‘ಅಪಾರ್ಟ್‌ಮೆಂಟ್‌ ಬಿರುಕು ಬಿಟ್ಟಿದೆ, ಯಾವುದೇ ಕ್ಷಣದಲ್ಲಿ ಬೀಳಬಹುದು;

ಹುಬ್ಬಳ್ಳಿ: ಇಲ್ಲಿನ ಗೋಕುಲ ರಸ್ತೆಯ ಅಕ್ಷಯ ಪಾರ್ಕ್‌ನ ನಾಲ್ಕು ಅಂತಸ್ತಿನ ಅಪಾರ್ಟ್‌ಮೆಂಟ್‌ನಲ್ಲಿರುವ ಮನೆ ಬಿರುಕು ಬಿಟ್ಟಿದೆ ಎನ್ನುವ ಸುದ್ದಿಗೆ ಆತಂಕಗೊಂಡ ಸುತ್ತಮುತ್ತಲಿನ ಮನೆಯವರು ಅಪಾರ್ಟ್‌ಮೆಂಟ್‌ನಿಂದ ಹೊರಗೆ ಓಡಿ ಬಂದ ಘಟನೆ ಶನಿವಾರ ನಡೆದಿದೆ.

‘ಅಪಾರ್ಟ್‌ಮೆಂಟ್‌ ಬಿರುಕು ಬಿಟ್ಟಿದೆ, ಯಾವುದೇ ಕ್ಷಣದಲ್ಲಿ ಬೀಳಬಹುದು’ ಎನ್ನುವ ಸುದ್ದಿ ಹರಿದಾಡಿತ್ತು. ಕೆಲಹೊತ್ತು ಅಲ್ಲಿ ಆತಂಕದ ವಾತಾವರಣ ಸಹ ನಿರ್ಮಾಣವಾಗಿತ್ತು,. ಕೆಲವರು ಬಟ್ಟೆ, ಬ್ಯಾಗ್‌ ಹಾಗೂ ಬೆಲೆಬಾಳುವ ವಸ್ತುಗಳನ್ನು ತೆಗೆದುಕೊಂಡು ಹೊರಗೆ ಓಡಿ ಬಂದಿದ್ದರು.

ವಿಷಯ ತಿಳಿಯುತ್ತಿದ್ದಂತೆ ಎಂಜಿನಿಯರ್‌ ಅಪಾರ್ಟ್‌ಮೆಂಟ್‌ಗೆ ತೆರಳಿ ಪರಿಶೀಲಿಸಿದರು. ನೆಲಕ್ಕೆ ಹಾಕಿದ್ದ ಟೈಲ್ಸ್‌ ಮೇಲ್ಮುಖವಾಗಿ ಸೀಳು ಬಿಟ್ಟಿರುವುದನ್ನು ಗಮನಿಸಿದ ಅವರು ‘ಸಾಮಾನ್ಯವಾಗಿ ಟೈಲ್ಸ್‌ ಏರ್‌ ಬ್ಲಾಕ್‌ನಿಂದ ಒಡೆಯುತ್ತದೆ. ಆತಂಕ ಪಡುವಂತಹದ್ದೇನೂ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ಮನೆಯ ಟೈಲ್ಸ್‌ ಒಡೆದಿರುವ ದೃಶ್ಯಾವಳಿಗಳನ್ನು ಮಾಧ್ಯಮದವರಿಗೆ ಯಾರೊ ಕಳುಹಿಸಿದ್ದಾರೆ. ಆ ವಿಡಿಯೊ ಎಲ್ಲೆಡೆ ಹರಿದಾಡಿದೆ. ಮನೆ ಬಿರುಕು ಬಿಟ್ಟಿದೆ ಎನ್ನಲಾದ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ಈ ವಿಷಯವೇ ಗೊತ್ತಿಲ್ಲ. ಗಾಳಿ ಸುದ್ದಿಯಿಂದಾಗಿ ನಾವೆಲ್ಲ ಆತಂಕ ಪಡುವಂತಾಯಿತು ಎಂದು ಸುತ್ತಮುತ್ತಲಿನ ನಿವಾಸಿಗಳು ತಿಳಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೆ ಲಾಕ್ಡೌನ್ ಆಗುತ್ತಾ..? ಸಚಿವ ಆರ್ ಅಶೋಕ್ ಹೇಳಿದ್ದೇನು..?

Sun Jan 2 , 2022
ಬೆಂಗಳೂರು: ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ಗಳು ದಾಖಲಾಗಿದ್ದವು. ಇದೀಗ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ. ಮತ್ತ ಲಾಕ್ಡೌನ್ ಮಾಡುವ ಬಗ್ಗೆ ಸಚಿವ ಆರ್ ಅಶೋಕ್ ಸುಳಿವು ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ಸಚಿವ ಅಶೋಕ್, ಕೊರೊನಾ ಮೂರನೆ ಅಲೆ ಬಗ್ಗೆ ಸಭೆ ಮಾಡೋದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಲಾಕ್ಡೌನ್ ಮಾಡಿದ್ದಾರೆ. ಈಗಾಗ್ಲೇ ಕೊರೊನಾ ಮೂರನೆ ಅಲೆ ಜಾಸ್ತಿಯಾಗುತ್ತಿದೆ. ಬೆಂಗಳೂರಿನಲ್ಲಿ […]

Advertisement

Wordpress Social Share Plugin powered by Ultimatelysocial