ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿತರ 100 ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟಾರೆ ಮಹಾಮಾರಿ ಸೋಂಕಿತರ ಸಂಖ್ಯೆರಾಜ್ಯದಲ್ಲಿ  2282 ಕ್ಕೆ ಏರಿಕೆಯಯಾಗಿದೆ. ಕೆಲ ದಿನಗಳಿಂದ ಪ್ರತಿನಿತ್ಯ ಕನಿಷ್ಟ 100 ಪ್ರಕರಣಗಳು ಪತ್ತೆಯಾಗುತ್ತಿದೆ.ಇಂದು ರಾಜ್ಯದಲ್ಲಿ ಯಾದಗಿರಿ-14,ಹಾಸನ-13, ಬೆಳಗಾವಿ – 13, ದಾವಣಗೆರೆ – 10, ಬೀದರ್ – 10‌ ಪ್ರಕರಣಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ದಾಖಲಾಗಿವೆ. ಇನ್ನು ಸಂಜೆ ಎಷ್ಟು ಪ್ರಕರಣಗಳು ಪತ್ತೆಯಾಗಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಅಯೋಧ್ಯೆಯ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನ ಮುಖ್ಯಸ್ಥ ಮಹಾಂತ್​ ನೃತ್ಯ ಗೋಪಾಲ್​ ದಾಸ್​ ಅಯೋಧ್ಯೆಯಲ್ಲಿ ಇಂದಿನಿಂದ ರಾಮಮಂದಿರ ನಿರ್ಮಾಣದ ಕಾಮಗಾರಿ ಕಾರ್ಯ ಪ್ರರಂಭವಾಗಿದೆ ಹೇಳಿಕೆ ನೀಡಿದ್ದಾರೆ.  ಈ ಕಾಮಗಾರಿ ವೇಳೆಯಲ್ಲಿ ಶಿವಲಿಂಗ ಸೇರಿದಂತೆ ವಿವಿಧ ಮಾದರಿಯ ಕಲ್ಲಿನ ಸ್ತಂಭಗಳು ಸಿಕ್ಕಿರುವುದರಿಂದ ಅವಷೇಶನಗಳನ್ನು ತೆಗೆಯುವ ಕೆಲಸ ಸಂಪೂರ್ಣವಾಗಿದೆ.ಇಲ್ಲಿಯವರೆಗೂ  ಮಂದಿರ ನಿರ್ಮಾಣದ ಸ್ಥಳದಲ್ಲಿ ಭೂಮಿ ಸಮಮಟ್ಟ ಮಾಡುವ ಕಾರ್ಯ ನಡೆಯುತಿತ್ತು. ಮಾನಸಭವನದಲ್ಲಿರುವ ರಾಮಲಲ್ಲಾ ಹಾಗೂ ಬಾಲರಾಮನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, […]

ಚಾಮರಾಜನಗರ: ದೇಶದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದೆ. ಸುತ್ತಲೂ ರೆಡ್ ಝೋನ್ ಗಳಿರುವ ಪ್ರದೇಶಗಳಿಂದ ಸುತ್ತುವರೆದ ಚಾಮರಾಜನಗರ ಜಿಲ್ಲೆ ರಾಜ್ಯದ ಕೊರೊನಾ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗಡಿಗಳನ್ನು ಹೊಂದಿಕೊಂಡಿರುವ ಗಡಿ ಜಿಲ್ಲೆಯಾದರೂ ಕಳೆದ ೬೦ ದಿನಗಳಲ್ಲಿ ಒಂದೂ ಪ್ರಕರಣ ದಾಖಲಾಗದೇ ಹಸಿರು ವಲಯದಲ್ಲೇ ರಾಜ್ಯಕ್ಕೆ ಮಾದರಿಯಾಗಿದೆ. ಇಲ್ಲಿಯವರೆಗೆ ಕೊರೊನಾ ಕಾಣಿಸಿಕೊಳ್ಳದ ಚಾಮರಾಜನಗರ ಮಾತ್ರ ಜಿಲ್ಲೆಗೆ ಕೊರೊನಾ ಸೋಂಕು ತಗುಲದಂತೆ ಕಾಪಾಡುವುದು ದೊಡ್ಡ ಸವಾಲಾಗಿದೆ ಇದಕ್ಕೆ ಜಿಲ್ಲೆಯ ಜನತೆಯ ಸಹಕಾರ […]

ಕೋಟೆನಾಡು ಎಂದೇ ಪ್ರಸಿದ್ದವಾದ ಚಿತ್ರದುರ್ಗ ಇವತ್ತು ಒಂದೇ ದಿನ ಜಿಲ್ಲೆಯಲ್ಲಿ  20 ಹೊಸ ಕೊರೊನಾ  ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಇಂದು ಕೋವಿಡ್ ಸೋಂಕು ಪತ್ತೆಯಾದ ವ್ಯಕ್ತಿಗಳೆಲ್ಲರೂ ಉತ್ತರ ಪ್ರದೇಶ ಮೂಲದ ವಲಸೆ ಕಾರ್ಮಿಕರಾಗಿದ್ದು ಇವರೆಲ್ಲರನ್ನೂ ಕ್ವಾರೆಂಟೈನ್ ನಲ್ಲಿಡಲಾಗಿತ್ತು. ಉತ್ತರಪ್ರದೇಶ ಮೂಲದ ಈ ಕಾರ್ಮಿಕರು ತಮಿಳುನಾಡಿನಿಂದ ಒಂದೇ ಲಾರಿಯಲ್ಲಿ 57 ಜನ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ವೇಳೆ ಮೇ. 20ರಂದು ಇವರನ್ನು ಚಳ್ಳಕೆರೆ ಬಳಿ ಚೆಕ್ ಪೋಸ್ಟ್ ನಲ್ಲಿ ತಡೆದು ಥರ್ಮಲ್ […]

ಕ್ವಾರಂಟೈನ್ ನಲ್ಲಿದ್ದ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಬೆಳಿಗ್ಗನ ಜಾವ ಔರಾದ  ತಾಲೂಕಿನ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆದಿದೆ. ಬೀದರ ಜಿಲ್ಲೆ ಔರಾದ ತಾಲೂಕಿನ ನಾರಾಯಣಪೂರ ಗ್ರಾಮದ 22 ವರ್ಷದ ಯುವಕ  ಮುಂಬೈನಿಂದ ವಾಪಸ್ ಬಂದು ಮರಪಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ತನ್ನ ಹೆಂಡತಿಯೊಂದಿಗೆ ಕಳೆದ ಎಂಟು ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ. ಇಂದು ಮುಂಜಾನೆ ಪತ್ನಿ ಸ್ನಾನಕ್ಕೆಂದು ತೆರಳಿದಾಗ ಈತ […]

ಕೊರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಸಾವುಗಳು ಹೆಚ್ಚುತ್ತಿದ್ದು ಇದೀಗ ಕಲಬುರ್ಗಿಯ ಇಂದಿರಾ ನಗರದ ನಿವಾಸಿ 32 ವರ್ಷದ ‌ವ್ಯಕ್ತಿ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದರಿಂದ 14 ದಿನಗಳ ಕಾಲ ಕ್ವಾರಂಟೈನ್ ಮುಗಿಸಿ ಮನೆಗೆ ಹೋಗುವಂತೆ ಸೂಚಿಸಿತ್ತು. ಆದರೆ ಸಂಬಂಧಿಕರೊಬ್ಬರ ಬೈಕ್ ನಲ್ಲಿ ಮನೆಗೆ ತೆರಳುವಾಗ ಆ ವ್ಯಕ್ತಿ ಅಸ್ವಸ್ಥಗೊಂಡಿದ್ದ ಕೂಡಲೇ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ದುರಾದೃಷ್ಟ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಆಸ್ಪತ್ರೆಯಲ್ಲಿ  ಮೃತಪಟ್ಟಿದ್ದಾನೆ. ಈ ಪ್ರಕರಣಕ್ಕೆ […]

ದೆಹಲಿಯ ತುಘಲಕ್ ಬಾದ್ ಕೊಳಗೇರಿಯಲ್ಲಿ  ಇಂದು ತಡರಾತ್ರಿ  ಭಾರೀ ಪ್ರಮಾಣದ ಅಗ್ನಿ ಅನಾಹುತ ಸಂಭವಿಸಿದೆ. ನಂತರ ಸ್ಲಂ ನಲ್ಲಿ ಬೆಂಕಿ ಕಾಣಿಸಿಕೊಂಡಿತೆಂದು ಕರೆ ಬಂದ ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿಗಳು ಹಾಗೂ  ೩೦  ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಆಗಲೇ ೧,೦೦೦ ದಿಂದ ೧,೨೦೦ ಗುಡಿಸಲುಗಳಿಗೆ ಬೆಂಕಿ ಹೊತ್ತಿಕೊಂಡಿದ್ದವು ಎಂದು  ಉಪಪೊಲೀಸ್ ಆಯುಕ್ತ ರಾಜೇಂದ್ರ ಪ್ರಸಾದ್ ಮೀನಾ ತಿಳಿಸಿದ್ದಾರೆ. ಬೆಂಕಿ ದುರಂತ ಸಂಭವಿಸಿದ ತಕ್ಷಣ ಗುಡಿಸಲುಗಳಲ್ಲಿ ಮಲಗಿದ್ದವರು […]

ಅವನೇ ಶ್ರೀಮನ್ನಾರಾಯಣ ಚಿತ್ರದ ಸಹ ನಿರ್ಮಾಪಕರಾದ ಕೆ.ಎಚ್‌ ಪ್ರಕಾಶ್‌ ಶ್ರೀದೇವಿ ಎಂಟರ್‌ ಟೈನರ್ಸ್‌ ಬ್ಯಾನರ್‌ ಅಡಿ ಸೈಕಲಾಜಿಕಲ್‌ ಥ್ರಿಲ್ಲರ್‌ ಚಿತ್ರ  ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ  ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನ  ಜಿ. ಭರತ್‌ ವಹಿಸಿಕೊಂಡಿದ್ದಾರೆ. ಈ ಹಿಂದೆ ರೇಡಿಯೋ ಮತ್ತು ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ ಅನುಭವದೊಂದಿಗೆ  ಭರತ್‌ ಈ ಚಿತ್ರದ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಇದೊಂದು ಕಾಮಿಡಿ ಹಾರರ್‌ ಚಿತ್ರವಾಗಿದ್ದು, ಸದ್ಯಕ್ಕೆ ಇದರ ಪ್ರೀ-ಪ್ರೊಡಕ್ಷನ್‌ ಕೆಲಸಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಕಾಡಿನಲ್ಲಿರುವ […]

ಬೆಂಗಳೂರು: ಪಿ.ಯು.ಸಿ ಮಟ್ಟದಿಂದಲೇ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸುವ ಬಗ್ಗೆ ಪರಿಶೀಲಿಸುವಂತೆ ಸಿಎಂ ಯಡಿಯೂರಪ್ಪ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದ ಅವರು, ಆನ್ ಲೈನ್ ತರಗತಿಗಳು ಸಾಮಾನ್ಯ ತರಗತಿಗಳಿಗೆ ಹೋಲಿಸಿದರೆ, ಕಡಿಮೆ ವೆಚ್ಚದ್ದಾಗಿದ್ದು, ಈ ವ್ಯವಸ್ಥೆಯನ್ನು ಪಿ.ಯು ಮಟ್ಟದಿಂದಲೇ ಆರಂಭಿಸಲು ಕ್ರಮಕೈಗೊಳ್ಳುವಂತೆ ಹೇಳಿದರು. ಕೊರೊನಾ ಹಿನ್ನೆಲೆಯಲ್ಲಿ ಆನ್ ಲೈನ್ ತರಗತಿಗಳ ಮೂಲಕ ಪಠ್ಯಕ್ರಮವನ್ನು ಪೂರ್ಣಗೊಳಿಸಿ, ವಿದ್ಯಾರ್ಥಿಗಳಿಗೆ ಪರೀಕ್ಷೆ […]

ಬೆಂಗಳೂರು: ಭಾರತದ ಮೂರನೇ ಅತಿದೊಡ್ಡ ದ್ವಿಚಕ್ರ ತಯಾರಕ ಕಂಪನಿ ಟಿವಿಎಸ್ ಮೋಟಾರ್ ಕಂಪನಿಯು ತನ್ನ ಉದ್ಯೋಗಿಗಳಿಗೆ ತಾತ್ಕಾಲಿಕ ಸಂಬಳ ಕಡಿತವನ್ನು ಘೋಷಿಸಿದೆ. ಕೊರನಾವೈರಸ್ ದೆಸೆಯಿಂದ ಲಾಕ್ಡೌನ್ ಆಗಿ ಉತ್ಪಾದನೆ ಸ್ಥಗಿತಗೊಳಿಸಿದ್ದರಿಂದ ಸಂಸ್ಥೆಗೆ ತಕ್ಕಮಟ್ಟಿನ ನಷ್ಟ ಉಂಟಾಗಿದೆ. ವೇಣು ಶ್ರೀನಿವಾಸನ್ ನೇತೃತ್ವದ ಕಂಪನಿಯು ತನ್ನ ಎಕ್ಸಿಕ್ಯೂಟಿವ್ ಸ್ತರದ ಉದ್ಯೋಗಿಗಳ ಸಂಬಳವನ್ನು ಮಾತ್ರ ಕಡಿತಗೊಳಿಸುತ್ತಿರುವುದಾಗಿ ಘೋಷಿಸಿದೆ. ಅಕ್ಟೋಬರ್ ತಿಂಗಳ ತನಕ ಸಂಬಳ ಕಡಿತ ಜಾರಿಯಲ್ಲಿರುತ್ತದೆ. ಮೇ ತಿಂಗಳಿನಿAದ ಅಕ್ಟೋಬರ್ ೨೦೨೦ರ ತನಕ ಇದು […]

Advertisement

Wordpress Social Share Plugin powered by Ultimatelysocial