ಸಚಿವ ಅಶ್ವತ್ಥ್ ನಾರಾಯಣ್ ವಿರುದ್ಧ ಎಫ್​ಐಆರ್​̤̤

 

ಮಂಡ್ಯ: ಮಂಡ್ಯದ ಪೂರ್ವ ಪೊಲೀಸ್ ಠಾಣೆಯಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಮತ್ತು ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಪ್ರಜಾಪ್ರತಿನಿಧಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಮಂಡ್ಯದ ಮಹಿಳಾ ಕಾಲೇಜು, ವೈದ್ಯಕೀಯ ಕಾಲೇಜಿನಲ್ಲಿ ಚುನಾವಣಾ ಪ್ರಚಾರ ನಡೆಸಿದ್ದರು. ಇದರ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಂಡಹಳ್ಳಿ ಮಂಜುನಾಥ್ ಚುನಾವಣಾ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಮುಕ್ತವಾಗಿ ತನಿಖೆ ನಡೆಸಲು ನಮಗೆ ಅಧಿಕಾರವಿಲ್ಲ, ನ್ಯಾಯಾಲಯದಿಂದ ಆದೇಶ ತಂದರೆ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದರು.

ಸರ್ಕಾರಿ ಕಾಲೇಜುಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ನೀತಿ ಸಂಹಿತೆ ಉಲ್ಲಂಘನೆ ನಡೆಸಿರುವ ಪ್ರಕರಣ ಸಂಬಂಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸುವಂತೆ ಪೊಲೀಸರಿಗೆ ಆದೇಶಿಸುವಂತೆ ಚುನಾವಣಾ ಆಧಿಕಾರಿಯು 2ನೇ ACJ ಮತ್ತು JMFC ನ್ಯಾಯಾಲಯದ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​, ಎಫ್​ಐಆರ್​ ದಾಖಲಿಸಿ, ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. ಈ ಹಿನ್ನೆಲೆ ಪೂರ್ವ ಠಾಣೆ ಅಪರಾಧ ವಿಭಾಗದ ಪಿಎಸ್​ಐ ಕೆ.ಎನ್. ಕೇಶವಮೂರ್ತಿ ಅವರು ಅಶ್ವತ್ಥ್ ನಾರಾಯಣ್ ಮತ್ತು ಮೈ.ವಿ.ರವಿಶಂಕರ್ ವಿರುದ್ಧ ಎಫ್​ಐಆರ್​ ದಾಖಲಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದು ಪ್ಯಾಕ್‌ ಸಿಗರೇಟು ಸೇದಿದ 15 ವರ್ಷದ ಬಾಲಕ !

Sat May 28 , 2022
ಕೆಜಿಎಫ್‌ ನಿಂದ ಸ್ಫೂರ್ತಿ ಪಡೆದ 15 ವರ್ಷದ ಬಾಲಕನೊಬ್ಬ ಒಂದು ಪ್ಯಾಕ್‌ ಪೂರ್ತಿ ಸಿಗರೇಟು ಸೇದಿದ್ದರಿಂದ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೈದರಾಬಾದ್‌ ನಲ್ಲಿ ನಡೆದಿದೆ. ಕೆಜಿಎಫ್‌-೨ ಚಿತ್ರದಲ್ಲಿ ರಾಕಿ ಭಾಯ್‌ ಪಾತ್ರದಲ್ಲಿ ನಟಿಸಿದ್ದ ಯಶ್‌ ಸಿಗರೇಟು ಸೇದುವ ದೃಶ್ಯ ಇತ್ತು. ಈ ದೃಶ್ಯದಿಂದ ಸ್ಪೂರ್ತಿಗೊಂಡ ಬಾಲಕ ಒಂದು ಪ್ಯಾಕ್‌ ಸಿಗರೇಟು ಸೇದಿದ್ದಾನೆ. ಸಿಗರೇಟು ಸೇದಿದ ನಂತರ ಗಂಟಲು ನೋವು, ಕಫ ಮುಂತಾದ ಸಮಸ್ಯೆಗಳು ಉಲ್ಭಣಗೊಂಡ ಪರಿಣಾಮ ಅಸ್ವಸ್ಥಗೊಂಡ ಬಾಲಕನನ್ನು […]

Advertisement

Wordpress Social Share Plugin powered by Ultimatelysocial