Tollywood:ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾಗೆ 500 ಕೋಟಿ ರೂ ಹೂಡಿಕೆ;

ಅಬ್ಬಬ್ಬಾ ಈಗ ಎಲ್ಲಿ ನೋಡಿದರೂ, ಯಾವುದೇ ಸಿನಿಮಾ ಬಜೆಟ್, ನಟರ ಸಂಭಾವನೆ ಹೆಚ್ಚಳದ ಸುದ್ದಿಗಳನ್ನ ಕೇಳಿದರೆ ಅದು 100 ಕೋಟಿಗಳ ಲೆಕ್ಕದಲ್ಲೇ ಇರುತ್ತದೆ. ಇದು ಇತ್ತೀಚೆಗೆ ಹೆಚ್ಚಾಗಿದೆ ಕೂಡ. ಪುಷ್ಪ ಸಿನಿಮಾದ ಬಳಿಕ ಅಲ್ಲು ಅರ್ಜುನ್‌ಗೆ 100 ಕೋಟಿ ಸಂಭಾವನೆ, ಪುಷ್ಪ 2 ಚಿತ್ರಕ್ಕೆ 400 ಕೋಟಿ ಆಫರ್, ಅನುಷ್ಕಾ ಶರ್ಮಾಗೆ ಒಟಿಟಿಯಿಂದ 400 ಕೋಟಿ ಆಫರ್, ರಾಧೆ ಶ್ಯಾಮ್ ಚಿತ್ರಕ್ಕೆ 400 ಕೋಟಿ ಆಫರ್.

ಹೀಗೆ ಹಲವಾರು ಸುದ್ದಿಗಳು ಈ ನೂರು ಕೋಟಿಯ ಸುತ್ತಲೂ ಹರಿದಾಡುತ್ತಿದೆ.

ಈಗ ಈ ಸಾಲಿಗೆ ನಟ ಮಹೇಶ್ ಬಾಬು ಕೂಡ ಸೇರಿ ಕೊಂಡಿದ್ದಾರೆ. ನಟ ಮಹೇಶ್ ಬಾಬು ಪ್ಯಾನ್ ಇಂಡಿಯಾ ಸಿನಿಮಾಗೆ 500 ಕೋಟಿ ರೂ. ಬಂಡವಾಳ ಹೂಡಲಾಗಿದೆ ಎನ್ನುವ ಸುದ್ದಿ ಹೊರ ಬಂದಿದೆ.

ನಟ ಮಹೇಶ್ ಬಾಬು ರಾಮನ ಪಾತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ವಿಚಾರ ಈಗಾಗಲೇ ಹಲವು ಬಾರಿ ಸದ್ದು ಮಾಡಿದೆ‌. ಇದೇ‌ ಚಿತ್ರದ‌ ವಿಚಾರವಾಗಿಯೇ ಈಗ ನಟ ಮಹೇಶ್ ಬಾಬು ಮತ್ತೆ ಸುದ್ದಿಯಲ್ಲಿದ್ದಾರೆ. ಈ ಚಿತ್ರಕ್ಕೆ ಹೂಡಲಾಗಿರುವ ಬಂಡವಾಳದ ಬಗ್ಗೆ ಹೊಸ ಸುದ್ದಿ ಹರಿದಾಡುತ್ತಿದೆ.

ಮಹೇಶ್ ಬಾಬು ತೆಲುಗು ಸಿನಿಮಾರಂಗದ ಟಾಪ್ ನಟ. ಇವರ ಕೆಲವೊಂದು ಸಿನಿಮಾಗಳು ಹಿಂದಿಗೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರಗೊಂಡಿವೆ. ಆದರೆ ಪ್ಯಾನ್ ಇಂಡಿಯಾ ಕಾನ್ಸೆಪ್ಟ್‌ನಲ್ಲಿ ಒಟ್ಟಿಗೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಿಲ್ಲ. ಈಗ ಬಾಲಿವುಡ್‌ನಿಂದ ಮಹೇಶ್ ಬಾಬುಗೆ ಅಂತಹ ಆಫರ್ ಬಂದಿದೆ. ನಿರ್ದೇಶಕ ನಿತೇಶ್ ತಿವಾರಿ ನಿರ್ದೇಶನ ಮಾಡಲಿರುವ ‘ರಾಮಾಯಣ’ ಚಿತ್ರದಲ್ಲಿ ರಾಮ ಪಾತ್ರಕ್ಕೆ ಮಹೇಶ್ ಬಾಬು ಅವರೊಂದಿಗೆ ಮಾತುಕತೆ ನಡೆಸಲಾಗಿದೆ. ಈ ಸುದ್ದಿ ಕೆಲವು ದಿನಗಳಿಂದ ಹರಿದಾಡುತ್ತಿದೆ.

ಸದ್ಯದ ಹೊಸ ವಿಚಾರ ಅಂದರೆ ಈ ಚಿತ್ರಕ್ಕಾಗಿ ಚಿತ್ರ ತಂಡ ಬರೋಬ್ಬರಿ 500 ಕೋಟಿ ರೂ. ಬಂಡವಾಳ ಹೂಡಲಾಗುತ್ತಿದೆಯಂತೆ. ಇನ್ನು ಮಹೇಶ್ ಬಾಬು ರಾಮನ ಲುಕ್‌ಗಾಗಿ ಕೂಡ ಹೆಚ್ಚಿನ ಬಜೆಟ್ ನಿಗದಿ ಆಗಿದೆಯಂತೆ. ಚಿತ್ರದ ಬಜೆಟ್ ಬಗ್ಗೆ ಚಿತ್ರ ತಂಡದ ಮೂಲಗಳಿಂದ ರಿವೀಲ್ ಆಗಿದೆ. ಆದರೆ ಸಿನಿಮಾದಲ್ಲಿ ರಾಮನ ಪಾತ್ರ ಮಾಡಲು ಇಬ್ಬರು ನಟರನ್ನು ಚಿತ್ರತಂಡ ಅಪ್ರೋಚ್ ಮಾಡಿದೆ. ಮಹೇಶ್ ಬಾಬು ಜೊತೆಗೆ ರಣ್ಬೀರ್ ಕಪೂರ್‌ಗೂ ಕೂಡ ಚಿತ್ರದ ಸ್ಕ್ರಿಪ್ಟ್ ಹೇಳಲಾಗಿದೆಯಂತೆ. ಆದರೆ ಸಿನಿಮಾದಲ್ಲಿ ರಾಮನ ಪಾತ್ರ ಮಾಡುವವರು ಯಾರು ಎನ್ನುವ ಬಗ್ಗೆ ಇನ್ನು ಕೂಡ ನಿರ್ಧರಿಸಲಾಗಿಲ್ಲ.‌ ಅದರೆ ಹೆಚ್ಚಾಗಿ ಮಹೇಶ್ ಬಾಬು ಅವರ ಹೆಸರೇ ಕೇಳಿ ಬರ್ತಿದೆ.

ಒಂದು ವೇಳೆ ಈ ಚಿತ್ರಕ್ಕೆ ಮಹೇಶ್ ಬಾಬು ಅವರೇ ನಾಯಕನಾದರೆ, ಅವರ ಸಿನಿಮಾ ಜರ್ನಿಯಲ್ಲಿ ಈ ಚಿತ್ರ ಹೊಸ ದಾಖಲೆ ಬರೆಯಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Indian Crush:ರಶ್ಮಿಕಾ ಮಂದಣ್ಣ ನಡೆಗೆ ಭಾರಿ ವಿರೋಧ;

Thu Jan 27 , 2022
ಪುಷ್ಪ ಸಿನಿಮಾದ ಯಶಸ್ಸಿನ ನಂತರ ನಟಿ ರಶ್ಮಿಕಾ ಮಂದಣ್ಣ ಅವರ ಬೇಡಿಕೆ ಹೆಚ್ಚಾಗಿದೆ.‌‌ ಪುಷ್ಪ ಸಿನಿಮಾದಲ್ಲಿನ ರಶ್ಮಿಕಾ ಅಭಿನಯಕ್ಕೆ ಪ್ರೇಕ್ಷಕರು, ಸಿನಿಮಾಮಂದಿ ಮನ ಸೋತಿದ್ದಾರೆ. ಸೌತ್ ಜೊತೆಗೆ ಬಾಲಿವುಡ್ ಮಂದಿಯ ಗಮನವನ್ನು ಸೆಳೆದಿದ್ದಾರೆ. ಪುಷ್ಪ ಹಿಂದಿಯಲ್ಲೂ ರಿಲೀಸ್ ಆದ ಕಾರಣ, ರಶ್ಮಿಕಾಗೆ ಅಲ್ಲಿ ಅದಾಗಲೇ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಖ್ಯಾತಿ ಪಡೆಯುತ್ತಿದ್ದ ಹಾಗೆ ಟ್ರೋಲ್ ಗೂ ಅಷ್ಟೇ ಹೆಚ್ಚಾಗಿ ತುತ್ತಾಗುತ್ತಿದ್ದಾರೆ ರಶ್ಮಿಕಾ ಮಂದಣ್ಣ. ರಶ್ಮಿಕಾ ಮಂದಣ್ಣ ಇತ್ತೀಚೆಗೆ ತಾನು ತೊಟ್ಟ ಉಡುಪಿನಿಂದ […]

Advertisement

Wordpress Social Share Plugin powered by Ultimatelysocial