ಕೈ-ಕಾಲುಗಳಿಲ್ಲದೇ ವಾಹನ ಓಡಿಸುವ ವ್ಯಕ್ತಿಗೆ ಆನಂದ್ ಮಹೀಂದ್ರಾ ಕೊಟ್ರು ಭರ್ಜರಿ ಆಫರ್.!

ಕೈ-ಕಾಲುಗಳಿಲ್ಲದೇ ವಾಹನ ಓಡಿಸುವ ವ್ಯಕ್ತಿಗೆ ಆನಂದ್ ಮಹೀಂದ್ರಾ ಕೊಟ್ರು ಭರ್ಜರಿ ಆಫರ್.!

ನವದೆಹಲಿ: ಎರಡು ಕೈ-ಕಾಲುಗಳಿಲ್ಲದ ದೆಹಲಿಯ ವ್ಯಕ್ತಿಯೊಬ್ಬರು, ಲೋಡ್ ಸಾಗಿಸಲು ಕ್ಯಾರಿಯರ್ ಹೊಂದಿರುವ ಮಾರ್ಪಡಿಸಿದ ದ್ವಿಚಕ್ರ ವಾಹನವನ್ನು ಓಡಿಸುತ್ತಿರುವ ವಿಡಿಯೋ ನೆಟ್ಟಿಗರ ಗಮನಸೆಳೆದಿದೆ. ಇದನ್ನು ನೋಡಿದ ನಂತರ ಉದ್ಯಮಿ ಆನಂದ್ ಮಹೀಂದ್ರ  ಸೋಮವಾರ ಆ ವ್ಯಕ್ತಿಗೆ ವಿಶೇಷವಾದ ಆಫರ್ ಒಂದನ್ನು ನೀಡಿದ್ದಾರೆ.

ವಿಶೇಷ ಚೇತನ ವ್ಯಕ್ತಿಯೋರ್ವ ಮನೆಯ ಜವಾಬ್ದಾರಿ ಹೊತ್ತುಕೊಂಡು ವಿಭಿನ್ನವಾಗಿ ವಿನ್ಯಾಸ ಮಾಡಿರುವ ಬೈಕ್​​ ಸಹಾಯದಿಂದ ಕೂಲಿ ಕೆಲಸ ಮಾಡುತ್ತಾರೆ.

ಅದರಿಂದ ಬರುವ ಹಣದಿಂದ ಹೆಂಡತಿ, ಇಬ್ಬರು ಮಕ್ಕಳು ಹಾಗೂ ವಯಸ್ಸಾದ ತಂದೆಯನ್ನ ನೋಡಿಕೊಳ್ಳುತ್ತಿದ್ದಾರೆ. ಕೆಲ ದಾರಿಹೋಕರು ಈತನ ಪ್ರಶ್ನೆಗೊಳಪಡಿಸಿದಾಗ ಇವರು ತಮ್ಮ ಜೀವನದ ಕಥೆಯನ್ನು ಹೇಳಿಕೊಂಡಿದ್ದಾರೆ.

ಜೊತೆಗೆ ತಾನು ಯಾವ ರೀತಿಯಾಗಿ ವಾಹನ ತಯಾರು ಮಾಡಿದ್ದಾರೆಂಬುದನ್ನ ಈ ವಿಡಿಯೋದಲ್ಲಿ ತಿಳಿಸಿದ್ದಾರೆ. ಇದರ ವಿಡಿಯೋ ತುಣುಕೊಂದನ್ನ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಟ್ವಿಟರ್​​​ ​​ನಲ್ಲಿ ಅಕೌಂಟ್​ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸ್ಕೂಟರ್​​ನ್ನ ಸರಕು ವಾಹನದ ರೀತಿಯಾಗಿ ಪರಿವರ್ತನೆ ಮಾಡಿಕೊಂಡಿರುವ ವ್ಯಕ್ತಿ ಎಕ್ಸಲರೇಟ್​ ಹಾಗೂ ಬ್ರೇಕ್​​ಗಳನ್ನ ತಮ್ಮ ಭುಜದ ಭಾಗದಿಂದ ನಿರ್ವಹಣೆ ಮಾಡುತ್ತಾರೆ.

ಟ್ವಿಟರ್‌ನಲ್ಲಿ ತನ್ನ 8.6 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳೊಂದಿಗೆ ಸೋಮವಾರ ವ್ಯಾಪಾರದ ಉದ್ಯಮಿ ಆನಂದ ಮಹಿಂದ್ರಾ ಹಂಚಿಕೊಂಡ ಈ ವಿಡಿಯೋ ಇದುವರೆಗೆ 30.5K ಲೈಕ್‌ಗಳನ್ನು ಪಡೆದಿದೆ.

ಉದ್ಯಮಿ ಆನಂದ್ ಮಹೀಂದ್ರ ತಮ್ಮ ಟ್ವಿಟರ್​​​ ​​ನಲ್ಲಿ ಅಕೌಂಟ್​ನಲ್ಲಿ “ಇದು ಯಾರು ಎಂದು ನನಗೆ ತಿಳಿದಿಲ್ಲ. ಎಷ್ಟು ಹಳೆಯ ವಿಡಿಯೋ ಎಂಬುದು ಸಹ ಗೊತ್ತಿಲ್ಲ. ಈ ವ್ಯಕ್ತಿಯ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಇವರನ್ನು ಮಹೀಂದ್ರ ಲಾಜಿಸ್ಟಿಕ್​​ ಸಂಸ್ಥೆಯಲ್ಲಿ ಬ್ಯುಸಿನೆಸ್​​ ಅಸೋಸಿಯೇಟ್​​ ಮಾಡಿ ಎಂದು ಹೇಳಿದ್ದಾರೆ. ಈ ಮೂಲಕ ವಿಶೇಷ ಚೇತನ ವ್ಯಕ್ತಿಗೆ ಬಹುದೊಡ್ಡ ಉದ್ಯೋಗದ ಆಫರ್ ಅನ್ನು ಆನಂದ್ ಮಹಿಂದ್ರಾ​​ ನೀಡಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪೋರ್ಚುಗೀಸ್ ಕಾಲದ ರಸ್ತೆ ಅಭಿವೃದ್ಧಿಪಡಿಸಲು ಗೋವಾ ಅಸ್ತು, ಹರ್ಷ ವ್ಯಕ್ತಪಡಿಸಿದ ಸ್ಥಳೀಯರು

Tue Dec 28 , 2021
ಬೆಳಗಾವಿ: ಹಲವು ವರ್ಷಗಳಿಂದ ಸಂಚಾರ ಸ್ಥಗಿತಗೊಂಡಿದ್ದ ಪೋರ್ಚುಗೀಸ್ ಕಾಲದ ರಸ್ತೆಯನ್ನು ಅಭಿವೃದ್ಧಿಪಡಿಸಲು ಗೋವಾ ಸರ್ಕಾರ ಹಸಿರು ನಿಶಾನೆ ತೋರಿದ್ದು, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಪರ್ವಾಡ, ಕಣಕುಂಬಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯು ಗೋವಾದ ಸತ್ರೆಯಿಂದ ಕರ್ನಾಟಕದ ಪರ್ವಾಡ್ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಗೋವಾ ಸರ್ಕಾರದ ಈ ನಿರ್ಧಾರವು ಪರ್ವಾಡ ಗ್ರಾಮಸ್ಥರು ಒಂದು ಗಂಟೆಯೊಳಗೆ ಕಾಲ್ನಡಿಗೆಯಲ್ಲಿ ಗೋವಾ ಗಡಿಯನ್ನು ತಲುಪಲು ಸಹಾಯ ಮಾಡುತ್ತದೆ ಮತ್ತು ಅವರ […]

Advertisement

Wordpress Social Share Plugin powered by Ultimatelysocial