ಸುಚಿತ್ರಾ ಹೆಗಡೆ ನಮ್ಮ ನಡುವಿನ ಬರಹಗಾರ್ತಿ

ಡಿಸೆಂಬರ್ 30 ಸುಚಿತ್ರಾ ಹೆಗಡೆ ಅವರ ಜನ್ಮದಿನ. ಅವರು ಉತ್ತರ ಕನ್ನಡ ಜಿಲ್ಲೆಯ, ಕುಮಟಾದ, ಕತಗಾಲ ಗ್ರಾಮದವರು. ತಾಯಿ ಶಾರದಾ ಭಟ್. ತಂದೆ ಪಿ.ಆರ್ ಭಟ್ಟರು ಹೈಸ್ಕೂಲು ಉಪಾಧ್ಯಾಯರಾಗಿದ್ದರು. ಕುಮಟಾದ ಬಾಳಿಗಾ ಕಾಲೇಜಿನಲ್ಲಿ ಆಂಗ್ಲ ಸಾಹಿತ್ಯದಲ್ಲಿ ಶ್ರೇಷ್ಠ ದರ್ಜೆಯಲ್ಲಿ ಪದವಿ ಪಡೆದ ಸುಚಿತ್ರಾ ಕಮಲಾ ಬಾಳಿಗಾ ಕಾಲೇಜಿನಿಂದ ರ್ಯಾಂಕ್ ಸಾಧನೆಯೊಂದಿಗೆ ಬಿಎಡ್ ಪದವಿ ಪಡೆದರು. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಆಂಗ್ಲ ಸಾಹಿತ್ಯದಲ್ಲಿ ಮತ್ತೊಂದು ರ್ಯಾಂಕ್ ಕಿರೀಟದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಈಗವರ ಹೋಮ್ ಟೌನ್ ಕಾರವಾರ, ವಾಸದ ಊರು ಮೈಸೂರು.
ಎರಡು ದಶಕಗಳಿಗೂ ಹೆಚ್ಚು ಕಾಲ ಹೈಸ್ಕೂಲು, ಕಾಲೇಜುಗಳಲ್ಲಿ ಉಪಾಧ್ಯಾಯಿನಿಯಾಗಿ, ಪ್ರಾಂಶುಪಾಲೆಯಾಗಿ, ಆಂಗ್ಲ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ ಸುಚಿತ್ರಾ ಮುಂದೆ ತಮ್ಮದೇ ಆದ ಸೃಜನಶೀಲ ಆಸಕ್ತಿಗಳತ್ತ ಕಾರ್ಯಪ್ರವೃತ್ತರಾಗಿದ್ದಾರೆ.
ಸುಚಿತ್ರಾ ಹೆಗಡೆ ಅವರ ಅನೇಕ ಕಥೆ, ಕವಿತೆ, ಪ್ರಬಂಧ, ಚಿಂತನ, ಪ್ರವಾಸ ಕಥನ ಇತ್ಯಾದಿ ವೈವಿಧ್ಯಗಳು ನಿರಂತರವಾಗಿ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಮೂಡಿಬರುತ್ತಿವೆ. ಕಾಲೇಜು ದಿನಗಳಲ್ಲಿ ತುಷಾರ ಮಾಸಪತ್ರಿಕೆಯ ರಾಜ್ಯಮಟ್ಟದ ಕವನ ರಚನಾ ಸ್ಪರ್ದೆಯಲ್ಲಿ ಅವರಿಗೆ ಪ್ರಥಮ ಬಹುಮಾನ ಬಂದಾಗ ತೀರ್ಪುಗಾರರಾಗಿದ್ದವರು ಮಹಾನ್ ವಿಮರ್ಶಕರಾದ ಡಾ. ಜಿ. ಎಸ್. ಆಮೂರ ಅವರು.
ಸುಚಿತ್ರಾ ಅವರಿಗೆ ದೇಶ ಸುತ್ತುವುದು ಮತ್ತು ಕೋಶ ಓದುವುದು ಎರಡೂ ನೆಚ್ಚಿನ ಹವ್ಯಾಸಗಳು. ಅವರ ವಿಶ್ವಪರ್ಯಟನೆಯ ಕುರಿತಾದ ಸ್ವಾರಸ್ಯಕರ ಬರಹಗಳು ಪತ್ರಿಕೆಗಳಲ್ಲಿ ಮತ್ತು ಅಂತರಜಾಲದಲ್ಲಿ ಬಹಳಷ್ಟು ಮೂಡಿಬಂದಿವೆ.
ಸುಚಿತ್ರಾ ಅವರ ಮೊದಲ ಕವನ ಸಂಕಲನ ‘ಈ ಚಿಟ್ಟೆ ಕಾಡಿದ ಹಾಗೆ’. ಅವರ ಪ್ರವಾಸ ಬರಹಗಳ ಸಂಕಲನ ‘ಜಗವ ಸುತ್ತುವ ಮಾಯೆ’ ಅಪಾರ ಮೆಚ್ಚುಗೆ ಗಳಿಸಿದೆ’.
ಸುಚಿತ್ರಾ ಅವರ ಕವಿತೆಯೊಂದನ್ನು ಓದುತ್ತಿದ್ದೆ
ಕನ್ನಡಿ ಮತ್ತು ಕಿಟಕಿ
ಬಾಲ್ಯದಲ್ಲೊಂದು ಕವಿತೆ ಬರೆದೆ
ನನ್ನ ಪ್ರೀತಿಯ
ಕನ್ನಡಿ ಮತ್ತು ಕಿಟಕಿಯ ಬಗ್ಗೆ
ಹೊಳೆಯುವ ಕನ್ನಡಿ
ಸಪಾಟಾದ ಚೌಕಟ್ಟು
ದೊಡ್ಡವಳಾದಂತೆ ಮತ್ತದೇ ಕವಿತೆ
ನಾನೇ ಬರೆದೆ ಎಂದುಕೊಂಡೆ
ಇನ್ಯಾರೋ ಬರೆಯುತ್ತಿದ್ದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ದೇವುಡು ಕಾದಂಬರಿಯ ನಾಯಕ

Sun Jan 1 , 2023
ಕನ್ನಡ ಸಾಹಿತ್ಯಲೋಕದ ಮಹತ್ಕಾದಂಬರಿಗಳಾದ ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’, ‘ಮಹಾದರ್ಶನ’, ‘ಮಯೂರ’, ‘ಅಂತರಂಗ’ ಮುಂತಾದವನ್ನು ಸೃಷ್ಟಿಸಿದವರು ದೇವುಡು ನರಸಿಂಹ ಶಾಸ್ತ್ರಿಗಳು. ರಂಗಭೂಮಿ ಮತ್ತು ಚಲನಚಿತ್ರಗಳಲ್ಲೂ ದೇವುಡು ಕೆಲಸ ಮಾಡಿದವರು.ಮೈಸೂರಿನಲ್ಲಿ ರಾಜಪುರೋಹಿತರೂ, ಆಸ್ಥಾನ ಪಂಡಿತರೂ ಎಂದು ಹೆಸರುವಾಸಿಯಾದ ವಂಶದಲ್ಲಿ 1897ರ ಡಿಸೆಂಬರ್ 27ರಂದು ದೇವುಡು ಜನಿಸಿದರು. ಇವರ ತಂದೆ 1880ರಲ್ಲಿ ಸ್ಥಾಪನೆಯಾದ ಲಕ್ಷ್ಮೀನರಸಿಂಹ ಪ್ರೆಸ್ ಸ್ಥಾಪಕರಲ್ಲಿ ಒಬ್ಬರಾದ ವೇದಶಾಸ್ತ್ರ ಸಂಪನ್ನರು.ದೇವುಡು ಹನ್ನೆರಡು ವರ್ಷಗಳ ವಯಸ್ಸಲ್ಲೇ ರಾಮಾಯಣ, ಭಾರತ, ಭಾಗವತ, ಬ್ರಹ್ಮಾಂಡ ಪುರಾಣಗಳನ್ನು ಓದಿ ಮುಗಿಸಿದ್ದರು. […]

Advertisement

Wordpress Social Share Plugin powered by Ultimatelysocial