ಸಂವಿಧಾನ ಶಿಲ್ಪಿ,ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಪಲ್ಲವಿ ಗಣೇಶ್.

 

ಅವರು ತಾಲ್ಲೂಕಿನ ಬೂಕನಕೆರೆ ಹೋಬಳಿ ವಿಠಲಾಪುರ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷೆಯಾಗಿದ್ದ ಸಾಕಮ್ಮ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಎರಡು ವರ್ಷದಿಂದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತಿರುವ ಪಲ್ಲವಿ ಗಣೇಶ್ ಇಂದು ಪ್ರಭಾರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಗೀತಾ ತಿಳಿಸಿದರು.ನೂತನವಾಗಿ ಪ್ರಭಾರ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರಭಾರ ಅಧ್ಯಕ್ಷೆ ಪಲ್ಲವಿ ಗಣೇಶ್ ನನ್ನ ಅವಧಿಯಲ್ಲಿ ಪಕ್ಷಭೇದ ಮರೆತು ಸರ್ವ ಸದಸ್ಯರು ಜೊತೆಗೂಡಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಪ್ರತಿ ಗ್ರಾಮಗಳಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪಗಳು, ಕುಡಿಯುವ ನೀರು, ಜಾನುವಾರು ನೀರು ಕುಡಿಯುವ ತೊಟ್ಟಿ, ಜಾನುವಾರು ಕೊಟ್ಟಿಗೆ ಹಾಗೂ ಕೆರೆ-ಕಟ್ಟೆ ಅಭಿವೃದ್ಧಿ ಇದರ ಜೊತೆಗೆ ಸರ್ಕಾರ ಇಲಾಖೆಯಿಂದ ಬರುವ ಸವಲತ್ತುಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಪಂಚಾಯಿತಿಯ ವ್ಯಾಪ್ತಿಯಲ್ಲಿ ಗ್ರಾಮಗಳ ಅಭಿವೃದ್ಧಿ ಶ್ರಮಿಸಿ,ಕ್ಷೇತ್ರದ ಶಾಸಕರ ಸಹಕಾರದಿಂದ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸುತ್ತ ನನ್ನ ಅಧಿಕಾರದ ಅವಧಿಯಲ್ಲಿ ಯಾವುದೇ ಲೋಪದೋಷಗಳು ಬರದ ಹಾಗೆ ಸರ್ಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳನ್ನು ಅರ್ಹ ಫಲಾನುಭವಿಗಳಿಗೆ ಸಿಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಪಿ ಡಿ ಕುಮಾರ್ ಪಿ ಜಿ ಡಿ ಕೊಪ್ಪಲು,ರಾಧ ಹರೀಶ್, ಕೆ ಪಿ ಕುಮಾರ್,ಸವಿತಾ ಸಂತೋಷ್ ಕುಮಾರ್, ಮುಖಂಡ ಪ್ರಜ್ವಲ್, ಸೇರಿದಂತೆ ಉಪಸ್ಥಿತರಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶಿಕ್ಷಣ ಸಂಸ್ಥೆಗಳಿಗೆ ಪೋಷಕರ ಸಹಕಾರ ಅಗತ್ಯ.

Thu Mar 2 , 2023
  ಇಂದಿನ ಗಣಕಯಂತ್ರ ಯುಗದಲ್ಲಿ ಗ್ರಾಮೀಣ ಭಾಗದಲ್ಲಿನ ಕನ್ನಡ ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿದು ಬೆಳೆಯಬೇಕಾದರೆ ಪಾಲಕರ ಸಹಕಾರ ಅಗತ್ಯವಾಗಿದೆ ಎಂದು ಮಾಡಿಯಾಳ ವಪ್ಪತೇಶ್ವರ ಮಠದ ಮರುಳಸಿದ್ಧ ಮಹಾಸ್ವಾಮಿಗಳು ಹೇಳಿದರು.ಪೂರ ಗ್ರಾಮದ ಇಂದಿರಾ ಹಿರಿಯ ಪ್ರಾಥಮಿಕ ಶಾಲೆ ವಾರ್ಷಿಕ ಸ್ನೇಹ ಸಮ್ಮೇಳನದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗಲಿ ಎಂದು ಸರ್ಕಾರ ಸಾಕಷ್ಟು ಯೋಜನೆಗಳು ತಂzರು ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲಾ, ಹೀಗಾಗಿ ಪಾಲಕರು ಖಾಸಗಿ […]

Advertisement

Wordpress Social Share Plugin powered by Ultimatelysocial