ವಿಧಾನಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇದೆ.

ವಿಧಾನಸಭಾ ಚುನಾವಣೆಗೆ ಕೆಲ ತಿಂಗಳಷ್ಟೇ ಬಾಕಿ ಇದೆ. ಮತದಾರರ ಮನಗೆಲ್ಲಲು ರಾಜಕೀಯ ಪಕ್ಷಗಳು ಯಾತ್ರೆಗಳ ಮೇಲೆ ಯಾತ್ರೆ ಮಾಡ್ತಿವೆ. ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಸಜ್ಜಾಗಿವೆ. ಇತ್ತ ದಳಪತಿಗಳು ಈಗಾಗಲೇ ಮೊದಲ ಹಂತದ ಅಭ್ಯರ್ಥಿಗಳನ್ನ ಫೈನಲ್ ಮಾಡಿ ಅಖಾಡಕ್ಕೆ ಇಳಿಸಿದ್ದಾರೆ.

ಇದೀಗ 2 ನೇ ಹಂತದ ಅಭ್ಯರ್ಥಿಗಳ ಕಣಕ್ಕಿಳಿಸಲು ಕಸರತ್ತು ನಡೆಸಿದ್ದಾರೆ. ಆದ್ರೆ, ಸಿಂ’ಹಾಸನ’ ಕದನ 2ನೇ ಲಿಸ್ಟ್‌ಗೆ ಅಡ್ಡಿಯಾಗಿದೆ.

ಜೆಡಿಎಸ್‌ನಲ್ಲಿ ಸಿಂಹಾಸನಕ್ಕಾಗಿ ಭಾರೀ ಕದನ ಏರ್ಪಟ್ಟಿತ್ತು. ಭವಾನಿ ರೇವಣ್ಣ ಹಚ್ಚಿದ್ದ ಟಿಕೆಟ್ ಕಿಚ್ಚಿಗೆ ಗೌಡರ ಕುಟುಂಬದಲ್ಲಿ ಅಸಮಾಧಾನದ ಹೊಗೆಯಾಡಿತ್ತು. ಆದ್ರೆ, ಹಾಸನಕ್ಕೆ ಎಂಟ್ರಿಕೊಟ್ಟು ಕುಮಾರಸ್ವಾಮಿ ಬೇಗುದಿಗೆ ತಣ್ಣೀರು ಸುರಿಯುವ ಪ್ರಯತ್ನ ನಡೆಸಿದ್ರು. ಕುಟುಂಬ ಸಮೇತರಾಗಿ ಯಾತ್ರೆ ನಡೆಸಿ ಒಗ್ಗಟ್ಟಿನ ಮಂತ್ರ ಜಪಿಸಿದ್ರು. ಆದ್ರೆ, ಟಿಕೆಟ್‌ ಕದನಕ್ಕೆ ಮಾತ್ರ ಬ್ರೇಕ್ ಹಾಕಿರ್ಲಿಲ್ಲ. ಹೀಗಾಗಿ ಇದೇ ಸಿಂಹಾಸನ ಕಗ್ಗಂಟು ದಳ ಅಭ್ಯರ್ಥಿಗಳ ಪಟ್ಟಿಗೆ ಅಡ್ಡಿಯಾಗಿದೆ.

ಹಾಸನ ಟಿಕೆಟ್ ಗೊಂದಲ.. 2ನೇ ಪಟ್ಟಿ ಬಿಡುಗಡೆ ವಿಳಂಬ

ಮಾಜಿ ಸಿಎಂ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ. ಇಬ್ರಾಹಿಂ, ಹಾಸನ ಟಿಕೆಟ್ ಗೊಂದಲದ ಬಗ್ಗೆ ಚರ್ಚಿಸಲು ನಿನ್ನೆ ಜೆಡಿಎಸ್ ವರಿಷ್ಠ ದೇವೇಗೌಡರನ್ನ ಭೇಟಿ ಮಾಡಿದ್ರು. ದೌಡ್ಡ ಗೌಡರ ಜೊತೆ ಹಾಸನ ಟಿಕೆಟ್ ವಿಚಾರವಾಗಿ ಹೆಚ್‌ಡಿಕೆ, ಇಬ್ರಾಹಿಂ ಚರ್ಚೆ ನಡೆಸಿದ್ರು. ಗೌಡರ ಜೊತೆ ಸುಮಾರು 2 ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆಸಿದ್ರು. ಈ ವೇಳೆ ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಹಠಕ್ಕೆ ಬಿದ್ದಿರುವ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಗೌಡರ ಹಿರಿಸೊಸೆ, ಅವರ ಮಗ ಸೂರಜ್‌ ರೇವಣ್ಣ ಮಾತಿನಿಂದ ಪಕ್ಷಕ್ಕೆ ಡ್ಯಾಮೇಜ್‌ ಆಗಿದೇ ಅಂತಾ ಹೆಚ್‌ಡಿಕೆ ಅಳಲು ತೋಡಿಕೊಂಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೊನೆಗೂ ಉತ್ತರ ಕೊಟ್ಟ ಮೇಘನಾ ರಾಜ್!

Sun Feb 19 , 2023
ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್‌ ಹೊಸ ಬದುಕು ಹುಡುಕುತ್ತಿದ್ದಾರೆ. ನೋವನ್ನೆಲ್ಲಾ ಮರೆತು ಹೊಸ ಜೀವನ ನಡೆಸಲು ಮುಂದಾಗಿದ್ದಾರೆ. ಇದು ಅವರ ಹಿತೈಶಿಗಳ ಆಸೆ ಕೂಡ ಹೌದು. ಕಳೆದ ಎರಡು-ಮೂರು ವರ್ಷಗಳಿಂದ ಮೇಘನಾ ರಾಜ್ ಮುಂದಿನ ನಡೆಯೇನು? ಮುಂದೆ ಏನು ಮಾಡುತ್ತಾರೆ? ಅನ್ನೋದನ್ನು ತಿಳಿಯಲು ಎದುರು ನೋಡುತ್ತಿದ್ದರು. ಅದಕ್ಕೆ ಸರಿಯಾಗಿ ಮೇಘನಾ ರಾಜ್ ಕೆಲವು ಗಂಟೆಗಳ ಹಿಂದಷ್ಟೇ “ನನಗೆ ಕೇಳಲಾಗುತ್ತಿರುವ ಪ್ರಶ್ನೆಗೆ ಭಾನುವಾರ ಉತ್ತರ ಕೊಡುತ್ತೇನೆ” […]

Advertisement

Wordpress Social Share Plugin powered by Ultimatelysocial