50 ಜನರ ಬಂಧನ, ತೀವ್ರ ವಿಚಾರಣೆ.

ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ದಾಂಗ್ರಿ ಹಳ್ಳಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಸುಮಾರು 50 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಜಮ್ಮು-ಕಾಶ್ಮೀರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದ ದಾಂಗ್ರಿ ಹಳ್ಳಿಯಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆದ ದಾಳಿಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಸುಮಾರು 50 ಜನರನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜನವರಿ 1 ರಂದು ನಡೆದ ಉಗ್ರರ ದಾಳಿಯಲ್ಲಿ ಏಳು ಮಂದಿ ಮೃತಪಟ್ಟು, 14 ಮಂದಿ ಗಾಯಗೊಂಡಿದ್ದರು. ಈ ದಾಳಿ ನಡೆದ ಸ್ಥಳೀಯ ಸ್ವಯಂ ಸೇವಕರನ್ನೊಳಗೊಂಡ ಹಳ್ಳಿಯ ರಕ್ಷಣಾ ಗಾರ್ಡ್ ನ್ನು ಆಡಳಿತ ಬಲಗೊಳಿಸಿತ್ತು. ಸಂಭಾವ್ಯ ಒಳನುಸುಳುವಿಕೆ ಮಾರ್ಗಗಳ ಮೇಲೆ ಹದ್ದಿನ ಕಣ್ಣು ಇಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಿಲ್ಲೆಯ ವಿವಿಧ ಕಡೆಗಳಲ್ಲಿ ಬರುವ ಉಗ್ರರ ಬಗ್ಗೆ ಸುಳಿವು ನೀಡುವವರಿಗೆ ರೂ.10 ಲಕ್ಷ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದರು.
ರಜೌರಿ ಉಗ್ರರ ದಾಳಿ ಪ್ರಕರಣ: ಮತ್ತೊಬ್ಬ ನಾಗರೀಕ ಸಾವು, ಮೃತರ ಸಂಖ್ಯೆ 7ಕ್ಕೆ ಏರಿಕೆದಾಳಿಗೂ ಮುನ್ನ ಉಗ್ರರು ಕಾಣಿಸಿಕೊಂಡ ವರದಿಯಾಗಿದ್ದ ಎರಡು ಡಜನ್ ಗೂ ಹೆಚ್ಚು ಹಳ್ಳಿಗಳಲ್ಲಿ ಸೇನೆ, ಪೊಲೀಸ್ ಮತ್ತು ಸಿಆರ್ ಪಿಎಫ್ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಆಯಾ ಕಟ್ಟಿನ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ದಾಳಿಗೂ ಮುನ್ನ ಉಗ್ರರು ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದ್ದು, ಶಂಕಿತ ವ್ಯಕ್ತಿಗಳ ವಿಚಾರಣೆ ವೇಳೆ ಅನೇಕರ ಪಾತ್ರ ಬೆಳಕಿಗೆ ಬಂದಿದೆ ಎಂದು ರಜೌರಿ ಹಿರಿಯ ಪೊಲೀಸ್ ಅಧೀಕ್ಷಕ ಮೊಹಮ್ಮದ್ ಅಸ್ಲಾಂ ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಷ್ಟೋ ಜನ ಸ್ಟಾರ್ ಮಕ್ಳು ಮನೆಗೆ ಹೋಗ್‌ಬಿಟ್ಟಿದ್ದಾರೆ!

Tue Jan 10 , 2023
ನೆಪೋಟಿಸಂ.. ಈ ಹಿಂದಿನಿಂದಲೂ ಸ್ಟಾರ್‌ಗಳ ಮಕ್ಕಳು ಚಿತ್ರರಂಗ ಪ್ರವೇಶಿಸಿದಾಗ ಟ್ರೋಲ್ ಮಾಡಲು ಬಳಸುತ್ತಾ ಬಂದಿರುವ ಒಂದು ಪದವಾಗಿದೆ. ಪ್ರತಿಭೆ ಇಲ್ಲದಿದ್ದರೂ ಅಪ್ಪ ಸ್ಟಾರ್, ಅಮ್ಮ ಸ್ಟಾರ್ ಎಂದು ಮಕ್ಕಳಿಗೆ ಅವಕಾಶ ಕೊಡುತ್ತಾರೆ ಎನ್ನುವ ಅಂಶವನ್ನೇ ನೆಪೋಟಿಸಂ ಎಂದು ಟ್ರೋಲ್ ಮಾಡುವ ನೆಟ್ಟಿಗರ ಗುಂಪು ಆರೋಪಿಸುತ್ತಾ ಬಂದಿದೆ.ಹೀಗೆ ಕೆಲವರು ಸ್ಟಾರ್ ಮಕ್ಕಳಿಗೆ ಅವಕಾಶ ನೀಡುವುದನ್ನು ನೆಪೋಟಿಸಂ ಎಂದು ವಿರೋಧಿಸಿದರೆ ಇನ್ನೂ ಕೆಲವರು ಇದರಲ್ಲಿ ತಪ್ಪೇನಿದೆ ಟ್ಯಾಲೆಂಟ್ ಇದ್ದವರು ಬೆಳೆಯುತ್ತಾರೆ, ಇಲ್ಲದಿದ್ದವರು ತೆರೆಮರೆಗೆ […]

Advertisement

Wordpress Social Share Plugin powered by Ultimatelysocial