ಹೃದಯಾಘಾತದಿಂದ ಎಎಸ್‌ಐ ಮೃತ್ಯು.

ಬೆಂಗಳೂರು: ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ಸಂಚಾರಿ ಎಎಸ್‌ಐಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವರ ಸಾವಿಗೆ ಓವರ್‌ ಟೈಂ ಡ್ಯೂಟಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಸಿಬ್ಬಂದಿ ಮಾತನಾಡಿರುವ ಆಡಿಯೊ ವೈರಲ್‌ ಆಗಿದೆ.

ಮೃತ ಎಎಸ್‌ಐ ಸತ್ಯ

ಶಿವಾಜಿನಗರದ ಸಂಚಾರಿ ಎಎಸ್‌ಐ ಸತ್ಯ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇತ್ತ ಸತ್ಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸಹ ಸಿಬ್ಬಂದಿಯೊಬ್ಬರ ಆಡಿಯೊ ವೈರಲ್‌ ಆಗಿದೆ. 24 ಗಂಟೆ ಕಾಲ ಕೆಲಸ ಮಾಡಿ ಒತ್ತಡಕ್ಕೊಳಗಾಗಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. ಬೆಳಗ್ಗೆ 8ಕ್ಕೆ ಕೆಲಸಕ್ಕೆ ಬಂದರೆ ಮಾರನೇ ದಿನ 8 ಗಂಟೆಯವರೆಗೆ ಡ್ಯೂಟಿ ಮಾಡಬೇಕು, ಮಾಡಿಲ್ಲ ಎಂದರೆ ಮೆಮೋ ಕಳುಹಿಸುತ್ತಾರೆ.

ಪೊಲೀಸ್ ಇಲಾಖೆಯ ಹಣೆಬರಹವೇ ಇಷ್ಟು, ಸರ್ಕಾರಕ್ಕೆ ಪೊಲೀಸರ ಬಗ್ಗೆ ಕಿಂಚಿತ್ತೂ ಕರುಣೆಯಾಗಲಿ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಎಲ್ಲ ಇಲಾಖೆಯಲ್ಲಿಯೂ 8 ಗಂಟೆಗಳ ಡ್ಯೂಟಿ ಇದ್ದರೆ ಪೊಲೀಸ್‌ ಇಲಾಖೆಯಲ್ಲಿ 24 ಗಂಟೆಗಳ ಡ್ಯೂಟಿ ಮಾಡುವಂತೆ ಹೇಳುತ್ತಾರೆ. ಕೆಲಸದಲ್ಲಿ ಸ್ವಲ್ಪವೂ ಬಿಡುವು ಇರುವುದಿಲ್ಲ. ಓವರ್‌ ಡ್ಯೂಟಿ ಮಾಡಿಲ್ಲವೆಂದರೆ ಟಾರ್ಗೆಟ್‌ ಮಾಡುತ್ತಾರೆ. ಇದರಿಂದ ಕಷ್ಟಪಟ್ಟಾದರೂ ಓವರ್‌ ಟೈಂ ಕೆಲಸ ಮಾಡುತ್ತಾರೆ. ಕೊನೆಗೆ ಒತ್ತಡಕ್ಕೆ ಸಿಲುಕಿ ಹೃದಯಾಘಾತದಿಂದ ಮೃತಪಡುತ್ತಾರೆ. ಇಲಾಖೆಯಲ್ಲಿ ಒತ್ತಡದ ಕೆಲಸ ಹೆಚ್ಚಾಗುತ್ತಿದ್ದು, ಹಲವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಗೃಹ ಇಲಾಖೆ ಈ ಸಂಬಂಧ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಸತ್ಯ ಅವರ ನಿಧನಕ್ಕೆ ಸಹ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ವಿಜಯ ಸಂಕಲ್ಪ ಅಭಿಯಾನ.

Sun Jan 22 , 2023
ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನರಪರ ಯೋಜನೆಗಳನ್ನು ತಿಳಿಸಿ, ಮತ್ತೆ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮತದಾರರ ಮನೆ ಬಾಗಿಲಿಗೆ ತೆರಳುವ ವಿನೂತನ ವಿಜಯ ಸಂಕಲ್ಪ ಅಭಿಯಾನ’ಕಾರ್ಯಕ್ರಮವನ್ನು ಬಿಜೆಪಿ ಟೌನ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಭಗವಾನ್ ವೃತ್ತದಲ್ಲಿ ಆರಂಭಗೊಂಡ ಅಭಿಯಾನದಲ್ಲಿ ವರುಣಾ ಮತ್ತು ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.ಅಭಿಯಾನವು ಜ.21 ರಿಂದ 29ರವರೆಗೆ ನಡೆಯಲಿದ್ದು ,ಈ ಅವಧಿಯಲ್ಲಿ ಸರ್ಕಾರದ ಹಲವು ಜನಪರ ಯೋಜನೆಗಳ ಬಗ್ಗೆ […]

Advertisement

Wordpress Social Share Plugin powered by Ultimatelysocial