ಬಾಲಕರನ್ನ ಬಳಸಿ ಬೈಕ್​ ಕಳ್ಳತನ ಮಾಡಿಸ್ತಿದ್ದ ಪೇದೆ ಅರೆಸ್ಟ್

ಬಾಲಕರನ್ನ ಬಳಸಿ ಬೈಕ್​ ಕಳ್ಳತನ ಮಾಡಿಸ್ತಿದ್ದ ಪೇದೆ ಅರೆಸ್ಟ್​​: ಈತನ ಖತರ್ನಾಕ್​ ಐಡಿಯಾ ಕೇಳಿ ಪೊಲೀಸರೇ ಶಾಕ್​!

ಬೆಂಗಳೂರು: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಜನರಿಗೆ ರಕ್ಷಣೆ ಒದಗಿಸಬೇಕಾದ ಹಾಗೂ ಸಾರ್ವಜನಿಕರ ಸ್ವತ್ತಿನ ಮೇಲೆ ಕಳ್ಳಕಾಕರ ಕಣ್ಣು ಬೀಳದಂತೆ ಕಾವಲು ಕಾಯಬೇಕಾದ ಪೊಲೀಸಪ್ಪನೇ ಕಳ್ಳತನಕ್ಕೆ ಸಾಥ್​ ನೀಡಿ ಪೊಲೀಸ್​ ಇಲಾಖೆ ತಲೆತಗ್ಗಿಸುವಂತೆ ಮಾಡಿದ್ದಾನೆ.

ಹೌದು, ಅಪ್ರಾಪ್ತರನ್ನು ಬಳಸಿಕೊಂಡು ಬೈಕ್​​ಗಳನ್ನು ಕಳ್ಳತನ ಮಾಡಿಸ್ತಿದ್ದ ಕಾನ್​ಸ್ಟೇಬಲ್​ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ್ನು ಹೊನ್ನಪ್ಪ ಅಲಿಯಾಸ್​ ರವಿ ಎಂದು ಗುರುತಿಸಲಾಗಿದೆ. 2016ರ ಬ್ಯಾಚ್​ನ ಸಿವಿಲ್ ಕಾನ್ಸ್​ಟೇಬಲ್ ಆಗಿರುವ ಹೊನ್ನಪ್ಪ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ. ಸದ್ಯ ಒಒಡಿ ಮೇಲೆ ಐಪಿಎಸ್ ಅಧಿಕಾರಿಯೊಬ್ಬರ ಪರ್ಸನಲ್ ಕಾರು ಡ್ರೈವರ್ ಆಗಿದ್ದ.

ಹೊನ್ನಪ್ಪ ಜತೆಗೆ ರಾಜಸ್ಥಾನದ ರಮೇಶ್ ಹಾಗೂ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರ ಬಂಧಿಸಲಾಗಿದೆ. ಓಎಲ್ ಎಕ್ಸ್​ನಲ್ಲಿ ಯಾವ ಗಾಡಿಗೆ ಬೇಡಿಕೆ ಇದೆ ಅಂತಹ ಗಾಡಿಯನ್ನೇ ಹುಡುಕಿ ಕಳ್ಳತನ ಮಾಡಿಸುತ್ತಿದ್ದ. ಅಪ್ರಾಪ್ತರು ಬೈಕ್ ಕಳ್ಳತನ ಮಾಡಿ ಹೊನ್ನಪ್ಪನಿಗೆ ತಂದು ಕೊಡ್ತಿದ್ರು. ಬಳಿಕ ಬೈಕ್ ಮಾರಾಟ ಮಾಡಿ ಐದರಿಂದ ಆರು ಸಾವಿರ ರೂ. ಹಣವನ್ನು ಹುಡುಗರಿಗೆ ನೀಡ್ತಿದ್ದ.

ಬೆಂಗಳೂರು, ಬೆಂಗಳೂರು ಹೊರವಲಯ, ಹಾವೇರಿಯ ರಾಣಿಬೆನ್ನೂರು ಸೇರಿದಂತೆ ಅನೇಕ ಕಡೆ ಬೈಕ್​ಗಳ ಕಳ್ಳತನ ಮಾಡಿಸಿದ್ದಾನೆ. ತಪಾಸಣೆ ವೇಳೆ ಪೊಲೀಸರು ಗಾಡಿ ಹಿಡಿದಾಗ ಅವರಿಗೆ ಕರೆ ಮಾಡಿ ನಾನು ಪೊಲೀಸ್ ನಮ್ಮ ಕಡೆಯವರು ಬಿಡಿ ಅಂತ ಬಿಡಿಸುತ್ತಿದ್ದ. ಇದೀಗ ಪೊಲೀಸರ ಕೈಗೆ ಹೊನ್ನಪ್ಪ ಸಿಕ್ಕಿಬಿದ್ದಿದ್ದು, ಬಾಡಿವಾರೆಂಟ್ ಮೇಲೆ ವಶಕ್ಕೆ ಪಡೆದು ಮಾಗಡಿ ರಸ್ತೆ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.

ಖದೀಮರಿಂದ ಈವರೆಗೆ ಮಾರಾಟವಾದ 53 ಬೈಕ್​ಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ರಾಜೀವ್‌ ಗಾಂಧಿ ಹಂತಕಿ ನಳಿನಿ ಪೆರೋಲ್ ಮೇಲೆ ಬಿಡುಗಡೆ

Fri Dec 24 , 2021
ಚೆನ್ನೈ: ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಇಂದು ಒಂದು ತಿಂಗಳ ಪೆರೋಲ್ ಮೇಲೆ ಬಿಡುಗಡೆಯಾಗಲಿದ್ದಾರೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಏಳು ಅಪರಾಧಿಗಳಲ್ಲಿ ಒಬ್ಬರಾದ ನಳಿನಿ ಶ್ರೀಹರನ್ ಅವರಿಗೆ ತಮಿಳುನಾಡು ಸರ್ಕಾರ ಪೆರೋಲ್ ನೀಡಿದೆ ಎಂದು ಮದ್ರಾಸ್ ಹೈಕೋರ್ಟ್‌ಗೆ ಗುರುವಾರ ತಿಳಿಸಲಾಗಿದೆ. ನಳಿನಿ ಅವರ ತಾಯಿ ಎಸ್ ಪದ್ಮಾ ಅವರ ಹೇಬಿಯಸ್ ಕಾರ್ಪಸ್ ಅರ್ಜಿಯು ಹೆಚ್ಚಿನ ವಿಚಾರಣೆಗೆ ಬಂದಾಗ ನ್ಯಾಯಮೂರ್ತಿಗಳಾದ ಪಿಎನ್ ಪ್ರಕಾಶ್ […]

Advertisement

Wordpress Social Share Plugin powered by Ultimatelysocial