ಬೆಂಗಳೂರು: ನಾಲ್ಕನೇ ಹಂತದ ಲಾಕ್‌ಡೌನ್ ಮುಗಿದ ಮೇಲೆ ದೇವಸ್ಥಾನಗಳ ಜೊತೆ ಮಸೀದಿ, ಚರ್ಚ್‌ಗಳಿಗೂ ಬಾಗಿಲು ತೆರೆಯಲು ಅವಕಾಶ ಕೊಡಲಾಗುತ್ತದೆ. ಆದರೆ ಈ ಸಂಬಂಧ ಕೇಂದ್ರ ಸರ್ಕಾರದಿಂದ ಅನುಮತಿ ಸಿಗಬೇಕುಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ಇಂದು ನಡೆದ ಪಂಡಿತ್ ಜವಹರಲಾಲ್ ನೆಹರೂ ಅವರ 56 ನೇ ಪುಣ್ಯತಿಥಿ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇರುವ ನೆಹರು ಅವರ ಪ್ರತಿಮೆಗೆ ಸಿಎಂ‌ ಯಡಿಯೂರಪ್ಪ ಮಾಲಾರ್ಪಣೆ ಸಲ್ಲಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ದೇವಸ್ಥಾನಗಳನ್ನು ತೆರೆದರೆ ಮಸೀದಿ, […]

ದೊಡ್ಡಬಳ್ಳಾಪುರ : ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ಹಾಗೂ ಗ್ರಾಮ ಪಂಚಾಯಿತಿಗಳಿಗೆ ಆಡಳಿತ ಸಮಿತಿ ನೇಮಕ ಮಾಡುತ್ತಿರುವ ಸರ್ಕಾರದ ಕ್ರಮಗಳನ್ನು ವಿರೋಧಿಸಿ ಹಾಗೂ ಮಾತೃಪೂರ್ಣ ಯೋಜನೆಯನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ತಾಲೂಕು ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  ಎಪಿಎಂಸಿ ಹಾಗೂ ಟಿಎಪಿಎಂಸಿ ನಿರ್ದೇಶಕ ನಾರನಹಳ್ಳಿ ಎಂ.ಗೋವಿಂದರಾಜು ಮಾತನಾಡಿ, ರಾಜ್ಯ […]

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಜಾಕಿರ್ ಹುಸೇನ್ ನಗರದಲ್ಲಿ ಎರಡು ಗುಂಪುಗಳ ನಡುವೆ  ಮಾರಾಮಾರಿ ನಡೆದಿದೆ. ಹಳೆ ದ್ವೇಷ ಹಾಗೂ ರಾಜಕೀಯ ವೈಸಮ್ಯ ಕಾರಣದಿಂದ ಎರಡು ಗುಂಪುಗಳ ನಡುವೆ ಒಡೆದಾಟ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲೇ  ಮೂರು ಹೆಣಗಳು ಹಾಗೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಕವುಲ್ಲ ಖಾನ್(35), ಇದ್ರಿಷ್(30), ಹಾಗೂ ಕೈಸರ್(35) ಸ್ಥಳದಲ್ಲೇ ಸತ್ತ ರ್ದುದೈವಿಗಳು . ಪಟ್ಟಣದ ಪೋಲಿಸರು ಸ್ಥಳಕ್ಕೆ ಅಗಮಿಸಿದ್ದಾರೆ. ಇಡೀ […]

ಬಾಗಲಕೋಟೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ 4 ವರ್ಷದ ಹಿಂದಿನ ಫೋಟೋ ಬಳಸಿಕೊಂಡು ಫೇಸ್‌ಬುಕ್‌ನಲ್ಲಿ ಅಶ್ಲೀಲ ಬರಹ ಹಾಗೂ ಫೋಟೋ ಪೋಸ್ಟ್‌ ಮಾಡಿದ್ದ ಬಾದಾಮಿಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ 4 ವರ್ಷಗಳ ಹಿಂದೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮಹಿಳೆಯೊಬ್ಬರು ಅವರಿಗೆ ವೇದಿಕೆಯಲ್ಲಿ ಕೆನ್ನೆಗೆ ಮುತ್ತು ಕೊಟ್ಟಿದ್ದು ಸುದ್ದಿಯಾಗಿತ್ತು. ಈಗ ಅದೇ ಫೋಟೋ ಬಳಸಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಫೇಸ್‌ಬುಕ್‌ನಲ್ಲಿ ಯುವಕ ಪೋಸ್ಟ್‌ ಮಾಡಿದ್ದ. ಮಾಜಿ ಸಿಎಂ ಸ್ವಕ್ಷೇತ್ರ ಬಾದಾಮಿಯ […]

ದೊಡ್ಡಬಳ್ಳಾಪುರ:  ಬೆಂಗಳೂರು ಗ್ರಾಮಾಂತರ  ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಸೋಂಪುರ ಹೋಬಳಿಯ ವಿವಿಧ ಗ್ರಾಮಗಳ ನ್ಯಾಯಬೆಲೆ ಅಂಗಡಿಗಳಿಗೆ ಇಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಗೋಪಾಲಯ್ಯ ಭೇಟಿ ನೀಡಿ, ಪಡಿತರ ವಿತರಣೆಯನ್ನು ಪರಿಶೀಲಿಸಿದರು. ಸೋಂಪುರ ಹೋಬಳಿಯ ಹೊನ್ನೇನಹಳ್ಳಿ, ಬಿಲ್ಲಿನಕೋಟೆ ಹಾಗೂ ಶಿವಗಂಗೆ ಗ್ರಾಮದಲ್ಲಿರುವ ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿದರು. ಸಮರ್ಪಕ ಪಡಿತರ ವಿತರಣೆ ಜೊತೆಗೆ ವಲಸೆ ಬಂದಿರುವ ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲದಿದ್ದರೂ ಸಹ ಅವರ ಆಧಾರ್ ಕಾರ್ಡ್ […]

ಭಾರತದ ಅತಿದೊಡ್ಡ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಇಂಡಿಯಾ  ಇದೀಗ ಐಸಿಐಸಿಐ ಬ್ಯಾಂಕ್ ಜತೆ ಕೈ ಜೋಡಿಸಿ, ತನ್ನ ಗ್ರಾಹಕರಿಗೆ ರೀಟೇಲ್ ಹಣಕಾಸು ಯೋಜನೆಗಳನ್ನು ಒದಗಿಸುತ್ತಿದೆ. ಈ ಯೋಜನೆ ಅಡಿಯಲ್ಲಿ ಗ್ರಾಹಕರಿಗೆ ಆರಂಭದ ಇಎಂಐಗಳು ಸಿಕ್ಕಾಪಟ್ಟೆ ಕಡಿಮೆ ಇರುತ್ತದೆ. ಕೊರೊನಾ ಸಮಸ್ಯೆ ಇರುವುದರಿಂದ ನಗದು ಸಮಸ್ಯೆ ಆಗಬಾರದು ಎಂದು ಈ ಯೋಜನೆ ತರಲಾಗಿದೆ. ಖರೀದಿ ನಂತರದ ಆರಂಭದ ಮೂರು ತಿಂಗಳಿನ ಇಎಂಐ ಪ್ರತಿ 1 ಲಕ್ಷಕ್ಕೆ 899 ರುಪಾಯಿ […]

ಕೋಲಾರ ಜಿಲ್ಲೆಯ ಬಂಗಾಪೇಟೆ ತಾಲ್ಲೂಕಿನಲ್ಲಿಬೈಕ್‌ ಮತ್ತು ಸರಕು ಸಾಗಣೆ ವಾಹನದ ಮಧ್ಯೆ ಅಫಘಾತವಾಗಿ ಬೈಕ್ ಸವಾರರುರಿಬ್ಬರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ವರವಲಯದ ಕೋಡಿಕಣ್ಣೂರು ಕೆರೆಯ  ಬಳಿ ನಡೆದಿದೆ.  ಶ್ರೀನಿವಾಸ್‌ (21) ಮತ್ತು ನಂದೀಶ್‌  (25) ಮೃತ ದುರ್ದೈವಿಗಳು ಸ್ನೇಹಿತರಾಗಿದ್ದರೂ ಎಂದು ತಿಳಿದು ಬಂದಿದೆ. .ಇವರಿಬ್ಬರು ಕೋಲಾರದ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸರಕು ಸಾಗಣೆ ವಾಹನದ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಈ ಘಟನೆಗೆ ಸಂಬಂಧಿಸಿದ ಕೋಲಾರ […]

ಬೆಂಗಳೂರು: ಲಾಕ್​ಡೌನ್​ ಹಂತ ಹಂತವಾಗಿ ಸಡಿಲಿಕೆ ಆದ ಬೆನ್ನಲ್ಲೇ ಜನರ ಸಂಚಾರಕ್ಕಾಗಿ ಬಿಎಂಟಿಸಿ ಬಸ್​ಗಳು ರಸ್ತೆಗಿಳಿದಿವೆ. ಆದರೆ ಜನ ಮಾತ್ರ ಬಸ್​ಗಳತ್ತ ಮುಖ ಮಾಡುತ್ತಿಲ್ಲರಲಿಲ್ಲ. ಇದಕ್ಕೆ ಕೊರೊನಾ ಭಯ ಕಾರಣ ಇರಬಹುದಾ ಅಂತಾ ಯೋಚಿಸಲಾಗಿತ್ತು. ಆದರೆ ಅಸಲಿ ಕಥೆ ಕೋವಿಡ್​ ಆತಂಕವಲ್ಲ, ಬದಲಿಗೆ ಡೈಲಿ ಪಾಸ್ 70 ರೂಪಾಯಿ ನಿಗದಿ ಮಾಡಿರೋದು ಎಂಬ ಸತ್ಯ ತಿಳಿದುಬಂದಿದೆ. ಸಾಕಷ್ಟು ವಿರೋಧಗಳು ವ್ಯಕ್ತವಾದ ನಂತರ ಬಿಎಂಟಿಸಿ ಟಿಕೆಟ್ ರೇಟಿನಲ್ಲಿ ಸಡಿಲಿಕೆ ತಂದರೂ ಕೂಡಾ, […]

ನವದೆಹಲಿ: ಸೇನಾ ಲಿಂಗಸಮಾನತೆ ಪ್ರತಿಪಾದನೆಗಾಗಿ ವಿಶ್ವಸಂಸ್ಥೆಯಿಂದ ಕೊಡಲಾಗುವ ಪ್ರತಿಷ್ಠಿತ ಪ್ರಶಸ್ತಿಗೆ ಇದೇ ಮೊದಲ ಬಾರಿಗೆ ಭಾರತೀಯರೊಬ್ಬರಾದ  ಮೇಜರ್ ಸುಮನ್ ಗವಾನಿ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಸುಮನ್​ ಅವರನ್ನು ಹೊರತುಪಡಿಸಿದರೆ ಇನ್ನೋರ್ವರು ಬ್ರೆಜಿಲ್​ನ ನೌಕಾಪಡೆ ಅಧಿಕಾರಿ ಕಾರ್ಲಾ ಮಾಂಟೆರೋ ಡಿ ಕ್ಯಾಸ್ಟ್ರೊ ಅರೌಜೊ ಅವರು ಆಯ್ಕೆಯಾಗಿದ್ದಾರೆ.   ಇದೇ ಮೊದಲ ಬಾರಿಗೆ ಇಬ್ಬರಿಗೆ ಈ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು 2016ರಲ್ಲಿ ಸ್ಥಾಪಿಸಲಾಗಿದೆ. ಶಾಂತಿ ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆ, ಶಾಂತಿ ಹಾಗೂ […]

ಬೆಂಗಳೂರಿನ ಅಡುಗೋಡಿ ಸಿಎಆರ್ ಮೈದಾನದಲ್ಲಿ ಶ್ವಾನ ದಳದ ಚಟುವಟಿಕೆಗೆಂದೇ ಆಧುನಿಕ ಉದ್ಯಾನವನ ನಿರ್ಮಿಸಲಾಗಿದೆ. ಅಪರಾಧ ಪ್ರಕರಣ ಪತ್ತೆ, ಭಯೋತ್ಪಾದನೆ ವಿರುದ್ಧದ ಕಾರ್ಯಾಚರಣೆಗಾಗಿ ಶ್ವಾನ ದಳವನ್ನು ಮತ್ತಷ್ಟು ಚುರುಕುಗೊಳಿಸಲು ಇಲ್ಲಿಂದ್ದ ಮೊದಲಿದ್ದ ಉದ್ಯಾನವನ್ನೇ ನವೀಕರಿಸಲಾಗಿದೆ ಎಂದು ಉದ್ಯಾನ ಉದ್ಘಾಟಿಸಿದ ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ. ಪೊಲೀಸ್‌ ಶ್ವಾನದಳವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ 2.5 ಕೋಟಿ ವೆಚ್ಚದಲ್ಲಿ 50 ಶ್ವಾನಗಳನ್ನು ಅಳವಡಿಸಿಕೊಳ್ಳಲಾಗುವುದು ಎಂದರು. ಸ್ಪೋಟಕ ವಸ್ತುಗಳನ್ನು, ಡ್ರಗ್ಸ್‌ಗಳನ್ನು ಪತ್ತೆಹಚ್ಚುವ ಹಾಗೂ […]

Advertisement

Wordpress Social Share Plugin powered by Ultimatelysocial