63 ಲಕ್ಷ ಮನೆಗಳ ಕೆಡವಲು ಬಿಜೆಪಿ ಯೋಜನೆ:

ನವದೆಹಲಿ: ದೆಹಲಿಯ ಅನಧಿಕೃತ ಕಾಲೊನಿಗಳು, ಕೊಳೆಗೇರಿಗಳಲ್ಲಿರುವ 63 ಲಕ್ಷ ಮನೆಗಳನ್ನು ಕೆಡವಲು ಕೇಂದ್ರದ ಬಿಜೆಪಿ ಸರ್ಕಾರ ಉದ್ದೇಶಿಸಿದೆ. ಅವರ (ಬಿಜೆಪಿ) ‘ಬುಲ್ಡೋಜರ್’ ನೀತಿಯನ್ನು ಎಎಪಿ ಸರ್ಕಾರ ವಿರೋಧಿಸುತ್ತದೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.

ಎಎಪಿ ಸರ್ಕಾರವು ನಿಮ್ಮ ಜತೆಗಿರಲಿದೆ ಎಂದು ದೆಹಲಿಯ ಜನತೆಗೆ ನಾನು ಭರವಸೆ ನೀಡುತ್ತೇನೆ. ಬಿಜೆಪಿಯ ತೆರವು ಕಾರ್ಯಾಚರಣೆ ವಿರುದ್ಧ ಜೈಲಿಗೆ ಹೋಗಲೂ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.

ಜನರಿಂದ ಹಣ ವಸೂಲಿ ಮಾಡಲು ದೆಹಲಿಯಲ್ಲಿ ಬಿಜೆಪಿ ನಡೆಸುತ್ತಿರುವ ತೆರವು ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಒತ್ತಾಯಿಸಿದ್ದಾರೆ.

ಭಾರಿ ವಿರೋಧದ ನಡುವೆಯೂ ಗುರುವಾರವೂ ತೆರವು ಕಾರ್ಯಾಚರಣೆ ಮುಂದುವರಿದಿತ್ತು. ಉತ್ತರ ದೆಹಲಿ ಮಹಾನಗರಪಾಲಿಕೆ ಮತ್ತು ದಕ್ಷಿಣ ದೆಹಲಿ ಮಹಾನಗರಪಾಲಿಕೆಗಳು ತಮ್ಮ ವ್ಯಾಪ್ತಿಯಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಗುರುವಾರ ನಡೆಸಿದ್ದವು. ಈ ವೇಳೆ ಸ್ಥಳೀಯರು ಭಾರಿ ವಿರೋಧ ವ್ಯಕ್ತಪಡಿಸಿದ್ದರು. ಕಲ್ಲುತೂರಾಟ ಮತ್ತು ಲಾಠಿ ಪ್ರಹಾರವೂ ನಡೆದಿತ್ತು. ಮದನ್‌ಪುರ್‌ ಖಾದರ್‌ ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಎಪಿ ಶಾಸಕ ಅಮಾನತುಲ್ಲಾ ಖಾನ್‌ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಏಕಾಏಕಿ ಹಿಮ್ಮುಖವಾಗಿ ಚಲಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್..!

Fri May 13 , 2022
ಪದೇಪದೆ ಅಗ್ನಿ ಅನಾಹುತಕ್ಕೆ ಕಾರಣವಾಗಿದ್ದ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಈಗ ಮತ್ತೊಮ್ಮೆ ಸುದ್ದಿಗೆ ಗ್ರಾಸವಾಗಿದೆ. ಓಲಾ ಎಸ್1 ಪ್ರೊ ಸ್ಕೂಟರ್ ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದ ತನ್ನಷ್ಟಕ್ಕೆ ತಾನೇ ರಿವರ್ಸ್ ಗೇರ್ ಗೆ ಶಿಫ್ಟ್ ಆಗಿ ಹಿಂದಕ್ಕೆ ಬಂದು ಅದರ ಸವಾರ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಈ ವಿಚಾರವನ್ನು ಪಲ್ಲವ್ ಮಹೇಶ್ವರಿ ಎಂಬುವರು ಲಿಂಕ್ಡ್ ಇನ್ ನಲ್ಲಿ ಹಂಚಿಕೊಂಡಿದ್ದು, ನನ್ನ ತಂದೆ ಸ್ಕೂಟರ್ ಅನ್ನು ಪಾರ್ಕ್ ಮಾಡುವ […]

Advertisement

Wordpress Social Share Plugin powered by Ultimatelysocial