ವಿಜಯ ಸಂಕಲ್ಪ ಅಭಿಯಾನ.

ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ಜನರಪರ ಯೋಜನೆಗಳನ್ನು ತಿಳಿಸಿ, ಮತ್ತೆ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮತದಾರರ ಮನೆ ಬಾಗಿಲಿಗೆ ತೆರಳುವ ವಿನೂತನ ವಿಜಯ ಸಂಕಲ್ಪ ಅಭಿಯಾನ’ಕಾರ್ಯಕ್ರಮವನ್ನು ಬಿಜೆಪಿ ಟೌನ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಪಟ್ಟಣದ ಭಗವಾನ್ ವೃತ್ತದಲ್ಲಿ ಆರಂಭಗೊಂಡ ಅಭಿಯಾನದಲ್ಲಿ ವರುಣಾ ಮತ್ತು ತಿ.ನರಸೀಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.ಅಭಿಯಾನವು ಜ.21 ರಿಂದ 29ರವರೆಗೆ ನಡೆಯಲಿದ್ದು ,ಈ ಅವಧಿಯಲ್ಲಿ ಸರ್ಕಾರದ ಹಲವು ಜನಪರ ಯೋಜನೆಗಳ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿ,ರಾಜ್ಯ ಮತ್ತು ದೇಶದ ಸರ್ವತೋಮುಖ ಅಭಿವೃದ್ಧಿಗೆ ಬದ್ಧವಾಗಿರುವುದರಿಂದ ಬಿಜೆಪಿ ಪಕ್ಷವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಬಲಿಸುವಂತೆ ಜನರಿಗೆ ಅರಿವು ಮೂಡಿಸಲಾಯಿತು.
ಅಭಿಯಾನದಲ್ಲಿ ಭಾಗಿಯಾಗಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ರಮೇಶ್ ಮಾತನಾಡಿ,ರಾಜ್ಯ ಬಿಜೆಪಿ ಸರ್ಕಾರ ನೂತನ ರಾಷ್ಟ್ರೀಯ ಶಿಕ್ಷಣ ನೀತಿ, 11000 ಪೌರ ಕಾರ್ಮಿಕರ ಖಾಯಂ,ಪರಿಶಿಷ್ಟ ಜಾತಿ/ಪಂಗಡಗಳಿಗೆ ಮೀಸಲಾತಿ ಹೆಚ್ಚಳ,ನಮ್ಮ ಕ್ಲಿನಿಕ್,ವೃದ್ದಾಪ್ಯ ಮಾಸಾಸನ ಹೆಚ್ಚಳ, ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಸೇರಿದಂತೆ ಹಲವು ಜನಪರ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ.ಹಾಗಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ,ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಯಡಿಯೂರಪ್ಪ ,ಬಿ.ಎಲ್.ಸಂತೋಷ್ ನಾಯಕತ್ವವನ್ನು ಬೆಂಬಲಿಸಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವಂತೆ ಮತದಾರರನ್ನು ಮನವೊಲಿಸಲಾಗುವುದು ಎಂದರು.
ಕಾಂಪೆÇೀಸ್ಟ್ ನಿಗಮ ಮಂಡಳಿ ಅಧ್ಯಕ್ಷ ಎಸ್.ಮಹದೇವಯ್ಯ ಮಾತನಾಡಿ,ಇಂದು 1176 ಬೂತ್ ಗಳಲ್ಲೂ ವಿಜಯ ಸಂಕಲ್ಪ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.ದೇಶದ ಅಭಿವೃದ್ಧಿಗೆ ವಿರಮಿಸದೆ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಲು ರಾಜ್ಯದಲ್ಲಿ ಮತ್ತೆ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ.ಪ್ರತಿ ಬೂತ್ ಗಳಿಗೆ ಬಿಜೆಪಿ ಕಾರ್ಯಕರ್ತರು ಭೇಟಿ ನೀಡಿ ಬಿಜೆಪಿ ಸರ್ಕಾರ ಮಾಡಿರುವ ಹಲವು ಅಭಿವೃದ್ಧಿ ಕೆಲಸಗಳ ಭಿತ್ತಿಪತ್ರವನ್ನು ಮತದಾರರಿಗೆ ನೀಡಿ ಬಿಜೆಪಿ ಪಕ್ಷ ಮಾಡಿರುವ ಅಭಿವೃದ್ಧಿಯನ್ನು ಮನವರಿಕೆ ಮಾಡಬೇಕಿದೆ ಎಂದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಚೇರಿಯಲ್ಲಿ ಆಲಸ್ಯವೇ?

Sun Jan 22 , 2023
ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಆಗುತ್ತಿದ್ದಂತೆ ಆಲಸ್ಯ ಶುರುವಾಗುತ್ತಾ, ನಿದ್ರೆ ಬಂದಂಗೆ ಅನ್ನಿಸುತ್ತಾ. ಊಟದ ನಂತರದ ಆಯಾಸ ಮತ್ತು ನಿದ್ರೆಯನ್ನು ತಪ್ಪಿಸಲು ಏನು ಮಾಡಬೇಕು.ಕಚೇರಿಯಲ್ಲಿ ಕೆಲಸ ಮಾಡುತ್ತಿರುವಾಗ ಮಧ್ಯಾಹ್ನ ಆಗುತ್ತಿದ್ದಂತೆ ಆಲಸ್ಯಶುರುವಾಗುತ್ತಾ, ನಿದ್ರೆ ಬಂದಂಗೆ ಅನ್ನಿಸುತ್ತಾ. ಊಟದ ನಂತರದ ಆಯಾಸ ಮತ್ತು ನಿದ್ರೆಯನ್ನು ತಪ್ಪಿಸಲು ಏನು ಮಾಡಬೇಕು. ಆದರೆ ಸಾಮಾನ್ಯವಾಗಿ ಜನರು ತಮ್ಮ ಸುಸ್ತು ಮತ್ತು ಆಲಸ್ಯಕ್ಕೆ ನಿಜವಾದ ಕಾರಣ ಅವರು ಆಹಾರವನ್ನು ಸೇವಿಸುವ ಸಮಯ ಎಂದು ತಿಳಿದಿರುವುದಿಲ್ಲ. ಇದು […]

Advertisement

Wordpress Social Share Plugin powered by Ultimatelysocial