ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಆರಂಭವಾಗಿದೆ. ಕೊರೊನಾ ರೂಪಾಂತರಿ ಆತಂಕದ ನಡುವೆ ಹೊಸ ವರ್ಷದ ಸ್ವಾಗತಕ್ಕೆ ಜನರು ಸಿದ್ಧತೆ ನಡೆಸಿದ್ದಾರೆ. ಆದರೆ ರಾಜ್ಯದ ಕೆಲ ಪ್ರವಾಸಿ ತಾಣಗಳಲ್ಲಿ ನಿರ್ಬಂಧ ವಿಧಿಸಲಾಗಿದೆ.ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಆದೇಶ ಹೊರಡಿಸಿದ್ದಾರೆ.ಡಿಸೆಂಬರ್ 31ರ ರಾತ್ರಿ 9 ಗಂಟೆಯಿಂದ 2023ರ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟದ ವ್ಯೂ […]

ಅಡುಗೆ ಎಣ್ಣೆ ಆಮದು ಸುಂಕ ವಿನಾಯಿತಿಯನ್ನು 2024ರ ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. ಸೋಯಾ ಎಣ್ಣೆ, ತಾಳೆ ಎಣ್ಣೆ ಮತ್ತು ಸೂರ್ಯಕಾಂತಿ ಎಣ್ಣೆ ಆಮದು ಸುಂಕಕ್ಕೆ 2023ರ ಮಾರ್ಚ್ 31ರವರೆಗೆ ವಿನಾಯಿತಿ ನೀಡಲಾಗಿತ್ತು. ಅದನ್ನು ವಿಸ್ತರಿಸಲಾಗಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ದರ ದಾಖಲೆಯ ಪ್ರಮಾಣಕ್ಕೆ ಏರಿಕೆ ಕಂಡಿದ್ದ ಕಾರಣ 2021 ರ ಮಧ್ಯ ಭಾಗದಿಂದ ಆಮದು ಸುಂಕ ಕಡಿಮೆ ಮಾಡಲಾಗಿತ್ತು. ಈ ವಿನಾಯಿತಿ 2023 ರ ಮಾರ್ಚ್ 31ಕ್ಕೆ ಕೊನೆಯಾಗಲಿದೆ. ಹೀಗಾಗಿ, […]

ಕಬ್ಬು ಬೆಳೆಗಾರರಿಗೆ ಎಫ್‌ಆರ್‌ಪಿ ಜೊತೆಗೆ ಹೆಚ್ಚುವರಿಗಾಗಿ 150 ರೂಪಾಯಿ ನೀಡಲು ಸರ್ಕಾರ ಆದೇಶಿಸಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ 39 ದಿನಗಳಿಂದ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯನ್ನು ಶುಕ್ರವಾರ ಸ್ಥಗಿತಗೊಳಿಸಲಾಗಿದೆ.ಕಬ್ಬು ಪೂರೈಕೆ ಮಾಡಿದ ರೈತರಿಗೆ ಎಲ್ಲಾ ಸಕ್ಕರೆ ಕಾರ್ಖಾನೆಗಳು ಮೊದಲ ಕಂತಿನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ನ್ಯಾಯಯುತ ಹಾಗೂ ಲಾಭದಾಯಕ ಬೆಲೆ ಜೊತೆಗೆ ಪ್ರತಿ ಟನ್ ಗೆ 100 ರೂಪಾಯಿ ಹೆಚ್ಚುವರಿ ಹಣ ಕೊಡಬೇಕು. ಎಥೆನಾಲ್ ಉತ್ಪಾದಿಸುವ […]

ಪ್ರಾಣಿಗಳೇ  ಗುಣದಲ್ಲಿ ಮೇಲು, ಮಾನವ ಅದಕ್ಕಿಂತ ಕೀಳು ಅಂತ ಡಾ. ರಾಜ್​ಕುಮಾರ್ ಸಂಪತ್ತಿಗೆ ಸವಾಲ್​ನಲ್ಲಿ ಹಾಡಿದ್ದಾರೆ. ಇದು ನಿಜಕ್ಕೂ ಸತ್ಯ ರೀ. ಮನುಷ್ಯನ  ಕಂಡರೇ ಮತ್ತೊಬ್ಬ ಮನುಷ್ಯನಿಗೆ ದ್ವೇಷ ಇರುವ ಈ ಕಾಲದಲ್ಲಿ ಪ್ರಾಣಿಗಳು ನಿಜಕ್ಕೂ ಮೇಲು ಅಂದರೆ ತಪ್ಪಾಗಲ್ಲ.ಈಗೆಲ್ಲಾ ಎಲ್ಲರೂ ಮನೆಯಲ್ಲಿ ನಾಯಿ , ಬೆಕ್ಕು  ಸಾಕಲು ಇಷ್ಟ ಪಡುತ್ತಾರೆ. ಇನ್ನೂ ಕೆಲವರು ಇದನ್ನು ಬ್ಯುಸಿನೆಸ್ ರೂಪದಲ್ಲಿ ನೋಡುತ್ತಾರೆ. ಹೌದು, ಪ್ರಾಣಿ, ಪಕ್ಷಿಗಳನ್ನು ಮಾರಾಟ ಮಾಡುವ ಬ್ಯುಸಿನೆಸ್​​ಗೆ ಸಿಕ್ಕಾಪಟ್ಟೆ […]

ಕೇಂದ್ರ ಸಚಿವ ಸಂಪುಟದಲ್ಲಿ ಬದಲಾವಣೆ ತರಲು ಪ್ರಧಾನಿ ನರೇಂದ್ರ ಮೋದಿಯವರು ಚಿಂತನೆ ನಡೆಸುತ್ತಿದ್ದು, ಜ.14ರ ಬಳಿಕ ಬದಲಾವಣೆ ಸಾಧ್ಯತೆ ಇದೆ.ಬಿಜೆಪಿ ಸಂಘಟನೆಯನ್ನು ಬಲಪಡಿಸುವುದು ಮತ್ತು ಮುಂದಿನ ವರ್ಷ ನಡೆಯಲಿರುವ ರಾಜ್ಯಗಳ ವಿಧಾನಸಭೆ ಚುನಾವಣೆಗಳನ್ನು ಗಮನದಲ್ಲಿರಿಸಿ ಸಂಪುಟದಲ್ಲಿ ಬದಲಾವಣೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.ಬಜೆಟ್‌ ಅಧಿವೇಶನ ಆರಂಭಕ್ಕೂ ಮುನ್ನ, ಅಂದರೆ ಸಂಕ್ರಾಂತಿ ಬಳಿಕ ಈ ವಿಸ್ತರಣೆ ನಡೆ ಯಬಹುದು ಎಂದು ಮೂಲಗಳು ಹೇಳಿವೆ.ಈ ಸರಕಾರದಲ್ಲಿ ಕೇವಲ ಒಮ್ಮೆ ಮಾತ್ರ ಸಂಪುಟ ವಿಸ್ತರಣೆಯಾಗಿದೆ. ಕಳೆದ […]

ಭಾರತ ತಂಡದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಅವರು ಶುಕ್ರವಾರ ಮುಂಜಾನೆ ರೂಕಿಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅಪಘಾತದ ರಭಸಕ್ಕೆ ರಿಷಭ್ ಪಂತ್ ಅವರ ಮರ್ಸಿಡಿಸ್ ಕಾರು ಸುಟ್ಟು ಕರಕಲಾಗಿದೆ.ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ಪಂತ್ ಅವರ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿತ್ತು. ಪಂತ್ ಅವರ ಕಾಲು, ಹಣೆ, ಬೆನ್ನು ಸೇರಿದಂತೆ ಹಲವೆಡೆ ಗಾಯಗಳಾಗಿದೆ.ಕಾರು ಅಪಘಾತದ ವೇಳೆ ಕ್ರಿಕೆಟಿಗನಿಗೆ ಸಹಾಯ ಮಾಡಿದ ಜನರನ್ನು […]

ತಾಲೂಕಿನ‌ ಕೃಷ್ಣಾಪೂರ ಡಗ್ಗಿ ಬಳಿ ಸಾರಿಗೆ ಸಚಿವ ಬಿ. ಶ್ರೀ ರಾಮುಲು, ಬಳ್ಳಾರಿ ಶಾಸಕ ಜಿ.ಸೋಮಶೇಖರ್ ರೆಡ್ಡಿಯವರನ್ನು ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಕೆರಳಿಸಿದೆ.ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಕೆಆರ್ ಪಿಪಿ ನೂತನ ಪಕ್ಷ ಸ್ಥಾಪಿಸಿ ಗಂಗಾವತಿಯಿಂದ ವಿಧಾನಸಭೆಗೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದಾಗಿನಿಂದ ಕೊಪ್ಪಳ ಜಿಲ್ಲೆಯಲ್ಲಿ ಚುನಾವಣೆ ತುರುಸಾಗುವ ಸಾಧ್ಯತೆ ಇದ್ದು, ಗಾಲಿ ರೆಡ್ಡಿ ಬಿಜೆಪಿ,ಕಾಂಗ್ರೆಸ್ ಸೇರಿ ಯಾರಿಗೆ […]

ಪಹಣಿ ಬೆಲೆಯನ್ನು 10 ರೂಪಾಯಿ ಹೆಚ್ಚಳ ಮಾಡುವ ಮೂಲಕ ಸರ್ಕಾರ ರೈತರಿಗೆ ಶಾಕ್ ನೀಡಿದೆ. 15 ರೂಪಾಯಿ ಇದ್ದ ಪಹಣಿ ದರವನ್ನು 25 ರೂ.ಗೆ ಹೆಚ್ಚಳ ಮಾಡಲಾಗಿದೆ.ಸಾಲ, ಆಸ್ತಿ ಮಾರಾಟ, ಸಬ್ಸಿಡಿ ಸೇರಿದಂತೆ ವಿವಿಧ ಸೌಲಭ್ಯಕ್ಕಾಗಿ ಪಹಣಿ ಅಗತ್ಯವಾಗಿದ್ದು, ರೈತರು 25 ರೂಪಾಯಿ ನೀಡಿ ಪಹಣಿ ಪಡೆದುಕೊಳ್ಳಬೇಕಿದೆ.ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಪಹಣಿ ಕಡ್ಡಾಯಗೊಳಿಸಲಾಗಿದ್ದು, ಸಬ್ಸಿಡಿಗೆ ಅರ್ಜಿ ಸಲ್ಲಿಕೆ, ಆಸ್ತಿ ಮಾರಾಟ, ಬ್ಯಾಂಕುಗಳಲ್ಲಿ ಸಾಲ ಸೇರಿದಂತೆ ಹಲವು ಕಾರಣಕ್ಕೆ ಪಹಣಿ ಅಗತ್ಯವಾಗಿದ್ದು, […]

ಸಾಮಾನ್ಯವಾಗಿ ಸಿನಿಮಾ ಸ್ಟಾರ್ಸ್ ದುಬಾರಿ ವಾಹನಗಳ ಬಗ್ಗೆ ಕ್ರೇಜ್ ಹೊಂದಿರುತ್ತಾರೆ. ಕಾರ್ ಕ್ರೇಜ್ ಅಂತೂ ಬಾಲಿವುಡ್ ಕಲಾವಿದರಿಗೆ ಹೆಚ್ಚಾಗಿರುತ್ತೆ. ಆದ್ರೆ ಈ ವಿಚಾರದಲ್ಲಿ ವಿಭಿನ್ನವಾಗಿ ಕಾಣುವ ನಟಿ ಗುಲ್ ಪನಾಗ್ ಚಲನಚಿತ್ರ ನಿರ್ಮಾಣ ವ್ಯವಹಾರದಲ್ಲಿದ್ದು ಆಟೋಮೊಬೈಲ್ ಕ್ಷೇತ್ರದಲ್ಲಿ ವಿಭಿನ್ನ ಆಸಕ್ತಿ ಹೊಂದಿದ್ದಾರೆ.ಅವರು ತಮ್ಮ ವಾಹನಗಳ ಆಯ್ಕೆ ಮತ್ತು ಅವುಗಳನ್ನು ಬಳಸುವ ರೀತಿಯಲ್ಲಿ ಜನಪ್ರಿಯವಾಗಿದ್ದಾರೆ. ಇದೀಗ ಅವರು ಹೊಸ ಮಹೀಂದ್ರ ಜೋರ್ ಗ್ರಾಂಡ್ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು 3.50 ಲಕ್ಷ ರೂಪಾಯಿಗಳ […]

ಜೆಡಿಎಸ್ ಪಂಚರತ್ನ ರಥಯಾತ್ರೆ ಹಿನ್ನೆಲೆ ಎಚ್​.ಡಿ.ಕುಮಾರಸ್ವಾಮಿ ಅವರಿಗೆ ಸ್ವಾಗತ ಕೋರಿ ಜೆಡಿಎಸ್​ ಕಾರ್ಯಕರ್ತರು ಹಾಕಿದ್ದ ಪ್ಲೆಕ್ಸ್​ಗಳನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಈ ಸಂಬಂಧ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.ಪ್ರಕರಣ ಪೊಲೀಸ್​ ಮೆಟ್ಟಿಲೇರುತ್ತಿದ್ದಂತೆ ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ನಾಲಗೆ ಹರಿಯಬಿಟ್ಟಿದ್ದು, ವಿಡಿಯೋ ವೈರಲ್​ ಆಗಿದೆ.ಕ್ಯಾತ್ಸಂದ್ರ ಪೊಲೀಸ್ ಠಾಣೆ ಸಬ್​ಇನ್​ಸ್ಪೆಕ್ಟರ್​ಗೆ ಫೋನ್​ನಲ್ಲೇ ಸುರೇಶ್​ಗೌಡ ಅವಾಜ್ ಹಾಕಿದ್ದಾರೆ. ‘ಅವನ್ಯಾವನೋ ಪಿಎ ಸುರೇಶ್ ಅಂತ ಇದ್ದಾನೆ. […]

Advertisement

Wordpress Social Share Plugin powered by Ultimatelysocial