ಲಾಕ್‌ಡೌನ್ ಸಂದರ್ಭದಲ್ಲಿ ಜನರನ್ನು ದಾರಿ ತಪ್ಪಿಸುವ ಹೇಳಿಕೆಯನ್ನ ನೀಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕಾಂಗ್ರೆಸ್ ದೂರು ನೀಡಿದೆ. ದೇಶದಲ್ಲಿ ಕೋವಿಡ್‌19 ನಿಯಂತ್ರಣಕ್ಕೆ ಬರಲು ಪ್ರಧಾನಿ ನರೇಂದ್ರ ಮೋದಿ ಕಾರಣ ಎಂದಿದ್ದಾರೆ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆಯಲ್ಲಿ ಪ್ರಧಾನಿ ಮೋದಿಗೆ ಅವಕಾಶ ಕೊಟ್ಟಿದ್ದಾರೆ ಎಂದು ತಮ್ಮ ಭಾಷಣದಲ್ಲಿ ಹೇಳಿದ್ದಾರೆ. ಜಾವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಾಗಿಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಜನರನ್ನ ದಾರಿತಪ್ಪಿಸುತ್ತಿದ್ದಾರೆ. […]

ಭಾರತ ಹಾಗೂ ಚೀನಾ ಗಡಿ ವಿವಾದ ಸಂಬಂಧ ಮಧ್ಯಸ್ಥಿಕೆ ವಹಿಸಲು ಅಮೆರಿಕ ಸಿದ್ಧವಾಗಿದೆ ಎಂಬುದನ್ನು ಎರಡೂ ದೇಶಗಳಿಗೆ ತಿಳಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚೀನಾ ಮೇಲೆ ಆರೋಪಗಳ ಸುರಿಮಳೆಗೈದಿರುವ ಡೊನಾಲ್ಡ್ ಟ್ರಂಪ್ ಹೇಳಿಕೆಯು ಹೆಚ್ಚಿನ ಮಹತ್ವ ಗಿಟ್ಟಿಸಿಕೊಂಡಿದೆ. ಅಂದು ಅಮೆರಿಕ ಸಲಹೆಯನ್ನು ಭಾರತ ನಿರಾಕರಿಸಿತ್ತು. ಇದೀಗ ಅಮೆರಿಕ ಜೊತೆಗೆ ಉತ್ತಮ ಒಡನಾಟವನ್ನು ಹೊಂದಿರುವ ಭಾರತ ಯಾವ ನಿಲುವನ್ನು ತೆಗೆದುಕೊಳ್ಳಲಿದೆ ಎಂಬದನ್ನು […]

ಐಐಟಿ ವಿದ್ಯಾರ್ಥಿಗಳು ಮಿತ್ರೋ ಅಪ್ಲಿಕೇಶನ್ ಅಭಿವೃದ್ಧಿಪಡಿಸಿದ್ದಾರೆ. ಇದು ಚೀನೀ ಅಪ್ಲಿಕೇಶನ್ ಟಿಕ್ಟಾಕ್ನಂತೆಯೇ ಕಾರ್ಯ ನಿರ್ವಹಿಸುತ್ತದೆ. ಸಣ್ಣ ವೀಡಿಯೊಗಳನ್ನು ತಯಾರಿಸಲು ಮತ್ತು ಪೋಸ್ಟ್ ಮಾಡಲು ಟಿಕ್ಟಾಕ್ ಜನಪ್ರಿಯವಾಗಿದೆ. ಕೊರೊನಾ ನಂತರ ಯುವಕರು ಚೀನಾ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರಧಾನಿ ಕೂಡ ದೇಶಿ ವಸ್ತುಗಳ ಬಳಕೆಗೆ ಒತ್ತು ನೀಡಿದ್ದಾರೆ. ಪ್ರಧಾನಿ ಮೋದಿ ಹೆಚ್ಚಾಗಿ ಬಳಸುವ ಮಿತ್ರೋ ಹೆಸರನ್ನು ಇದಕ್ಕೆ ಇಡಲಾಗಿದೆ. ಪ್ರಾರಂಭವಾದ ಒಂದು ತಿಂಗಳಲ್ಲಿ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಿಂದ […]

ಶೋಪಿಯಾನ್ : ರೆಡ್​ ಝೋನ್​ನಿಂದ ಆಗಮಿಸಿದ್ದಕ್ಕಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಅಧಿಕಾರಿಗಳು ಕ್ವಾರಂಟೈನ್​ನಲ್ಲಿ ಇರಿಸಿದ್ದಾರೆ.ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಕೊರೊನಾ ಪ್ರಕರಣಗಳು ಅಧಿಕವಾಗಿರುವುದರಿಂದ ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ. ರಜೌರಿಯಿಂದ ಶೋಪಿಯಾನ್​ಗೆ ಆಗಮಿಸಿಸಿದ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ.ಈ ಬಗ್ಗೆ ಮಾತನಾಡಿರುವ ತಹಶೀಲ್ದಾರ್ ​’ರಜೌರಿ ರೆಡ್​ ಝೋನ್ ಆಗಿದೆ. ಹೀಗಾಗಿ ಕುದುರೆ ಮತ್ತು ಅದರ ಮಾಲೀಕನನ್ನು ಕ್ವಾರಂಟೈನ್​ನಲ್ಲಿ ಇರಿಸಲಾಗಿದೆ. ಮಾಲೀಕನನ್ನು ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಇರಿಸಿದ್ರೆ, […]

ಉತ್ತರ ಪ್ರದೇಶದ : ಉತ್ತರ ಪ್ರದೇಶದ ಅಲಿಗಢದಲ್ಲಿ ಕೊರೊನಾ ವೈರಸ್ ಕಂಟೈನ್‌ಮೆಂಟ್‌ ಝೋನ್ ಒಂದರಲ್ಲಿ ಸಂಭ್ರಮವೋ ಸಂಭ್ರಮ. ಸಾಮಾನ್ಯವಾಗಿ ಈ ವಲಯದಲ್ಲಿ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಆದ್ರೆ, ವ್ಯಕ್ತಿಯೊಬ್ಬ ತನ್ನ 25ನೇ ವಿವಾಹ ವಾರ್ಷಿಕೋತ್ಸವವನ್ನು ಅದ್ದೂರಿಯಾಗಿ ಆಚರಿಸಿ ಇದೀಗ ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಕಂಟೈನ್‌ಮೆಂಟ್‌ ಝೋನ್‌ನಲ್ಲಿ ಕಾನೂನು ಪಾಲಿಸದೆ, ಸಾಮಾಜಿಕ ಅಂತರ ಪಾಲಿಸದೆ 15ಕ್ಕೂ ಹೆಚ್ಚು ಜನರನ್ನು ಸೇರಿಸಿ ಬೇಜವಾಬ್ದಾರಿತನ ಮೆರೆದಿದ್ದಾನೆ. ವಿವಾಹ ವಾರ್ಷಿಕೋತ್ಸವದ ಬೆಳ್ಳಿ ಹಬ್ಬ ಆಚರಿಸಿದ […]

ಅರ್ಜೆಂಟೀನಾ: ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಗಿಳಿಯ ಮಾತನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿಸಿರುವ ಘಟನೆ ಅರ್ಜೆಂಟೀನಾದಲ್ಲಿ ನಡೆದಿದೆ. 46 ವರ್ಷದ ಎಲಿಜಬೆತ್ ಎಂಬ ಮಹಿಳೆ 2018ರ ಡಿಸೆಂಬರ್‌ನಲ್ಲಿ ಕೊಲೆಯಾಗಿದ್ದರು. ಅಪರಾಧ ಸ್ಥಳವನ್ನು ಹುಡುಕುತ್ತಿದ್ದ ಪೊಲೀಸರಿಗೆ ಅವರ ಮನೆಯಲ್ಲಿದ್ದ ಗಿಳಿಯ ಮಾತು ಸುಳಿವೊಂದನ್ನು ನೀಡಿತ್ತು. ಗಿಳಿಯು ತನ್ನ ಮಾಲೀಕರ ಕೊನೆಯ ಮಾತುಗಳನ್ನು ಪುನರಾವರ್ತಿಸುತ್ತಿತ್ತು. ಇದನ್ನು ಪೊಲೀಸರು ನಂಬಿದ್ದಾರೆ.‌ ಜತೆಗೆ ನೆರೆ ಮನೆಯವರೂ ಸಹ ಗಿಳಿಯ ಮಾತನ್ನು ಪುನರುಚ್ಛರಿಸಿದ್ದಾರೆ. At, no, […]

ಅಸ್ಸಾಂ: ರೇಷ್ಮೆ ಪಂಚೆ, ರೇಷ್ಮೆ ಸೀರೆ, ರೇಷ್ಮೆ ಶಲ್ಯ ನೋಡಿದ್ದ ಜನತೆಗೆ ಈಗ ರೇಷ್ಮೆ ಕುಸುರಿಯನ್ನು ಒಳಗೊಂಡ ಮಾಸ್ಕ್ ಪರಿಚಯವಾಗಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ ವಧು-ವರರು ಸಾಂಪ್ರದಾಯಿಕ ರೇಷ್ಮೆ ಮಾಸ್ಕನ್ನು ಧರಿಸಿ ಗಮನ ಸೆಳೆದಿದ್ದಾರೆ. ಮದುವೆ ಫೋಟೋ, ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ಜಾಲತಾಣಿಗರ ಮನಗೆದ್ದಿದೆ. ಕೊರೋನ ವೈರಸ್ ಹಿನ್ನೆಲೆ ಮಾಸ್ಕ್ ಧರಿಸುವುದು ಕಡ್ಡಾಯ, ಮದುವೆ ಸಮಾರಂಭದಲ್ಲಿ‌ ಮಾಸ್ಕ್ ವಧೂವರರ ಅಲಂಕಾರದ ಸೊಬಗನ್ನೇ ಅಧಿಕ ಗೊಳಿಸಿದೆ. ಅಸ್ಸಾಂನಲ್ಲಿ ನಡೆದ ಮದುವೆಯಲ್ಲಿ […]

ಕೊರೊನಾ ಲಾಕ್‌ಡೌನ್ ಸಂಬಂಧ ಇಎಂಐ ಮುಂದೂಡಿಕೆಯ ಅವಧಿಯಲ್ಲಿ ಬಡ್ಡಿ ದರ ವಿಧಿಸುವ ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿದ್ದ ಅರ್ಜಿ ಸಂಬಂಧ, ಕೇಂದ್ರ ಸರಕಾರ ಹಾಗೂ ಆರ್‌ಬಿಐಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನೋಟಿಸ್‌ ನೀಡಿದೆ. ಬ್ಯಾಂಕ್‌ಗಳ ನಿರ್ಧಾರ ಪ್ರಶ್ನಿಸಿರುವ ಅರ್ಜಿದಾರರು ಇಎಂಐ ಮುಂದೂಡಿಕೆ ಅವಧಿಯಲ್ಲಿ ಬಡ್ಡಿ ಮನ್ನಾಕ್ಕೆ ಒತ್ತಾಯಿಸಿದ್ದಾರೆ. ಉತ್ತರ ಪ್ರದೇಶದ ನಿವಾಸಿ ಗಜೇಂದ್ರ ಶರ್ಮಾ ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿರುವ ಸುಪ್ರೀಂ ಕೋರ್ಟ್‌, ಕೇಂದ್ರ ಮತ್ತು ಆರ್‌ಬಿಐನಿಂದ ವಿವರಣೆ ಕೇಳಿದೆ. ಮುಂದಿನ […]

ಗುಜರಾತ: ಅಜ್ಜಿಯೊಬ್ಬರು  ವಿಷಕಾರಿ ಹಾವನ್ನು ಕೈಯಲ್ಲಿ ಹಿಡಿದು ದರದರನೆ ಎಳೆದೊಯ್ದು ದೂರಕ್ಕೆ ಎಸೆದಿರುವ ಘಟನೆ ಗುಜರಾತಿನ ಗ್ರಾಮಾಂತರ ಪ್ರದೇಶದಲ್ಲಿ  ನಡೆದಿದೆ. ಈ ವಿಡಿಯೋ ಈಗ ವೈರಲ್ ಆಗಿದೆ. ನೆಟ್ಟಿಗರು ಈ ಅಜ್ಜಿಯ ಧೈರ್ಯವನ್ನು ಮೆಚ್ಚಿ ಕಾಮೆಂಟ್ ಗಳನ್ನು ಮಾಡಿ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.  ಅರಣ್ಯ ಇಲಾಖೆಯ ಅಧಿಕಾರಿ ಸುಸಾಂತ್ ನಂದಾ ಅವರು ಈ ವಿಡಿಯೋವನ್ನು ಹಂಚಿಕೊಂಡಿದ್ದು ಅದನ್ನು ನಾಗರಹಾವು ಎಂದು ಗುರುತಿಸಿದ್ದಾರೆ. ಈ ವಿಡಿಯೋದಲ್ಲಿ ಅಜ್ಜಿಯು ಅಳುಕಿಲ್ಲದೇ ಹಾವನ್ನು ಎಳೆದುಕೊಂಡು ಹೋಗುವುದನ್ನು […]

ಉತ್ತರ ಪ್ರದೇಶ: ಉತ್ತರಪ್ರದೇಶದಲ್ಲಿ   ಜನಿಸಿದ ಅವಳಿ ಶಿಶುಗಳಿಗೆ ಪೋಷಕರು ಸ್ಯಾನಿಟೈಸರ್ ಹಾಗೂ ಕ್ವಾರಂಟೈನ್ ಎಂದು ಹೆಸರಿಟ್ಟಿದ್ದಾರೆ. ಈ ಹಿಂದೆ  ಲಾಕ್‌ಡೌನ್ ನಡುವೆ ಜನಿಸಿದ ಮಕ್ಕಳಿಗೆ ಕೊರೊನಾ, ಕೋವಿಡ್, ಲಾಕ್ಡೌನ್ ಎಂಬ ಹೆಸರಗಳನ್ನು ಇಟ್ಟಿರುವ ಸುದ್ದಿಗಳನ್ನು ಈ ನೋಡಿದ್ದೇವೆ. ಇನ್ನೂ ತಮ್ಮ ಅವಳಿ ಮಕ್ಕಳಿಗೆ ಹೆಸರಿಟ್ಟಿರುವುದಕ್ಕೆ  ಸೂಕ್ತ ಕಾರಣವನ್ನೂ ಪೋಷಕರು ನೀಡಿದ್ದಾರೆ. ಕೊರೊನಾ ವೈರಸ್‌ನಿಂದ ದೂರ ಇರಲು ಆಗಾಗ ಸ್ಯಾನಿಟೈಸರ್ ಮೂಲಕ ಕೈ ತೊಳೆದುಕೊಳ್ಳಬೇಕಾದ್ದು ಅನಿವಾರ್ಯ. ಹಾಗೆಯೇ ದೂರದ ಊರುಗಳಿಂದ ಬಂದವರು […]

Advertisement

Wordpress Social Share Plugin powered by Ultimatelysocial