ಬಾಳೆಹೂವಿನಲ್ಲಿರುವ ʼಔಷಧೀಯʼ ಗುಣ ತಿಳಿದ್ರೆ ಅಚ್ಚರಿಪಡ್ತೀರಾ!

ಹಿಳೆಯರ ಸೌಂದರ್ಯ ಹೆಚ್ಚಿಸುವ ಹೂವು, ಆರೋಗ್ಯಕ್ಕೂ ಒಳ್ಳೆಯದು. ಉತ್ತಮ ಆರೋಗ್ಯಕ್ಕೆ ಈ ಹೂವುಗಳನ್ನು ತಿನ್ನಿ…ಆರೋಗ್ಯದಿಂದ ಇರುವುದನ್ನು ರೂಢಿಸಿಕೊಳ್ಳಿ. ಅಷ್ಟಕ್ಕೂ ಯಾವುದು ಈ ಹೂವು ಅಂತೀರಾ? ಬಾಳೆ ಹೂವು.ಬಾಳೆ ಹೂವಿನಲ್ಲಿ ಪ್ರೋಟೀನ್, ಫಾಸ್ಫರಸ್, ಐರನ್, ಕಾಪರ್, ಪೊಟಾಷಿಯಮ್, ಕ್ಯಾಲ್ಶಿಯಮ್, ಕಾರ್ಬೋಹೈಡ್ರೇಟ್ ಗಳಿವೆ.ಇದರ ಸಾಂಬಾರು ಮಾಡಿಕೊಂಡು ತಿಂದರೆ ಸಾಕಷ್ಟು ಪ್ರಯೋಜನಗಳಿವೆ. ಬಾಳೆ ಹೂವಿನಲ್ಲಿರುವ ಇಥನಾಲ್ ಅಂಶ ಗಾಯವನ್ನು ಬೇಗ ಗುಣವಾಗುವಂತೆ ಮಾಡುತ್ತದೆ. ಹಾಗೂ ಇನ್ಫೆಕ್ಷನ್ ಕಡಿಮೆ ಮಾಡಲು ಸಹಾಯಕ. ಬಾಳೆ ಹೂವಿನಲ್ಲಿರುವ ಆಂಟಿ ಆಕ್ಸಿಡೆಂಟ್, ಕ್ಯಾನ್ಸರ್ ಗೆ ಕಾರಣವಾಗುವ ಕಲುಷಿತ ಅಂಶಗಳನ್ನು ತೊಲಗಿಸುತ್ತದೆ. ಬಾಳೆ ಹೂವು ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಕಬ್ಬಿಣಾಂಶ ಹೆಚ್ಚಿರುವುದರಿಂದ ರಕ್ತಹೀನತೆಯನ್ನು ನಿಯಂತ್ರಿಸುತ್ತದೆ.ಬಾಳೆ ಹೂವುಗಳ ಸಾಂಬಾರನ್ನು ಉಪಯೋಗಿಸುವುದರಿಂದ ಮಹಿಳೆಯರ ಅನೇಕ ಋತುಬಾಧೆ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗೂ ಎದೆ ಹಾಲು ಹೆಚ್ಚಾಗುತ್ತದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹುಡುಗನೊಂದಿಗಿನ ಸ್ನೇಹ ಪ್ರಶ್ನಿಸಿದ ತಾಯಿಯನ್ನೇ ಹತ್ಯೆಗೈದ ಮಗಳು

Fri Dec 30 , 2022
ಹುಡುಗನೊಂದಿಗಿನ ಸ್ನೇಹವನ್ನ ಪ್ರಶ್ನಿಸಿದ ತಾಯಿಯನ್ನು ಮಗಳೇ ಗೆಳೆಯನೊಂದಿಗೆ ಸೇರಿ ಹತ್ಯೆ ಮಾಡಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಥಾಣೆಯ ಮುಂಬ್ರಾದ 17 ವರ್ಷದ ಹುಡುಗಿ ಮತ್ತು ಆಕೆಯ ಗೆಳೆಯ ತಮ್ಮ ಸ್ನೇಹವನ್ನು ವಿರೋಧಿಸಿದ ತಾಯಿಯನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ಬುಧವಾರ ನಡೆದಿದ್ದು, ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳನ್ನು ಬಂಧಿಸುವ ಪ್ರಯತ್ನ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಹುಡುಗನೊಂದಿಗಿನ ಸ್ನೇಹಕ್ಕಾಗಿ 37 ವರ್ಷದ ತಾಯಿ ಮಗಳನ್ನು ಖಂಡಿಸಿದ ನಂತರ ಹದಿಹರೆಯದ ಹುಡುಗಿ ಸಿಟ್ಟಾಗಿದ್ದಳು. ನಂತರ […]

Advertisement

Wordpress Social Share Plugin powered by Ultimatelysocial