ಬದಲಾಗಿದೆ ಬಿಬಿಎಂಪಿಯ 24 ವಾರ್ಡ್​ಗಳ ಹೆಸರು;

ಬೆಂಗಳೂರು (ಜು 15) : ಬಿಬಿಎಂಪಿ ಎಲೆಕ್ಷನ್​ ನಡೆಸಲು ಸಜ್ಜಾಗುತ್ತಿರೋ ಸರ್ಕಾರ, ನಿನ್ನೆ (ಜುಲೈ 14) ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮಾಡಿ ಅಂತಿಮ ಆದೇಶ ಪ್ರಕಟಿಸಿದೆ. 198 ಇದ್ದ ವಾರ್ಡ್ ಗಳನ್ನು (Ward) ಡಿ ಲಿಮಿಟೇಷನ್ (Delimitation) ಮಾಡಿ‌ 243 ವಾರ್ಡ್​ಗಳಾಗಿ ವಿಂಗಡಿಸಿದೆ.
ಸಾರ್ವಜನಿಕ ವಲಯದಿಂದ ಬಂದಿದ್ದ 2,500ಕ್ಕೂ ಅಧಿಕ ಆಕ್ಷೇಪಣಾ ಅರ್ಜಿ ವಿಲೇವಾರಿ ಮುಕ್ತಾಯಗೊಂಡಿದೆ. ಸಾರ್ವಜನಿಕರಿಂದ ಸಲಹೆ, ಸೂಚನೆಗಳನ್ನು ಅಳವಡಿಸಿ ಸಣ್ಣ ಪುಟ್ಟ ಬದಲಾವಣೆ ಮಾಡಿ ಡಿ ಲಿಮಿಟೇಷನ್ ಮಾಡಿ ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್​ (Puneeth Rajkumar) ಅವರಿಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ. ಬಿಬಿಎಂಪಿ ವಾರ್ಡ್​ಗಳ ಮರು ವಿಂಗಡಣೆ ಮಾಡಿ, ವಾರ್ಡ್​ ನಂಬರ್​ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ
ಬದಲಾಗಿದೆ 24 ವಾರ್ಡ್ ಗಳ ಹೆಸರು
ಬೆಂಗಳೂರಿನ ವಾರ್ಡ್​ಗಳ ಸಂಖ್ಯೆ 243ಕ್ಕೆ ಏರಿಕೆ ಆಗಿದೆ. ಕೆಲವು ವಾರ್ಡ್​ಗಳ ಹೆಸರು ಬದಲಾವಣೆ ಮಾಡಲಾಗಿದೆ. ಇನ್ನು ಕೆಲವು ವಾರ್ಡ್​ಗಳಿಗೆ ಹಳೇ ಹೆಸರನ್ನೇ ಮರುನಾಮಕರಣ ಮಾಡಲಾಗಿದೆ. ಜನರ ಆಕ್ಷೇಪಕ್ಕೆ ಮಣಿದ ಸರ್ಕಾರದಿಂದ ಡಿ ಲಿಮಿಟೇಷನ್ ನಲ್ಲಿ ಕೆಂಗೇರಿ ವಾರ್ಡ್​ ನಲ್ಲೂ ಬದಲಾವಣೆ ಮಾಡಿದೆ. ಕೆಂಗೇರಿ ವಾರ್ಡ್ ಬದಲು ಕೆಂಗೇರಿ ಉಪನಗರ ವಾರ್ಡ್ ಎಂದು ಕರಡು ಪ್ರತಿಯಲ್ಲಿತ್ತು. ಇದೀಗ ಮತ್ತೆ ವಾಪಸ್ ಕೆಂಗೇರಿ ವಾರ್ಡ್​ ಅಂತಾನೇ ಉಲ್ಲೇಖ ಮಾಡಲಾಗಿದೆ. ಈ ಹಿಂದೆ ಕೆಂಗೇರಿ ವಾರ್ಡ್ ಹೆಸರು ತೆಗೆದಿದ್ದಕ್ಕೆ ಭಾರೀ ವಿರೋಧ ಕೇಳಿ ಬಂದಿತ್ತು. ಸಾಕಷ್ಟು ಪ್ರತಿಭಟನೆಗಳೂ ನಡೆದಿದ್ವು. ಇದೀಗ ಕೆಂಗೇರಿ ಉಪನಗರ ವಾರ್ಡ್ ತೆಗೆದು ಹಳೆ ಹೆಸರು ಕೆಂಗೇರಿ ವಾರ್ಡ್ ಎಂದು ಅಂತಿಮಗೊಳಿಸಲಾಗಿದೆ.
ಬೆಂಗಳೂರಿಗರೇ ಅಲರ್ಟ್, ಪ್ಲಾಸ್ಟಿಕ್ ಕವರ್ ನಿಮ್ಮ ಕೈಯಲ್ಲಿದ್ದರೆ ಹಾಕ್ತಾರೆ ದಂಡ!
ರಾಜ್ಯ ಪತ್ರದಲ್ಲಿ ಬಿಬಿಎಂಪಿ ನೀಡಿದ 24 ವಾರ್ಡ್ ಗಳ ಹೆಸರು ಬದಲಾವಣೆ
ವಾರ್ಡ್‌ ಸಂಖ್ಯೆ – ಅಂತಿಮ ವರದಿಯ ಹೆಸರು – ಕರಡು ವರದಿಯ ಹೆಸರು

28 ದೊಡ್ಡ ಬಿದರಕಲ್ಲು ಹಂದ್ರಹಳ್ಳಿ

33 ಕೆಂಗೇರಿ ಕೆಂಗೇರಿ ಉಪನಗರ

35 ಹೆಮ್ಮಿಗೆಪುರ ತಲಘಟ್ಟಪುರ

36 ಛತ್ರಪತಿ ಶಿವಾಜಿ ಕನ್ನೇಶ್ವರ ರಾಮ

37 ಚಾಣಕ್ಯ ವೀರಮದಕರಿ

39 ಕನ್ನೇಶ್ವರ ರಾಮ ಚಾಣಕ್ಯ

40 ವೀರಮದಕರಿ ಛತ್ರಪತಿ ಶಿವಾಜಿ

55 ಪುನೀತ್‌ ರಾಜ್‌ಕುಮಾರ್‌ ಕಾವೇರಿ ನಗರ

69 ಮನೋರಾಯನಪಾಳ್ಯ ಚೋಳನಗರ

77 ದೇವರಜೀವನಹಳ್ಳಿ ಮೋದಿ ಗಾರ್ಡನ್‌

84 ರಾಮಮೂರ್ತಿ ನಗರ ಕೌದೆಕೆನಹಳ್ಳಿ

85 ವಿಜಿನಾಪುರ ವಿಜ್ಞಾನಪುರ

87 ಮೇಡಹಳ್ಳಿ ತಂಬುಚಟ್ಟಿಪಾಳ್ಯ

93 ಎಚ್‌ಎಎಲ್‌ ವಿಮಾನನಿಲ್ದಾಣ

95 ನಾಗವಾರ ಗೋವಿಂದನಪುರ

153 ನಾಗರಬಾವಿ ಕಲ್ಯಾಣ ನಗರ

154 ಚಂದ್ರಲೇಔಟ್‌ ನಾಗರಬಾವಿ

180 ಅಗರ ವನ್ನಾರ್‌ಪೇಟೆ

183 ನೀಲಸಂದ್ರ ಆಸ್ಟಿನ್‌ಟೌನ್‌

184 ವನ್ನಾರ್‌ಪೇಟೆ ನೀಲಸಂದ್ರ

220 ಯಲಚೇನಹಳ್ಳಿ ಕನಕನಗರ

221 ಕೋಣನಕುಂಟೆ ಯಲಚೇನಹಳ್ಳಿ

232 ಎಚ್‌ಎಸ್‌ಆರ್‌ ಸಿಂಗಸಂದ್ರ ಎಚ್‌ಎಸ್‌ಆರ್‌ ಲೇಔಟ್‌

241 ಪುಟ್ಟೇನಹಳ್ಳಿ ಸಾರಕ್ಕಿ ಕೆರೆ ಸಾರಕ್ಕಿ ಕೆರೆ
BBMP: ವಾಹನ ಸವಾರರಿಗೆ ಬಿಬಿಎಂಪಿಯಿಂದ ಶಾಕಿಂಗ್ ನ್ಯೂಸ್: ಮಿಸ್ ಮಾಡದೇ ಈ ನ್ಯೂಸ್
ವಾರ್ಡ್​ ನಂಬರ್​ 55ಕ್ಕೆ ಪವರ್​ ಸ್ಟಾರ್ ಪುನೀತ್​ ಹೆಸರು
ನಟ ದಿವಂಗತ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಗೆ ಮತ್ತೊಮ್ಮೆ ಸರ್ಕಾರ ಗೌರವ ಸಲ್ಲಿಸಿದೆ. ಬಿಬಿಎಂಪಿ ವಾರ್ಡ್​ಗಳ ಮರು ವಿಂಗಡಣೆ ಮಾಡಿ, ವಾರ್ಡ್​ ನಂಬರ್​ 55ಕ್ಕೆ ದಿವಂಗತ ನಟ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ಮಾಡಿದೆ. ಡಿ ಲಿಮಿಟೇಷನ್ ಅಂತಿಮಗೊಳಿಸಿ ಹೊರಡಿಸಿದ ರಾಜ್ಯ ಪತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ. ವಾರ್ಡ್ ಸಂಖ್ಯೆ 55 ಈ ಮೊದಲು ಕಾವೇರಿ ನಗರ ಆಗಿತ್ತು. ಇದೀಗ ಕಾವೇರಿ ನಗರದ ಹೆಸರು ಬದಲಿಸಿ ಪುನೀತ್ ರಾಜ್ ಕುಮಾರ್ ವಾರ್ಡ್​ ಎಂದು ನಾಮಕರಣ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಭಾರೀ ಮಳೆ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌

Fri Jul 15 , 2022
ರಾಜ್ಯದಲ್ಲಿ ಈಗಾಗಲೇ ಮಳೆಯಿಂದ ಹಲವಾರು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಿಸಲಾಗಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದ್ದು, ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ತುಂತುರು ಹಾಗೂ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ […]

Advertisement

Wordpress Social Share Plugin powered by Ultimatelysocial