ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್‌ ಆದ ಫೋಟೋಗಳನ್ನು ಮರಳಿ ಪಡೆಯಲು ಹೀಗೆ ಮಾಡಿ?

ಮೆಟಾ ಒಡೆತನದ ಇನ್‌ಸ್ಟಾಗ್ರಾಮ್‌ ಜನಪ್ರಿಯ ಸೊಶೀಯಲ್‌ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದೆನಿಸಿಕೊಂಡಿದೆ. ತನ್ನ ಆಕರ್ಷಕ ಫೀಚರ್ಸ್‌ಗಳ ಮೂಲಕ ಜನಪ್ರಿಯ ಫೋಟೋ ಶೇರಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ಇದಲ್ಲದೆ ಇತ್ತೀಚಿನ ದಿನಗಳಲ್ಲಿ ಇನ್‌ಸ್ಟಾಗ್ರಾಮ್‌ ಕೂಡ ಹೆಚ್ಚಿನ ಪ್ರಮಾಣದಲ್ಲಿ ಬಳಕೆದಾರರನ್ನು ಸೆಳೆಯುತ್ತಿದೆ.

ಇದೇ ಕಾರಣಕ್ಕೆ ಇನ್‌ಸ್ಟಾಗ್ರಾಮ್‌ ಕೂಡ ಹಲವು ಹೊಸ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಇನ್ನು ನೀವು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ ಫೋಟೋ ಡಿಲೀಟ್‌ ಆಗಿದ್ದರೆ ಅದನ್ನು ಮರಳಿ ಪಡೆಯುವ ಅವಕಾಶ ಕೂಡ ಇದೆ.

ಇನ್‌ಸ್ಟಾಗ್ರಾಮ್‌;ಹೌದು, ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್‌ ಮಾಡಲಾದ ಪೋಸ್ಟ್‌ಗಳು ಮರಳಿ ಪಡೆಯುವುದಕ್ಕೆ ಅವಕಾಶವಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ ಪೋಸ್ಟ್‌ಗಳು ಡಿಲೀಟ್‌ ಆಗಿದ್ದರೆ ಅದನ್ನು ಮರಳಿ ಪಡೆಯುವುದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದರೆ ಇನ್‌ಸ್ಟಾಗ್ರಾಮ್‌ನಲ್ಲಿ 24 ಗಂಟೆಗಳ ಒಳಗೆ ಡಿಲೀಟ್‌ ಮಾಡಲಾದ ಪೋಸ್ಟ್‌ಗಳು ಅಥವಾ ಸ್ಟೋರಿಗಳನ್ನು ಪರಿಶೀಲಿಸಲು ಮತ್ತು ರಿಸ್ಟೋರ್‌ ಮಾಡಲು ಅವಕಾಶ ಸಿಗಲಿದೆ. ಹಾಗಾದ್ರೆ ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್‌ ಆದ ನಿಮ್ಮ ಪೋಸ್ಟ್‌ಗಳನ್ನು ರಿಸ್ಟೋರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್‌ಸ್ಟಾಗ್ರಾಮ್‌ನಲ್ಲಿ ಶಾಶ್ವತ ಪೋಸ್ಟ್ ಮಾಡಿದ ಅಥವಾ ಆರ್ಕೈವ್ ಮಾಡಿದ ಸ್ಟೋರಿಗಳನ್ನು ಡಿಲೀಟ್‌ ಮಾಡಿದ 30 ದಿನಗಳಲ್ಲಿ ರಿಸ್ಟೋರ್‌ ಮಾಡಬಹುದು. ಇದರಿಂದ ಬಳಕೆದಾರರು ತಮ್ಮ ಖಾತೆಗಳನ್ನು ಹ್ಯಾಕ್ ಮಾಡಿದರೆ ಮತ್ತು ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದರೆ ಕಂಟ್ರೋಲ್‌ ಮಾಡಬಹುದು. ಇದಕ್ಕಾಗಿ ಇನ್‌ಸ್ಟಾಗ್ರಾಮ್‌ ಡಿಲೀಟ್‌ ಫೋಲ್ಡರ್ ಅನ್ನು ಕ್ರಿಯೆಟ್‌ ಮಾಡಿದೆ. ಬಳಕೆದಾರರು ತಮ್ಮ ಪೋಸ್ಟ್‌ಗಳಲ್ಲಿ ಒಂದನ್ನು ಡಿಲೀಟ್‌ ಮಾಡಿದರೂ ಸಹ, ಫೋಲ್ಡರ್‌ನಲ್ಲಿ 30 ದಿನಗಳವರೆಗೆ ಇರುತ್ತದೆ. ಈ ಒಂದು ತಿಂಗಳ ಅವಧಿಯಲ್ಲಿ, ಬಳಕೆದಾರರು ಪೋಸ್ಟ್ ಅನ್ನು ರಿಸ್ಟೋರ್‌ ಮಾಡಬಹುದು ಅಥವಾ ಶಾಶ್ವತವಾಗಿ ಅಳಿಸಬಹುದು.

ಇಲ್ಲಿಯವರೆಗೆ, ಇನ್‌ಸ್ಟಾಗ್ರಾಮ್‌ನಲ್ಲಿ ಡಿಲೀಟ್‌ ಮಾಡಿದ ಪೋಸ್ಟ್‌ಗಳನ್ನು ರಿಸ್ಟೋರ್‌ ಮಾಡಲು ಯಾವುದೇ ಆಯ್ಕೆ ಇರಲಿಲ್ಲ. ಆದರೆ ಇದೀಗ ನೀವು ಇತ್ತೀಚೆಗೆ ಡಿಲೀಟ್‌ ಮಾಡಲಾದ ಫೋಲ್ಡರ್ ಮೂಲಕ ಡಿಲೀಟ್‌ ಪೋಸ್ಟ್‌ಗಳನ್ನು ರಿಸ್ಟೋರ್‌ಮಾಡಬಹುದು. ನಿಮ್ಮ ಅಪ್ಲಿಕೇಶನ್‌ನಿಂದ ನೀವು ಡಿಲೀಟ್‌ ಮಾಡುವ ಎಲ್ಲಾ ಫೋಟೋಗಳು, ವೀಡಿಯೊಗಳು, ರೀಲ್‌ಗಳು, IGTV ವೀಡಿಯೊಗಳು ಮತ್ತು ಸ್ಟೋರಿಸ್‌ಗಳನ್ನು ಈಗ ಇತ್ತೀಚೆಗೆ ಡಿಲೀಟ್‌ ಮಾಡಲಾದ ಫೋಲ್ಡರ್‌ಗೆ ಸೇರಿಸಲಾಗುತ್ತದೆ. ಇದರಿಂದ ನೀವು ಡಿಲೀಟ್‌ ಮಾಡಲಾದ ಕಂಟೆಂಟ್‌ ಅನ್ನು ಮತ್ತೆ ಪ್ರವೇಶಿಸಲು ಸಾದ್ಯವಾಗಲಿದೆ.

ಇನ್‌ಸ್ಟಾಗ್ರಾಮ್‌ನಿಂದ ಡಿಲೀಟ್‌ ಮಾಡಲಾದ ಫೋಟೋಸ್‌ ರಿಸ್ಟೋರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ, ಇನ್‌ಸ್ಟಾಗ್ರಾಮ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ.
ಹಂತ:2 ನಂತರ ಇನ್‌ಸ್ಟಾಗ್ರಾಮ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ನಿಮ್ಮ ಪ್ರೊಫೈಲ್‌ಗೆ ಹೋಗಿ.
ಹಂತ:3 ಈಗ ಮೇಲಿನ ಬಲ ಮೂಲೆಯಲ್ಲಿರುವ ಹ್ಯಾಂಬರ್ಗರ್ ಮೆನು ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್‌ಗಳಿಗೆ ಹೋಗಿ.
ಹಂತ:4 ನಂತರ, ಅಕೌಂಟ್‌ಗೆ ಹೋಗಿ, ಇಲ್ಲಿ ಹೊಸ ಇತ್ತೀಚಿಗೆ ಡಿಲೀಟ್‌ ಮಾಡಲಾದ ಆಯ್ಕೆಯನ್ನು ನೋಡುತ್ತೀರಿ.
ಹಂತ:5 ಈ ಆಯ್ಕೆಯನ್ನು ಆರಿಸಿದ ನಂತರ, ನೀವು ಇತ್ತೀಚೆಗೆ ಡಿಲೀಟ್‌ ಮಾಡಲಾದ ವಿಷಯವನ್ನು ಕಾಣಬಹುದು.
ಹಂತ:6 ಈಗ ನೀವು ಚೇತರಿಸಿಕೊಳ್ಳಲು ಬಯಸುವ ಪೋಸ್ಟ್ ಅನ್ನು ಟ್ಯಾಪ್ ಮಾಡಿ.
ಹಂತ:7 ನಂತರ, ಮೇಲ್ಭಾಗದಲ್ಲಿರುವ ಮೂರು-ಡಾಟ್ ಐಕಾನ್ ಮೇಲೆ ಕ್ಲಿಕ್ ಮಾಡಿ.
ಹಂತ:8 ಈಗ, ನೀವು ಪೋಸ್ಟ್ ಅನ್ನು ಶಾಶ್ವತವಾಗಿ ಡಿಲೀಟ್‌ ಮಾಡುವ ಮತ್ತು ರಿಸ್ಟೋರ್‌ ಮಾಡುವ ಆಯ್ಕೆಯನ್ನು ಪಡೆಯಬಹುದು.
ಹಂತ:9 ರಿಸ್ಟೋರ್‌ ಮಾಡುವ ಮೊದಲು ಭದ್ರತೆಗಾಗಿ ಪರಿಶೀಲಿಸಬೇಕು. ಈಗ ನೀವು ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ಐಡಿಯಲ್ಲಿ OTP ಅನ್ನು ಪಡೆಯುತ್ತೀರಿ.
ಹಂತ:10 OTP ಅನ್ನು ನಮೂದಿಸಿ ಮತ್ತು ದೃಢೀಕರಿಸು ಟ್ಯಾಪ್ ಮಾಡಿ.
ಹಂತ:11 ಈಗ, ನಿಮ್ಮ ಡಿಲೀಟ್‌ ಮಾಡಲಾದ ಇನ್‌ಸ್ಟಾಗ್ರಾಮ್‌ ಪೋಸ್ಟ್ ಅನ್ನು ನೀವು ಮತ್ತೆ ಪಡೆಯಬಹುದಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇವರ ಜೊತೆಗೆ ಅಪ್ಪುಗೂ ಪೂಜೆ ಸಲ್ಲಿಸಿದ ಅಭಿಮಾನಿಗಳು| PUNEETH RAJKUMRA| SRK| SNK

Sun Jan 2 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial