ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ!

ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಮಗುವನ್ನು ಕೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದ ಮನೆಯಲ್ಲಿ ಕಾಣಿಸಿಕೊಂಡ ಬೆಳಕು ಸ್ಥಳೀಯರಲ್ಲಿ ಆತಂಕ ತಂದ ಘಟನೆ ನಡೆದಿದೆ.ಮನೆಯ ಮಾಲೀಕ ಹಲ್ಲೆಗೆರೆ ಶಂಕರ್ ಅವರನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು.ಕಳೆದ ವರ್ಷ ನಡೆದ ಪ್ರಕರಣದ ನಂತರ ಆಂಧ್ರಹಳ್ಳಿಯಲ್ಲಿರುವ ಕೋಟ್ಯಂತರ ರೂಪಾಯಿ ಮೌಲ್ಯದ ಹಲ್ಲೆಗೆರೆ ಶಂಕರ್ ಅವರ ಮನೆ ಖಾಲಿ ಬಿದ್ದಿದೆ. ಈ ಮನೆಯಲ್ಲಿ ದೆವ್ವ, ಭೂತಗಳಿವೆ ಎಂದು ಸ್ಥಳೀಯರು ಕತೆಕಟ್ಟಿ ಅಮಾವಾಸ್ಯೆ ದಿನ ಈ ರಸ್ತೆಯಲ್ಲಿ ಓಡಾಡಲು ಭಯಪಡುತ್ತಾರೆ ಎನ್ನಲಾಗಿದೆ.ಅಮಾವಾಸ್ಯೆಯ ಮಾರನೇ ದಿನ ಮಧ್ಯರಾತ್ರಿ ಹಲ್ಲೆಗೆರೆ ಶಂಕರ್ ಅವರ ಬಂಗಲೆಯಲ್ಲಿ ಬೆಳಕು ಕಾಣಿಸಿಕೊಂಡಿದೆ. ಮನೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರೂ, ಬೆಳಕು ಕಂಡು ಸ್ಥಳೀಯರು ಗಾಬರಿಯಾಗಿ ಶಂಕರ್ ಅವರ ಸಂಬಂಧಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಮಧ್ಯರಾತ್ರಿ ಮೂರ್ನಾಲ್ಕು ಮಂದಿ ಮನೆಯೊಳಗೆ ಹುಡುಕಾಟ ನಡೆಸಿದಾಗ ದೇವರ ಮನೆ ಬಳಿಯಿಂದ ದೆವ್ವ ದೆವ್ವ ಎಂದು ಕಿರುಚಾಡುತ್ತಾ ವ್ಯಕ್ತಿಯೊಬ್ಬ ಹೊರಗೆ ಬಂದಿದ್ದಾನೆ. ಗಾಬರಿಯಾದ ಮೂರ್ನಾಲ್ಕು ಮಂದಿ ದೂರ ಸರಿದಿದ್ದಾರೆ. ಕೊನೆಗೆ ಕೂಗಾಡಿದವನನ್ನು ವಿಚಾರಿಸಿದಾಗ ಮನೆಯಲ್ಲಿ ಕಳ್ಳತನಕ್ಕೆ ಬಂದಿರುವ ಕಳ್ಳ ಎನ್ನುವುದು ಗೊತ್ತಾಗಿದೆ.ಕಳ್ಳತನಕ್ಕೆ ಬಂದಿದ್ದ ಭರತ್ ಕುಮಾರ್, ಮೊಬೈಲ್ ಟಾರ್ಚ್ ಬೆಳಕಲ್ಲಿ ಮನೆಯಲ್ಲಿ ಹುಡುಕಾಡುತ್ತಿದ್ದಾಗಲೇ ಜನ ಬಂದಿದ್ದರಿಂದ ದೆವ್ವ ದೆವ್ವ ಎಂದು ಕೂಗಾಡಿ ಪರಾರಿಯಾಗಲೆತ್ನಿಸಿದ್ದಾನೆ. ಆತನನ್ನು ಹಿಡಿದು ಥಳಿಸಿದ ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಆರೋಗ್ಯಕರ ದೇಹಕ್ಕೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ̤ ಈ ಪದಾರ್ಥಗಳನ್ನು ಸೇವಿಸಿ!

Sat Feb 5 , 2022
ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಆರೋಗ್ಯಕರ ದೇಹಕ್ಕೆ ಬಲವಾದ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಅವಶ್ಯಕವಾಗಿದೆ ಈಗ ಹೆಚ್ಚಿನ ಅವಶ್ಯಕವಾಗಿ ಕಾಣುತ್ತಿದೆ. ಇತ್ತೀನ ದಿನದಲ್ಲಿ ಶೀತಗಳು ಮತ್ತು ಜ್ವರವು ಚಳಿಗಾಲದಲ್ಲಿ ಸಾಮಾನ್ಯವಾಗಿದೆ, ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ಋತುಮಾನದ ಕಾಯಿಲೆಗಳನ್ನು ಪಡೆಯುವ ಸಾಧ್ಯತೆ ಹೆಚ್ಚು.ಕೋವಿಡ್ 19 ನಿಂದ ರಕ್ಷಿಸಲು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ.ಆರೋಗ್ಯ ತಜ್ಞರ ಪ್ರಕಾರ, ಕೆಟ್ಟ ಆಹಾರ ಪದ್ಧತಿ ಮತ್ತು ಜಡ ಜೀವನಶೈಲಿಯಿಂದಾಗಿ, ಪ್ರತಿರಕ್ಷಣಾ ವ್ಯವಸ್ಥೆಯು […]

Advertisement

Wordpress Social Share Plugin powered by Ultimatelysocial