ಎಲ್ಲಾ ರಾಜ್ಯಗಳಿಗೆ “ಬಿ ಅಲರ್ಟ್” ಎಂದ ಕೇಂದ್ರ ಸರ್ಕಾರ! ಬಂದೇ ಬಿಡುತ್ತಾ ಕೋವಿಡ್ 4ನೇ ಅಲೆ?

ಆರೋಗ್ಯ ಇಲಾಖೆ ಕಾರ್ಯದರ್ಶಿಯಿಂದ ಪತ್ರ

ಕೋವಿಡ್ 4ನೇ ಅಲೆಯ ಮುನ್ನೆಚ್ಚರಿಕೆ ಕುರಿತಂತೆ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದಾರೆ. ಹೊಸ ರೂಪಾಂತರಿಗಳ ಸಕಾಲಿಕ ಪತ್ತೆಗೆ ಅನುಕೂಲವಾಗುವಂತೆ ಮಾದರಿಗಳ ಸೂಕ್ತ ಪರೀಕ್ಷೆಗೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮತ್ತು ಕೋವಿಡ್ ವಿರುದ್ಧ ಲಸಿಕೆ ಪಡೆದುಕೊಳ್ಳಲು ಜನರನ್ನು ಉತ್ತೇಜಿಸುವಂತೆ ಪತ್ರದಲ್ಲಿ ಸೂಚನೆ ನೀಡಿದ್ದಾರೆ.

5 ಹಂತಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚನೆ

ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ ವಿರುದ್ಧ 5 ಹಂತಗಳಲ್ಲಿ ಕಾರ್ಯ ನಿರ್ವಹಣೆ ಮುಂದುವರೆಸಬೇಕು ಅಂತ ಕೇಂದ್ರ ಸರ್ಕಾರ ಹೇಳಿದೆ. ಕೋವಿಡ್ ಪರೀಕ್ಷೆ, ಪತ್ತೆ, ಕೋವಿಡ್ ಚಿಕಿತ್ಸೆ, ಕೋವಿಡ್ ಶಿಷ್ಟಾಚಾರಗಳ ಪಾಲನೆ ಮತ್ತು ಕೋವಿಡ್ ವಿರುದ್ಧ ಲಸಿಕೆ ಹೀಗೆ ಈ ಐದು ಹಂತದ ಕಾರ್ಯತಂತ್ರದ ಮೇಲಿನ ಗಮನ ಮುಂದುವರಿಸುವಂತೆ ಕೇಂದ್ರ ಸರ್ಕಾರ ನಿರ್ದೇಶನ ಕೊಟ್ಟಿದೆ. ತಮ್ಮ ವ್ಯಾಪ್ತಿಯಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಅವಕಾಶ ನೀಡುತ್ತಲೇ ಈ ಬಗ್ಗೆ ಕೂಡ ಗಮನ ಹರಿಸುವಂತೆ ಹೇಳಿದೆ.

ಎಚ್ಚರಿಕೆಯಿಂದ ಇರುವಂತೆ ಕೇಂದ್ರ ಸಚಿವರ ಸೂಚನೆ

ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯ ಅವರು ಮಾರ್ಚ್ 16ರಂದು ಉನ್ನತ ಮಟ್ಟದ ಸಭೆ ನಡೆಸಿದ್ದರು. ಭಾರತದಲ್ಲಿಯೂ ಮತ್ತೊಮ್ಮೆ ಕೋವಿಡ್ ವ್ಯಾಪಕವಾಗುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚು ಹೆಚ್ಚು ಜಿನೋಮ್ ಸೀಕ್ವೆನ್ಸಿಂಗ್, ಕಠಿಣ ನಿಗಾವಣೆ ಹಾಗೂ ಒಟ್ಟಾರೆ ಕೋವಿಡ್ ಸನ್ನಿವೇಶದ ಮೇಲಿನ ಗಮನವನ್ನು ಬಲಗೊಳಿಸುವಂತೆ ರಾಜ್ಯಗಳಿಗೆ ಸಲಹೆ ನೀಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಮಾಸ್ಕ್, ಅಂತರ ಕಡ್ಡಾಯ

ಫೇಸ್ ಮಾಸ್ಕ್ ಧರಿಸುವುದು, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ದೈಹಿಕ ಅಂತರ ಕಾಪಾಡಿಕೊಳ್ಳುವುದು, ಕೈಗಳನ್ನು ಸ್ವಚ್ಚವಾಗಿ ಇರಿಸಿಕೊಳ್ಳುವುದು ಮುಂತಾದ ಎಲ್ಲ ಕೋವಿಡ್ ಶಿಷ್ಟಾಚಾರಗಳನ್ನು ಪಾಲಿಸುವಂತೆ ನೋಡಿಕೊಳ್ಳುವ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸಗಳನ್ನು ರಾಜ್ಯಗಳು ಮುಂದುವರಿಸಬೇಕು ಎಂದು ಹೇಳಿದ್ದಾರೆ.

ಚೀನಾದಲ್ಲಿ ಮತ್ತೆ ಜಾರಿಯಾಗುತ್ತಿದೆ ಲಾಕ್‌ ಡೌನ್

ಅತ್ತ ಚೀನಾದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿಯೇ ಚೀನಾದಲ್ಲಿವ್ಯಾಪಕ ಪ್ರಮಾಣದಲ್ಲಿ ಕೊರೋನಾ ಪ್ರಕರಣಗಳಲ್ಲಿ ಏರಿಕೆ ಕಾಣುತ್ತಿದೆ. ದೇಶದಲ್ಲಿ ಸುಮಾರು 3 ಕೋಟಿ ಜನರು ಲಾಕ್‌ಡೌನ್‌ ನಿರ್ಬಂಧಕ್ಕೆ ಒಳಪಟ್ಟಿದ್ದಾರೆ.

13ಕ್ಕೂ ಹೆಚ್ಚು ನಗರಗಳು ಸಂಪೂರ್ಣ ಲೌಕ್‌ ಡೌನ್

ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ನಡುವೆ ಸಾಮೂಹಿಕ ಪರೀಕ್ಷೆಗಳು ಪುನಃ ವ್ಯಾಪಕವಾಗಿ ಶುರುವಾಗಿವೆ. ಪಿಪಿಇ ಕಿಟ್ ಧರಿಸಿರುವ ಆರೋಗ್ಯ ಅಧಿಕಾರಿಗಳು ನಗರದ ಬೀದಿ ಬೀದಿಗಳಲ್ಲಿ ತುಂಬಿಕೊಂಡಿದ್ದಾರೆ. ಚೀನಾದಾದ್ಯಂತ ಸುಮಾರು 13ಕ್ಕೂ ಹೆಚ್ಚು ನಗರಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಲಾಗಿದೆ. ಇನ್ನು ಕೆಲವು ನಗರಗಳಲ್ಲಿ ಭಾಗಶಃ ಲಾಕ್‌ಡೌನ್ ಜಾರಿಯಲ್ಲಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಾಶ್ಮೀರ ಫೈಲ್ಸ್ ರಣವೀರ್ ಸಿಂಗ್ ಅವರ ಬಾಜಿರಾವ್ ಮಸ್ತಾನಿ, ಅಮೀರ್ ಖಾನ್ ಅವರ 3 ಈಡಿಯಟ್ಸ್ ಅನ್ನು ಸೋಲಿಸುತ್ತದೆ!

Sat Mar 19 , 2022
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಾಹಸೋದ್ಯಮ ದಿ ಕಾಶ್ಮೀರ್ ಫೈಲ್ಸ್ ಕಳೆದ ವಾರ ಶುಕ್ರವಾರ ಬಿಡುಗಡೆಯಾಯಿತು, ಮತ್ತು ಅಂದಿನಿಂದ ಇದು ಬಾಕ್ಸ್ ಆಫೀಸ್‌ನಲ್ಲಿ ನಿಲ್ಲಲಿಲ್ಲ. ರೂ.ಗಳ ಸಂಗ್ರಹದೊಂದಿಗೆ ಯೋಗ್ಯವಾದ ನೋಟಿನಲ್ಲಿ ತೆರೆದ ನಂತರ. 3.55 ಕೋಟಿ, ಅನುಪಮ್ ಖೇರ್ ಅಭಿನಯದ ವ್ಯಾಪಾರವು ಅದರ ಆರಂಭಿಕ ವಾರಾಂತ್ಯ ಮತ್ತು ವಾರದ ದಿನಗಳಲ್ಲಿ ಅಪಾರ ಬೆಳವಣಿಗೆಯನ್ನು ಕಂಡಿತು. ಈಗ 8ನೇ ದಿನದಲ್ಲಿ ಚಿತ್ರವು ರೂ. 100 ಕೋಟಿ ಮಾರ್ಕ್. ರೂ ಸಂಗ್ರಹಿಸಲಾಗುತ್ತಿದೆ. 8 ನೇ […]

Advertisement

Wordpress Social Share Plugin powered by Ultimatelysocial