ಡ್ರಗ್ಸ್​​ ಪ್ರಕರಣದಲ್ಲಿ ಶಾರೂಕ್​ ಪುತ್ರನಿಗೆ ಕ್ಲೀನ್​ ಚೀಟ್​!

 

ಮುಂಬೈ: ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಬಾಲಿವುಡ್​ ನಟ ಶಾರೂಕ್​ ಖಾನ್​ ಪುತ್ರ ಆರ್ಯನ್​ ಖಾನ್​ ಡ್ರಗ್ಸ್​​ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಪ್ರಕರಣದಲ್ಲಿ ಆರ್ಯನ್​ ಖಾನ್​ಗೆ ವಿಶೇಷ ತನಿಖಾಧಿಕಾರಿಗಳು ಕ್ಲೀನ್​​ ಚೀಟ್​​ ನೀಡಿದ್ದಾರೆ.

ಕಳೆದ ಅಕ್ಟೋಬರ್​ 30 ರಂದು ಹಡಗಿನಲ್ಲಿ ಪಾರ್ಟಿಯೊಂದರಲ್ಲಿ ಆರ್ಯನ್​ ಖಾನ್​​ನನ್ನು ಬಂಧಿಸಲಾಗಿತ್ತು.

ಆರ್ಯನ್​ ಬಳಿ ಡ್ರಗ್ಸ್​​​ ಇದೆ ಎಂದು ಅಂದು ಬಂಧಿಸಿದ ಅಧಿಕಾರಿಗಳು ಸಾಕ್ಷ್ಯ ಸಮೇತವೇ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದರು. ಈ ಸಂಬಂಧ 22 ದಿನ ಜೈಲು ಶಿಕ್ಷೆಯನ್ನೂ ಸಹ ಆರ್ಯನ್​ ಅನುಭವಿಸಿದ್ದರು. ಇದೀಗ ಅಧಿಕಾರಿಗಳ ಹೇಳಿಕೆ ಆರ್ಯನ್​ ಖಾನ್​ಗೆ ಬಿಗ್​ ರಿಲೀಫ್​ ಕೊಟ್ಟಿದೆ.

ಆರ್ಯನ್​ ಖಾನ್​ ವಿರುದ್ಧ ಯಾವ ಸಾಕ್ಷ್ಯ ಆಧಾರಗಳು ಇಲ್ಲ, ಅವರು ಅಂದು ಪಾರ್ಟಿಯಲ್ಲಿ ಭಾಗವಹಿಸಿದ್ದರಷ್ಟೇ, ಡ್ರಗ್ಸ್​ ತೆಗೆದುಕೊಂಡಿರಲಿಲ್ ಎಂದು ಹೇಳಿದ್ದಾರೆ. ಸದ್ಯ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಆರ್ಯನ್​ ಹೆಸರಿಲ್ಲ. ಇದರಿಂದ ಶಾರೂಕ್​ ಖಾನ್​ ಕೂಡ ನಿರಾಳರಾಗಿದ್ದಾರೆ.

ಇನ್ನು ಪ್ರಕರಣದ ಪ್ರಮುಖ ತನಿಖೆ ಕೈಗೊಂಡಿದ್ದ ಸಮೀರ್​ ವಾಂಖೆಡೆ ಅವರನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗಿತ್ತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬಿಸಿಯೂಟದಲ್ಲಿ ಸಿಕ್ತು ಹುಳ: ಅನ್ನ-ಸಾಂಬಾರಿನಲ್ಲಿ ಮೇಲೆಯೇ ಹರಿದಾಡುತ್ತಿದ್ದರೂ ತಿನ್ನಿ ಎಂದು ಮಕ್ಕಳಿಗೆ ಒತ್ತಾಯಿಸಿದ ಶಿಕ್ಷಕರಿಗೆ ಪೋಷಕರಿಂದ ಕ್ಲಾಸ್​​

Fri May 27 , 2022
  ವಿಜಯನಗರ: ಶಾಲಾ ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶ ಒದಗಿಸುವ ದೃಷ್ಟಿಯಿಂದ ಸರ್ಕಾರ ಜಾರಿಗೊಳಿಸಿರುವ ಬಿಸಿಯೂಟ ಯೋಜನೆಯಲ್ಲಿ ಆಗ್ಗಾಗ್ಗೆ ಆರೋಪಗಳು ಕೇಳಿ ಬರುತ್ತಲೇ ಇದ್ದು, ಈವರೆಗೂ ಪೂರ್ಣ ಮಟ್ಟಿಗೆ ಸುಧಾರಣೆಯಾಗಿಲ್ಲ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ದೇವಲಾಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ನೀಡಲಾಗಿರುವ ಬಿಸಿಯೂಟದಲ್ಲಿ ಹುಳಗಳು ಪತ್ತೆಯಾಗಿದ್ದು, ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ತಟ್ಟೆಯಲ್ಲಿ ಹಾಕಿದ ಅನ್ನ-ಸಾಂಬಾರಿನಲ್ಲಿ ಹುಳ ಮೇಲೆ ಕಾಣುತ್ತಿದ್ದರೂ, ಮಕ್ಕಳಿಗೆ ಊಟ […]

Advertisement

Wordpress Social Share Plugin powered by Ultimatelysocial