~ ಅನಂತ ಸಾಧ್ಯತೆಗಳ ಹೊಸ ಯುಗಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿವೆ ಎರಡು ದಿಗ್ಗಜ ಸಂಸ್ಥೆಗಳು~!

ಬೆಂಗಳೂರು, April 10, 2022: ಕೆಜಿಎಫ್ ಮತ್ತು ಸಲಾರ್‌ಗಳಂತಹ ಪ್ರಖ್ಯಾತ ಚಲನಚಿತ್ರ ನಿರ್ಮಾಣ ಮಾಡುತ್ತಿರುವ ಹಾಗೂ ಭಾರತದ ಪ್ರಮುಖ ಚಲನಚಿತ್ರ ನಿರ್ಮಾಣ ಕಂಪನಿಗಳಲ್ಲಿ ಒಂದಾಗಿರುವ ಹೊಂಬಾಳೆ ಫಿಲ್ಮ್ಸ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಜತೆ ವಿಶೇಷ ಸಹಭಾಗಿತ್ವದಲ್ಲಿ ಕ್ರೀಡೆ ಮತ್ತು ಚಲನಚಿತ್ರ ಮನರಂಜನೆಯ ಪರಿಪೂರ್ಣ ಸಮ್ಮಿಳನಕ್ಕೆ ಸಹಿ ಮಾಡಿದೆ. ಈ ಸಹಯೋಗವು ಭರಪೂರ ಮನೋರಂಜನೆ, ಗ್ಲಾಮರ್, ಚಲನಚಿತ್ರಗಳು, ಕ್ರೀಡೆಗಳ ಅದ್ಭುತ ಸಂಗಮವನ್ನುಂಟುಮಾಡಲಿದೆ.. ಕ್ರಿಕೆಟ್ ಮತ್ತು ಚಲನಚಿತ್ರಗಳಲ್ಲಿ ಅತ್ಯುತ್ಸಾಹ ಹೊಂದಿರುವ ದೇಶದಲ್ಲಿ, ಬೆಂಗಳೂರಿನ ಎರಡು ಅತ್ಯಂತ ಪ್ರೀತಿಯ ಕ್ಷೇತ್ರಗಳ ಹಿಂದೆಂದೂ ನೋಡಿರದ ಸಂಯೋಜನೆಯನ್ನು ಈ ಸಹಭಾಗಿತ್ವವು ರೂಪಿಸುತ್ತದೆ, ಭಾವನೆಗಳು ಮತ್ತು ಬಲದ ರೋಲರ್ ಕೋಸ್ಟರ್ ಜತೆ ಅಭಿಮಾನಿಗಳಿಗೆ ಹೈ ವೋಲ್ಟೇಜ್ ಥ್ರಿಲ್ ನೀಡುವ ಗುರಿಯನ್ನು ಹೊಂದಲಾಗಿದೆ.

ಈ ಸಹಭಾಗಿತ್ವವನ್ನು ಉದ್ದೇಶಿಸಿ ಹೊಂಬಾಳೆ ಫಿಲ್ಮ್ಸ್ ಸಂಸ್ಥಾಪಕರಾದ ವಿಜಯ್ ಕಿರಂಗಂದೂರು ಅವರು ಹೀಗೆ ಹೇಳಿದ್ದಾರೆ: “ಸಿನಿಮಾ ಮಾಡುವುದು ನನ್ನ ಪ್ಯಾಷನ್. ಕ್ರಿಕೆಟ್ ಪ್ರೇಮಿಯಾಗಿ ಮತ್ತು ಕನ್ನಡಿಗನಾಗಿ ಕ್ರಿಕೆಟ್ ನನ್ನನ್ನು ಯಾವಾಗಲೂ ಆಕರ್ಷಿಸುತ್ತಿದೆನಮ್ಮ ಅಭಿಮಾನಿಗಳಿಗೆ ಭರಪೂರ ಮನರಂಜನೆ ಮತ್ತು ಥ್ರಿಲ್ ಅನ್ನು ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಮತ್ತು ಆರ್‌ಸಿಬಿ ಎರಡಕ್ಕೂ ನಮ್ಮ ಬೆಂಗಳೂರೇ ತವರಾಗಿರುವುದರಿಂದ ಈ ಪಾಲುದಾರಿಕೆ ಸಹಜವಾಗಿದೆ. ಸ್ವಲ್ಪ ಸಮಯದಿಂದ ಈ ಸಹಯೋಗದ ಬಗ್ಗೆ ಕೆಲಸ ಮಾಡುತ್ತಿರುವ ನಾವು ಈ ಬಗ್ಗೆ ತುಂಬಾ ಉತ್ಸುಕರಾಗಿದ್ದೇವೆ, 2022 ನಮ್ಮೆಲ್ಲರಿಗೂ ರಾಯಲ್‌ ಆಗಿರಲಿದೆ. ಕ್ರೀಡೆ ಮತ್ತು ಮನರಂಜನೆ ವಿಚಾರದಲ್ಲಿ ಕ್ಷಣಮಾತ್ರದಲ್ಲಿ ಬದಲಾಗುವ ಅಭಿಮಾನಿಗಳ ನಡವಳಿಕೆ ಮತ್ತು ಆದ್ಯತೆಗಳನ್ನು ಅರಿತು ಅವರ ನಾಡಿಮಿಡಿತಕ್ಕೆ ಬಲ ನೀಡುವ ಜತೆ ಹೊಸ ಮನರಂಜನಾ ಮಾರ್ಗಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಈಡೇರಿಸುವ ಮೂಲಕ ಈ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಪ್ರಸರಣ ಉದ್ಯಮಕ್ಕೆ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ. ಇದಕ್ಕಾಗಿ ಕೈ ಜೋಡಿಸಲು, ಆರಂಭಿಸಲು ಮತ್ತು ರಾಯಲ್ ಆಗಿ ಸೆಲಬ್ರೇಟ್‌ ಮಾಡಲು ಎದುರು ನೋಡುತ್ತಿದ್ದೇವೆ. ಕ್ರೀಡೆ ಮತ್ತು ಚಲನಚಿತ್ರ ಮನರಂಜನಾ ವಲಯದಲ್ಲಿ ನಮ್ಮ ಅಭಿಮಾನಿಗಳಿಗೆ ಮ್ಯಾಜಿಕ್ ಮೂಮೆಂಟ್‌ಗಳನ್ನು ಸೃಷ್ಟಿಸಲು ನಾವು ಒಟ್ಟಾಗಿ ಪ್ರಯತ್ನಿಸುತ್ತೇವೆ”.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಾನ್ಯ ಪತ್ರಿಕಾ ಮಿತ್ರರಿಗೆ ನಮಸ್ಕಾರಗಳು!

Sun Apr 10 , 2022
ಅಣ್ಣ ಜಿ.ಮನೋಹರ ನಾಯ್ಡು ಅವರು ಕೇವಲ 500 ರುಪಾಯಿಗಳಿಂದ 48 ವರ್ಷಗಳ ಹಿಂದೆ ಸ್ಥಾಪನೆ ಮಾಡಿದ ನಿಮ್ಮ ಲಹರಿ ಸಂಸ್ಥೆ ಸಂಗೀತ ಕ್ಷೇತ್ರ ಹಾಗು ಸಿನಿಮಾ ಕ್ಷೇತ್ರಕ್ಕೆ ಮೀಸಲಾಗಿದೆ. ಈ ಸಂಸ್ಥೆ ಯಲ್ಲಿ ನೂರಾರು ಗಾಯಕ, ಗಾಯಕಿಯರು, ಸಂಗೀತ ನಿರ್ದೇಶಕರು ಬೆಳಕಿಗೆ ಬಂದಿದ್ದಾರೆ. ಸಂಗೀತ ಕ್ಷೇತ್ರದ ಜೊತೆಯಲ್ಲಿ ಹಲವು ಸದಭಿರುಚಿಯ ಸಿನಿಮಾಗಳು ಲಹರಿ ಸಂಸ್ಥೆಯಡಿ ನಿರ್ಮಾಣಗೊಂಡಿವೆ. ಇದು ಕನ್ನಡಿಗರ ಸಹಕಾರ ಮತ್ತು ಪ್ರೋತ್ಸಾಹದಿಂದ ಸಾಧ್ಯವಾಗಿದೆ. ಇತ್ತೀಚೆಗೆ ಲಹರಿ ಸಂಸ್ಥೆ ನಿರ್ಮಾಣ […]

Advertisement

Wordpress Social Share Plugin powered by Ultimatelysocial