಲ್ಕು ತಲೆಮಾರಿನಿಂದಲೂ ವಂಶ ಪಾರಂಪರ್ಯವಾಗಿ ಇವರ ಕುಟುಂಬದಲ್ಲಿ ಚಿತ್ರಕಲಾ ಪರಿಣತಿ ನಿರಂತರವಾಗಿ ಹರಿದುಬಂದಿದೆ.ಅನು ಪಾವಂಜೆ ಅವರ ಬಾಲ್ಯದ ದಿನಗಳ ಬಗ್ಗೆ ತಿಳಿಯುವುದೆಂದರೆ ಅದೊಂದು ವಿಸ್ಮಯ ವರ್ಣರಂಜಿತ ಕಲಾಲೋಕವನ್ನು ಪ್ರವೇಶಿಸಿದಂತೆ. ಅನು ಅವರು ಹುಟ್ಟಿದ ಮನೆಯಲ್ಲಿ ಸುತ್ತ ಮುತ್ತಲೆಲ್ಲಾ ಬಣ್ಣಗಳದ್ದೇ ಪ್ರಪಂಚ. ಮನೆಯ ಮೊದಲ ಕಲಾವಿದ ಪಿಜ್ಜ ಪಾವಂಜೆ ಗೋಪಾಲಕೃಷ್ಣಯ್ಯ. ದೊಡ್ಡಜ್ಜ ನರಹರಿ ಪಾವಂಜೆ ಮತ್ತು ಅಜ್ಜ ಭುಜಂಗ ರಾವ್ ಪಾವಂಜೆ ಇವರೆಲ್ಲರ ಕಲಾ ಸಂಗ್ರಹವನ್ನ ಕುತೂಹಲದಿಂದ ನೋಡುತ್ತಿದ್ದ ಅನು ಅವರಿಗೆ ಇವೇ ಸ್ಪೂರ್ತಿಗಳು.ಮನೆಯಲ್ಲಿ ಕಲಾವಿದರಾದ ಅವರ ಚಿಕ್ಕಪ್ಪ ಮಾಧವರಾವ್ ಪಾವಂಜೆ (ಎಂ. ಆರ್. ಪಾವಂಜೆ) ಮುಂಜಾನೆಯಿಂದ ಸಂಜೆಯವರೆಗೆ ಮಹಡಿ ಮೇಲೆ ಚಿತ್ರ ರಚಿಸುತ್ತಿದ್ದರು. ಆಗ ಬಾಲಕಿ ಅನು ಸಮಯ ಕಳೆಯುತ್ತಿದ್ದುದೆಲ್ಲಾ ಅವರ ಬದಿಯಲ್ಲೇ. ಸಂಜೆಗೆ ಅವರ ಕೆಲಸ ಮುಗಿಯಿತೆಂದರೆ ಅವರ ತಟ್ಟೆಯಲ್ಲಿ ಉಳಿದ ಬಣ್ಣಗಳು ಬಾಲಕಿ ಅನು ಅವರ ಸುಪರ್ದಿಗೆ ಬರುತ್ತಿದ್ದವು. ಇದನ್ನು ಅನು ತನಗೆ ಇಷ್ಟ ಬಂದಂತೆ ಒಂದು ಕ್ಯಾನ್ವಾಸ್ ಮೇಲೆ ಹಚ್ಚಬಹುದಿತ್ತು. ಆ ಸಂಜೆಯ ಗಳಿಗೆಗಳೆಂದರೆ ಬಾಲಕಿ ಅನುವಿಗೆ ಇನ್ನಿಲ್ಲದ ಉತ್ಸಾಹ ಮತ್ತು ಕಾತರದ ನಿರೀಕ್ಷೆಗಳು. ಅದಕ್ಕಾಗಿ ಚಿಕ್ಕಪ್ಪನನ್ನು “ಆಯ್ತಾ, ಆಯ್ತಾ ಅಂತ ಪೀಡಿಸುತ್ತಿದೆ” ಎಂದು ನಗುವಿನೊಂದಿಗೆ ಅನು ನೆನಪಿಸಿಕೊಳ್ಳುತ್ತಾರೆ. ಹೀಗೆ ಅನು ಪಾವಂಜೆ ಅವರ ಬಣ್ಣದ ಲೋಕ ತೆರೆದುಕೊಂಡಿತ್ತು. ಹೀಗೇ ಮುಂದುವರೆಯುತ್ತಾ ಮುಂದುವರೆಯುತ್ತಾ ಅದು ಅನು ಅವರನ್ನು ಅನುದಿನವೂ ಎಂಬಂತೆ ಪೂರ್ತಿಯಾಗಿ ಆವರಿಸಿಕೊಂಡುಬಿಟ್ಟಿತ್ತು.ಅನು ಪಾವಂಜೆ ಅವರಿಗೆ ಅವರ ಮುತ್ತಜ್ಜ, ದೊಡ್ಡಜ್ಜನವರಂತೆ ಜೆ.ಜೆ.ಕಲಾಶಾಲೆಯಲ್ಲಿ ಕಲಿಯಬೇಕೆಂಬ ಇದ್ದ ಆಸೆ ನೆರವೇರಲಿಲ್ಲ. ಬೇರಾವ ಕಲಾಶಾಲೆಯೂ ಅವರನ್ನು ತಟ್ಟಲಿಲ್ಲ. ಮನೆಯಲ್ಲಿದ್ದ ಅವರ ಚಿಕ್ಕಪ್ಪ ಎಂ. ಆರ್. ಪಾವಂಜೆಯವರೇ ಅವರ ಗುರುಗಳಾದರು. ಎಂ. ಆರ್. ಪಾವಂಜೆಯವರು ಶಿಸ್ತಿನಿಂದ ಯಾವುದೇ ಸಲಿಗೆಯಿಲ್ಲದೆ ನಿರ್ದಾಕ್ಷಿಣ್ಯವಾಗಿ ಹಂತಹಂತವಾಗಿ ಎಲ್ಲ ಪ್ರಕಾರಗಳನ್ನೂ ಕಲಿಸಿದರು. ಪೆನ್ಸಿಲ್ ಶೇಡಿಂಗ್, ಚಾರ್ಕೋಲ್ ವರ್ಕ್, ಪೆನ್ ವರ್ಕ್, ಪೇಸ್ಟಲ್ಸ್, ವಾಟರ್ ಕಲರ್, ಆಯಿಲ್ ಕಲರ್ ಹೀಗೆ ಬೇರೆ ಬೇರೆ ಮಾಧ್ಯಮಗಳನ್ನೂ ಮನದಟ್ಟಾಗಿಸಿದರು. “ಕಲಿಯುವಾಗ ಎಲ್ಲವನ್ನೂ ಕಲಿಯಬೇಕು, ಎಲ್ಲವೂ ಗೊತ್ತಿರಬೇಕು, ನಂತರ ಮಾತ್ರವೇ, ನೀನು ನಿನಗೆ ಇಷ್ಟ ಬಂದಿದ್ದನ್ನ ಆಯ್ಕೆ ಮಾಡಬಹುದು” ಎಂದು ಸ್ಪಷ್ಟವಾಗಿ ಖಡಾಖಂಡಿತವಾಗಿ ನುಡಿಯುತ್ತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸುದ್ದಿಗೋಷ್ಟಿ.

Sun Feb 19 , 2023
ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ತೆಂಗಿನಕಾಯಿ ಸುದ್ದಿಗೋಷ್ಟಿ. ಸಿಎಮ್ ಬಸವರಾಜ್ ಬೊಮ್ಮಾಯಿಯವರು ಅಭಿವೃದ್ಧಿ ಪರವಾದ ಬಜೆಟ್ ಮಂಡಿಸಿದ್ದಾರೆ. ಜನರೇ ಕಾಂಗ್ರೆಸ್‌ನವರ ಕಿವಿಯಲ್ಲಿ ಹೂವು ಮುಡಿಸಿದ್ದಾರೆ. ಸಿದ್ದರಾಮಯ್ಯ ಯಾಕೆ ಸೋತರು ಅಂತಾ ಹೇಳಲು ತಯಾರಿಲ್ಲ. ಸಿದ್ದರಾಮಯ್ಯನವರದು ಪಲಾಯನ ಮಾಡುವ ಕೆಲಸ. 13 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಯಾವುದೇ ರೀತಿಯ ಹೆಜ್ಜೆಗುರುತು ಬಿಟ್ಟುಹೋಗಿಲ್ಲ. ಪ್ರೂಫ್ ಇಲ್ಲದೆ ಮಾತಾಡುತ್ತಾರೆ, ಗಾಳಿಯಲ್ಲಿ ಗುಂಡು ಹೊಡೆಯುತ್ತಾರೆ. ಯಾವುದೇ ವಿಷಯವನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ಯಲ್ಲಾ. ಸುರ್ಜೇವಾಲಾ […]

Advertisement

Wordpress Social Share Plugin powered by Ultimatelysocial