ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ : ಪುನೀತ್ ಕೊನೆಯ ಚಿತ್ರದ ಬಗ್ಗೆ ಇಂಟರೆಸ್ಟಿಂಗ್ ವಿಚಾರ ಬಿಚ್ಚಿಟ್ಟ ನಿರ್ದೇಶಕ!

ಇಗಾಗಲೇ ಪುನೀತ್‌  ನಮ್ಮನ್ನಗಲಿ ಎರೆಡು ತಿಂಗಳಾಗಿದೆ .ಅಪ್ಪು ಅವರ ಕಡೆಯ ಸಿನಿಮಾ ‘ಜೇಮ್ಸ್​’  ಚಿತ್ರಮಂದಿರದಲ್ಲೇ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಚೇತನ್​ ಭರವಸೆ ನೀಡಿದ್ದಾರೆ. ಇದರ ಜೊತೆಗೆ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್ ಅವರ ‘ಗಂಧದ ಗುಡಿ  ಕೂಡ ಚಿತ್ರಮಂದಿರದಲ್ಲೇ ತೆರೆ ಕಾಣಲಿದೆ. ಹೀಗಾಗಿ ಅಪ್ಪು ಅವರನ್ನು ಮತ್ತೆ ತೆರೆ ಮೇಲೆ ನೋಡಬಹುದಾಗಿದೆ ಎಂದು ಅವರ ಅಭಿಮಾನಿಗಳು ಖುಷಿಯಾಗಿದ್ದಾರೆ. ಈಗ ಅವರ ಕೊನೆಯ ಸಿನಿಮಾ ‘ಜೇಮ್ಸ್‌’ ಮೇಲೆ ಎಲ್ಲರ ಗಮನ ವಿದ್ದು. ಇದೀಗ ಈ ಸಿನಿಮಾದಿಂದ ಮತ್ತೊಂದು ಅಪ್​ಡೇಟ್‌ ​ ಒಂದು  ಸಿಕ್ಕಿದ್ದು, ಅಭಿಮಾನಿಗಳಿಗೆ ಸಂತಸ ಮೂಡಿಸಿದೆ.

‘ಜೇಮ್ಸ್‌ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿದೆ. ಒಂದಷ್ಟು ಮಂದಿ ಅವರದ್ದೇ ಧ್ವನಿಯನ್ನು ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ. ಆದರೆ ನಾವು ಚಿತ್ರೀಕರಣದ ಸಮಯದಲ್ಲಿ ರೆಕಾರ್ಡ್‌ ಆಗಿರುವ ಅಪ್ಪು ಧ್ವನಿಯನ್ನು ಉಳಿಸಿಕೊಳ್ಳಬೇಕು ಎಂದು ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ. ಸುತ್ತಮುತ್ತಲಿನ ಶಬ್ದಗಳನ್ನು ಕಂಟ್ರೋಲ್​ ಮಾಡಿ, ಅಪ್ಪು ಅವರ ಧ್ವನಿಯನ್ನೇ ಉಳಿಸಿಕೊಳ್ಳಲು ಆಗುತ್ತಾ ಎಂಬುದನ್ನು ನೋಡುತ್ತಿದ್ದೇವೆ’ ಎಂದು ಚೇತನ್​ ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಲೋಟ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳಾದರು ಏನು????

Thu Jan 13 , 2022
ಹಾಲು ನಮ್ಮ ದೇಹದ ಆರೋಗ್ಯ ಮಾತ್ರವಲ್ಲ, ಚರ್ಮ, ಕೂದಲಿನ ಸ್ವಾಸ್ಥ್ಯ ಕಾಪಾಡಲು ಸಹಾಯ ಮಾಡುತ್ತದೆ. ಅನೇಕ ತೊಂದರೆಗಳಿಗೆ ಹಾಲು ಮದ್ದಾಗಿದೆ. ನೀವು ಹಾಲನ್ನು ನೇರವಾಗಿ ಕುಡಿಯಲು ಇಷ್ಟಪಡದಿದ್ದರೆ, ಅದರ ಯಾವುದೇ ಉತ್ಪನ್ನಗಳಾದ ಮಜ್ಜಿಗೆ ಮತ್ತು ಮೊಸರು, ತುಪ್ಪ ಸಹ ಹಾಲಿನ ಆರೋಗ್ಯ ಪ್ರಯೋಜನಗಳನ್ನೇ ಒಳಗೊಂಡಿದೆ. ಹಾಲಿನಲ್ಲಿರುವ ಕ್ಯಾಲ್ಸಿಯಂ ನಿಮ್ಮ ಮೂಳೆಗಳನ್ನು ಮಾತ್ರ ರಕ್ಷಿಸುವುದಿಲ್ಲ, ಇದು ನಿಮ್ಮ ಸ್ನಾಯುಗಳನ್ನು ಸಂಕುಚಿತಗೊಳಿಸಲು ಅನುಮತಿಸುವ ಮೂಲಕ ಅಕ್ಷರಶಃ ನಿಮ್ಮ ಹೃದಯದ ಪಂಪ್ ಮಾಡುವಲ್ಲಿ ಕ್ಯಾಲ್ಸಿಯಂ […]

Advertisement

Wordpress Social Share Plugin powered by Ultimatelysocial