ಬೀದರ್ : ತಾವು 20 ಲಕ್ಷ ಕೋಟಿ ಪ್ಯಾಕೇಜ್ ಘೋಷಣೆ ಮಾಡಿದ್ದೀರಿ ಆದರೆ ಕಡು ಬಡವರಿಗೆ  ಯಾವುದೆ ಲಾಭವಾಗಿಲ್ಲ, ಅದರ ಬದಲು ತಾವು ಪ್ರತಿಯೊಬ್ಬ ಬೀದಿ ವ್ಯಾಪಾರಿಗಳಿಗೆ ಕಡು ಬಡವರಿಗೆ ತಲಾ 10, 000 ರೂಪಾಯಿಯಂತ್ತೆ ನೇರವಾಗಿ ಬ್ಯಾಂಕ್ ಖಾತೆಯಲ್ಲಿ ಹಾಕಿದರೆ ಅವರಿಗೆ 2, 3 ತಿಂಗಳು ಕುಟುಂಬಕ್ಕೆ ಸಹಾಯವಾಗುತ್ತದೆ ಎಂದು ಪ್ರಧಾನಮಂತ್ರಿಗಳಿಗೆ ಬೀದರ್ ಕ್ಷೇತ್ರದ ಶಾಸಕ ರಹೀಮ್ ಖಾನ್ ಮನವಿ ಮಾಡಿದ್ದಾರೆ. ಹೊರರಾಜ್ಯದಲ್ಲಿ ಲಾಕ್ ಡೌನ್ ನಲ್ಲಿ ಸಿಲುಕಿರುವ […]

ಚಾಮರಾಜನಗರ : ರಾಜ್ಯದ ಪ್ರಮುಖ ದೇಗುಲಗಳಲ್ಲೊಂದಾದ ಜಿಲ್ಲೆಯ ಹನೂರು ತಾಲೂಕಿನ ಮಲೆಮಹದೇಶ್ವರ ದೇಗುಲದಲ್ಲಿ ಇಂದಿನಿಂದ ಆನ್‌ಲೈನ್ ದರ್ಶನ ಸೇವೆ ಆರಂಭವಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ದೇಗುಲಕ್ಕೆ ಭಕ್ತರ ಪ್ರವೇಶ ನಿರ್ಬಂಧ ಇರುವುದರಿಂದ ಪ್ರಾಧಿಕಾರದ ವೆಬ್‌ಸೈಟ್ WWW.mmhillstemple.com ನಲ್ಲಿ ಬೆಳಗ್ಗೆ 4 ರಿಂದ 5.30 ರವರೆಗೆ ಹಾಗೂ ಸಂಜೆ 6.45 ರಿಂದ 8 ರವರೆಗೆ ನಡೆಯುವ ಅಭಿಷೇಕವನ್ನು ಭಕ್ತರು ಆನ್‌ಲೈನ್ ಮೂಲಕ ಕಣ್ಣುಂಬಿಕೊಳ್ಳಬಹುದಾಗಿದೆ.ಆನ್‌ಲೈನ್ ಮೂಲಕವೇ ಭಕ್ತರು ಸೇವೆಯನ್ನು ಕಾಯ್ದಿರಿಸಿ ತಮ್ಮ ತಮ್ಮ ಹೆಸರಿನಲ್ಲಿ […]

ನವದೆಹಲಿ: ಮುಂಗಾರು ಮಳೆ ಮಾರುತಗಳು ಜೂನ್​ 1 ರಂದು ಕೇರಳ ಪ್ರವೇಶ ಮಾಡಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಅರಬ್ಬಿಸಮುದ್ರದ ಅಗ್ನೇಯ ಮತ್ತು ಪೂರ್ವ ಮಧ್ಯ ಭಾಗದಲ್ಲಿ ಮೇ 31ರಿಂದ ಜೂನ್​ 4ರವರೆಗೆ ಕಡಿಮೆ ಒತ್ತಡದ ವಾತಾವರಣ ರೂಪುಗೊಳ್ಳುತ್ತದೆ. ಈ ವಾತಾವರಣ ಮುಂಗಾರು ಮಳೆ ಮಾರುತಗಳು ಕೇರಳ ಪ್ರವೇಶಕ್ಕೆ ಅನುಕೂಲವಾಗಿದ್ದು ಜೂನ್​ 1ರಂದು ಕೇರಳಕ್ಕೆ ಪ್ರವೇಶ ಪಡೆಯಲಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಉಡುಪಿ: ಜೂನ್ 1 ರಿಂದ ದೇವಾಲಯಗಳಲ್ಲಿ ಭಕ್ತರು ದೇವರ ದರ್ಶನ ಪಡೆಯಬಹುದು ಎಂದು ಸರ್ಕಾರ ಅವಕಾಶ ನೀಡಿದ್ದರೂ ಉಡುಪಿ ಕೃಷ್ಣ ಮಠದಲ್ಲಿ ಇನ್ನೂ 15 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶವಿಲ್ಲ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ. ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯ ತೀರ್ಥರು ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಿದ್ದು, ಮುಂದಿನ 10-15 ದಿನದಲ್ಲಿ ಪರಿಸ್ಥಿ ಅವಲೋಕಿಸಿ ನಂತರ ಭಕ್ತರ ದರ್ಶನಕ್ಕೆ […]

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು ಆಸ್ತಿ ತೆರಿಗೆ ಹೆಚ್ಚಳ ಮಾಡುವ ರಾಜ್ಯ ಸರ್ಕಾರದ ನಿರ್ಧಾರವನ್ನು ಕರ್ನಾಟಕ ಆಮ್ ಆದ್ಮಿ ಪಕ್ಷ ಖಂಡಿಸಿದೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಅವರು ಕೊರೊನಾವೈರಸ್ ಸಾಂಕ್ರಾಮಿಕ ರೋಗದ ಬೆನ್ನಲ್ಲೇ ಭುಗಿಲೆದ್ದಿರುವ ಆರ್ಥಿಕ ಬಿಕ್ಕಟ್ಟಿಗೆ ರಾಜ್ಯದ ಜನತೆ ತತ್ತರಿಸಿ ಹೋಗಿದ್ದಾರೆ. ಇದರ ಜೊತೆಗೆ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇಕಡಾ 20-30 ರಷ್ಟು […]

ಹೊಸದಿಲ್ಲಿ: ಕೊರೊನಾ ಸೋಂಕಿತರ ಇರುವಿಕೆಯನ್ನು ಗುರುತಿಸಬಲ್ಲ ಆರೋಗ್ಯ ಸೇತು ಮೊಬೈಲ್‌ ಅಪ್ಲಿಕೇಶನ್‌ ಏಪ್ರಿಲ್‌ನಲ್ಲಿ ಬಿಡುಗಡೆಯಾದಾಗಿನಿಂದ ಅನೇಕ ತಂತ್ರಜ್ಞಾನ ಪರಿಣಿತರು, ಆಯಪ್‌ ಡೆವಲಪರ್‌ಗಳು ಆ ಅಪ್ಲಿಕೇಶನ್‌ನಲ್ಲಿ ನೋಂದಾಯಿಸಲ್ಪಡುವವರ ಮಾಹಿತಿಯು ಸುರಕ್ಷಿತವಾಗಿಲ್ಲ ಎಂಬ ಆತಂಕ ವ್ಯಕ್ತಪಡಿಸಿದ್ದರು. ಈ ಆತಂಕಗಳಿಗೆ ಇತಿಶ್ರೀ ಹಾಡಲು ನಿರ್ಧರಿಸಿರುವ ಕೇಂದ್ರ ಸರಕಾರ, ಆರೋಗ್ಯ ಸೇತು ಮೊಬೈಲ್‌ ಆಯಪ್‌ನ ಓಪನ್‌ ಸೋರ್ಸ್‌ ಲಿಂಕ್‌ ಅನ್ನು ಬಿಡುಗಡೆ ಮಾಡಿದೆ. https://github.com/nic-delhi/AarogyaSetu_Android.git ಎಂಬ ಲಿಂಕ್‌ ಅನ್ನು ಬಳಸಿಕೊಂಡು ಆರೋಗ್ಯ ಸೇತುವಿನ ಬಗ್ಗೆ ಇರುವ […]

ನವದೆಹಲಿ: ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ  ಆಂಫಾನ್ ಪೀಡಿತ ಪಶ್ವಿಮ ಬಂಗಾಳದಲ್ಲಿ ತೆರವು ಕಾರ್ಯಾಚಣೆಯಲ್ಲಿ ಪಾಲ್ಗೊಂಡಿರುವ ಫೋಟೋ ಜೊತೆಯಲ್ಲಿ ಮದ್ಯದ ಬಾಟಲಿಯ ಛಾಯಾಚಿತ್ರವನ್ನು ಕೇಂದ್ರ ಗೃಹ ಇಲಾಖೆ ತನ್ನ ಫೇಸ್​​ಬುಕ್​ನಲ್ಲಿ ಹಂಚಿಕೊಂಡಿದ್ದು ತೀವ್ರ ​ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಕೇಂದ್ರ ಗೃಹ ಇಲಾಖೆಯ ಅಧಿಕೃತ ಫೇಸ್​ಬುಕ್ ಖಾತೆಯನ್ನು ನಿರ್ವಹಿಸುತ್ತಿರುವ ವ್ಯಕ್ತಿಯ ನಿರ್ಲಕ್ಷ್ಯದಿಂದ ತಪ್ಪಾಗಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ. ಸಚಿವಾಲಯದ ಫೇಸ್‌ಬುಕ್ ಖಾತೆಯನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯು ಲಿಖಿತವಾಗಿ ಕ್ಷಮೆಯಾಚಿಸಿದ್ದಾರೆ. ಆದರೆ, ಈ ಬಗ್ಗೆ […]

ಸಿಂಗಾಪುರ ಉದ್ಯಾನವನದಲ್ಲಿ ಗಸ್ತು ತಿರುಗಲು ಮತ್ತು ಜನರು ಸಾಮಾಜಿಕ ಅಂತರವನ್ನು ಕಾಪಾಡುತ್ತಿದ್ದಾರೆಯೆ ಎಂದು ಖಚಿತಪಡಿಸಿಕೊಳ್ಳಲು ಮತ್ತು ಅಪ್‌ಟೌನ್‌  ಫಂಕ್ ಹಾಡನ್ನು ಹಾಡಲು ಆನ್‌ಲೈನ್‌ನಲ್ಲಿ ಸ್ಪಾಟ್‌ ಎಂಬ ಹಳದಿ ಬಣ್ಣದ ರೊಬೊಟ್‌ ನಾಯಿಯನ್ನು ನಿಯೋಜಿಸಲಾಗಿದೆ. ಇದು ಉದ್ಯಾನವನದ ಮೂಲಕ ಸಾಗುತ್ತಿರುವ ಕಾಲ್ಪಾನಿಕ ನಾಯಿಮರಿಯಂತೆ ಕಾಣುತ್ತದೆ ಮತ್ತು ಆ ಪ್ರದೇಶಕ್ಕೆ ಭೇಟಿ ನೀಡಿವ ಜನರ ಮೇಲೆ ನಿಗಾ ಇಡಲು ಜೊತೆಗೆ ಜನರ ಸಂಖ್ಯೆಯನ್ನು ಅಂದಾಜು ಮಾಡಲು ಕೆಮರಾವನ್ನು ಅಳವಡಿಸಲಾಗಿದೆ. ನಿಮ್ಮ ಸ್ವಂತ ಸುರಕ್ಷತೆ […]

ನವದೆಹಲಿ: ಕರೊನಾ ಸಂಕಷ್ಟದಿಂದ ಆದಾಯ, ವಹಿವಾಟು ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ಕಂಪನಿಗಳು ಉದ್ಯೋಗಿಗಳ ವಜಾ, ಸಂಬಳ ಕಡಿತ, ಬಡ್ತಿ ತಡೆ ಮೊದಲಾದ ಕ್ರಮಗಳಿಗೆ ಮುಂದಾಗುತ್ತಿವೆ. ಕೆಲ ಕಂಪನಿಗಳು ಉದ್ಯೋಗಿಗಳನ್ನು ವೇತನರಹಿತ ರಜೆ ಮೇಲೆ ಕಳುಹಿಸುತ್ತಿವೆ. ಆದರೆ, ಕೆಲ ಕಂಪನಿಗಳ ಸ್ಥಿತಿ ಇದಕ್ಕಿಂತ ಭಿನ್ನವಾಗಿದೆ. ಇವು ಉದ್ಯೋಗಿಗಳಿಗೆ ವೇತನ ಹೆಚ್ಚಳ ಮಾಡುತ್ತಿವೆ, ಬಡ್ತಿ ನೀಡುತ್ತಿವೆ. ಬೋನಸ್​ ಕೂಡ ಕೊಡುತ್ತಿವೆ. ಎಚ್​ಸಿಎಎಲ್​ ಈಗಾಗಲೇ ಇದನ್ನು ಘೋಷಿಸಿದೆ. ಇದೀಗ ಹಿಂದುಸ್ಥಾನ್​ ಯುನಿಲೀವರ್​ ಲಿಮಿಟೆಡ್​, ಏಷಿಯನ್​ […]

ನವದೆಹಲಿ: ದೆಹಲಿಯ ಅತ್ಯಾಧುನಿಕ ಹಾಗೂ ಸುಸಜ್ಜಿತ ಆಸ್ಪತ್ರೆಗಳಲ್ಲಿ ಲೋಕ ನಾಯಕ ಜಯಪ್ರಕಾಶ ನಾರಾಯಣ್ (ಎಲ್​ಎನ್​ಜೆಪಿ) ಆಸ್ಪತ್ರೆಯು ಒಂದಾಗಿದೆ. ಇಲ್ಲಿನ ಶವಾಗಾರದಲ್ಲಿ ಕರೊನಾ ಸೋಂಕು ಹಾಗೂ ಶಂಕೆಯಿಂದ ಮೃತಪಟ್ಟವರ 108 ಶವಗಳಿವೆ. ಶೀತಲೀಕೃತ ಘಟಕದಲ್ಲಿ 80 ಶವಗಳನ್ನಿಡಲಷ್ಟೇ ವ್ಯವಸ್ಥೆ ಇದೆ. ಇನ್ನುಳಿದ 28 ಶವಗಳನ್ನು ನೆಲದ ಮೇಲೆ ಅಲ್ಲಲ್ಲಿ ಇಡಲಾಗಿದೆ. ದುರಂತವೆಂದರೆ ಅದಕ್ಕೂ ಜಾಗ ಸಾಕಾಗದೆ, ಒಂದರ ಮೇಲೊಂದರಂತೆ ಸೇರಿಸಲಾಗಿದೆ. ಇದಷ್ಟೇ ಅಲ್ಲ, ಈ ಗಾಯದ ಮೇಲೆ ಬರೆ ಎಳೆಯುವಂಥ ಸ್ಥಿತಿಯೂ […]

Advertisement

Wordpress Social Share Plugin powered by Ultimatelysocial