ವೀರಸಿಂಹ ರೆಡ್ಡಿ ಮೊದಲ ದಿನದ ಕಲೆಕ್ಷನ್.

 ಬಾರಿಯ ಸಂಕ್ರಾಂತಿ ಪ್ರಯುಕ್ತ ತಮಿಳು ಹಾಗೂ ತೆಲುಗಿನ ಸ್ಟಾರ್ ನಟರ ಚಿತ್ರಗಳು ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿವೆ. ತಮಿಳು ನಾಡು ಹಾಗೂ ತೆಲುಗು ರಾಜ್ಯಗಳಲ್ಲಿ ಸಂಕ್ರಾಂತಿ ಪ್ರಯುಕ್ತ ಸಾಲು ಸಾಲು ರಜೆ ಇರುವ ಕಾರಣ ಸಿನಿ ರಸಿಕರು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದು ಚಿತ್ರಗಳು ಕೋಟಿ ಕೋಟಿ ಬಾಚಲಿವೆ ಎನ್ನುವುದು ನಿರ್ಮಾಪಕರ ಲೆಕ್ಕಾಚಾರ.

ಅದರಂತೆಯೇ ಸಂಕ್ರಾಂತಿ ರೇಸ್‌ನಲ್ಲಿ ಮೊದಲು ಕಣಕ್ಕಿಳಿದ ತಮಿಳಿನ ವಾರಿಸು ಹಾಗೂ ತುನಿವು ಚಿತ್ರಗಳು ಒಳ್ಳೆಯ ಓಪನಿಂಗ್ ಪಡೆದುಕೊಂಡವು. ಎರಡೂ ಚಿತ್ರಗಳೂ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ ಕಲೆಕ್ಷನ್ ವಿಷಯದಲ್ಲಿ ಚಿತ್ರಗಳ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇನ್ನು ಈ ಎರಡು ಚಿತ್ರಗಲ್ಲಿ ಒಂದು ಚಿತ್ರ ಸಂಕ್ರಾಂತಿ ರೇಸ್‌ನಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರವಾಗಿ ಹೊರಹೊಮ್ಮಲಿದೆ ಎಂದು ಊಹಿಸಿದ್ದವರಿಗೆ ಮರುದಿನ ಬಿಡುಗಡೆಗೊಂಡ ವೀರಸಿಂಹ ರೆಡ್ಡಿ ಶಾಕ್ ಕೊಟ್ಟಿದೆ.

ಹೌದು, ನಿನ್ನೆ ( ಜನವರಿ 12 ) ಬಿಡುಗಡೆಗೊಂಡ ನಟ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಕೂಡ ಬಾಕ್ಸ್ ಆಫೀಸ್‌ನಲ್ಲಿ ಧೂಳ್ ಎಬ್ಬಿಸಿದೆ. ಭಾರತ ಬಾಕ್ಸ್ ಆಫೀಸ್‌ನಲ್ಲಿ ಮೊದಲನೇ ದಿನ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ನಟನೆಯ ತುನಿವು ಚಿತ್ರಗಳು ಮಾಡಿದ್ದ ಕಲೆಕ್ಷನ್‌ಗಿಂತ ಹೆಚ್ಚು ಕಲೆಕ್ಷನ್ ಅನ್ನು ವೀರಸಿಂಹ ರೆಡ್ಡಿ ಮಾಡಿದೆ. ಬಾಲಯ್ಯ ನಟನೆಯ ವೀರಸಿಂಹ ರೆಡ್ಡಿ ಮೊದಲನೇ ದಿನ ಭಾರತದ ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 32 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಜನಪ್ರಿಯ ಬಾಕ್ಸ್ ಆಫೀಸ್ ರಿಪೋರ್ಟ್ ವೆಬ್‌ಸೈಟ್ ಆದ ಸಾಕ್‌ನಿಲ್ಕ್ ತಿಳಿಸಿದೆ. ವಿಜಯ್ ನಟನೆಯ ವಾರಿಸು ಚಿತ್ರ ಮೊದಲ ದಿನ ಭಾರತದಲ್ಲಿ 31 ಕೋಟಿ ಹಾಗೂ ಅಜಿತ್ ನಟನೆಯ ತುನಿವು ಮೊದಲ ದಿನ 28.60 ಕೋಟಿ ಗಳಿಸಿದ್ದವು. ಈ ಮೂಲಕ ವೀರಸಿಂಹ ರೆಡ್ಡಿ ಭಾರತ ಬಾಕ್ಸ್ ಆಫೀಸ್‌ನಲ್ಲಿ ವಾರಿಸು ಹಾಗೂ ತುನಿವು ಚಿತ್ರಗಳನ್ನು ಮೊದಲನೇ ದಿನ ಹಿಂದಿಕ್ಕಿದೆ.  ತೆಲುಗು ಚಿತ್ರಗಳಿಗೆ ಹೆಚ್ಚಿನ ಕಲೆಕ್ಷನ್ ತಂದುಕೊಡುವ ಚಿತ್ರಮಂದಿರಗಳು ಎನಿಸಿಕೊಂಡಿರುವ ಹೈದರಾಬಾದ್‌ನ ಆರ್‌ಟಿಸಿ ಎಕ್ಸ್ ರಸ್ತೆಯ ಚಿತ್ರಮಂದಿರಗಳಲ್ಲಿ ಮೊದಲ ದಿನ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪಟ್ಟಿಯಲ್ಲಿ ವೀರಸಿಂಹ ರೆಡ್ಡಿ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರವನ್ನೇ ಹಿಂದಿಕ್ಕಿರುವುದು ವಿಶೇಷವಾಗಿದೆ. ಪುಷ್ಪ ಆರ್‌ಟಿಸಿ ಎಕ್ಸ್ ರಸ್ತೆಯಲ್ಲಿ ಮೊದಲ ದಿನ 41 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿತ್ತು ಹಾಗೂ ವೀರಸಿಂಹ ರೆಡ್ಡಿ ಮೊದಲ ದಿನ ಇಲ್ಲಿ 43 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನುಳಿದಂತೆ ಆರ್‌ಟಿಸಿ ಎಕ್ಸ್ ರಸ್ತೆಯ ಚಿತ್ರಮಂದಿರಗಳಲ್ಲಿ ಮೊದಲ ದಿನ ಕೆಜಿಎಫ್ ಚಾಪ್ಟರ್ 2 51 ಲಕ್ಷ ರೂಪಾಯಿ, ಸರ್ಕಾರು ವಾರಿ ಪಾಟ 54 ಲಕ್ಷ ರೂಪಾಯಿ ಹಾಗೂ ಆರ್ ಆರ್ ಆರ್ 75 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿವೆ.ಇನ್ನು ಸಂಕ್ರಾಂತಿ ರೇಸ್‌ನಲ್ಲಿರುವ ಸ್ಟಾರ್ ನಟರ ಚಿತ್ರಗಳ ಪೈಕಿ ಇನ್ನೂ ಮೆಗಾ ಸ್ಟಾರ್ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಮೊದಲ ದಿನ ಎಷ್ಟು ಗಳಿಸಲಿದೆ ಎಂಬ ಮಾಹಿತಿ ಹೊರಬೀಳಬೇಕಿದೆ. ಇಂದು ( ಜನವರಿ 13 ) ವಾಲ್ತೇರು ವೀರಯ್ಯ ಬಿಡುಗಡೆಗೊಂಡಿದ್ದು, ಚಿತ್ರ ಗಳಿಕೆಯಲ್ಲಿ ವಾರಿಸು, ತುನಿವು ಹಾಗೂ ವೀರಸಿಂಹ ರೆಡ್ಡಿ ಚಿತ್ರಗಳಿಗಿಂತ ಹೆಚ್ಚು ಗಳಿಸುತ್ತಾ ಅಥವಾ ಕಡಿಮೆ ಗಳಿಸಿ ಹಿನ್ನಡೆ ಅನುಭವಿಸಲಿದೆಯಾ ಎಂಬ ಕುತೂಹಲ ಮೂಡಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಖಾಸಗಿ ಕಂಪನಿ ಕೆಲಸ ಹುಡುಕುತ್ತಿರುವವರಿಗೆ ಲೇಟೆಸ್ಟ್‌ ಜಾಬ್‌ ಅಪ್‌ಡೇಟ್ಸ್‌

Fri Jan 13 , 2023
ಪದವಿ, ಪಿಯುಸಿ ಪಾಸ್ ಮಾಡಿ ಪ್ರೈವೇಟ್‌ ಕಂಪನಿಗಳಲ್ಲಿ ಜಾಬ್‌ ಹುಡುಕಲು ಆರಂಭಿಸಿದ್ದೀರಾ.. ಹಾಗಿದ್ರೆ ನಿಮಗಾಗಿ ಇಲ್ಲಿವೆ ಲೇಟೆಸ್ಟ್‌ ಜಾಬ್‌ ಅಪ್‌ಡೇಟ್ಸ್‌. ಇಂದಿನ ಲೇಖನದಲ್ಲಿ ಕಳೆದ ಒಂದು ತಿಂಗಳೊಳಗಾಗಿ ವಿವಿಧ ಕಂಪನಿಗಳು ನೌಕರಿ.ಕಾಂ ನಲ್ಲಿ ಅಪ್‌ಡೇಟ್‌ ಮಾಡಿರುವ ಲೇಟೆಸ್ಟ್‌ ಜಾಬ್‌ ಪೋಸ್ಟ್‌ಗಳ ಕುರಿತು ಮಾಹಿತಿ ನೀಡಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ಜಾಬ್ ಅಪ್‌ಡೇಟ್ಸ್‌ ತಿಳಿದು, ನೌಕರಿ.ಕಾಂ ಮೂಲಕ ಅಥವಾ ಕಂಪನಿಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿನ ಕರಿಯರ್ ಪೇಜ್‌ಗಳಿಗೆ ಭೇಟಿ ನೀಡಿ ಅರ್ಜಿ […]

Advertisement

Wordpress Social Share Plugin powered by Ultimatelysocial