ನಿನೇನಾದ್ರೂ ಪ್ರಗ್ನೆಂಟಾ..? ಆ ಹೊಟ್ಟೆ ಏನು..?

ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ 23 ವರ್ಷಗಳ ವೃತ್ತಿ ಜೀವನಕ್ಕೆ ವಿದಾಯ ಹೇಳಿದ್ದಾರೆ.

ಭಜ್ಜಿ ಭಾರತದ ಪರ ಅದೆಷ್ಟೋ ಸಾಧನೆ ಮಾಡಿದ್ದಾರೆ. 400ಕ್ಕೂ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಆಗಿರುವ ಹರ್ಭಜನ್, ಏಕದಿನ ಕ್ರಿಕೆಟ್ ನಲ್ಲಿ 200ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. ಟಿ 20 ಕ್ರಿಕೆಟ್ ನಲ್ಲಿ 25ಕ್ಕೂ ಹೆಚ್ಚು ವಿಕೆಟ್ ತೆಗೆದು ಒಟ್ಟಾರೆ 711 ವಿಕೆಟ್ ಪಡೆದಿದ್ದಾರೆ.

ಅಂದಹಾಗೆ ಹರ್ಭಜನ್ ಸಿಂಗ್ ಅವರಿಗೆ ಆಸ್ಟ್ರೇಲಿಯಾ ಕ್ರಿಕೆಟರ್ಸ್ ಅಂದರೇ ಒಂದು ರೀತಿಯ ಒಲವು, ಆದ್ರೆ ಅವರ ಸ್ಲಡ್ಜಿಂಗ್ ಅಂದ್ರೆ ಭಜ್ಜಿಗೆ ಇಷ್ಟವಾಗುತ್ತಿರಲ್ಲಿಲ್ಲ. ಈ ಬಗ್ಗೆ ಸ್ವತಃ ಅವರೇ ಒಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಆಸೀಸ್ ಆಟಗಾರರು ಅಂದ್ರೆ ಸ್ಲೆಡ್ಜಿಂಗ್ ಗೆ ಮತ್ತೊಂದು ಹೆಸರಾಗಿದ್ದರು. ಮುಖ್ಯವಾಗಿ ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವಾಗ ಅವರು ಸ್ಲೆಡ್ಜಿಂಗ್ ಮೂಲಕವೇ ಎದುರಾಳಿಗಳನ್ನು ಮಾನಸಿಕವಾಗಿ ಕುಗ್ಗಿಸುತ್ತಾರೆ. ಆದ್ರೆ ನನ್ನಂತಹವರನ್ನ ಎದುರಿಸಲು ಅವರು ಭಯಪಡುತ್ತಾರೆ. ಒಂದು ಬಾರಿ ಮ್ಯಾಚ್ ನಲ್ಲಿ ನಾನು ಬ್ಯಾಟಿಂಗ್ ಮಾಡುವಾಗ ನನ್ನ ಪಕ್ಕದಲ್ಲಿದ್ದ ಡಾರೆನ್ ಲಿಮನ್ ಅದೇ ಕೆಲಸವಾಗಿ ನನ್ನ ವಿರುದ್ಧ ಸ್ಲೆಡ್ಜಿಂಗ್ ಮಾಡುತ್ತಿದ್ದ.

ಇದರಿಂದ ಬೇಸತ್ತ ನಾನು ಲಿಮನ್ ಹೊಟ್ಟೆಯ ಕಡೆ ನೋಡುತ್ತಾ.. ನೀನೇನಾದ್ರೂ ಪ್ರಗ್ನೆಂಟಾ.. ಆ ಹೊಟ್ಟೆ ಏನು..? ಅಂತಾ ನಗುತ್ತಾ ಕೇಳಿದೆ. ಇದರಿಂದ ಇಬ್ಬರ ಮಧ್ಯೆ ವಾಗ್ವಾದ ನಡೆಯಿತು. ಆ ಮೇಲೆ ಈ ವಿಚಾರವನ್ನು ಲಿಮನ್ ಆಗಿನ ಸ್ಪಿನ್ನರ್ ಶೇನ್ ವಾರ್ನ್ ಬಳಿ ಹೇಳಿದ್ದಾನೆ. ಆಗ ನಗುತ್ತಾ.. ನನ್ನ ಬಳಿ ಬಂದು ನೀನು ಲಿಮನ್ ಗೆ ಏನಾದ್ರೂ ಹೇಳಿದ್ಯಾ..? ಅಂತ ಕೇಳಿದ. ನಾನು ಉತ್ತರ ನೀಡುತ್ತಾ ಕರೆಕ್ಟ್ ಆಟಗಾರರಿಗೆ ಅಷ್ಟೊಂದು ಹೊಟ್ಟೆ ಇರಬಾರದು ಅಂದೆ.

ಇದಾದ ಬಳಿಕ ವಾರ್ನರ್ ಲಿಮನ್ ಜೊತೆ ಮಾತನಾಡುತ್ತಾ.. ನಾವು ಯಾರನ್ನಾದ್ರೂ ಸ್ಲಡ್ಜ್ ಮಾಡಬಹುದು. ಆದ್ರೆ ಭಜ್ಜಿ ಜೊತೆ ಮಾತ್ರ ಎಚ್ಚರಿಕೆಯಿಂದ ಇರಬೇಕು ಅಂತ ಹೇಳಿದ್ದು, ನನಗಿನ್ನೂ ನೆನಪಿದೆ ಎಂದು ಭಜ್ಜಿ ಹೇಳಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಡಾರ್ಲಿಂಗ್ ಥಿಯೇಟರ್ ಮುಚ್ಚಿಸಿದ ಜಗನ್; 300ಕ್ಕೂ ಹೆಚ್ಚು ಚಿತ್ರಮಂದಿರಗಳು ಕ್ಲೋಸ್!

Sun Dec 26 , 2021
ಆಂಧ್ರ ಪ್ರದೇಶ: ಎಂ ಜಗನ್ ಮೋಹನ್ ರೆಡ್ಡಿ ಸರ್ಕಾರ ಆಂಧ್ರದಲ್ಲಿ ಸಿನಿಮಾ ಟಿಕೆಟ್​ಗಳ ಬೆಲೆ ಬಾರಿ ಮೊತ್ತದಲ್ಲಿ ಕಡಿತಗೊಳಿಸಿದೆ . ಇದೇ ವಿಚಾರವಾಗಿ ಆಂಧ್ರ ಸರ್ಕಾರ ಮತ್ತು ಟಾಲಿವುಡ್ ನಡುವಿನ ತಿಕ್ಕಾಟ ಇತ್ತೀಚೆಗೆ ತೀವ್ರ ಜೋರಾಗಿದೆ . ಇದೀಗ , ಟಿಕೆಟ್ ದರ ಕಡಿಮೆ ಆಗಿರುವುದರಿಂದ ಬಹುತೇಕ ಎಲ್ಲಾ ಥಿಯೇಟರ್​ಗಳು ತೀವ್ರ ನಷ್ಟ ಅನುಭವಿಸುತ್ತಿದ್ದು , ಬಾಗಿಲು ಮುಚ್ಚುವ ಪರಿಸ್ಥಿತಿ ಎದುರಾಗಿದೆ . ಅಂದಹಾಗೆ , ನಟ ಡಾರ್ಲಿಂಗ್ ಪ್ರಭಾಸ್ […]

Advertisement

Wordpress Social Share Plugin powered by Ultimatelysocial