ಮತ್ತೆ ಲಾಕ್ಡೌನ್ ಆಗುತ್ತಾ..? ಸಚಿವ ಆರ್ ಅಶೋಕ್ ಹೇಳಿದ್ದೇನು..?

ಬೆಂಗಳೂರು: ನಿನ್ನೆ ಒಂದೇ ದಿನ ಸಾವಿರಕ್ಕೂ ಅಧಿಕ ಕೊರೊನಾ ಕೇಸ್ ಗಳು ದಾಖಲಾಗಿದ್ದವು. ಇದೀಗ ರಾಜ್ಯದಲ್ಲಿ ಮತ್ತೆ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ನಿರ್ಧರಿಸಿದೆ.

ಮತ್ತ ಲಾಕ್ಡೌನ್ ಮಾಡುವ ಬಗ್ಗೆ ಸಚಿವ ಆರ್ ಅಶೋಕ್ ಸುಳಿವು ನೀಡಿದ್ದಾರೆ.

ಈ ಬಗ್ಗೆ ಮಾತನಾಡಿದ ಸಚಿವ ಅಶೋಕ್, ಕೊರೊನಾ ಮೂರನೆ ಅಲೆ ಬಗ್ಗೆ ಸಭೆ ಮಾಡೋದಾಗಿ ಹೇಳಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಲಾಕ್ಡೌನ್ ಮಾಡಿದ್ದಾರೆ. ಈಗಾಗ್ಲೇ ಕೊರೊನಾ ಮೂರನೆ ಅಲೆ ಜಾಸ್ತಿಯಾಗುತ್ತಿದೆ. ಬೆಂಗಳೂರಿನಲ್ಲಿ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಜನರ ಜೀವವನ್ನ ಕಾಪಾಡಬಹುದು ಎಂದಿದ್ದಾರೆ. 7 ನೇ ತಾರೀಖಿನಂದು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದಿದ್ದಾರೆ. ಈಗಾಗ್ಲೇ 7 ನೇ ತಾರೀಖಿನವರೆಗೂ ನೈಟ್ ಕರ್ಫ್ಯೂ ಇದೆ. ಕಳೆದ ಬಾರಿ ಸಾವು ನೋವುಗಳ ಬಗ್ಗೆ ಗಮನ ಇದೆ. ಹೀಗಾಗಿ ಈ ಬಗ್ಗೆ ಈ ಬಾರಿ ಎಲ್ಲದ್ದಕ್ಕೂ ಸರ್ವಸನ್ನದ್ಧವಾಗಿದ್ದೇವೆ. ಎಲ್ಲರೂ ಇದಕ್ಕೆ ಸಹಕಾರ ನೀಡಬೇಕು ಎಂದಿದ್ದಾರೆ.

ಈಗಾಗ್ಲೇ ಜನ ಲಾಕ್ಡೌನ್ ನಿಂದಾಗಿ ಸಾಕಷ್ಟು ಪರದಾಟ ಪಟ್ಟಿದ್ದಾರೆ. ಸಂಕಷ್ಟ ಅನುಭವಿಸಿದ್ದಾರೆ. ಒಂದು ವೇಳೆ ಮತ್ತೆ ಲಾಕ್ಡೌನ್ ಮಾಡಿದ್ರೆ ಜನ ಇನ್ನಷ್ಟು ಕಷ್ಟದ ಸ್ಥಿತಿ ತಲುಪೋದು ಗ್ಯಾರಂಟಿ. ಈ ಆತಂಕ ಜನ ಸಾಮಾನ್ಯರಲ್ಲಿ ಹೆಚ್ಚಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯದ ಹಿರಿಯ ನಾಗರಿಕರಿಗೆ ಉಚಿತ ಬಸ್‍ಪಾಸ್ ನೀಡಲು ಕ್ರಮ : ಸಚಿವ ಬಿ.ಶ್ರೀರಾಮುಲು

Sun Jan 2 , 2022
ಗಾರ್ಮೆಂಟ್ ಕಾರ್ಮಿಕರಿಗೆ,ಹಿರಿಯ ನಾಗರಿಕರಿಗೆ ಉಚಿತ ಬಸ್‍ಪಾಸ್ ನೀಡಲು ಕ್ರಮವಹಿಸಲಾಗುವುದೆಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ತಿಳಿಸಿದರು. ತಾಲೂಕಿನ ಶಿಗಿಕೇರಿ ಬಾದಾಮಿ ರಸ್ತೆಯಲ್ಲಿ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಭೂಮಿ ಪೂಜೆ ನೆರವೇರಿಸಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರುವ ಮೂಲಕ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪರಿಶಿಷ್ಟ ಜಾತಿ […]

Advertisement

Wordpress Social Share Plugin powered by Ultimatelysocial