ರಾಮನಗರ’ ಕಾರ್ಯಕ್ರಮ ಇಂದು ಯಶಸ್ವೀಯಾಗಿ ನಡೆಯಿತು.ರಾಜ್ಯದ ವಿವಿಧೆಡೆಗಳಿಂದ ಹೂಡಿಕೆದಾರರು ಆಗಮಿಸಿದ್ದು

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ರಾಮನಗರ ಈಗ ಟೂರಿಸಂ ಹಬ್ ಆಗಿ ಪರಿವರ್ತನೆಗೊಳ್ಳಲಿದೆ. ಇದಕ್ಕಾಗಿ ‘ಇನ್ವೆಸ್ಟ್ -ರಾಮನಗರ’ ಕಾರ್ಯಕ್ರಮ ಇಂದು ಯಶಸ್ವೀಯಾಗಿ ನಡೆಯಿತು. ರಾಜ್ಯ ಮಟ್ಟದ ಸಮಾವೇಶದಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಹೂಡಿಕೆದಾರರು ಆಗಮಿಸಿದ್ದು ಮಾತ್ರವಲ್ಲ, ಸ್ಥಳೀಯವಾಗಿ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸುತ್ತಿರುವವರು ಸಹ ಭಾಗವಹಿಸಿ, ಸಲಹೆಗಳನ್ನು ನೀಡಿದ್ದು ವಿಶೇಷವಾಗಿತ್ತು.• ಇನ್ವೆಸ್ಟ್ ರಾಮನಗರಕ್ಕೆ ಕಿಕ್ ಸ್ಟಾರ್ಟ್
• ಬಂಡವಾಳ ಹೂಡಿಕೆಗೆ ಸೂಕ್ತ ತಾಣ ರಾಮನಗರ
• ಪ್ರವಾಸೋದ್ಯಮಕ್ಕೆ ವಿಶೇಷ ಬೂಸ್ಟ್

ಹೌದು… ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಯ ಸಹಯೋಗದೊಂದಿಗೆ ಕನಕಪುರದ ಸಂಗಮದ ಬಳಿಯಲ್ಲಿನ ಕಾಳಿಬೋರೆ ಫಿಶಿಂಗ್ ಕ್ಯಾಂಪ್‌ನಲ್ಲಿ ಶುಕ್ರವಾರ ನಡೆದ ಸಮಾವೇಶವು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಅವರ ಕನಸು ಎಂಬುದು ಮತ್ತೊಂದು ವಿಶೇಷ. ಒಟ್ಟು ನಾಲ್ಕು ಹಂತಗಳಲ್ಲಿ ರೂಪಿಸಿರುವ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಮಂಚನಬೆಲೆ ಡ್ಯಾಂ, ಕಣ್ವ, ಇಗ್ಗಲೂರು, ಸಂಗಮ ಪ್ರದೇಶಗಳನ್ನು ಕ್ರಮವಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ. ಸಾಹಸ ಕ್ರೀಡೆ, ಟ್ರಕ್ಕಿಂಗ್, ಸೈಕ್ಲಿಂಗ್ ಮಾರ್ಗಗಳನ್ನು ಸಿದ್ದಪಡಿಸಲಾಗಿದೆ. ಕೃಷಿ ಪ್ರವಾಸೋದ್ಯಮ, ಸಿಲ್ಕ್ ಟೂರಿಸಂ, ವೈನ್ ಟೂರಿಸಂ..ಹೀಗೆ ವಿವಿಧ ಹಂತಗಳಲ್ಲಿ ಜಿಲ್ಲಾಡಳಿತ ಈಗಾಗಲೇ ರೂಪು ರೇಷೆ ಸಿದ್ದಪಡಿಸಿದೆ. ಜಿಲ್ಲೆಯಲ್ಲಿನ ಬೆಟ್ಟಗುಡ್ಡಗಳು, ವನ್ಯಜೀವಿಧಾಮ, ಜಲಾಶಯಗಳು, ದೇವಾಲಯಗಳು, ವಂಡರ್‌ಲಾ..ಹೀಗೆ ನಾನ ರೀತಿಯ ಪ್ರಕೃತಿ ಸೊಬಗೊಂದಿಗೆ, ವೈವಿಧ್ಯವನ್ನು ತನ್ನೊಡಲಿನಲ್ಲಿ ಇರಿಸಿಕೊಂಡಿದೆ. ಈ ಎಲ್ಲ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು, ವಾರಂತ್ಯದಲ್ಲಿ ಮೈಸೂರು, ಮಡಿಕೇರಿ, ಚಾಮರಾಜನಗರದ ಕಡೆಗೆ ಹೋಗುವ ಬೆಂಗಳೂರಿಗರನ್ನು ಜಿಲ್ಲೆ ಕಡೆ ಸೆಳೆಯುವ ವಿನೂತನ ಪ್ರಯತ್ನ ಇದಾಗಿದೆ.

ಜಿಲ್ಲಾ ಮಟ್ಟದಲ್ಲಿ ಸಿಂಗಲ್ ವಿಂಡೋ ಮಾದರಿಯಲ್ಲಿ ಸೌಲಭ್ಯಗಳನ್ನು ನೀಡಬೇಕು. ಬೆಂಗಳೂರು-ಮೈಸೂರು ಹೆದ್ದಾರಿ ಬದಿಯಲ್ಲಿ ಹಾಗೂ ಬೆಂಗಳೂರಿಗೆ ಕೇವಲ 50 ಕಿಮಿ ದೂರದಲ್ಲಿ ರಾಮನಗರ ಇರುವ ಎಂದಿದ ಹೂಡಿಕೆದಾರರಿಗೆ ಇದು ವಿಫುಲ ಅವಕಾಶಗಳನ್ನು ನೀಡಲಿದೆ. ಆದ್ರೆ, ಯೋಜನಾ ಪ್ರಾಕಾರದಿಂದ ಪ್ರತಿ ಎಕರೆಗೆ ಅಪ್ರೂವಲ್ ಪಡೆಯಲು 8 ಲಕ್ಷ ಖರ್ಚಾಗಲಿದೆ . ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಶಿಲಾಂಧರ ರೆಸಾರ್ಟ್‌ನ ಮಾಲೀಕ ರಮೇಶ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ರಮೇಶ್, ಶಿಲಾಂಧರ ರೆಸಾರ್ಟ್‌ನ ಮಾಲೀಕ.

ಇನ್ನೂ ಪ್ರವಾಸೋದ್ಯಮದಲ್ಲಿ ಹೆಚ್ಚಿನ ಉದ್ಯೋಗದೊಂದಿಗೆ ಸಮಾನ ಅವಕಾಶಗಳು ದೊರೆಯಲಿವೆ. ಜಿಲ್ಲೆಯ ಪ್ರತಿ ಗ್ರಾಮಗಳು ಹೆಸರು ವಾಸಿಯಾಗಬೇಕು ಎಂಬ ನಿಟ್ಟಿನಲ್ಲಿ ಜಿಲ್ಲೆಯಲ್ಲಿನ ಪ್ರವಾಸೋದ್ಯಮಗಳನ್ನು ಅಭಿವೃದ್ಧಿ ಪಡಿಸುವ ಕೆಲಸ ನಡೆಯಲಿದೆ. ಅಲ್ಲದೇ ಭವಿಷ್ಯದಲ್ಲಿ ಇಡೀ ಜಿಲ್ಲೆ ಪ್ರವಾಸಿ ಹಬ್ ಎಂಬಾಗಬೇಕು ಎಂಬ ಉದ್ದೇಶ ನಮ್ಮದು ಎಂದು ಸಚಿವ ಅಶ್ವತ್ ನಾರಾಯಣ್ ತಿಳಿಸಿದರು.

ಅಶ್ವತ್ ನಾರಾಯಣ್, ಸಚಿವ.

ಒಟ್ಟಾರೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ರಾಮನಗರ ಈಗ ಟೂರಿಸಂ ಹಬ್ ಆಗಿ ಪರಿವರ್ತನೆಗೊಳ್ಳಲು ಹೆಜ್ಜೆ ಇಡುವ ಮೂಲಕ ಜಿಲ್ಲೆಯಲ್ಲಿ ಬೆಟ್ಟ, ಅರಣ್ಯ, ಡ್ಯಾಂಗಳು ಸೇರಿದಂತೆ ಎಲ್ಲ ಮಾದರಿಯ ಟೂರಿಸಂಗು ಅವಕಾಶ ನೀಡಿರುವುದು ಪ್ರವಾಸಿಗರಿಗೆ ಹೆಚ್ಚು ಖುಷಿ ತಂದಿದೆ‌.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಹನುಮ ಜನಸಿದ ಸ್ಥಳಕ್ಕೆ ಆಗಷ್ಟ್ 01 ರಂದು ಸಿಎಂ ಭೇಟಿ.

Sat Jul 30 , 2022
ಅಂಜನಾದ್ರಿ ಬೆಟ್ಟಕ್ಕೆ ಭೇಟಿ ನೀಡಲಿರೋ ಸಿಎಂ ಬಸವರಾಜ್ ಬೊಮ್ಮಾಯಿ ಅಂಜನಾದ್ರಿ ಅಭಿವೃದ್ಧಿ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾಡಳಿತದೊಂದಿಗೆ ಚರ್ಚೆ. ಹನುಮ ಜನ್ಮಸ್ಥಳದ ಬಗ್ಗೆ ವಿವಾದ ಬೆನ್ನಲ್ಲೇ ಭೇಟಿ. ವಿವಾದಕ್ಕೆ ತೆರೆಏಳೆಯಲು ಮುಂದಾದ ಸಿಎಂ ಹನುಮ ಜನ್ಮಸಿದ ಸ್ಥಳದಲ್ಲಿಯೇ ಸಿಎಂ ಮೀಟಿಂಗ್ ಮಹತ್ವ ಪಡೆದ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಜಿಲ್ಲಾಡಳಿತ ಮೀಟಿಂಗ್ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟ. ಶ್ರೀರಾಮನ ಭಂಟ ಆಂಜನೇಯ ಜನ್ಮಸ್ಥಳವಾದ ಅಂಜನಾದ್ರಿ. ಆಂಜನೇಯ ದರ್ಶನದ ಬಳಿಕ […]

Advertisement

Wordpress Social Share Plugin powered by Ultimatelysocial