ನವದೆಹಲಿ: ಲಾಕ್​​ಡೌನ್ ನಿಂದಾಗಿ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುತ್ತಿದ್ದು, ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಟಿವಿ, ರೇಡಿಯೋ ಮೂಲಕ ವಿವಿಧ ಅವಧಿಗಳಲ್ಲಿ ಶಿಕ್ಷಣ ಪ್ರಸಾರ ಮಾಡಲು ಅನುಮತಿ ನೀಡಬೇಕೆಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮಹಾರಾಷ್ಟ್ರದ ಶಿಕ್ಷಣ ಸಚಿವೆ  ಮನವಿ ಮಾಡಿದ್ದಾರೆ. ಡಿಡಿ ನ್ಯಾಷನಲ್‌ ಚಾನೆಲ್​​ನಲ್ಲಿ 12 ಗಂಟೆಗಳ ಅವಧಿ (ಸ್ಲಾಟ್) ಹಾಗೂ ರೇಡಿಯೊದಲ್ಲಿ 2 ಗಂಟೆ ಅವಧಿ (ಸ್ಲಾಟ್) ನೀಡಬೇಕೆಂದು ಮನವಿ ಮಾಡಿದ್ದಾರೆ. ಕೇಂದ್ರ ಸರ್ಕಾರ ಕ್ರಮಬದ್ಧವಾಗಿ ಈ ರೀತಿಯ ಸ್ಲಾಟ್‌ಗಳನ್ನು […]

ಒಂಟಾರಿಯೋ: ಆರು ವರ್ಷದ ನಾಯಿ ಫಿನ್ಲೆ 6 ಟೆನ್ನಿಸ್ ಬಾಲ್ ಗಳನ್ನು ಒಮ್ಮೆಲೇ ಬಾಯಲ್ಲಿ ಕಚ್ಚಿ ಹಿಡಿಯುವ ಮೂಲಕ ಹೊಸ ವಿಶ್ವ ದಾಖಲೆ ಮಾಡಿದೆ. ಗೋಲ್ಡನ್ ರಿಟ್ರೀವರ್ ಜಾತಿಯ ನಾಯಿ ಫಿನ್ಲೆ ಎರಡು ವರ್ಷ ಇದ್ದಾಗಿನಿಂದಲೂ ಟೆನ್ನಿಸ್ ಬಾಲ್ ಕಚ್ಚಿ ಹಿಡಿಯುವುದನ್ನು ಕಲಿತಿತ್ತು ಎಂದು ಅದರ ಯಜಮಾನ ಐರಿನ್ ಮೊಲ್ಲೊಯ್ ತಿಳಿಸಿದ್ದಾರೆ. ಫಿನ್ಲೆ ಈ ಹಿಂದೆ ಐದು ಬಾಲ್ ಗಳನ್ನು ಒಮ್ಮೆಲೇ ಕಚ್ಚಿಕೊಂಡು ದಾಖಲೆ ಮಾಡಿತ್ತು. ಈಗ ತನ್ನದೆ ದಾಖಲೆಯನ್ನು […]

ಕ್ಯಾಲಿಫೋರ್ನಿಯಾ: 13 ವರ್ಷದ ಬಾಲಕ ಎರಡು ವರ್ಷದಲ್ಲಿ ನಾಲ್ಕು ವಿಷಯದಲ್ಲಿ ಪದವಿ ಪಡೆದಿದ್ದಾನೆ‌.  ಅಚ್ಚರಿಯಾದರೂ ಸತ್ಯ. ಕ್ಯಾಲಿಫೋರ್ನಿಯಾದ 13 ವರ್ಷದ ಜಾಕ್ ರಿಕೋ ಫುಲರ್ಟನ್ ಕಾಲೇಜ್ ನಲ್ಲಿ ಓದಿ ವಿಶ್ವದ ಅತಿ‌ ಚಿಕ್ಕ ವಯಸ್ಸಿನ ಪದವೀಧರ ಎನಿಸಿಕೊಂಡಿದ್ದಾನೆ. ಅದೂ ಸುಲಭದ ವಿಷಯಗಳಲ್ಲೂ ಅಲ್ಲ. ಇತಿಹಾಸ, ಮಾನವ ಅಭಿವ್ಯಕ್ತಿ, ಸಾಮಾಜಿಕ ನಡುವಳಿಕೆ ಹಾಗೂ ಸಮಾಜ ವಿಜ್ಞಾನ ವಿಷಯಗಳನ್ನು ಓದಿ.‌ ಸರಿಯಾಗಿ ಜಿಪಿಎ ಸ್ಕೋರ್ ಮಾಡಿದ್ದಾನೆ. ಮಾಧ್ಯಮವೊಂದರ ಜತೆ ಮಾತನಾಡುತ್ತ ಜಾಕ್ “ನಾನು […]

ವಾಷಿಂಗ್ಟನ್‌: ವಿಶ್ವದ ಅತ್ಯಂತ ದೊಡ್ಡ ಬ್ಯಾಟರಿಚಾಲಿತ ಎಲೆಕ್ಟ್ರಿಕ್‌ ವಾಣಿಜ್ಯ ವಿಮಾನ ಗುರುವಾರ ಯಶಸ್ವಿ ಪರೀಕ್ಷಾರ್ಥ ಹಾರಾಟ ನಡೆಸಿತು. ಇದು ವಿದ್ಯುತ್‌ ಚಾಲಿತ ವಿಮಾನಯಾನ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದೆ ಎಂದು ತಯಾರಕರು ಅಭಿಪ್ರಾಯಪಟ್ಟಿದ್ದಾರೆ. ಸೆಸ್ನಾ ಗ್ರಾಂಡ್‌ ಕ್ಯಾರವಾನ್‌ 208ಬಿ ಹೆಸರಿನ ಈ ಆಲ್‌ ಎಲೆಕ್ಟ್ರಿಕ್‌ ವಿಮಾನವನ್ನು ಎಲೆಕ್ಟ್ರಿಕ್‌ ಏವಿಯೇಷನ್‌ ಕಂಪನಿ ‘ಮ್ಯಾಗ್ನಿಎಕ್ಸ್‌’ ಹಾಗೂ ಏರೋಸ್ಪೇಸ್‌ ಟೆಸ್ಟಿಂಗ್‌ ಸಂಸ್ಥೆ ‘ಏರೋಟೆಕ್‌’ ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ.ವಾಷಿಂಗ್ಟನ್‌ನ ಮೊಸೆಸ್‌ ಲೇಕ್‌ ಬಳಿಯ ಗ್ರಾಂಟ್‌ ಕಂಟ್ರಿ ಇಂಟರ್‌ನ್ಯಾಷನಲ್‌ […]

ಓಬನ್: ವೆಚ್ಚ ಮತ್ತು ವಿತರಣಾ ಸಮಯವನ್ನು ಕಡಿತಗೊಳಿಸುವ ಉದ್ದೇಶದಿಂದ ಸ್ಕಾಟ್​ಲ್ಯಾಂಡ್​ನಲ್ಲಿ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು ಡ್ರೋನ್‌ಗಳನ್ನು ಬಳಸಲಾಗುತ್ತಿದೆ. ಸ್ಕಾಟ್‌ಲ್ಯಾಂಡ್‌ನ ಪಶ್ಚಿಮ ಕರಾವಳಿಯ ದ್ವೀಪವೊಂದಕ್ಕೆ ಹೆಚ್ಚು ಅಗತ್ಯವಿರುವ ವೈದ್ಯಕೀಯ ಸಾಮಗ್ರಿಗಳನ್ನು ತಲುಪಿಸಲು  ಬಳಸಲಾಗುತ್ತಿದೆ. ವಿಶೇಷವಾಗಿ ಕೊರೊನಾ ವೈರಸ್​ನಂತ ವೈದ್ಯಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಡ್ರೋನ್​ಗಳು ಹೆಚ್ಚು ನೆರವಾಗಲಿವೆ. ಹಲವಾರು ಕಿಲೋ ಗ್ರಾಂ ವೈದ್ಯಕೀಯ ಸಾಮಗ್ರಿಗಳನ್ನು ಸಾಗಿಸುವ ಸಾಮರ್ಥ್ಯ ಹೊಂದಿರುವ ಡ್ರೋನ್ ಬುಧವಾರ ತನ್ನ ಮೊದಲ ಹಾರಾಟವನ್ನು ಸ್ಕಾಟ್ಲೆಂಡ್‌ನ ಓಬನ್‌ನಿಂದ 16 ಕಿಲೋ […]

ಜಕಾರ್ತ: ಕೊರೊನಾ ವೈರಸ್‌ ಹೆಂಡತಿ ಇದ್ದಂತೆ ಎಂದು ಹೋಲಿಕೆ ಮಾಡಿರುವ  ಇಂಡೊನೇಷ್ಯಾದ ರಕ್ಷಣಾ ಸಚಿವರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಚಿವ ಮೊಹಮ್ಮದ್‌ ಮಹಫೂದ್‌ ಎಂ.ಡಿ ಹೀಗೆ ಹೊಲಿಕೆ ಮಾಡುತ್ತ ಮಹಿಳೆಯರು ಸೇರಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯರಾಗಿರುವವರ ಟೀಕೆಗೆ ಗುರಿಯಾಗಿದ್ದಾರೆ. ಜಕಾರ್ತದ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಅವರು ಆ ವೇಳೆ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದ್ದ ಮೀಮ್‌ವೊಂದನ್ನು ಪ್ರಸ್ತಾಪಿಸಿದ್ದರು. ನನ್ನ ಸಹೋದ್ಯೋಗಿವೊಬ್ಬರು ಮೀಮ್‌ವೊಂದನ್ನು ಇತ್ತೀಚೆಗೆ ಕಳುಹಿಸಿದ್ದರು. ಕೊರೊನಾ ವೈರಸ್‌, ನಿಮ್ಮ […]

ಹಿಮಾಚಲ ಪ್ರದೇಶದ ಒಂದು ಕಿರಿದಾದ ರಸ್ತೆ ಈಗ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಈ ರಸ್ತೆ ಹಾದು ಹೋಗುವ ಮಾರ್ಗ ವರ್ಣನಾತೀತ ಪ್ರಾಕೃತಿಕ ಸೊಬಗನ್ನು ಮೈದಳೆದು ನಿಂತಂತಿದೆ. ಆದರೆ ಆ ರಸ್ತೆಯಲ್ಲಿ ಸಾಗಬೇಕೆಂದರೆ ಹೃದಯ ಗಟ್ಟಿ ಇರಲೇಬೇಕು. ಏಕೆ ಗೊತ್ತಾ.. ವಾಹನದಿಂದ ಕೈಗೆ ತಾಗುವಷ್ಟು ಸಮೀಪದಲ್ಲಿ ಬಂಡೆ ರಾಶಿ ಒಂದು ಬದಿಯಾದರೆ, ಇನ್ನೊಂದು ಬದಿಯಲ್ಲಿ ಆಳದ ಪ್ರಪಾತ. ಎದುರಿಗೆ ಇನ್ನೊಂದು ವಾಹನ ಬಾರದಷ್ಟು ಸಹ ಕಿರಿದಾದ ರಸ್ತೆ. ಇದರ ನಡುವೆ ಜಲಪಾತದ […]

ಹರಿಯಾಣ: ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ಸಮಾಜದ ಹಲವು ವರ್ಗಗಳು ಕಷ್ಟ-ನಷ್ಟ ಅನುಭವಿಸಿದ ರೀತಿಯಲ್ಲೇ ಕ್ಷೌರಿಕರೂ ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ.  ತಿಂಗಳಾನುಗಟ್ಟಲೆ ಲಾಕ್‌ಡೌನ್‌ನಿಂದ ಆದಾಯವಿಲ್ಲದಂತಾದ ಕ್ಷೌರಿಕರು ತುಂಬಾನೇ ಪರಿತಪಿಸುತ್ತಿದ್ದಾರೆ.  ಈ ಕಾರಣಕ್ಕೆ ಹರಿಯಾಣದಲ್ಲಿ ವಿಭಿನ್ನ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೌರಿಕರು.  ಈ ಇಬ್ಬರೂ ಸಹೋದರರು ಪಿಪಿಇ ಕಿಟ್ ಧರಿಸಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಾಕ್‌ಡೌನ್‌ ತೆರವಾದ ನಂತರವೂ ಕೂಡಾ, ಗ್ರಾಹಕರು ಅಂದುಕೊಂಡಷ್ಟು ಸಂಖ್ಯೆಯಲ್ಲಿ ಕ್ಷೌರದ ಅಂಗಡಿಗಳತ್ತ ಮುಖ ಮಾಡಲಿಲ್ಲ. ತಿಂಗಳುಗಟ್ಟಲೆ ತಲೆಗೂದಲು, ಗಡ್ಡ, ಮೀಸೆ […]

ಪಣಜಿ: ಮೇ 31 ರಂದು ಲಾಕ್‌ಡೌನ್  ಮುಕ್ತಾಯಗೊಳ್ಳಲಿದ್ದು, ಜೂನ್ 1 ರ ಬಳಿಕ ಏನು ಕಾರ್ಯತಂತ್ರ ಅನುಸರಿಸಬೇಕು ಎಂಬುದರ ಕುರಿತು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಹಿನ್ನೆಲೆಯಲ್ಲಿ ಲಾಕ್‌ಡೌನ್ 5.0 ಜಾರಿ ಮಾಡಬೇಕು ಎಂದು ಆಗ್ರಹಿಸಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್.  ಇನ್ನೂ ಎರಡು ವಾರವಾದರೂ ಅಂದರೆ ಜೂನ್ 15ರವರೆಗೂ ಲಾಕ್‌ಡೌನ್ ಮುಂದುವರೆಸಬೇಕೆಂದು ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಪ್ರಮೋದ್ ಸಾವಂತ್, ದೇಶದಲ್ಲಿ ಕೊರೊನಾ ವೈರಸ್ ಪ್ರಕರಣಗಳನ್ನು ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು […]

ಗುಜರಾತ್​ : ಛೋಟಾ ಉದೇಪುರ ಜಿಲ್ಲೆಯ ಬಿಲ್ವಂತ್​ ಗ್ರಾಮದ 16 ವರ್ಷದ ಬಾಲಕಿಯೊಬ್ಬಳು ಯುವಕನ ಜತೆ ಓಡಿ ಹೋದ ಕಾರಣಕ್ಕೆ ಆಕೆಯ ತಂದೆಯ ಎದುರೇ ಬಾಲಕಿಯನ್ನು ಹೀನಾಯವಾಗಿ ಥಳಿಸಿ ಗ್ರಾಮಸ್ಥರು ಹಲ್ಲೆ ಮಾಡಿದ್ದಾರೆ. ಇದರ ವೀಡಿಯೋ ಇದೀಗ ಭಾರಿ ವೈರಲ್​ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ಓಡಿಹೋಗಿರುವುದಕ್ಕೆ ಇದು ಶಿಕ್ಷೆ ಎಂದು ಹೇಳಿರುವ ಮೂವರು ಪುರುಷರು ಅತ್ಯಂತ ಕ್ರೂರವಾಗಿ ಬಾಲಕಿಯನ್ನು ಥಳಿಸಿದ್ದಾರೆ. ಕೂದಲನ್ನು ಅಮಾನುಷವಾಗಿ ಎಳೆದು ಹಲ್ಲೆ ಮಾಡುವ ಸಂದರ್ಭದಲ್ಲಿ ಬಾಲಕಿಯ […]

Advertisement

Wordpress Social Share Plugin powered by Ultimatelysocial