ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು ̤

ಬೆಂಗಳೂರು, ಫೆಬ್ರವರಿ 4: ಉಡುಪಿ ಜಿಲ್ಲೆಯಲ್ಲಿ ಉದ್ಭವಿಸಿರುವ ಹಿಜಾಬ್ ಮತ್ತು ಕೇಸರಿ ಶಾಲು ವಿವಾದ ಪ್ರಕರಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದ್ದು, ಕಾಲೇಜಿನಿಂದ ಕಾಲೇಜಿಗೆ, ಜಿಲ್ಲೆಯಿಂದ ಜಿಲ್ಲೆಗೆ ವಿವಾದ ಹಬ್ಬುತ್ತಿದೆ.ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಉಡುಪಿಯಲ್ಲಿ ಹಿಜಾಬ್ ವಿವಾದ ಉಂಟಾಗಿರುವ ಕಾಲೇಜಿನ ಪ್ರಾಂಶುಪಾಲರು ಸ್ಥಳೀಯ ಬಿಜೆಪಿ ಶಾಸಕ ಕೆ.ರಘುಪತಿ ಭಟ್ ಅಣತಿಯಂತೆ ವರ್ತಿಸುತ್ತಿದ್ದಾರೆ, ಅವರು ಹೊರಡಿಸುವ ಡಿಕ್ಟ್ಯಾಟ್ ಅನ್ನು ಚಾಚೂ ತಪ್ಪದೇ ಪಾಲಿಸುತ್ತಿದ್ದಾರೆಂದು ಆರೋಪಿಸಿದ್ದಾರೆ.ಬೆಂಗಳೂರನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತಾಡಿದ ಸಿದ್ದರಾಮಯ್ಯ, ಶಾಲೆಯ ಆಡಳಿತ ಮತ್ತು ಸಮವಸ್ತ್ರದ ವಿಷಯದಲ್ಲಿ ತಲೆಹಾಕಲು ರಘುಪತಿ ಭಟ್ ಯಾರು? ಸರ್ಕಾರದ ಸಂಬಳ ಪಡೆಯುವ ಕಾಲೇಜಿನ ಪ್ರಾಂಶುಪಾಲರು, ರಘುಪತಿ ಭಟ್ ಹೇಳುವುದನ್ನು ಯಾಕೆ ಕೇಳುತ್ತಿದ್ದಾನೆ ಎಂದು ಪ್ರಶ್ನಿಸಿದ್ದಾರೆ.ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುವ ಬಗ್ಗೆ ಆಕ್ಷೇಪಣೆ ವ್ಯಕ್ತಡಿಸಿದ ವಿರೋಧ ಪಕ್ಷದ ನಾಯಕರು, ಹಿಜಾಬ್ ಮತ್ತು ಕೇಸರಿ ವಸ್ತ್ರದ ನಡುವೆ ತಳುಕು ಹಾಕುವ ಪ್ರಮೇಯವೇ ಉದ್ಭವಿಸುವುದಿಲ್ಲ. ಹಿಂದೂ ವಿದ್ಯಾರ್ಥಿಗಳು ಉದ್ದೇಶಪೂರ್ವಕವಾಗಿ ಕೇಸರಿ ಶಾಲು ಹಾಕಿಕೊಂಡು ಬರಲು ಆರಂಭಿಸಿದ್ದಾರೆ. ಆದರೆ ಮುಸ್ಲಿಂ ಸಮುದಾಯದ ಮಕ್ಕಳು ಶತಮಾನಗಳಿಂದ ಹಿಜಾಬ್ ಧರಿಸಿ ಶಾಲಾ- ಕಾಲೇಜುಗಳಿಗೆ ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.ಪ್ರಕರಣದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ರಾಜಕೀಯ ಹೇಳಿಕೆ ನೀಡಿದ್ದಾರೆ ಎಂದ ಸಿದ್ದರಾಮಯ್ಯ, ಈಗ ಹಿಜಾಬ್ ಪ್ರಕರಣ ಕೋರ್ಟ್‌ನ ಮೆಟ್ಟಿಲೇರಿರುವುದರಿಂದ ನ್ಯಾಯಾಲಯ ಏನು ಹೇಳುತ್ತದೆ ಅನ್ನುವುದನ್ನು ಕಾದು ನೋಡಬೇಕಿದೆ ಎಂದರು.ವೈಯಕ್ತಿಕವಾಗಿ, ಒಬ್ಬ ವಕೀಲನಾಗಿ ಮತ್ತು ವಿರೋಧ ಪಕ್ಷದ ನಾಯಕನಾಗಿ ತಾನು ಹೇಳುವುದೇನೆಂದರೆ, ಮುಸ್ಲಿಂ ಸಮುದಾಯದ ಮಕ್ಕಳು ಕಾಲೇಜಿಗೆ ಬರುವಾಗ ಹಿಜಾಬ್ ಧರಿಸದಂತೆ ತಡೆಯುವುದು ಸಂವಿಧಾನ ಬಾಹಿರವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.ಮುಸ್ಲಿಂ ವಿದ್ಯಾರ್ಥಿನಿಯರ ಶೈಕ್ಷಣಿಕ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವುದೇ ಸಂಘ ಪರಿವಾರದ ನಿಜವಾದ ಅಜೆಂಡಾ, ಹಿಜಾಬ್ ಒಂದು ನೆಪ ಅಷ್ಟೆ. ಬೇಟಿ ಬಚಾವೋ, ಬೇಟಿ ಪಡಾವೋ ಎಂದು ಆಗಾಗ ಘೋಷಣೆ ಕೂಗುವ ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ಈ ವಿವಾದ ಬಂದಿಲ್ಲವೇ? ಎಂದು ಪ್ರಶ್ನಿಸಿದರು.ಬಿಜೆಪಿ ಮತ್ತು ಸಂಘ ಪರಿವಾರ ಬಹಳ ವ್ಯವಸ್ಥಿತವಾಗಿ ಹಿಜಾಬ್ ವಿವಾದವನ್ನು ರಾಜ್ಯದಾದ್ಯಂತ ಪಸರಿಸುವ ಪ್ರಯತ್ನ ನಡೆಸುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಕ್ಷಣ ಮಧ್ಯೆ ಪ್ರವೇಶಿಸಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವ ಇಂತಹ ಕೃತ್ಯಗಳನ್ನು ತಡೆಯಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಿಜಾಬ್, ಕೇಸರಿ ಶಾಲು ಧರಿಸಬಾರದು. ಅವರ ಜಾತಿ, ಧರ್ಮ ಅವರ ಜೊತೆಯೇ ಇರುತ್ತದೆ. ಶಿಕ್ಷಣ ಸಂಸ್ಥೆಗಳ ಆಡಳಿತದಲ್ಲಿ ಈ ರೀತಿ ಆಗಬಾರದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅಭಿಪ್ರಾಯಪಟ್ಟಿದ್ದಾರೆ.ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ, ಈಗಲಾದರೂ ಸರ್ಕಾರ ಈ ವಿವಾದ ತಡೆಯಲು ಮುಂದಾಗಬೇಕು. ಇಂತಹ ಸುದ್ದಿಗಳು ಎಲ್ಲ ಕಡೆ ಹರಡಿದರೆ ಬಹಳ ದೊಡ್ಡ ಸಮಸ್ಯೆ ಆಗುತ್ತದೆ ಎಂದು ತಿಳಿಸಿದ್ದಾರೆ.ರಾಮದುರ್ಗದಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬಂದ ಪ್ರಕರಣ ವಿಚಾರವಾಗಿ ಮಾತನಾಡಿದ ಸತೀಶ್ ಜಾರಕಿಹೊಳಿ, ಈ ರೀತಿ ಆಗಬಾರದು ಎಂದು ನಾವು ಕಳಕಳಿ ಮನವಿ ಮಾಡುತ್ತೇವೆ. ಧಾರ್ಮಿಕ ವ್ಯವಸ್ಥೆ ಆ ರೀತಿ ಮಾಡುತ್ತಿದೆ. ಮೊದಲು ಧರ್ಮಗಳನ್ನು ಪೂರ್ಣ ಅಧ್ಯಯನ ಮಾಡಬೇಕು. ಕೇಸರಿ ಶಾಲು ಹಾಕಿ, ಆ ಶಾಲು ಹಾಕಿ ಅಂತಾ ಧರ್ಮಗಳು ಹೇಳಿಲ್ಲ. ಧರ್ಮಗಳು ಒಳ್ಳೆಯದನ್ನು ಹೇಳುತ್ತವೆ. ಆದರೆ ಕೆಲವು ಸಂಘಟನೆಗಳಿಂದ ದಾರಿ ತಪ್ಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ವಿದ್ಯಾರ್ಥಿಗಳು ಕಲಿಯುವಂತಹ ವಯಸ್ಸಿದು. ಜ್ಞಾನ ಪಡೆಯುವ ಕಾಲದಲ್ಲಿ ಧರ್ಮ, ಜಾತಿ ಸಮಸ್ಯೆ ಆಗಬಾರದು. ವಿವಾದ ಇಲ್ಲಿಗೆ ನಿಲ್ಲಬೇಕು ಎಂಬುದೇ ನಮ್ಮ ಮನವಿ. ಈ ಬೆಳವಣಿಗೆ ಖಂಡಿತವಾಗಿಯೂ ಸರಿಯಲ್ಲ. ಸರ್ಕಾರಕ್ಕೆ ತನ್ನದೇ ಆದ ನಿರ್ಬಂಧ ಇದೆ. ಸರ್ಕಾರ ಏನೂ ಮಾಡುವುದಕ್ಕೆ ಆಗಲ್ಲ. ಆಯಾ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳು ಮುಂದಾಗಿ ಸಂಧಾನದ ಮೂಲಕ ಶಮನ ಮಾಡಬೇಕು. ಸಮವಸ್ತ್ರ ನೀತಿ ನಮ್ಮಂತಹ ದೊಡ್ಡ ದೇಶದಲ್ಲಿ ಮಾಡುವುದು ಕಷ್ಟ ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಅಕ್ಷಯ್ ಕುಮಾರ್:ಟ್ರೋಲಿಂಗ್ ಮತ್ತು ಮೀಮ್‌ಗಳ ಸಾರಾಂಶ;

Sat Feb 5 , 2022
ಬಾಲಿವುಡ್ ಸೆಲೆಬ್ರಿಟಿಗಳು ಈ ಹಿಂದೆ ಟ್ರೋಲಿಂಗ್ ಮತ್ತು ಮೀಮ್‌ಗಳ ಸಾರಾಂಶವಾಗಿದ್ದಾರೆ, ಅವುಗಳಲ್ಲಿ ಕೆಲವು ಅಂತರರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿವೆ. ಆಲಿಯಾ ಭಟ್ ಮತ್ತು ವರುಣ್ ಧವನ್ ಮುಂತಾದ ನಟರು ತಮ್ಮ ಚಲನಚಿತ್ರಗಳ ನಿರ್ದಿಷ್ಟ ದೃಶ್ಯಕ್ಕಾಗಿ ಅಥವಾ ಸಂದರ್ಶನಗಳಲ್ಲಿನ ವಿವಾದಾತ್ಮಕ ಹೇಳಿಕೆಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ಮೀಮ್ ಟೆಂಪ್ಲೇಟ್‌ಗಳಾಗಿದ್ದಾರೆ. ನಟ ಅಕ್ಷಯ್ ಕುಮಾರ್ ಇದೀಗ ಇತ್ತೀಚಿನ ಸೆಲೆಬ್ರಿಟಿಯಾಗಿದ್ದು, ಫಿಟ್‌ನೆಸ್ ಮತ್ತು ಜೀವನಶೈಲಿಯನ್ನು ತೆಗೆದುಕೊಳ್ಳುವುದರಿಂದ ಬಹಳಷ್ಟು ಜನರು ಮನನೊಂದಿದ್ದಾರೆ ಮತ್ತು ವಿನೋದಪಡಿಸುತ್ತಿದ್ದಾರೆ. ತಿಳಿಯದವರಿಗೆ, ಅಕ್ಷಯ್ […]

Advertisement

Wordpress Social Share Plugin powered by Ultimatelysocial