ಕರೊನಾ ಮಹಾಮಾರಿಯನ್ನು ದೇಶದಿಂದ ತೊಲಗಿಸುವ ನಿಟ್ಟಿನಲ್ಲಿ ಆರೋಗ್ಯ ಸಿಬ್ಬಂದಿಗೆ ರಕ್ಷಣಾ ಕವಚ ನೀಡುವ ಹೊಸ ಸಾಹಸಕ್ಕೆ ಕೈಹಾಕಿದ್ದ ಭಾರತ ಅಲ್ಪ ಅವಧಿಯಲ್ಲಿಯೇ ಯಶಸ್ಸನ್ನೂ ಸಾಧಿಸಿಬಿಟ್ಟಿದೆ. ಭಾರತ ಈಗ  ಅತ್ಯುತ್ತಮ ಗುಣಮಟ್ಟದ ಒಂದು ಕೋಟಿಯನ್ನು ಮೀರುವಷ್ಟು ಪಿಪಿಇ ಕಿಟ್ ಗಳನ್ನು ತಯಾರಿಸಿದೆ.  ಕೊರೊನಾ ವೈರಸ್​ಗೆ ಸಂಬಂಧಪಟ್ಟ ವೈದ್ಯಕೀಯ ಉಪಕರಣಗಳಿಗೆ ಭಾರತ ಸೇರಿದಂತೆ ಹಲವು ದೇಶಗಳು ಕರೊನಾ ತವರು ಚೀನಾದ ಮೇಲೆಯೇ ಅವಲಂಬನೆ ಮಾಡಬೇಕಾದ ಅನಿವಾರ್ಯತೆ ಇತ್ತು. ಅದರಲ್ಲಿಯೂ ವೈದ್ಯರಿಗೆ ಅತ್ಯಂತ ಅವಶ್ಯಕವಾಗಿ […]

 ನವದೆಹಲಿ: ವಿಯೆಟ್ನಾಂನಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ತಿಳಿಸಿದ್ದಾರೆ. ವಿಯೆಟ್ನಾಂನ ಮೈಸನ್ ಪ್ರದೇಶದಲ್ಲಿ ಉತ್ಖನನ ನಡೆಸುವಾಗ ಈ ವಿಶಿಷ್ಟ ಶಿವಲಿಗವನ್ನು ಭಾರತದ ಪುರಾತತ್ವ ಇಲಾಖೆ(ASI) ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಮೈಸನ್ ಪ್ರದೇಶದ ಚಾಮ್ ದೇಗುಲಗಳ ಸಮೂಹದಲ್ಲಿ ಉತ್ಖನನ ಕಾರ್ಯ ನಡೆಸಲಾಗುತ್ತಿದೆ. ಇಲ್ಲಿ ಅನೇಕ ಶಿಥಿಲವಾಸ್ಥೆ, ಪೂರ್ಣ ಹಾಳಾದ ದೇಗುಲಗಳ ಅವಶೇಷಗಳಿವೆ. ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿರುವ ಈ ತಾಣವನ್ನು ಕ್ರಿ.ಶ 4ನೇ ಶತಮಾನದಿಂದ […]

ಬೆಂಗಳೂರು: ಕಾರಾಗೃಹಕ್ಕೆ ಬರುವ ಹೊಸ ಕೈದಿಗಳಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ ಎಂದು ರಾಜ್ಯ ಕಾರಾಗೃಹ ಇಲಾಖೆ ತಿಳಿಸಿದೆ. ಜೈಲಿಗೆ ಬರುತ್ತಿದ್ದಂತೆಯೇ ಕೈದಿಯನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಿಸಲಾಗುತ್ತಿದೆ. ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ಬಳಿಕವಷ್ಟೇ ಜೈಲಿನೊಳಗೆ ಪ್ರವೇಶಿಸಲು ಅನುಮತಿ ನೀಡಲಾಗುತ್ತದೆ ಎಂದು ತಿಳಿಸಿದೆ.

ಕೊಟ್ಟೂರು ತಾಲ್ಲೂಕಿನಲ್ಲಿ ಜನರಿಗೆ ಸುಲಭವಾಗಿ ಮರಳು ಸಿಗುವಂತೆ ಮಾಡಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಮರಳು ನಿಕ್ಷೇಪವನ್ನು ಗುರುತಿಸುವ ಕಾರ್ಯಕ್ಕೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ತಹಶೀಲ್ದಾರ್ ಅನಿಲ್ ಕುಮಾರ್ ಹೇಳಿದ್ದಾರೆ. ಮರಳು ಮಾಫಿಯಾ ಮತ್ತು ಕೃತಕ ಮರಳು ಅಭಾವ ತಪ್ಪಿಸುವ ಉದ್ದೇಶದಿಂದ ಹೊಸ ಮರಳು ನೀತಿ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದ್ದು, ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಸಮಿತಿಯಲ್ಲಿರುತ್ತಾರೆ. […]

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಇಂದು ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ ಅರ್ಜಿ ಇತ್ಯರ್ಥ ಮಾಡಿದೆ. ಸರ್ಕಾರದಿಂದ ಪರೀಕ್ಷೆ ನಡೆಸಲು ಮಾಡಿಕೊಂಡಿರುವ ವ್ಯವಸ್ಥೆ ಬಗ್ಗೆ ಹೈಕೋರ್ಟ್ ಮಾಹಿತಿ ಕೇಳಿತ್ತು. ಅದರಂತೆ ಸರ್ಕಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾರ್ಗಸೂಚಿಗಳನ್ನು ಸಲ್ಲಿಸಿತ್ತು. ಇದನ್ನು ಪುರಸ್ಕರಿಸಿದ ಹೈಕೋರ್ಟ್ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಪರೀಕ್ಷೆ ನಡೆಸಬೇಕು. ಯಾವುದೇ ವಿದ್ಯಾರ್ಥಿಗೆ ಇದರಿಂದ […]

ಕೈಯಲ್ಲಿ ಹಣವಿಲ್ಲದೆ, ಹೊಟ್ಟೆಗೆ ಹಿಟ್ಟಿಲ್ಲದೆ ಸಾವಿರಾರು ಕಿಲೋಮೀಟರ್‌ ನಡೆದ ಊರು ತಲುಪಿದ ವಲಸೆ ಕಾರ್ಮಿಕರ ಕರುಣಾಜನಕ ಕಥೆಗಳ ನಡುವೆ ಇಲ್ಲೊಬ್ಬ ರೈತರು 70,000 ಖರ್ಚು ಮಾಡಿ ಕಾರ್ಮಿಕರನ್ನು ವಿಮಾನದಲ್ಲಿ ಊರು ತಲುಪಿಸಲು ಮುಂದಾಗಿದ್ದಾರೆ. ಅಣಬೆ ಬೆಳೆಗಾರ ಪಪ್ಪನ್‌ ಸಿಂಗ್ ತಮ್ಮ ಬಳಿ ಕೆಲಸಕ್ಕಿದ್ದ ಬಿಹಾರದ 10 ಜನ ಕಾರ್ಮಿಕರನ್ನು ವಿಮಾನದ ಮೂಲಕ ‌ಅವರ ಊರು ತಲುಪಿಸಲು ಏರ್ಪಾಡು ಮಾಡಿದ್ದಾರೆ. ಇದಕ್ಕಾಗಿ ಅವರು 70,000 ರೂಪಾಯಿ ಖರ್ಚು ಮಾಡಿದ್ದಾರೆ. ಅಷ್ಟೇ ಅಲ್ಲದೆ […]

ಕಳೆದ ಎರಡು ತಿಂಗಳಿಂದ ಮನೆ ಊಟ ತಿಂದು ಬೇಸತ್ತ ಜೀವಗಳಿಗೆ ಸರ್ಕಾರ ಸಿಹಿಸುದ್ದಿ ನೀಡಿದೆ. ಹೊಟೇಲ್, ಊಪಹಾರ, ಮಂದಿರಗಳು, ಕೆಫೆಗಳು ಜೂನ್ ೧ರಿಂದ ಬಾಗಿಲು ತೆರೆಯಲಿವೆ. ಬಹುತೇಕ ವಲಯಗಳಲ್ಲಿ ಚಟುವಟಿಕೆ ಆರಮಭವಾಗಿದ್ದರು ಕೂಡ ಹೊಟೇಲ್ ಉದ್ಯಮಕ್ಕೆ ಸರಕಾರ ಅನುಮತಿ ನೀಡಿರಲಿಲ್ಲ. ರಾಜ್ಯ ಹೊಟೇಲ್ ಮಾಲೀಕರ ಸಂಘ ಸೇರಿದಂತೆ ಹಲವರು ಮುಖ್ಯಮಂತ್ರಿ ಹಾಗೂ ಇನ್ನಿತರ ಸಚಿವರನ್ನ ಭೇಟಿ ಮಾಡಿ ಹೊಟೇಲ್‌ಗಲಲ್ಲಿಯೇ ಆಹಾರ ಸೇವಿಸಲು ಗ್ರಾಹಕರಿಗೆ ಅವಕಾಶ ನೀಡಬೇಕು. ಇದಕ್ಕೆ ಅಗತ್ಯ ಮುನ್ನೆಚ್ಚರಿಕೆ […]

ದೇಶದಲ್ಲಿ ಲಾಕ್‌ಡೌನ್ ವಿಫಲವಾಗಿದೆ ಎಂದು ಹೇಳಿರುವ ರಾಹುಲ್ ಗಾಂಧಿ ಅವರಿಗೆ ಬಿಜೆಪಿ ಸರಣಿ ಆಘಾತಗಳನ್ನ ನೀಡುತ್ತಿದೆ. ನಿನ್ನೆಯಷ್ಟೆ ರಾಹುಲ್ ಗಾಂಧಿ ಅವರನ್ನ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತರಾಟೆಗೆ ತೆಗೆದುಕೊಂಡಿದ್ದಾರೆ.  ಇದೀಗ ಮತ್ತೊರ್ವ ಕೇಂದ್ರ ಸಚಿವ ರವಿಶಂಕರ ಪ್ರಸಾದ್ ರಾಹುಲ್ ಗಾಂಧಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದು, ದೇಶದಲ್ಲಿ ಲಾಕ್‌ಡೌನ್ ವಿಫಲವಾಗಿದೆ ಎಂದಾದರೆ ಕಾಂಗ್ರೆಸ್ ಆಡಳಿತದ ರಾಜ್ಯಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ.

ತೆಹ್ರಾನ್​: ಮಲಗಿದ್ದ ವೇಳೆ ಅಪ್ರಾಪ್ತ ಮಗಳ ತಲೆಯನ್ನು ತಂದೆಯೇ ತುಂಡರಿಸಿದ ಆತಂಕಕಾರಿ ಘಟನೆ ಇರಾನ್​ನಲ್ಲಿ ನಡೆದಿದ್ದು, ಇದೊಂದು ಮರ್ಯಾದೆ ಹತ್ಯೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ರೊಮಿನಾ ಅಶ್ರಫಿ (13) ಮೃತ ದುರ್ದೈವಿ. ಇರಾನ್​ನ ತಲೇಶ್​ ಕೌಂಟಿಯಲ್ಲಿರುವ ತಮ್ಮ ನಿವಾಸದಲ್ಲಿ ರಾತ್ರಿ ಮಲಗಿದ್ದಾಗ ಕುಡುಗೋಲಿನಿಂದ ತಲೆಯನ್ನು ಕತ್ತರಿಸಲಾಗಿದೆ. ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದ ಆಕೆ ಓಡಿ ಹೋಗಲು ತಯಾರಾಗಿದ್ದಾರಿಂದ ಮರ್ಯಾದೆಗೆ ಅಂಜಿ ಹತ್ಯೆ ಮಾಡಲಾಗಿದೆ.

ಬೆಂಗಳೂರು: ಲಾಕ್ ಡೌನ್ ಘೋಷಣೆ ಬಳಿಕ ಸ್ಥಗಿತಗೊಂಡಿದ್ದ ಕರ್ನಾಟಕ ಹೈಕೋರ್ಟ್ ಮತ್ತು ಇತರ ಜಿಲ್ಲಾ ನ್ಯಾಯಾಲಯಗಳ ಕಲಾಪ ಜೂನ್ 1ರಿಂದ ಆರಂಭವಾಗಲಿದೆ. ನ್ಯಾಯಾಲಯ ಕಲಾಪದ ವೇಳೆ ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ 38 ಅಂಶಗಳ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ವಕೀಲರು ಮತ್ತು ಸಿಬ್ಬಂದಿಗಳು ಇವುಗಳನ್ನು ಪಾಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಜಿಲ್ಲಾ ನ್ಯಾಯಾಲಯಗಳಿಗೆ ಈ ಮಾರ್ಗಸೂಚಿಗಳನ್ನು ಕಳುಹಿಸಲಾಗಿದೆ.  ನ್ಯಾಯಾಲಯದ ಕಲಾಪಗಳು ಆರಂಭವಾದ ಬಳಿಕ ಬೆಳಗ್ಗೆ 10 ಮತ್ತು […]

Advertisement

Wordpress Social Share Plugin powered by Ultimatelysocial