ಅಲ್ಲಾಹ್, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ

ಅಲ್ಲಾಹ್, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ: ಸಿ.ಟಿ.ರವಿ

ಚಿಕ್ಕಮಗಳೂರು, ಡಿ.27: ಅಲ್ಲಾಹ್, ಈಶ್ವರ, ಜೀಸಸ್ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅಭಿಪ್ರಾಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾಹುವನ್ನು ದೇವರು ಎಂದು ಒಪ್ಪಿಕೊಳ್ಳಬಹುದು.

ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ. ಆದರೆ ಇಸ್ಲಾಂ ಆದ ತಕ್ಷಣ ಮಸೀದಿ ಹೊರತುಪಡಿಸಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತದೆ. ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ನಿರಾಕರಣೆ ಇದೆ. ಈ ವಿಚಾರದಲ್ಲಿ ಎರಡು ಧರ್ಮಗಳು ಆಲೋಚನೆ ಮಾಡಿದರೆ ಉತ್ತಮ ಎಂದು ಹೇಳಿದರು.

ಎಷ್ಟು ಮತಿ ಇದೆಯೋ ಅಷ್ಟು ಮತ ಅನ್ನೋ ಮುಕ್ತತೆಗೆ ಅವಕಾಶ ಸಿಗುತ್ತದೆ. ಕೆಲವರು ಮುಕ್ತತತೆಯ ಪ್ರತಿಪಾದನೆಯ ಬಗ್ಗೆ ಮಾತನಾಡುವವರು ಈ ಬಗ್ಗೆ ಮೌನವಾಗಿದ್ದರೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸುವುದಕ್ಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತದೆ ಎಂದು ಸಿ.ಟಿ.ರವಿ ಸರ್ವಧರ್ಮ ಸಮನ್ವಯತೆಯ ಬಗ್ಗೆ ಮಾತನಾಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

 

Please follow and like us:

Leave a Reply

Your email address will not be published. Required fields are marked *

Next Post

ದ್ವೇಷ ಭಾಷಣ, ಚರ್ಚ್ ಗಳ ಮೇಲೆ ದಾಳಿ: ಬಿಜೆಪಿಗೆ ಕಾಂಗ್ರೆಸ್ ತರಾಟೆ

Mon Dec 27 , 2021
ಡಿ. 27: ಬಿಜೆಪಿ ಆಡಳಿತ ಇರುವ ರಾಜ್ಯಗಳಲ್ಲಿ ಚರ್ಚ್ ಗಳ ಮೇಲೆ ದಾಳಿಯುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದೆ. ”ಹರಿದ್ವಾರದ ದ್ವೇಷ ಭಾಷಣ, ಚರ್ಚ್ ಗಳ ಮೇಲೆ ದಾಳಿ, ಧರ್ಮದ ಹೆಸರಿನಲ್ಲಿ ಹತ್ಯೆ ಸಮಾಜ ಹಾಗೂ ರಾಜಕೀಯ ಕುಸಿಯುತ್ತಿರುವ ಲಕ್ಷಣವಾಗಿದೆ. ಹಿಂದುತ್ವವಾದಿಗಳು ಬರ್ಬರತೆ ತೋರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ತ್ವರಿತವಾಗಿ ಹೇಗೆ ಕುಸಿಯುತ್ತದೆ ಎಂಬುದಕ್ಕೆ ಭಾರತ ಉದಾಹರಣೆಯಾಗುತ್ತಿದೆ” ಎಂದು ರಾಜ್ಯ […]

Advertisement

Wordpress Social Share Plugin powered by Ultimatelysocial