ಸಿದ್ದೇಶ್ವರ ಶ್ರೀಗಳ ನಿಧನಕ್ಕೆ ತಪಸ್ವಿ ಡಾ.ಕುಮಾರ ಮಹಾರಾಜರು ಸಂತಾಪ: ಕಂಬನಿ ಮೀಡಿದ ಪರಮ ಪುಜ್ಯರು.

ಲಕ್ಷೇಶ್ವರ: ತಾಲೂಕಿನ‌ ಆದರದಹಳ್ಳಿ ಐತಿಹಾಸಿಕ ಗವಿಮಠದಲ್ಲಿ ಪರಮಪುಜ್ಯ ತಪಸ್ವಿ ಡಾ.ಕುಮಾರ ಮಹಾರಾಜರು ಮತ್ತು ಮಠದ ಸದ್ಬಕ್ತರು ಅಗಲಿದ ಸಿದ್ದೇಶ್ವರ ಶ್ರೀಗಳಿಗೆ ಮೆನಬತ್ತಿ ಹಚ್ಚಿ ಮಕ್ಕಳಿಗೆ ಶ್ರೀಗಳ ನುಡಿಗಳನ್ನು ತಿಳಿಸುತ್ತಾ ಶ್ರದ್ಧಾಂಜಲಿ ನಮನ ಸಲ್ಲಿಸಿದರು.

ಮಾತನಾಡಿದ ತಪಸ್ವಿ ಡಾ.ಕುಮಾರ ಮಹಾರಾಜರು ನಡೆದಾಡುವ ದೇವರೆಂದೇ ಕರೆಯಲ್ಪಡುವ ಜ್ಞಾನ ಯೋಗಾಶ್ರಮದ ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ಇಹಲೋಕ ತ್ಯಜಿಸಿರುವ ಸಂಗತಿ ನಿಜಕ್ಕೂ ಊಹಿಸಲು ಅಸಾದ್ಯ. ಎರಡು ದಿನಗಳ ಹಿಂದೆಯಷ್ಟೇ ಅವರ ಯೋಗಕ್ಷೇಮ ಅನೇಕ ಪುಜ್ಯರಿಂದ ವಿಚಾರಿಸಿಕೊಂಡಿದ್ದೆ . ಸಹಸ್ರಾರು ಭಕ್ತರು ಸಹ ಸ್ವಾಮೀಜಿಗಳ ಆರೋಗ್ಯ ಚೇತರಿಕೆಗೆ ಪ್ರಾರ್ಥಿಸಿದ್ದರು. ಇಷ್ಟು ಬೇಗ ನಮ್ಮನ್ನೆಲ್ಲ ಬಿಟ್ಟುಹೋಗಿರುವುದು ನಿಜಕ್ಕೂ ಶೋಚನೀಯ ಎಂದು ತಮ್ಮ ದುಃಖ ವ್ಯಕ್ತಪಡಿಸಿದರು.

ಸಿದ್ಧೇಶ್ವರ ಪ್ರವಚನ ಐತಿ ಅಂದ್ರ ನಸುಕಿನ್ಯಾಗ ಎದ್ದು, ಹತ್ತರಿಂದ ನೂರಾರು ಕಿಲೋಮೀಟರ ದೂರದಿಂದ ಬಂದು, ಕೈ ಮುಕ್ಕೊಂಡು ಕೇಳ್ತಿದ್ರು. ಅವರು ಹೇಳಿದ್ದೆಲ್ಲಾ ಇವರಿಗೆ ತಿಳಿತಿತ್ತಾ? ಅವರ ಮಾತಿನ ನಡಕ ಬರುವಂಥಾ ಸಾಕ್ರೆಟಿಸ್, ಅರಿಸ್ಟಾಟಲ್ ಮುಂತಾದ ತತ್ವಜ್ಞಾನಿಗಳು ಇವರಿಗೆ ಗೊತ್ತಿದ್ರಾ? ಇವೆಲ್ಲವುಗಳಿಗೆ ಸ್ವಾಮಿಗಳ ಮಾತು ಅನಕ್ಷರಸ್ಥರಿಂದ ಅಕ್ಷರಸ್ಥ, ಪಂಡಿತ, ವಿದ್ವನ್, ವಾದ್ವಾನ್! ಮಣಿಗಳಿಗೂ ಅವರ ಮಾತು ಅಮೃತ, ಬೆಳಗಿನ ಪ್ರವಚನ ಅತ್ಯಂತ ಯಶಸ್ವಿಯಾಗಿ ನಡೆದದ್ದು ಶ್ರೀ ಸಿದ್ಧೇಶ್ವರರ ಪ್ರವಚನ ಮಾತ್ರ, ಅದು ಮೊದಲು, ಕೊನೆ ಕೂಡ. ಕೆಲವರನ್ನ ಕೇಳಬೇಕು, ಕೆಲವರನ್ನ ನೋಡಬೇಕು, ಸ್ವಾಮಿಗಳು ಮಾತ್ರ ಎರಡು ಕಾರ್ಯಕ್ಕೂ ಯೋಗ್ಯವಂತರು, ಕೇಳಿ ಪುನೀತರಾದವರು, ನೋಡಿ ಧನ್ಯರಾದವರ ಸಂಖ್ಯೆ ಸಣ್ಣದಲ್ಲ. ಇದೀಗ ಆದರದಹಳ್ಳಿ ಮಣ್ಣಿನ ಮಠದಲ್ಲಿ ಪೂಜಿಸುವ ಮೂಲಕ ಅವರನ್ನು ಕಣ್ಮನ ತುಂಬಿಕೊಂಡಿದ್ದೇವೆ. ಮಹಾನ್​ ವ್ಯಕ್ತಿಗಳು ಎಂದಿಗೂ ಮನಸಿನಿಂದ ಮರೆಯಾಗಲಾರರು ಎಂದರು.

ಶ್ರೀಗಳು ನೀಡಿರುವ ಜ್ಞಾನದ ಬೆಳಕು, ತೋರಿರುವ ಹಾದಿ ನಮಗೆಲ್ಲಾ ಸಾರ್ಥಕ ಬದುಕು ನಡೆಸಲು ಪ್ರೇರಕ ಶಕ್ತಿಯಾಗಿದೆ. ತಮ್ಮ ಪ್ರವಚನಗಳ ಮೂಲಕ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಶ್ರೀಗಳ ಸೇವೆ ಅಮೋಘ ಹಾಗೂ ಅನನ್ಯವಾದುದು. ಶ್ರೀಗಳ ಆಶೀರ್ವಾದ ನಮ್ಮೆಲ್ಲರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ. ಅವರ ದಿವ್ಯಾತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಸ್ವಾಮಿಗಳು, ತಿಪ್ಪೆಸ್ವಾಮಿ ಮಹಾರಾಜರು, ಶೇಖಪ್ಪ ಲಮಾಣಿ, ಮಾನಪ್ಪ ಲಮಾಣಿ, ನಾಗೇಶ ಲಮಾಣಿ, ಬಸಣ್ಣ, ರಮೇಶ, ಅಲ್ಲಭಕ್ಷಿ ವಾಲಿಕಾರ, ರಾಜೆಸಾಬ , ಸಣ್ಮಖ ವಡ್ಡರ್, ದೇವಣ್ಣ ಲಮಾಣಿ, ಲಕ್ಷ್ಮಣ ವಡ್ಡರ, ಮುದಕಪ್ಪ ವಡ್ಡರ, ಚನ್ನಪ್ಪ ಲಮಾಣಿ, ನೀಲು ಲಮಾಣಿ, ರಾಮಣ್ಣ ವಡ್ಡರ, ಶಂಕರಗೌಡ ಪಾಟೀಲ್ ಇದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಮೆಡಿಕಲ್ ರಿಪೋರ್ಟ್ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ!

Wed Jan 4 , 2023
ಚಿತ್ರದುರ್ಗ : ಮುರುಘಾಮಠದ ಮುರುಘಾಶ್ರೀಗಳ ವಿರುದ್ಧ ಪೋಕ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಪರೀಕ್ಷೆಯಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಆಗಿಲ್ಲ ಎಂಬ ಸ್ಪೋಟಕ ವರದಿ ಬಂದಿದೆ.ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಸ್ಪತ್ರೆಯ ವೈದ್ಯರು ಮೊದಲ ಪೋಕ್ಸೋ ಪ್ರಕರಣದ ಇಬ್ಬರು ಸಂತ್ರಸ್ತರ ಮೆಡಿಕಲ್ ರಿಪೋರ್ಟ್ ವರದಿಯಲ್ಲಿ ಅತ್ಯಾಚಾರ ಆಗಿಲ್ಲ ಎಂದು ವರದಿ ಬಂದಿದೆ.ಸದ್ಯ ಜಿಲ್ಲಾಸ್ಪತ್ರೆ ವೈದ್ಯರು ಸಂತ್ರಸ್ತೆಯರ ಬಾಲಕಿಯರ ಮೆಡಿಕಲ್ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.ಕಳೆದ ವರ್ಷ ಸಪ್ಟೆಂಬರ್​ನಲ್ಲಿ ಮುರುಘಾ […]

Advertisement

Wordpress Social Share Plugin powered by Ultimatelysocial