ನಟ ಸೋನು ಸೂದ್ ಅನೇಕ ದಿನಗಳಿಂದ ಸುದ್ದಿಯಲ್ಲಿದ್ದಾರೆ. ಸೋನು ಸೂದ್ ಅನೇಕ ಕಾರ್ಮಿಕರ ನೆರವಿಗೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸೋನು ಸೂದ್ ನೆರವಿನ ಹಸ್ತ ಚಾಚುವುದಾಗಿ ಹೇಳಿದ್ದರು. ಅವ್ರ ಈ ಹೇಳಿಕೆ ನಂತ್ರ ಚಿತ್ರವಿಚಿತ್ರ ವಿನಂತಿಗಳು ಬರ್ತಿವೆ. ಈಗ ಮಹಿಳೆಯೊಬ್ಬಳು ಸೋನು ಸೂದ್ ಗೆ ಸಹಾಯ ಮಾಡುವಂತೆ ಕೇಳಿದ್ದಾಳೆ. ಲಾಕ್ ಡೌನ್ 4 ಮುಗಿಯುವವರೆಗೂ ನಾನು ಗಂಡನ ಜೊತೆಗಿದ್ದೆ. ಇನ್ನು ಇರಲು ಸಾಧ್ಯವಿಲ್ಲ. ನನ್ನನ್ನು ನನ್ನ ತಾಯಿ ಮನೆಗೆ ಕಳುಹಿಸುತ್ತೀರಾ […]

ಲಾಕ್ ಡೌನ್ ಸಂದರ್ಭದಲ್ಲಿ ಜನರು ಊರು ತಲುಪಲು ಸಾಕಷ್ಟು ಕಸರತ್ತು ನಡೆಸಿದ್ದಾರೆ. ಕೆಲವರು ಕಾಲ್ನಡಿಗೆಯಲ್ಲಿ ಊರು ತಲುಪಿದ್ರೆ ಮತ್ತೆ ಕೆಲವರು ಬೈಕ್ ಮೂಲಕ ಮನೆ ಸೇರಿದ್ದರು. ಈ ಎಲ್ಲದರ ಮಧ್ಯೆ ತಮಿಳುನಾಡಿನ ವ್ಯಕ್ತಿಯೊಬ್ಬ ಗಮನ ಸೆಳೆದಿದ್ದಾರೆ. ಕೊಯಮತ್ತೂರಿನ ಟೀ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದ ವ್ಯಕ್ತಿ ಹೆಂಡತಿ, ಮಕ್ಕಳನ್ನು ಮನೆಗೆ ತಲುಪಿಸಲು ಬೈಕ್ ಕದ್ದಿದ್ದಾನೆ. ಎರಡು ವಾರಗಳ ನಂತ್ರ ಬೈಕ್ ಪಾರ್ಸಲ್ ಮಾಡಿದ್ದಾನೆ. ವ್ಯಕ್ತಿ ಉದ್ಯಮಿಯೊಬ್ಬರ ಬೈಕ್ ಕದ್ದಿದ್ದ. ಪಾರ್ಸಲ್ ಕಂಪನಿ […]

ಉತ್ತರ ಪ್ರದೇಶ: ಕಾನ್ಪುರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆಯೊಬ್ಬರು ಮಾತನಾಡಿರುವ ವಿಡಿಯೋ ಒಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ತಬ್ಲಿಘಿ ಜಮಾತ್‌ ಸದಸ್ಯರನ್ನು ಅವರು ಭಯೋತ್ಪಾದಕರು ಎಂದು ಕರೆದಿದ್ದಾರೆ. ತಮ್ಮ ಕಚೇರಿಯಲ್ಲಿ ಹಲವು ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಪ್ರಾಂಶುಪಾಲೆ. ಕೊರೊನಾ ಸೋಂಕು ಅಂಟಿಸಿಕೊಂಡ ತಬ್ಲಿಘಿ ಜಮಾತ್‌ ಸಂಘಟನೆ ಸದಸ್ಯರಿಗೆ ಸರ್ಕಾರ ಉಚಿತವಾಗಿ ಚಿಕಿತ್ಸೆ ನೀಡುತ್ತಿದೆ ಎಂದಿದ್ದಾರೆ. ತಬ್ಲಿಘಿ ಜಮಾತ್ ಸದಸ್ಯರಿಗೆ ಚಿಕಿತ್ಸೆ ನೀಡಲು ಐಸೋಲೇಷನ್ ವಾರ್ಡ್‌ಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ ತೆರಿಗೆದಾರರ ಕೋಟ್ಯಂತರ ರೂ […]

ಏನೇ ಮಾಡಿದರೂ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇರುವ ಈ ಕೊರೊನಾ  ಸೋಂಕು ದೊಡ್ಡ ತಲೆನೋವಾಗಿ ಪರಿಣಮಿಸಿರುವ ಬೆನ್ನಲ್ಲೇ ವಿಜ್ಞಾನಿಗಳು ಅತ್ಯಂತ ಭಯ ಹುಟ್ಟಿರುವ ವರದಿಯನ್ನು ನೀಡಿದ್ದಾರೆ. ಅದೇನೆಂದರೆ, ಕರೊನಾ ವೈರಸ್​ಗಿಂತಲೂ ಭೀಕರ ವೈರಸ್​ ಜಗತ್ತನ್ನು ಆವರಿಸಲಿದ್ದು, ಅದು ವಿಶ್ವದ ಅರ್ಧದಷ್ಟು ಜನರ ಪ್ರಾಣಕ್ಕೆ ಕುತ್ತು ತರುತ್ತದೆ ಎಂಬ ವರದಿಯನ್ನು ಅವರು ನೀಡಿದ್ದಾರೆ. ವಿಜ್ಞಾನಿಗಳು ಹೇಳಹೊರಟಿರುವ ಈ ವೈರಸ್​ ಶುರುವಾಗುವುದು ಕೋಳಿ ಸಾಕಾಣಿಕೆ ಕೇಂದ್ರದಿಂದ ಎಂಬುದು. ಅಂದರೆ ಇತ್ತೀಚೆಗೆ ಕೋಳಿ […]

ಬೀಜಿಂಗ್‌: ಎಲಿವೇಟರ್ನಲ್ಲಿ ಮಗುವೊಂದು ಅಪಾಯಕ್ಕೆ ಸಿಲುಕಿದ ಘಟನೆ ಹುಬೇ ಪ್ರಾಂತ್ಯದ ದಯೆ ಎಂಬಲ್ಲಿ ನಡೆದಿದೆ.‌ ಈ ಹೃದಯವಿದ್ರಾವಕ ಘಟನೆಯು ಸಿಸಿ ಟಿವಿ ವಿಡಿಯೋವನ್ನು ಅಲ್ಲಿನ ಸುದ್ದಿ ಸಂಸ್ಥೆ ಪೀಪಲ್ಸ್ ಡೇಲಿ ಟ್ವಿಟರ್ ನಲ್ಲಿ ಅಪ್ ಲೋಡ್ ಮಾಡಿದೆ. 2 ವರ್ಷದ ಹೆಣ್ಣು ಮಗು ಏಕಾಂಗಿಯಾಗಿ ಎಲಿವೇಟರ್(ಲಿಫ್ಟ್) ನೊಳಗೆ ನಡೆದು ಬರುತ್ತದೆ. ಎಲಿವೇಟರ್ ನ ಬಾಗಿಲ ಮೇಲೆ ಇರುವ ಸುರಕ್ಷಾ‌ ಹಗ್ಗವು ಇದ್ದಕ್ಕಿದ್ದಂತೆ ಬಾಲಕಿಯ ಕೈಯ್ಯನ್ನು ಎಳೆದುಕೊಳ್ಳುತ್ತದೆ. ಒಂದು ಹಂತದಲ್ಲಿ ಬಾಲಕಿಯನ್ನು […]

ಸಿಡ್ನಿ : ಜೂನ್‌ 4ರಂದು ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.  ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌. ಪ್ರಧಾನಿ ಮೋದಿಗಾಗಿ ಸಮೋಸ ಮತ್ತು ಮಾವಿನ ಕಾಯಿ ಚಟ್ನಿಯನ್ನು ತಯಾರಿಸಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸಮೋಸ ಚಿತ್ರಗಳನ್ನು ಟ್ವೀಟ್‌ ಮಾಡಿರುವ ಪ್ರಧಾನಿ ಮಾರಿಸನ್‌. ಮಾವಿನ ಕಾಯಿ ಚಟ್ನಿ ಜೊತೆ ಭಾನುವಾರದ ಸಮೋಸ ತಯಾರಿಸಿದ್ದು, ಈ ವಾರ ಭಾರತದ ಪ್ರಧಾನಿ ನರೇಂದ್ರ ಮೋದಿ ಜೊತೆ ವಿಡಿಯೋ ಕಾನ್ಫರೆನ್ಸ್‌ ಇದೆ. ಅವರು […]

ಮಂಗಳೂರಿನಲ್ಲಿ ಇಂದಿನಿಂದ ಖಾಸಗಿ ಬಸ್‌ ಸಂಚಾರ ಆರಂಭವಾಗಿದೆ. ಕೊರೊನಾ ಹಿನ್ನಲೆಯಲ್ಲಿ ಎಲ್ಲಾ ಖಾಸಗಿ ಬಸ್ಸುಗಳಿಗೆ ಸ್ಯಾನಿಟೈಸರ್ ಮಾಡಲಾಗಿದೆ. ಮಂಗಳೂರಿನ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣದಲ್ಲಿ ಬಸ್‌ಗಳ ಒಳ ಭಾಗ, ಹೊರ ಭಾಗ ಸೇರಿದಂತೆ ಪೂರ್ತಿ ಬಸ್‌ಗೆ ಸ್ಯಾನಿಟೈಸರ್ ಮಾಡಲಾಗಿದ್ದು,  ಫುಟ್‌ ಬೋರ್ಡ್‌ಗಳಿಗೆ ಸ್ಯಾನಿಟೈಸರ್ ಸಿಂಪಡನೆ ಮಾಡಲಾಗುತ್ತಿದೆ. ಇನ್ನು ಬಸ್‌ ನಿಲ್ದಾಣದಲ್ಲಿ ಖಾಸಗಿ ಸಂಸ್ಥೆಯು ಬಸ್‌ಗಳ ಪ್ರತಿ ಟ್ರಿಪ್‌ ಬಳಿಕ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಪ್ರತಿ ಪ್ರಯಾಣಿಕರಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ಹೇಳಲಾಗಿದೆ.

 ಅಮೇರಿಕಾ: ಶ್ವೇತ ಭವನದ ಹೊರಗೆ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಕ್ಷಿಪ್ತವಾಗಿ ಗೌಪ್ಯ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಯಿತು. ಜಾರ್ಜ್ ಫ್ಲಾಯ್ಡ್ ಸಾವಿನ ಕುರಿತಾದ ಪ್ರತಿಭಟನೆಗಳು ಶುಕ್ರವಾರ ರಾತ್ರಿ ರಾಷ್ಟ್ರದ ರಾಜಧಾನಿಯನ್ನು ಅಪ್ಪಳಿಸಿದಾಗ ಕೋಪಗೊಂಡ ಪ್ರತಿಭಟನಾಕಾರರು ಪೆನ್ಸಿಲ್ವೇನಿಯಾ ಅವೆನ್ಯೂಗೆ ಆಗಮಿಸಿದರು. ಇದು ಶ್ವೇತಭವನದಲ್ಲಿ ಲಾಕ್ಡೌನ್ ಮಾಡಲು ಕಾರಣವಾಯಿತು. ಶುಕ್ರವಾರ ಶ್ವೇತಭವನದ ಹೊರಗೆ, ಸಂಜೆ 7 ಗಂಟೆಯ ನಂತರ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ವಶಕ್ಕೆ […]

ದೇವದುರ್ಗ: ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದ್ದು ಕೂಡಲೇ ಗುತ್ತಿಗೆದಾರರ ಬಿಲ್ ನ್ನು ತಡೆದು ತನಿಖೆ ಮಾಡುವಂತೆ ತಹಶೀಲ್ದಾರರಿಗೆ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ತಾಲೂಕಿನ ಗೋಪನದೇವರಹಳ್ಳಿಯಿಂದ ಸಲಿಕ್ಯಾಪೂರು ಮತ್ತು ಮಶಿಹಾಳ ಗ್ರಾಮದ ಡಾಂಬರಿಕರಣ ರಸ್ತೆಯು ಸಂಪೂರ್ಣ ಕಳಪೆ ಕಾಮಗಾರಿಯಾಗಿದೆ. ಸರ್ಕಾರದ ಆದೇಶದಂತೆ 12 ಫೀಟ್ ಅಗಲದಂತೆ ಡಾಂಬರಿಕರಣ ಮಾಡಬೇಕು. ಆದರೆ ಈ ರಸ್ತೆಯಡಿ 8 ಫೀಟ್ ಅಗಲ ಮಾತ್ರ ಡಾಂಬರ್ ರಸ್ತೆ ನಿರ್ಮಾಣ […]

ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಂಬಾಕು ಮತ್ತು ಗುಟ್ಕಾವನ್ನು ನಿಷೇದಿಸಲಾಗಿದೆ.ಪ್ರತಿ ವರ್ಷ ಮೇ31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ. ಭಾನುವಾರು ವಿಶ್ವ ತಂಬಾಕು ರಹಿತ ದಿನ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿಯುವುದು, ಉಗುಳುವುದನ್ನು ನಿಷೇಧಗೊಳಿಸಿ ಆದೇಶ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ‌ ತಂಬಾಕು ಸೇವನೆ ಮಾಡಿದ್ರೆ ಕಾನೂನು ಕ್ರಮ ತೆಗೆುಕೊಳ್ಳಲಾಗುವುದು.ಐಪಿಸಿ […]

Advertisement

Wordpress Social Share Plugin powered by Ultimatelysocial