ಬೆಂಗಳೂರು: ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆ ನೌಕರರಿಗೆ ವಾರ್ಷಿಕ 15 ದಿನಗಳ ಸಾಂದರ್ಭಿಕ ರಜೆಯನ್ನು ಮಂಜೂರು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸರ್ಕಾರಿ ಕಚೇರಿಗಳಿಗೆ ಪ್ರತಿ ತಿಂಗಳು 2 ಹಾಗೂ 4ನೇ ಶನಿವಾರ ಸಾರ್ವತ್ರಿಕ ರಜೆ ಘೋಷಿಸಿದ ಹಿನ್ನೆಲೆಯಲ್ಲಿ ವಾರ್ಷಿಕ 15 ಸಾಂದರ್ಭಿಕ ರಜೆಗಳನ್ನು 10ಕ್ಕೆ ಇಳಿಸಲಾಗಿತ್ತು. ಆದರೆ, ಪೊಲೀಸ್, ಆರೋಗ್ಯ, ಶಿಕ್ಷಣ ಇಲಾಖೆಯ ಸಿಬ್ಬಂದಿ ಈ ರಜೆಗಳಿಂದ ವಂಚಿತರಾಗುತ್ತಿದ್ದರು. ಈ ಹಿನ್ನೆಲೆಯಲ್ಲಿ ಸಾಂದರ್ಭಿಕ ರಜೆ ಹೆಚ್ಚಿಸುವಂತೆ ಒತ್ತಾಯ ಕೇಳಿಬಂದಿತ್ತು. […]

ನವದೆಹಲಿ: ಗುರುಗ್ರಾಮ ಮತ್ತು ದೆಹಲಿ ನಡುವಿನ ರಸ್ತೆಯನ್ನು ಹರಿಯಾಣ ಸರ್ಕಾರ ನಿನ್ನೆ ರಾತ್ರಿ ಬಂದ್ ಮಾಡಿದ್ದರಿಂದ ಗಡಿ ರಸ್ತೆಯಲ್ಲಿ ಟ್ರಾಫಿಕ್‌ ಜಾಮ್ ಉಂಟಾಗಿತ್ತು. ಇದರಿಂದ ಗೊಂದಲಕ್ಕೆ ಒಳಗಾದ ವಾಹನ ಸವಾರರು ಪ್ರತಿಭಟನೆ ನಡೆಸಿದರು. ಗಡಿಯಲ್ಲಿ ಬಹುತೇಕ ವಲಸೆ ಹಾಗೂ ಕೂಲಿ ಕಾರ್ಮಿಕರು ಇದ್ದರು. ಸೈಕಲ್‌ಗಳು ಹಾಗೂ ದ್ವಿಚಕ್ರ ವಾಹನಗಳು, ಕಾರುಗಳು, ಲಘು ವಾಣಿಜ್ಯ ವಾಹನಗಳ ಮೂಲಕ ತಮ್ಮ ಸ್ವಂತ ಊರುಗಳಿಗೆ ತೆರಳಲು ಮುಂದಾಗಿದ್ದರು. ಈ ವೇಳೆ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರನ್ನು […]

ನವದೆಹಲಿ: ಸಂಸತ್‌ನ ರಾಜ್ಯಸಭೆಯ ಕಚೇರಿಯಲ್ಲಿ ಕೆಲಸ ಮಾಡುವ ಅಧಿಕಾರಿಯೊಬ್ಬರಲ್ಲಿ ಕೊರೊನಾ ವೈರಸ್ ಸೋಂಕು ದೃಢಪಟ್ಟಿದೆ.ಅಧಿಕಾರಿಗೆ ಸೋಂಕು ತಗುಲಿರುವ ಕಾರಣ ರಾಜ್ಯಸಭೆ ಕಚೇರಿಯ ಒಂದು ಭಾಗವನ್ನು ಸೀಲ್‌ಡೌನ್ ಮಾಡಲಾಗಿದೆ. ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕ ಹೊಂದಿದ್ದವರ ಮೇಲೆ ಆರೋಗ್ಯ ಅಧಿಕಾರಿಗಳು ನಿಗಾವಹಿಸಿದ್ದಾರೆ ಎಂದು ತಿಳಿದುಬಂದಿದೆ.

ಪಟ್ನಾ:  ಊಟ ಇಲ್ಲದೇ ವಲಸೆ ಕಾರ್ಮಿಕರು  ಸತ್ತ ಸುದ್ದಿಗಳು ಸದ್ದು ಮಾಡುತ್ತಿರುವಾಗಲೇ ಬಿಹಾರದ ಕ್ವಾರಂಟೈನ್‌ ಕೇಂದ್ರದಲ್ಲಿ23 ವರ್ಷದ ಕಾರ್ಮಿಕನೊಬ್ಬ ಪ್ರತಿ ದಿನ ಬೆಳಗಿನ ಉಪಾಹಾರಕ್ಕೆ 40 ರೋಟಿ ಮತ್ತು ಮಧ್ಯಾಹ್ನ ಬರೋಬ್ಬರಿ 10 ಪ್ಲೇಟ್‌ ಅನ್ನ ಊಟ ಮಾಡುತ್ತಿರುವ ಸೋಜಿಗದ ಪ್ರಕರಣ ವರದಿಯಾಗಿದೆ. ರಾಜಸ್ಥಾನದಿಂದ ಮರು ವಲಸೆ ಬಂದು ಬಿಹಾರದ ಬಕ್ಸರ್‌ನ ಮಂಝ್ವಾರಿ ಕ್ವಾರಂಟೇನ್‌ ಕೇಂದ್ರದಲ್ಲಿಇರುವ ಅನುಪ್‌ ಓಝಾ ಅಧಿಕಾರಿಗಳನ್ನು ದಿಕ್ಕೆಡಿಸಿರುವ ಕಾರ್ಮಿಕ. ಓಝಾ ತಿನ್ನುವ ದೈತ್ಯ ಸ್ವರೂಪದ ಬಗ್ಗೆ ಕ್ವಾರಂಟೈನ್‌ […]

ತಿರುವನಂತಪುರ: ಮಾಜಿ ಕೇಂದ್ರ ಸಚಿವ, ರಾಜ್ಯ ಸಭಾ ಸದಸ್ಯ, ಬರಹಗಾರ ವಿರೇಂದ್ರ ಕುಮಾರ್ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದ 84 ವರ್ಷ ಪ್ರಾಯದ ವಿರೇಂದ್ರ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಸುದ್ದಿಸಂಸ್ಥೆಗಳಾದ ಪಿಟಿಐ ಮತ್ತು ಐಎನ್ ಎಸ್ ಗಳ ಅಧ್ಯಕ್ಷರು ಮತ್ತು ಮಾತೃಭೂಮಿ ಪತ್ರಿಕೆಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಲೋಕತಾಂತ್ರಿಕ ಜನತಾದಳದ ಅಧ್ಯಕ್ಷರಾಗಿದ್ದ ವಿರೇಂದ್ರ ಕುಮಾರ್ ಅವರು ಅನಾರೋಗ್ಯದಿಂದ ಇತ್ತೀಚೆಗೆ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದರು.

ನವದೆಹಲಿ:ಅನಾರೋಗ್ಯದ ಲಕ್ಷಣಗಳಿರುವವರು ರೈಲು ಸಂಚಾರ ಮಾಡಬೇಡಿ ಎಂದು ರೈಲ್ವೆ ಇಲಾಖೆ ಆದೇಶಿಸಿದೆ. ಲಾಕ್​ಡೌನ್​​​ನಿಂದಾಗಿ ದೇಶದ ವಿವಿಧೆಡೆ ಸಿಲುಕಿರುವ ವಲಸಿಗರನ್ನು ಮರಳಿ ತಮ್ಮ ಊರುಗಳಿಗೆ ಕಳುಹಿಸಲು ಭಾರತೀಯ ರೈಲ್ವೆ ದೇಶಾದ್ಯಂತ ಪ್ರತಿದಿನ ಶ್ರಮಿಕ್ ವಿಶೇಷ ರೈಲು ವ್ಯವಸ್ಥೆ ಮಾಡಿದೆ. ಆದರೆ ರೈಲು ಪ್ರಯಾಣ ಮಾಡುತ್ತಿರುವ ಕೆಲವರಲ್ಲಿ ಕೊರೊನಾ ಸಾಂಕ್ರಾಮಿಕ ರೋಗದ ಅವಧಿಯಲ್ಲಿಯೇ ಅನಾರೋಗ್ಯದ ಲಕ್ಷಣಗಳು ಕಂಡುಬಂದಿದ್ದರೂ ತಮ್ಮ ಊರು ತಲುಪಬೇಕೆಂಬ ಆತುರದಲ್ಲಿ ರೈಲು ಸಂಚಾರ ಮಾಡುತ್ತಿದ್ದಾರೆ. ಮೊದಲೇ ಅನಾರೋಗ್ಯದ ಲಕ್ಷಣಗಳು ಕಾಣಿಸಿಕೊಂಡಿದ್ದಾಗ್ಯೂ […]

ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್ ಮತ್ತು ಮಹಾರಾಷ್ಟ್ರಗಳ ಸುಮಾರು 100 ಜಿಲ್ಲೆಗಳ ಮೇಲೆ ಲಕ್ಷಾಂತರ ಮಿಡತೆಗಳು ದಾಳಿ ಮಾಡಿದ್ದು, ಮುಂದಿನ ಕೆಲವು ವಾರಗಳಲ್ಲಿ ದೇಶದ 12 ರಾಜ್ಯಗಳಿಗೆ ತಲುಪಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಪಾಕಿಸ್ತಾನದಿಂದ ಮತ್ತೊಂದು ಮಿಡತೆ ಸಮೂಹವು ಜೂನ್ ಮಧ್ಯಭಾಗದಲ್ಲಿ ಭಾರತವನ್ನು ಪ್ರವೇಶಿಸುವ ನಿರೀಕ್ಷೆಯಿದೆ, ಇದು ಭಾರತದಲ್ಲಿ ಮಿಡತೆಗಳ ಚಟುವಟಿಕೆಗಳನ್ನು ಮತ್ತಷ್ಟು ಹೆಚ್ಚಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈಗ ದಾಳಿಯಿಟ್ಟಿರುವ ಮರಭೂಮಿಯ ಸಣ್ಣ-ಕೊಂಬಿನ ಮಿಡತೆ ಸಮೂಹ, […]

ಪಾರ್ಟಿಯಲ್ಲಿ ಭಾಗಿಯಾಗಿ ಕುಣಿದು ಕುಪ್ಪಳಿಸಿದ ನಂತರ ಕುಸಿದು ಬಿದ್ದ ಆಂಧ್ರ ಪ್ರದೇಶದ ಬಿಜೆಪಿ ಅಧ್ಯಕ್ಷ ಕನ್ನಾ ಲಕ್ಷ್ಮಿ ನಾರಾಯಣ್ ಸೊಸೆ ಸುಹಾರಿಕ ರೆಡ್ಡಿ ಸಾವನ್ನಪ್ಪಿದ್ದಾರೆ. ಈ ನಿಗೂಢ ಸಾವು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಇದ್ದಕ್ಕಿದ್ದಂತೆ ಸುಹಾರಿಕ ಬಿದ್ದು ಸಾವನ್ನಪ್ಪಿರುವುದು ಆತಂಕ ಮೂಡಿಸಿದೆ. ಹೈದರಾಬಾದ್ ನ ಮೀನಾಕ್ಷಿ ಟವರ್ ನಲ್ಲಿ ಸುಹಾರಿಕ ಫ್ರೆಂಡ್ ಪಾರ್ಟಿಯನ್ನು ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಸುಹಾರಿಕ ಸುಮಾರು ಒಂದು ಗಂಟೆಯವರೆಗೆ ಡಾನ್ಸ್ ಮಾಡಿದ್ದರಂತೆ. ಇವರ […]

ನವದೆಹಲಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲೆಗಳಿಂದ ಹಿಡಿದು ವಿವಿಧ ತರಗತಿಗಳು ಆನ್ ಲೈನ್ ನಲ್ಲಿ ನಡೆಯುತ್ತಿವೆ. ಆನ್ ಲೈನ್ ಕ್ಲಾಸ್ ಇರುವುದರಿಂದ ತಮ್ಮ ಬಳಿ ಸ್ಮಾರ್ಟ್ ಪೋನ್ ಇಲ್ಲ ಎಂದು 29 ವರ್ಷದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದೆಹಲಿಯ ಮೈದಾನಗರ್ಹಿಯಲ್ಲಿ ನಡೆದಿದೆ. ಜ್ಯೋತಿ ಮಿಶ್ರಾ ಅವರ ಮಕ್ಕಳಿಗೆ ಆನ್ ಲೈನ್ ತರಗತಿಗಳು ನಡೆಯುತ್ತಿದ್ದು, ಮಕ್ಕಳಿಗೆ ತರಗತಿಗಳು ಮಿಸ್ ಆಗಿ ಅವರ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎಂದು ಅವರ […]

ಶಿಡ್ಲಘಟ್ಟ : ಕೊರೋನಾ ವಿರುದ್ದ  ರಾತ್ರಿ –ಹಗಲು ಹೋರಾಡುತ್ತಿರುವ  ವಾರಿಯರ್ಸ್ ಮಕ್ಕಳಿಗೆ  ತಾಲ್ಲೂಕಿನಾದ್ಯಂತ ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 2020-21 ನೇ ಸಾಲಿನ ಭೋದನಾ ಶುಲ್ಕದಲ್ಲಿ 500-1000 ರೂಪಾಯಿಗಳವರೆಗೆ ರಿಯಾಯಿತಿ ನೀಡಲಾಗುವುದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಅಧ್ಯಕ್ಷ ವಿಸ್ಡಮ್  ನಾಗರಾಜ್ ತಿಳಿಸಿದರು.   ಖಾಸಗಿ ಶಾಲೆಗಳಿಗೆ ಬರಬೇಕಾಗಿರುವ 2019-20 ನೇ ಸಾಲಿನ RTE ಹಣ ಮರುಪಾವತಿ ಮಾಡು ಬಗ್ಗೆ ಹಾಗೂ ಕೊರೊನಾದಂತಹ ಸಂದಿಗ್ದ ಪರಿಸ್ತಿತಿಯಲ್ಲಿ ಖಾಸಗಿ […]

Advertisement

Wordpress Social Share Plugin powered by Ultimatelysocial