‘ಬಾಂಡ್ ರವಿ’ ಆಗಿ ಅಬ್ಬರಿಸಿದ ನಟ ಪ್ರಮೋದ್

‘ಗೀತಾ ಬ್ಯಾಂಗಲ್ ಸ್ಟೋರ್’, ‘ರತ್ನನ್ ಪ್ರಪಂಚ’, ‘ಪ್ರೀಮಿಯರ್ ಪದ್ಮಿನಿ’ ಸಿನಿಮಾಗಳ ಖ್ಯಾತಿಯ ನಟ ಪ್ರಮೋದ್ ಈಗ ‘ಬಾಂಡ್ ರವಿ’ ಸಿನಿಮಾದಲ್ಲಿ ಹೀರೋ ಆಗಿದ್ದಾರೆ. ಇದೊಂದು ಪಕ್ಕಾ ಮಾಸ್ ಆಕ್ಷನ್ ಲವ್ ಸ್ಟೋರಿ ಇರುವ ಸಿನಿಮಾ. ಈಚೆಗಷ್ಟೇ ‘ಬಾಂಡ್ ರವಿ’ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಪ್ರಜ್ವಲ್ ಎಸ್.ಪಿ. ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರುವ ಈ ಸಿನಿಮಾವು ಡಿ.9ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ. ಟ್ರೇಲರ್ ಲಾಂಚ್ ವೇಳೆ ಚಿತ್ರತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿದೆ.ನಮ್ಮ ಬಾಂಡ್ ರವಿ ಸಿನಿಮಾವು ದೊಡ್ಡ ಬ್ರ್ಯಾಂಡ್ ಆಗಿ ಎಲ್ಲರ ಮನಸ್ಸಲ್ಲೂ ಹತ್ತಾರು ವರ್ಷ ಉಳಿದುಕೊಳ್ಳುತ್ತಾನೆ. ಇಷ್ಟೊಂದು ಕಾನ್ಫಿಡೆಂಟ್ ಆಗಿ ಹೇಳುತ್ತಿದ್ದೇನೆ ಅಂದ್ರೆ ಸಿನಿಮಾದಲ್ಲೇನೋ ವಿಷಯ ಇದೆ ಎಂದರ್ಥ. ‘ರತ್ನನ್ ಪ್ರಪಂಚ’ ಆದ ಮೇಲೆ ಒಂದು ಒಳ್ಳೆಯ ಕಥೆ ಹುಡುಕುತ್ತಿದ್ದೆ. ಸುಮ್ನೆ ಮಾಸ್ ಸಿನಿಮಾ ಮಾಡೋಕಾಗಲ್ಲ, ಮಾಸ್ ಡೈಲಾಗ್ ಹೇಳೋಕಾಗಲ್ಲ ಉತ್ತಮ ಕಥೆ ಇರಬೇಕು. ಆ ರೀತಿ ಹುಡುಕಾಟದಲ್ಲಿದ್ದಾಗ ಸಿಕ್ಕ ಕಥೆಯೇ ಬಾಂಡ್ ರವಿ. ಕಥೆ ಕೇಳಿದಾಗಿಂದ ಬಾಂಡ್ ರವಿ ಪಾತ್ರ ನನ್ನನ್ನು ಕಾಡಿತ್ತು. ಈ ಕಥೆ ನನಗೆ ಅಷ್ಟೊಂದು ಇಷ್ಟವಾಗಿತ್ತು. ಈ ಸಿನಿಮಾ ನನಗೆ ಕೊನೆವರೆಗೂ ನನೆಪಾಗಿ ಉಳಿಯಲಿದೆ. ಉತ್ತಮ ಕಂಟೆಂಟ್, ಉತ್ತಮ ಪಾತ್ರ ಎರಡೂ ನನಗೆ ಈ ಸಿನಿಮಾ ಮೂಲಕ ಸಿಕ್ಕಿದೆ..’ ಎಂದು ಪ್ರಮೋದ್ ಹೇಳುತ್ತಾರೆ.’ಮಾರ್ಚ್‌ನಲ್ಲಿ ನಿರ್ದೇಶಕರಾದ ಪ್ರಜ್ವಲ್ ಅವರನ್ನು ಭೇಟಿ ಮಾಡಿದೆ. ಅವರು ಕಥೆ ಹೇಳುವಾಗ ನನಗೆ ಎಷ್ಟು ಎಕ್ಸೈಟ್‌ಮೆಂಟ್ ಇತ್ತೋ, ಈಗಲೂ ಅಷ್ಟೇ ಎಕ್ಸೈಟ್‌ಮೆಂಟ್ ಇದೆ. ಈ ಸಿನಿಮಾದಲ್ಲಿ ಮಾಸ್, ಕ್ಲಾಸ್ ಎಲ್ಲವೂ ಇದೆ. ಚಿತ್ರಮಂದಿರದ ಒಳಗೆ ಹೋದ್ರೆ ಒಂದು ಸೆಕೆಂಡ್ ಕೂಡ ಬೋರ್ ಆಗೋದಿಲ್ಲ. ಅಷ್ಟು ಚೆನ್ನಾಗಿ ಚಿತ್ರಕಥೆಯನ್ನು ಹೆಣೆದಿದ್ದಾರೆ. ಟೀಸರ್, ಹಾಡುಗಳಿಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಡಿಸೆಂಬರ್ 9ಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ..’ ಎಂದರು ಕಾಜಲ್ ಕುಂದರ್‌.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

 

Please follow and like us:

Leave a Reply

Your email address will not be published. Required fields are marked *

Next Post

'ಸಲಾರ್' ಸಿನಿಮಾ ತಂಡ ಸೇರಿಕೊಂಡ 'ರತ್ನನ್ ಪ್ರಪಂಚ'ದ ಉಡಾಳ್

Wed Dec 28 , 2022
  ರತ್ನನ್‌ ಪ್ರಪಂಚ ಸಿನಿಮಾದಲ್ಲಿ ಉಡಾಳ್‌ ಬಾಬು ಪಾತ್ರದಲ್ಲಿ ನಟಿಸಿದ್ದ ಪ್ರಮೋದ್‌ ಸದ್ಯ ಸ್ಯಾಂಡಲ್‌ವುಡ್‌ನ ಬಿಝಿ ನಟರಲ್ಲಿ ಒಬ್ಬರು. ಈ ಪಾತ್ರ ಪ್ರಮೋದ್‌ ಅವರಿಗೆ ಬಿಗ್‌ ಬಜೆಟ್‌ ಸಿನಿಮಾವಾದ ‘ಸಲಾರ್‌’ ಚಿತ್ರದಲ್ಲಿ ನಟಿಸುವ ಅವಕಾಶ ತಂದುಕೊಟ್ಟಿದೆ. ಹೌದು, ಪ್ರಮೋದ್‌ ಈಗ ‘ಸಲಾರ್‌’ ಸಿನಿಮಾದಲ್ಲಿವಿಶೇಷ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ.ಕಿರುತೆರೆಯಲ್ಲಿ ಜನಪ್ರಿಯರಾಗಿದ್ದ ಪ್ರಮೋದ್‌ ‘ಗೀತಾ ಬ್ಯಾಂಗಲ್‌ ಸ್ಟೋರ್ಸ್’ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪ್ರವೇಶ ಮಾಡಿದರು. ‘ಪ್ರೀಮಿಯರ್‌ ಪದ್ಮಿನಿ’ ಸಿನಿಮಾದಲ್ಲಿಅದ್ಭುತವಾದ ಪಾತ್ರದಲ್ಲಿ ನಟಿಸಿದ್ದರು. ಈಗ ಅವರು […]

Advertisement

Wordpress Social Share Plugin powered by Ultimatelysocial