ಹೈಕೋರ್ಟ್ ಮೊರೆ ಹೋದ ಅನುಷ್ಕಾ ಶರ್ಮಾ

ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. 2012-2013 ಮತ್ತು 2013-2014ರ ಬಾಕಿ ತೆರಿಗೆ ಪಾವತಿಸುವಂತೆ ಮಾರಾಟ ತೆರಿಗೆಯ ಉಪ ಆಯುಕ್ತರು ನೀಡಿದ್ದ ಎರಡು ಆದೇಶಗಳನ್ನು ಪ್ರಶ್ನಿಸಿ ನಟಿ ಅನುಷ್ಕಾ ಶರ್ಮಾ ಬಾಂಬೆ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ. ಅನುಷ್ಕಾ ಶರ್ಮಾ ಸಲ್ಲಿಸಿರುವ ಮನವಿಗೆ ಉತ್ತರ ನೀಡುವಂತೆ ಮಹಾರಾಷ್ಟ್ರ ರಾಜ್ಯ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಇಂದು (ಗುರುವಾರ, ಜನವರಿ 12) ನಿರ್ದೇಶನ ನೀಡಿದೆ ನ್ಯಾಯಾಧೀಶರಾದ ನಿತಿನ್.ಎಂ.ಜಮ್ದಾರ್ ಮತ್ತು ಅಭಯ್ ಅಹುಜಾ ಅವರ ಪೀಠವು ನಟಿ ಅನುಷ್ಕಾ ಶರ್ಮಾ ಅವರ ಮನವಿ ಅರ್ಜಿಯನ್ನ ಆಲಿಸಿದರು. ಎಂಡಾರ್ಸ್‌ಮೆಂಟ್ಸ್ ಹಾಗೂ ಪ್ರಶಸ್ತಿ ಕಾರ್ಯಕ್ರಮಗಳಲ್ಲಿನ ಆಂಕರಿಂಗ್‌ಗೆ ತಾವು ಪಡೆದ ಶುಲ್ಕದ ಮೇಲೆ ಮೌಲ್ಯಮಾಪನ ಮಾಡುವ ಅಧಿಕಾರಿ ತಪ್ಪಾಗಿ ಮಾರಾಟ ತೆರಿಗೆ (ಸೇಲ್ಸ್ ಟ್ಯಾಕ್ಸ್) ವಿಧಿಸಿದ್ದಾರೆ ಎಂದು ತಮ್ಮ ಅರ್ಜಿಯಲ್ಲಿ ಅನುಷ್ಕಾ ಶರ್ಮಾ ಉಲ್ಲೇಖಿಸಿದ್ದಾರೆ.2012-13ರಲ್ಲಿ ಅನುಷ್ಕಾ ಶರ್ಮಾ ಪಡೆದ 12.3 ಕೋಟಿ ರೂಪಾಯಿ ಶುಲ್ಕದ ಮೇಲೆ ಪ್ರಾಧಿಕಾರವು 1.2 ಕೋಟಿ ರೂಪಾಯಿ ಮಾರಾಟ ತೆರಿಗೆ ವಿಧಿಸಿತ್ತು. 2013-14ರಲ್ಲಿ ಅನುಷ್ಕಾ ಶರ್ಮಾ ಪಡೆದಿದ್ದ 17 ಕೋಟಿ ರೂಪಾಯಿ ಶುಲ್ಕದ ಮೇಲೆ 1.6 ಕೋಟಿ ರೂಪಾಯಿ ತೆರಿಗೆ ವಿಧಿಸಲಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವೀರಸಿಂಹ ರೆಡ್ಡಿ ಮೊದಲ ದಿನದ ಕಲೆಕ್ಷನ್.

Fri Jan 13 , 2023
ಈ ಬಾರಿಯ ಸಂಕ್ರಾಂತಿ ಪ್ರಯುಕ್ತ ತಮಿಳು ಹಾಗೂ ತೆಲುಗಿನ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿವೆ. ತಮಿಳು ನಾಡು ಹಾಗೂ ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಪ್ರಯುಕ್ತ ಸಾಲು ಸಾಲು ರಜೆ ಇರುವ ಕಾರಣ ಸಿನಿ ರಸಿಕರು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು ಚಿತ್ರಗಳು ಕೋಟಿ ಕೋಟಿ ಬಾಚಲಿವೆ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ. ಅದರಂತೆಯೇ ಸಂಕ್ರಾಂತಿ ರೇಸ್‌ನಲ್ಲಿ ಮೊದಲು ಕಣಕ್ಕಿಳಿದ ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳು ಒಳ್ಳೆಯ ಓಪನಿಂಗ್ ಪಡೆದುಕೊಂಡವು. ಎರಡೂ […]

Advertisement

Wordpress Social Share Plugin powered by Ultimatelysocial