ಬಿಬಿಎಂಪಿ ಡಿಲಿಮಿಟೇಷನ್ ಬಿಜೆಪಿ ಲಾಭ- ಕಾಂಗ್ರೆಸ್‌ಗೆ ಸ್ಟ್ರೋಕ್..!

 

ಬೆಂಗಳೂರು, ಜೂ. 3: ಬಿಬಿಎಂಪಿ ವಾರ್ಡ್ ವಿಂಗಡಣೆೆ ವೇಳೆ ಬಿಜೆಪಿಗೆ ಬಂಪರ್ ಲಾಭವಾಗುವ ನಿರೀಕ್ಷೆಯಿದೆ ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿ ಹೆಚ್ಚಿನ ವಾರ್ಡ್ ವಿಂಗಡಣೆ ಮಾಡಿ ವಾರ್ಡ್ ಸಂಖ್ಯೆಯನ್ನು ಹೆಚ್ಚಿಸಲಾಗುತ್ತಿದೆ. ಬಿಬಿಎಂಪಿ ವಾರ್ಡ್ ಮರುವಿಂಗಡಣಾ ಕರಡು ವರದಿಯಲ್ಲಿ ಕಾಂಗ್ರೆಸ್ ಶಾಸಕರಿಗೆ ಅಘಾತ ಎದುರಾಗಿದೆ.

ತಮ್ಮ ಶಾಸಕರ ಬಲ ಇರುವ ಕಡೆ ವಾರ್ಡ್ ಹೆಚ್ಚಿಸಿ ಬಿಬಿಎಂಪಿಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ಮಾಸ್ಟರ್ ಪ್ಲಾನ್ ಮಾಡಲಾಗಿದೆ.

ಬಿಬಿಎಂಪಿ ಗದ್ದುಗೆಯ ಗುುದ್ದಾಟಕ್ಕೂ ಮುನ್ನವೇ ಬಿಜೆಪಿ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್ ನಾಡಲು ಸನ್ನದ್ದವಾಗಿದೆ. ಕೆಲವೊಮ್ಮೆ ಆಟ ಯಾರು ಚನ್ನಾಗಿ ಆಡುತ್ತಾರೋ ಎನ್ನುವುದಕ್ಕಿಂತ ಟಾಸ್ ಗೆೆಲುವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದು ನಿರ್ಣಾಯಕವಾದ ಅಂಶವಾಗಿರುತ್ತದೆ. ಅಂತಯೇ ಬಿಜೆಪಿ ವಾರ್ಡ್‌ ಮರುವಿಂಗಡಣೆಯನ್ನೂ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಪಿ) ಇದ್ದ ಸಂದರ್ಭದಲ್ಲಿ 110 ಗ್ರಾಮಗಳನ್ನೂ ಒಳಗೊಂಡಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಸ್ತರಿಸಲಾಯಿತು. ಆಗ 198 ವಾರ್ಡ್ ಗಳನ್ನು ರಚನೆಯನ್ನು ಮಾಡಲಾಗಿತ್ತು. ಇದೀಗ 2011ರ ಜನಸಂಖ್ಯಾ ಆಧಾರದಲ್ಲಿ 243 ವಾರ್ಡ್‌ಗಳಿಗೆ ಹೆಚ್ಚಿಸಲಾಗುತ್ತಿದೆ. ಇದೇ ಬಿಜೆಪಿ ಶಾಸಕರ ಪಾಲಿಗೆ ವರವಾಗುತ್ತಿದೆ.

ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ2011ರ ಜನಗಣತಿ ಆಧರಿಸಿದಂತೆ ಬೆಂಗಳೂರಿನಲ್ಲಿ 84.43 ಲಕ್ಷ ಜನಸಂಖ್ಯೆಯಿದ್ದು ಅದನ್ನು 243 ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರತಿ ವಾರ್ಡ್‌ಗೆ ಸರಾಸರಿ 35 ಸಾವಿರ ಜನಸಂಖ್ಯೆ ಬರಲಿದೆ. ನಗರದ ಕೇಂದ್ರ ಭಾಗದಲ್ಲಿ ಅಷ್ಟೊಂದು ಪ್ರಮಾಣದ ಜನಸಂಖ್ಯೆ ಹೆಚ್ಚಳವಾಗಿಲ್ಲ. ಹೀಗಾಗಿ, ಬಿಬಿಎಂಪಿ ಕೇಂದ್ರ ವಲಯಗಳಾದ ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯದ ವಾರ್ಡ್‌ಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ.

ಬೊಮ್ಮನಹಳ್ಳಿಯಲ್ಲಿ 6 ವಾರ್ಡ್ ಹೆಚ್ಚಳ

ಬೆಂಗಳೂರಿನಲ್ಲಿ ಒಟ್ಟು 28 ವಿಧಾನಸಭಾ ಕ್ಷೇತ್ರಗಳಿವೆ. ಈ ಪೈಕಿ 10 ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಕಾಂಗ್ರೆಸ್ ಶಾಸಕರಿರುವ ಶಿವಾಜಿನಗರ ಕ್ಷೇತ್ರದಲ್ಲಿ ಒಂದು ವಾರ್ಡ್ ಕಡಿಮೆ ಮಾಡಲಾಗಿದೆ. ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದಿಗಿಂತ 6 ವಾರ್ಡ್‌ಗಳನ್ನು ಹೆಚ್ಚಿಗೆ ಸೃಷ್ಟಿ ಮಾಡಲಾಗಿದೆ. ಉಳಿದಂತೆ ಬೆಂಗಳೂರು ದಕ್ಷಿಣ ಹಾಗೂ ಜೆಡಿಎಸ್ ಶಾಸಕರಿರುವ ಮತ್ತು ಬಿಜೆಪಿ ಪ್ರಭಾವ ಹೆಚ್ಚಿರುವ ದಾಸರ ಹಳ್ಳಿಯ ಕ್ಷೇತ್ರದಲ್ಲಿ ತಲಾ 5 ವಾರ್ಡ್‌ಗಳನ್ನು ಹೊಸದಾಗಿ ರಚನೆ ಮಾಡಲಾಗಿದೆ. ನಗರ ಹೊರವಲಯದಲ್ಲಿರುವ ಕ್ಷೇತ್ರಗಳಲ್ಲಿಯೂ ವಾರ್ಡ್‌ಗಳನ್ನು ಹೆಚ್ಚಳ ಮಾಡಲಾಗಿದೆ.

ಕಾಂಗ್ರೆಸ್ ಶಾಸಕರಿರುವ ಕ್ಷೇತ್ರಗಳಲ್ಲಿ ವಾರ್ಡ್ ಹೆಚ್ಚಳ ಕಡಿಮೆ

ಬಿಬಿಎಂಪಿ ವಾರ್ಡ್ ಮರುವಿಂಗಡಣಾ ಸಮಿತಿಯಲ್ಲಿ ಬಿಜೆಪಿ ಶಾಸಕರ ಮೇಲುಗೈ ಸಾಧಿಸಿದ್ದಾರೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಲ್ಲಿನ ವಾರ್ಡ್‌ಗಳ ಸಂಖ್ಯೆ ಹೆಚ್ಚಳವಾಗಿದೆ. 10 ಕ್ಷೇತ್ರಗಳ ವಾರ್ಡ್ ಸಂಖ್ಯೆ ಬದಲಿಲ್ಲ ಯಥಾವತ್ತಾಗಿ ಇರಿಸಲಾಗಿದೆ. ಸರ್ಕಾರಕ್ಕೆ ಸಲ್ಲಿಸಬೇಕಿರುವ ಕರಡು ವರದಿಯಲ್ಲಿರುವಂತೆ ವ್ಯತ್ಯಯಗಳು ಉಂಟಾಗಿದೆ. ವಾರ್ಡ್ ಮರುವಿಂಗಡಣಾ ಸಮಿತಿ ನೀಡಿರುವ ಅಂಕಿ ಅಂಶ

ವಿಧಾನಸಭಾ ಕ್ಷೇತ್ರವಾರು ವಾರ್ಡ್‌ಗಳ ಮರುವಿಂಗಡಣೆ

ಬಿಟಿಎಂ ಲೇಔಟ್ ಮೊದಲು 8 – ಈಗ 9ವಾಡ್೯ , ಒಂದು ವಾರ್ಡ್ ಹೆಚ್ಚಳ.

ಬೆಂಗಳೂರು ದಕ್ಷಿಣ ಮೊದಲು8 -ಈಗ 13 ಐದು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಬಸವನಗುಡಿ ಮೊದಲು 6- ಈಗ 7, ಒಂದು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಬೊಮ್ಮನಹಳ್ಳಿಿಮೊದಲು 8- ಈಗ 14, ಆರು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಬ್ಯಾಾಟರಾಯನಪುರ ಮೊದಲು7 -ಈಗ11, ನಾಲ್ಕು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಸಿವಿ ರಾಮನ್‌ನಗರ ಮೊದಲು7- ಈಗ 9, ಎರಡು ವಾರ್ಡ್ ಹೆಚ್ಚಳ ಮಾಡಲಾಗಿದೆ.

ಚಾಮರಾಜಪೇಟೆ ಮೊದಲು7- ಈಗ 7 , ವಾರ್ಡ್ ಹೆಚ್ಚಳವಿಲ್ಲ.

ಚಿಕ್ಕಪೇಟೆ ಮೊದಲು7 -ಈಗ 7, ವಾರ್ಡ್ ಹೆಚ್ಚಳವಿಲ್ಲ. ದಾಸರಹಳ್ಳಿಿ ಮೊದಲು8 – ಈಗ13,

ಗಾಂಧಿನಗರ ಮೊದಲು7 -ಈಗ 7, ವಾರ್ಡ್ ಹೆಚ್ಚಳವಿಲ್ಲ.

ಗೋವಿಂದರಾಜನಗರ ಮೊದಲು9 -ಈಗ 9, ವಾರ್ಡ್ ಹೆಚ್ಚಳವಿಲ್ಲ.

ಹೆಬ್ಬಾಾಳ ಮೊದಲು8 – ಈಗ 8, ವಾರ್ಡ್ ಹೆಚ್ಚಳವಿಲ್ಲ.

ಜಯನಗರ ಮೊದಲು7- ಈಗ 7, ವಾರ್ಡ್ ಹೆಚ್ಚಳವಿಲ್ಲ.

ಕೆ.ಆರ್.ಪುರ ಮೊದಲು9 -ಈಗ 13, ನಾಲ್ಕು ವಾರ್ಡ್ ಹೆಚ್ಚಳ.

ಮಹದೇವಪುರ ಮೊದಲು8 -ಈಗ 12, ನಾಲ್ಕು ವಾರ್ಡ್ ಹೆಚ್ಚಳ.

ಮಹಾಲಕ್ಷ್ಮೀಲೇಔಟ್ ಮೊದಲು7 -ಈಗ 9, ಎರಡು ವಾರ್ಡ್ ಹೆಚ್ಚಳ.

ಮಲ್ಲೇಶ್ವರ ಮೊದಲು7- ಈಗ 7, ವಾರ್ಡ್ ಹೆಚ್ಚಳವಿಲ್ಲ.

ಪದ್ಮನಾಭನಗರ ಮೊದಲು8-ಈಗ 9, ಒಂದು ವಾರ್ಡ್ ಹೆಚ್ಚಳ.

ಪುಲಕೇಶಿನಗರ ಮೊದಲು7 – ಈಗ 7, ವಾರ್ಡ್ ಹೆಚ್ಚಳವಿಲ್ಲ.

ರಾಜಾಜಿನಗರ ಮೊದಲು7- ಈಗ 7, ವಾರ್ಡ್ ಹೆಚ್ಚಳವಿಲ್ಲ.

ರಾಜರಾಜೇಶ್ವರಿನಗರ ಮೊದಲು9 -ಈಗ 13, ನಾಲ್ಕು ವಾರ್ಡ್ ಹೆಚ್ಚಳ.

ಸರ್ವಜ್ಞನಗರ ಮೊದಲು8-ಈಗ 10 , ಎರಡು ವಾರ್ಡ್ ಹೆಚ್ಚಳ.

ಶಾಂತಿನಗರ ಮೊದಲು7 -ಈಗ 7, ವಾರ್ಡ್ ಹೆಚ್ಚಳವಿಲ್ಲ.

ಶಿವಾಜಿನಗರ ಮೊದಲು7-ಈಗ 6, ಒಂದು ವಾರ್ಡ್ ಕಡಿಮೆ ಮಾಡಲಾಗಿದೆ.

ವಿಜಯನಗರ ಮೊದಲು8-ಈಗ 9, ಒಂದು ವಾರ್ಡ್ ಹೆಚ್ಚಳ.

ಯಲಹಂಕ ಮೊದಲು 4- ಈಗ 5, ಒಂದು ವಾರ್ಡ್ ಹೆಚ್ಚಳ.

ಯಶವಂತಪುರ ಮೊದಲು5- ಈಗ 8, ಮೂರು ವಾರ್ಡ್ ಹೆಚ್ಚಳ

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿದ್ದ 198 ವಾರ್ಡ್‌ಗಳನ್ನು ಮರುವಿಂಗಡಣೆ ಮಾಡಿ 243 ವಾರ್ಡ್‌ಗಳಾಗಿ ವಾರ್ಡ್ ಮರುವಿಂಗಡಣಾ ಸಮಿತಿ ನೀಡಿರುವ ಅಂಕಿ ಅಂಶಗಳನ್ನು ನೀಡಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತದಲ್ಲಿ ಕೊರೊನಾ ಸೋಂಕಿತರು ಏರಿಕೆ: ಸಚಿವ ಸುಧಾಕರ್, ಪ್ರಿಯಾಂಕಾ ಗಾಂಧಿಗೂ ಸೋಂಕು

Fri Jun 3 , 2022
ನವದೆಹಲಿ, ಜೂ.3-ಆತಂಕಕಾರಿ ಬೆಳವಣಿಗೆಯಲ್ಲಿ ಇದ್ದಕ್ಕಿದ್ದಂತೆ ಕೊರೊನಾ ಸೋಂಕಿನ ಪ್ರಕರಣಗಳು ಏರಿಕೆಯಾಗಿದ್ದು, 84 ದಿನಗಳ ಬಳಿಕ ದೈನಂದಿನ ಸೋಂಕು 4000 ಗಡಿ ದಾಟಿದೆ. ಕೇಂದ್ರ ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಲಾದ ಬುಲೆಟಿನ್‍ನಲ್ಲಿ ಸೋಂಕಿನ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳಲ್ಲಿ 4041 ಸೋಂಕಿನ ಪ್ರಕರಣಗಳು ದಾಖಲಾಗಿವೆ. 10 ಮಂದಿ ಸಾವನ್ನಪ್ಪುವ ಮೂಲಕ ಒಟ್ಟು ಸಾವಿನ ಸಂಖ್ಯೆ 5,24,651ರಷ್ಟಾಗಿದೆ. ಸಾವಿನ ಪ್ರಮಾಣ ಶೇ.1.22ರಷ್ಟಿದೆ. ಜೂನ್‍ನಲ್ಲಿ ಕೋವಿಡ್ 4ನೆ […]

Advertisement

Wordpress Social Share Plugin powered by Ultimatelysocial