ಬೀದರ್ ಜಿಲ್ಲಾ ಅರೋಗ್ಯ ಅಧಿಕಾರಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕರವೇ

ಬೀದರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾದ ಡಾ. ರತಿಕಾಂತ ಸ್ವಾಮಿ ಇವರು ಲಂಚ ಪಡೆದು ಹೊರಗುತ್ತಿಗೆ ಆಧಾರದ ಮೇಲೆ ವಾಹನ ಚಾಲಕರನ್ನು ಹಾಗೂ ಡೇಟಾ ಎಂಟ್ರಿ ಆಪರೇಟರಗಳನ್ನು ನೇಮಿಸಿರುತ್ತಾರೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಭಾರತಿಯ ವಿದ್ಯಾರ್ಥಿ ಸಂಘ ಜಂಟಿಯಲ್ಲಿ ಇಂದು ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಛೇರಿವರೆಗೂ ಹೋರಾಟ ಮಾಡಲಾಯಿತು.

ಸರ್ಕಾರದ ಯಾವುದೇ ಪೂರ್ವನ್ಮತಿ ಇಲ್ಲದೆ ವಾಹನ ಚಾಲಕರನ್ನು ಮತ್ತು ಡಾಟಾ ಎಂಟ್ರಿ ಆಪರೇಟರಗಳನ್ನು ಲಂಚ ಪಡೆದು ನೇಮಿಸಿರುತ್ತಾರೆ ಹಾಗೂ ಹಿಂದಿನ ವರ್ಷಗಳಲ್ಲಿ ಕಾರ್ಯನಿರ್ವಹಿಸಿದ ಅಭ್ಯರ್ಥಿಗಳನ್ನು ಯಾವುದೇ ನೋಟಿಸ ನೀಡದೆ ಉದ್ದೇಶಪೂರ್ವಕವಾಗಿ ಅವರನ್ನು ಹುದ್ದೆಯಿಂದ ಬಿಡುಗಡೆಗೊಳಿಸಿರುತ್ತಾರೆ ತನಗೆ ಬೇಕಾದವರನ್ನು ಇಲಾಖೆಯಲ್ಲಿ ನೇಮಿಸಿಕೊಂಡು ಆದೇಶ ಹೊರಡಿಸಿರುತ್ತಾರೆ, ಇದರ ಬಗ್ಗೆ ಮಾಹಿತಿ ಕೇಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ರತಿಕಾಂತ ಸ್ವಾಮಿಯವರು ಬಳಿಗೆ ಹೋದಾಗ ಉಡಾಫೆ ಉತ್ತರಗಳನ್ನು ನೀಡಿ ಅವಾಚ್ಯ ಪದಗಳಿಂದ ನಿಂದಿಸಿರುತ್ತಾರೆ ಇದನ್ನು ಕೇಳಲು ನೀವ್ಯಾರು…? ಎಂದು ಪ್ರಶ್ನಿಸಿರುತ್ತಾರೆ ಎಂದು ಪ್ರತಿಭಟನಕರಾರು ಆರೋಪಿಸಿದ್ದಾರೆ , ಇಂತಹ ಅಧಿಕಾರಿಗಳಿಗೆ ಕೂಡಲೇ ಶಿಸ್ತುಕ್ರಮ ಕೈಗೊಳ್ಳಬೇಕು ಹಾಗೂ ವರ್ಗಾವಣೆ ಮಾಡಬೇಕೆಂದು ಭಾರತೀಯ ವಿದ್ಯಾರ್ಥಿ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಜಂಟಿಯಲ್ಲಿ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಹೋರಾಟ ಮಾಡಲಾಯಿತು.ಈ ಹೊರಟಾದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷರಾದ ಪ್ರದೀಪ್ ನಾಟೇಕರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷರಾದ ಅಮೃತ್ ಮುತ್ತಂಗಿಕರ್ , ಕಲ್ಯಾಣ ಕರ್ನಾಟಕ ಹಾಗೂ ಇತರೆ ಕಾರ್ಮಿಕರ ಕಟ್ಟಡ ಸಂಘದ ಅಧ್ಯಕ್ಷರಾದ ಸೂರ್ಯಕಾಂತ್ ಸಾಧುರೆ , ಮುಕೇಶ್ ಚೆಲುವ, ಭೀಮರಾವ್ ಮಾಲಗತ್ತಿ, ಸಿದ್ದಾರ್ಥ್ ಅತಿವಾಳೆ,ಸುನಿಲ್ ಚಂದ, ಆನಂದ್ ಶಿಂದೆ, ವಿಷ್ಣುವರ್ಧನ್ ಜಾನ್ ವೀರ, ಅನಿಲ್ ಕುಮಾರ್ ಹಾಗೂ ಇತರರು ಭಾಗವಹಿಸಿದರು.
ವರದಿ. ಲಕ್ಕಿ ರಾಠೋಡ ಬೀದರ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಟೆಂಪೋ ಟ್ರಾವೆಲರ್

Thu Jan 5 , 2023
  ಇಲ್ಲಿನ ಸೂಳಗಿರಿಯ ಚಿನ್ನಾರ್ ಬಳಿ ಟೆಂಪೋ ಟ್ರಾವೆಲರ್‌ವೊಂದು ರಸ್ತೆ ಡಿವೈಡರ್‌ಗೆ ಡಿಕ್ಕಿ (Road Accident) ಹೊಡೆದ ಪರಿಣಾಮ ವಾಹನದ ಕೆಳಗೆ ಸಿಲುಕಿ ವ್ಯಕ್ತಿಯೊಬ್ಬ ದಾರುಣವಾಗಿ ಮೃತಪಟ್ಟಿದ್ದಾರೆ. ಬೆಂಗಳೂರಿನಿಂದ ಕೃಷ್ಣಗಿರಿಗೆ ತರಕಾರಿ ತುಂಬಿಸಿಕೊಂಡು ಹೋಗುತ್ತಿದ್ದಾಗ ಈ ಅಪಘಾತವಾಗಿದೆ.ಟೆಂಪೋ ಟ್ರಾವೆಲರ್‌ನಲ್ಲಿದ್ದ ನಾಲ್ವರಲ್ಲಿ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದರೆ, ಇನ್ನೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಮತ್ತಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೂಳಗಿರಿ ಹೆದ್ದಾರಿಯಲ್ಲಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಆದ ಕಾರಣ ರಸ್ತೆ ಮೇಲೆ ತರಕಾರಿ […]

Advertisement

Wordpress Social Share Plugin powered by Ultimatelysocial