ಬೆಂಗಳೂರು ಮಳೆ: ಬಿಬಿಎಂಪಿ, ಬೆಸ್ಕಾಂ ಸಹಾಯವಾಣಿಗೆ ದೂರುಗಳ ಸುರಿಮಳೆ

ಬೆಂಗಳೂರು, ಮೇ 19: ಬೆಂಗಳೂರಿನಲ್ಲಿ ಧಾರಾಕಾರ ಮಳೆಯಿಂದಾಗಿ ಜನ ಜೀವನ ಅಸ್ತವ್ಯಸ್ತವಾಗಿದ್ದು, ಬಿಬಿಎಂಪಿ, ಬೆಸ್ಕಾಂ ಸಹಾಯವಾಣಿಗೆ ಬರುತ್ತಿರುವ ದೂರುಗಳ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗಿದೆ. ಮಳೆ ಅವಾಂತರದ ಬಗ್ಗೆ ಜನರು ದೂರು ನೀಡುತ್ತಲೇ ಇದ್ದಾರೆ.

ಪ್ರತಿ ದಿನ ಬಿಬಿಎಂಪಿ ಸಹಾಯವಾಣಿಗೆ ಸಾಮಾನ್ಯವಾಗಿ 150 ಕರೆಗಳು ಬರುತ್ತವೆ.

ಆದರೆ ನಗರದಲ್ಲಿ ಮಳೆಯಾದ ನಂತರ ಕರೆಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದ್ದು ಪ್ರತಿದಿನ ಸುಮಾರು 500 ಕರೆಗಳು ಬರುತ್ತಿವೆ. ಬಿಬಿಎಂಪಿಗೆ ಬರುತ್ತಿರುವ ಕರೆಗಳಲ್ಲಿ ಪ್ರಮುಖವಾಗಿ ಮಳೆಯಿಂದ ಆಗಿರುವ ಅವ್ಯವಸ್ಥೆ ಬಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ಬಂದಿವೆ.

ಮನೆಗೆ ನೀರು ನುಗ್ಗಿರುವ ಬಗ್ಗೆ, ಮರಗಳು ಉರುಳಿ ಬಿದ್ದಿರುವ ಬಗ್ಗೆ ಹೆಚ್ಚಿನ ಸಂಖ್ಯೆಯ ದೂರುಗಳು ಬಿಬಿಎಂಪಿ ಮತ್ತು ಬೆಸ್ಕಾಂ ಸಹಾವಾಣಿಗೆ ಬಂದಿವೆ. ಬೆಸ್ಕಾಂ ಸಹಾಯವಾಣಿಗೆ 13,734 ಕರೆಗಳು ಬಂದಿದ್ದು, ಇದರಲ್ಲಿ 13,165 ಕರೆಗಳು ವಿದ್ಯುತ್ ಸ್ಥಗಿತದ ಸಮಸ್ಯೆ ಬಗ್ಗೆಯೇ ಇದ್ದವು.

“ಬಿಬಿಎಂಪಿ ಸಹಾವಾಣಿಗೆ ಬರುವ ಕರೆಗಳು ಸಾಮಾನ್ಯವಾಗಿ ಹಾನಿಗೊಳಗಾದ ಬೀದಿದೀಪಗಳು, ಕಸ ಸಂಗ್ರಹಣೆ ಬಗ್ಗೆ ಸಂಬಂಧಿಸಿದ್ದಾಗಿರುತ್ತವೆ. ಆದರೆ ಮಂಗಳವಾರ ರಾತ್ರಿ ಮಳೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸುಮಾರು 450 ರಿಂದ 500 ಕರೆಗಳು ಬಂದಿವೆ” ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ.

ರಸ್ತೆಗಳು ಜಲಾವೃತವಾದ ಬಗ್ಗೆ ಮತ್ತು ಮನೆಗಳಿಗೆ ನೀರು ನುಗ್ಗಿರುವ ಸಮಸ್ಯೆಗಳ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಮರಗಳು ಉರುಳಿ ಬೀಳುವ ಮತ್ತು ಕೊಂಬೆ ಮುರಿದು ಬಿದ್ದಿರುವ ಬಗ್ಗೆ 37 ದೂರುಗಳನ್ನು ಸ್ವೀಕರಿಸಲಾಗಿದೆ. ಸಮಸ್ಯೆಗಳಿಗೆ ಸ್ಪಂದಿಸಲು, ಬಿಬಿಎಂಪಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಮಹದೇವಪುರ ವಲಯದಿಂದ ಹೆಚ್ಚು ದೂರು; ಬಿಬಿಎಂಪಿ ಸಹಾಯವಾಣಿಗೆ ಹೆಚ್ಚಿನ ಕರೆಗಳು ಮಹದೇವಪುರ ವಲಯದಿಂದ ಬಂದಿವೆ. ಬೆಂಗಳೂರು ಪೂರ್ವ, ರಾಜರಾಜೇಶ್ವರಿ ನಗರ ಮತ್ತು ಬೊಮ್ಮನಹಳ್ಳಿ ವಲಯದಿಂದ ಹೆಚ್ಚಿನ ದೂರುಗಳು ಬಂದಿವೆ. “ಬೆಂಗಳೂರು ದಕ್ಷಿಣ ವಲಯದಲ್ಲಿ ಭಾರಿ ಮಳೆಯಾಗಿದ್ದರೂ, ದೂರುಗಳ ಸಂಖ್ಯೆ ಕಡಿಮೆಯಾಗಿದೆ ಎಂದು” ಅಧಿಕಾರಿ ಹೇಳಿದ್ದಾರೆ.

ಮಹದೇವಪುರ ವಲಯದಿಂದ ಹೆಚ್ಚಿನ ಕರೆಗಳು ಬಂದಿದ್ದು, ನಂತರ ಪೂರ್ವ, ಆರ್‌ಆರ್ ನಗರ ಮತ್ತು ಬೊಮ್ಮನಹಳ್ಳಿ ವಲಯಗಳಿಂದ ಹೆಚ್ಚಿನ ಕರೆಗಳು ಬಂದಿವೆ. “ದಕ್ಷಿಣ ವಲಯದಲ್ಲಿ ಭಾರೀ ಮಳೆಯಾಗಿದ್ದರೂ, ದೂರುಗಳ ಸಂಖ್ಯೆ ತುಲನಾತ್ಮಕವಾಗಿ ಕಡಿಮೆಯಾಗಿದೆ” ಎಂದು ಅಧಿಕಾರಿ ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದಿಢೀರ್ ದೆಹಲಿಗೆ ಹೋರಾಟ ಸಿಎಂ ಬೊಮ್ಮಾಯಿ

Fri May 20 , 2022
ಬೆಂಗಳೂರು, ಮೇ 20- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಿಢೀರನೆ ದೆಹಲಿಗೆ ತೆರಳುತ್ತಿರುವುದು ಸಂಪುಟ ವಿಸ್ತರಣೆ/ಪುನಾರಚನೆ ವಿಷಯಕ್ಕೆ ಮತ್ತೆ ರೆಕ್ಕೆ-ಪುಕ್ಕ ಬಂದಿದೆ. ಇಂದು ಮಧ್ಯಾಹ್ನ ನವದೆಹಲಿಗೆ ತೆರಳಲಿರುವ ಅವರು ಸಂಜೆ ಪಕ್ಷದ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಇಂದು ಮಧ್ಯಾಹ್ನದವರೆಗೂ ಸಿಎಂ ದೆಹಲಿಗೆ ತೆರಳುವ ಕಾರ್ಯಕ್ರಮ ಇರಲಿಲ್ಲ. ಅವರ ಇಂದಿನ ಪ್ರವಾಸ ಪಟ್ಟಿಯಲ್ಲೂ ಇದು ಇರಲಿಲ್ಲ. ಮೂಲಗಳ ಪ್ರಕಾರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ […]

Advertisement

Wordpress Social Share Plugin powered by Ultimatelysocial